Get Updates
Get notified of breaking news, exclusive insights, and must-see stories!

ಛತ್ತೀಸ್‌ಗಢದಲ್ಲಿ ನಕ್ಸಲರ ಅಟ್ಟಹಾಸ; 10 ಪೊಲೀಸರು ಹುತಾತ್ಮ

ನವದೆಹಲಿ, ಏಪ್ರಿಲ್ 26; ಛತ್ತೀಸ್‌ಗಢದಲ್ಲಿ ನಕ್ಸಲರ ದಾಳಿಯಲ್ಲಿ 10 ಪೊಲೀಸರು ಹುತಾತ್ಮರಾಗಿದ್ದಾರೆ. ಸುಧಾರಿತ ಸ್ಪೋಟಕ ಬಳಕೆ ಮಾಡಿಕೊಂಡು ಮಿನಿ ವ್ಯಾನ್‌ನಲ್ಲಿ ಸಂಚಾರ ನಡೆಸುತ್ತಿದ್ದ ಪೊಲೀಸರನ್ನು ಗುರಿಯಾಗಿಸಿಕೊಂಡು ಮಾವೋವಾದಿಗಳು ಈ ದಾಳಿ ನಡೆಸಿದ್ದಾರೆ.

ಬುಧವಾರ ಮಧ್ಯಾಹ್ನ ಛತ್ತೀಸ್‌ಗಢದ ದಾಂತೇವಾಡದಲ್ಲಿ ಮಾವೋವಾದಿಗಳು ಈ ದುಷ್ಕೃತ್ಯ ಎಸಗಿದ್ದಾರೆ. ಪೊಲೀಸ್ ವಾಹನದ ಚಾಲಕ ಸೇರಿದಂತೆ 10 ಸಿಬ್ಬಂದಿಗಳು ಈ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ. ಮಾವೋವಾದಿಗಳ ವಿರುದ್ಧದ ಕಾರ್ಯಾಚರಣೆಗೆ ತೆರಳಿದ್ದ ಪೊಲೀಸರು ವಾಪಸ್ ಆಗುವಾಗ ಈ ದಾಳಿ ನಡೆಸಲಾಗಿದೆ.

Naxal Attack Ten police personnel Killed In Chhattisgarhs Dantewada
Photo Credit:

ಛತ್ತೀಸ್‌ಗಢದ ಮುಖ್ಯಮಂತ್ರಿಗಳು ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ತಕ್ಷಣದ ನಕ್ಸಲರ ವಿರುದ್ಧ ಕಾರ್ಯಾಚರಣೆ ಆರಂಭಿಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ. ಅಲ್ಲದೇ ಘಟನೆ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿವರಣೆ ನೀಡಿದ್ದಾರೆ.

ದಾಂತೇವಾಡದಲ್ಲಿ ಮಾವೋವಾದಿಗಳು ಅಡಗಿದ್ದಾರೆ ಎಂಬ ರಾಜ್ಯ ಗುಪ್ತಚರ ಇಲಾಖೆ ಮಾಹಿತಿ ಆಧರಿಸಿ ಅವರ ವಿರುದ್ಧ ಕಾರ್ಯಾಚರಣೆ ನಡೆಸಲು ಪೊಲೀಸರು ತೆರಳಿದ್ದರು. ಅಲ್ಲಿಂದ ವಾಹನದಲ್ಲಿ ವಾಪಸ್ ಆಗುವಾಗ ಸುಧಾರಿತ ಸ್ಫೋಟಕಗಳನ್ನು ಬಳಸಿ ವಾಹನವನ್ನು ನಕ್ಸಲರು ಸ್ಫೋಟಿಸಿದ್ದಾರೆ.

ನಕ್ಸಲರು ಪೊಲೀಸ್ ವಾಹನವನ್ನು ಸ್ಫೋಟಗೊಳಿಸಿದ ಘಟನೆ ಅರನ್‌ಪುರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹುತಾತ್ಮ ಪೊಲೀಸರು ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ)ಗೆ ಸೇರಿದವರು. ಈ ಘಟನೆ ರಾಜಧಾನಿ ರಾಯ್‌ಪುರ್‌ನಿಂದ ಸುಮಾರು 450 ಕಿ. ಮೀ. ದೂರದಲ್ಲಿ ನಡೆದಿದೆ.

ಅಮಿತ್ ಶಾ ಮಾತುಕತೆ; ಘಟನೆ ಬಗ್ಗೆ ಮಾಹಿತಿ ಪಡೆದ ಕೇಂದ್ರ ಗೃಹ ಸಚಿವ ಅಮಿತ್ ಶಾ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಜೊತೆ ಮಾತುಕತೆ ನಡೆಸಿದರು. ನಕ್ಸಲರ ವಿರುದ್ಧದ ಕಾರ್ಯಾಚರಣೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಅವರು ರಾಜ್ಯ ಸರ್ಕಾರಕ್ಕೆ ಭರವಸೆ ನೀಡಿದ್ದಾರೆ.

ಮುಖ್ಯಮಂತ್ರಿ ಭೂಪೇಶ್ ಬಘೇಲ್ ಟ್ವೀಟ್ ಮಾಡಿ, "ನಕ್ಸಲರ ವಿರುದ್ಧದ ಕಾರ್ಯಾಚರಣೆ ಮುಗಿಸಿಕೊಂಡು ವಾಪಸ್ ಆಗುತ್ತಿದ್ದ ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ) ಪೊಲೀಸರ ವಾಹನವದ ಮೇಲೆ ಸುಧಾರಿತ ಸ್ಫೋಟಕಗಳನ್ನು ಬಳಸಿಕೊಂಡು ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಹುತಾತ್ಮರಾದ ಪೊಲೀಸರ ಆತ್ಮಕ್ಕೆ ಶಾಂತಿ ದೊರೆಯಲಿ, ಅವರ ಕುಟುಂಬಕ್ಕೆ ನನ್ನ ಸಂತಾಪಗಳು" ಎಂದು ಹೇಳಿದ್ದಾರೆ.

ಸ್ಫೋಟದ ತೀವ್ರತೆಗೆ ಮಿನಿ ವ್ಯಾನ್ 20 ಅಡಿ ಹಾರಿ ಜಖಂಗೊಂಡಿದೆ. ಸ್ಫೋಟ ನಡೆದ ಜಾಗದಲ್ಲಿ 10 ಅಡಿ ಆಳ ಮತ್ತು 20 ಅಡಿಅಗಲದ ಗುಂಡಿ ನಿರ್ಮಾಣವಾಗಿದೆ. ಈ ದುಷ್ಕೃತ್ಯಕ್ಕೆ ನಕ್ಸಲರು ಸುಮಾರು 50 ಕೆಜಿ ಸ್ಫೋಟಕ ಬಳಕೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಸ್ಫೋಟ ನಡೆದ ಬಳಿಕ ನಕ್ಸಲರು ಕಾಡಿನಲ್ಲಿ ಪರಾರಿಯಾಗಿದ್ದಾರೆ.

ದಾಂತೇವಾಡ ಮೊದಲಿನಿಂದಲೂ ನಕ್ಸಲರ ಭದ್ರಕೋಟೆ ಎಂಬ ಮಾತಿದೆ. ಭದ್ರತಾ ಪಡೆಗಳು ನಕ್ಸಲರ ನಡುವೆ ನಿರಂತರವಾಗಿ ಇಲ್ಲಿ ಗುಂಡಿನ ಚಕಮಕಿ ನಡೆಯುತ್ತಿರುತ್ತದೆ. ಪ್ರತಿವರ್ಷ ನಕ್ಸಲರು ಶರಣಾಗುತ್ತಿದ್ದಾರೆ. ಸರ್ಕಾರ ಅವರಿಗೆ ಪುನರ್ ವಸತಿ ಕಲ್ಪಿಸುತ್ತದೆ. ಇದರ ಸೇಡು ತೀರಿಸಿಕೊಳ್ಳಲು ನಕ್ಸಲರು ಪೊಲೀಸರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿರುತ್ತಾರೆ.

2017ರಲ್ಲಿ 24 ಸಿಆರ್‌ಪಿಎಫ್ ಸಿಬ್ಬಂದಿ, 2014ರಲ್ಲಿ 15 ಭದ್ರತಾ ಸಿಬ್ಬಂದಿ, 2018ರಲ್ಲಿ ಇಬ್ಬರು ಪೊಲೀಸರ ಹತ್ಯೆ, 2018ರ ಮಾರ್ಚ್‌ನಲ್ಲಿ 9 ಕೇಂದ್ರ ಮೀಸಲು ಪಡೆ ಸಿಬ್ಬಂದಿಗಳು ರಾಜ್ಯದಲ್ಲಿ ನಕ್ಸಲರ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ.

ದೇಶದ ಇತರ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಛತ್ತೀಸ್‌ಗಢದಲ್ಲಿ ಮಾವೋವಾದಿಗಳು ಸಕ್ರಿಯರಾಗಿದ್ದಾರೆ. ಹಲವಾರು ಬಾರಿ ಪೊಲೀಸರ ಜೊತೆ ಗುಂಡಿನ ಚಕಮಕಿ ನಡೆಸುತ್ತಿರುತ್ತಾರೆ. ಪೊಲೀಸರ ಮೇಲೆ ದಾಳಿ ಮಾಡಿದ ಹಲವು ಪ್ರಕರಣಗಳು ಸಹ ನಡೆದಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+