ಗದ್ದರ್ ಸಾವಿನ ಸುದ್ದಿ ನಡುವೆ ಪತ್ರಕರ್ತ ಹೃದಯಾಘಾತಕ್ಕೆ ಬಲಿ
ಹೈದರಾಬಾದ್: ಅತ್ತ ಗದ್ದರ್ ಮೃತಪಟ್ಟಿರುವ ಸುದ್ದಿ ಎಲ್ಲರನ್ನೂ ನೋವಿಗೆ ದೂಡಿದ್ದರೆ, ಇತ್ತ ಮತ್ತೊಂದು ಆಘಾತಕಾರಿ ಸುದ್ದಿ ಸಂಚಲನ ಸೃಷ್ಟಿಸಿದೆ. ಕ್ರಾಂತಿಕಾರಿ ಕವಿ ಗದ್ದರ್‌ರ ಅಂತಿಮ ಯಾತ್ರೆ ವೇಳೆ ಪತ್ರಕರ್ತ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ ಎನ್ನಲಾಗಿದೆ. ಹೀಗೆ ಒಂದು ಸಾವಿನ ದುಖಃದಲ್ಲಿ ಇರುವಾಗ ತೆಲಂಗಾಣಕ್ಕೆ ಮತ್ತೊಂದು ಆಘಾತ ಎದುರಾಗಿದೆ.
ಉರ್ದು ಮ್ಯಾಗಜಿನ್ ಸಿಯಾಸತ್ ವ್ಯವಸ್ಥಾಪಕ ಸಂಪಾದಕ ಝಹೀರುದ್ದೀನ್ ಅಲಿ ಖಾನ್ ಈ ದುರಂತದಲ್ಲಿ ಜೀವ ಬಿಟ್ಟಿದ್ದಾರೆ. 60 ವರ್ಷ ವಯಸ್ಸಿನ ಸಂಪಾದಕ ಹೃದಯಾಘಾತಕ್ಕೆ ಬಲಿಯಾಗಿರುವ ಸುದ್ದಿ ಇದೀಗ ಸಂಚಲನ ಸೃಷ್ಟಿ ಮಾಡಿದೆ. ಅಂತಿಮ ಯಾತ್ರೆ ಸಂದರ್ಭ ಝಹೀರುದ್ದೀನ್ ಅಲಿ ಖಾನ್ ಅವರಿಗೆ ಹೃದಯಾಘಾತ ಆಗಿದೆ. ಈ ವೇಳೆ ಸ್ಥಳದಲ್ಲಿ ಇದ್ದ ಕೆಲವರು ಓಡಿ ಬಂದು ಝಹೀರುದ್ದೀನ್ ಅವರ ನೆರವಿಗೆ ಮುಂದಾಗಿದ್ದಾರೆ. ಆದರೆ ವಿಧಿ ಆಟವೇ ಬೇರೆಯಾಗಿತ್ತು. ಎಲ್ಲರೂ ಪರದಾಡಿದರೂ ಝಹೀರುದ್ದೀನ್ ಅಲಿ ಖಾನ್ ಅವರ ಜೀವ ಉಳಿಸಲು ಸಾಧ್ಯವಾಗಲೇ ಇಲ್ಲ.

ಮಾರ್ಗ ಮಧ್ಯವೇ ಹೋಗಿತ್ತು ಜೀವ
ಹೌದು, ತೆಲಂಗಾಣ ರಾಜಧಾನಿ ಹೈದರಾಬಾದ್‌ನ ಭೂದೇವಿನಗರದಲ್ಲಿರುವ ಮಹಾಬೋಧಿ ವಿದ್ಯಾಲಯದಲ್ಲಿ ಇಂದು ಸಕಲ ಸರ್ಕಾರಿ ಗೌರವದೊಂದಿಗೆ ಗದ್ದರ್ ಅಂತ್ಯಸಂಸ್ಕಾರ ನಡೆದಿತ್ತು. ಈ ಸಂದರ್ಭದಲ್ಲಿ ಅಲ್ಲೇ ಇದ್ದ ಝಹೀರುದ್ದೀನ್ ಅಲಿ ಖಾನ್ ಅವರಿಗೆ ತೀವ್ರವಾಗಿ ಎದೆ ನೋವು ಕಾಣಿಸಿಕೊಂಡಿದೆ. ಝಹೀರುದ್ದೀನ್ ಅವರಿಗೆ ಹೃದಯಾಘಾತ ಆಗಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಗಿತ್ತು. ಆದರೆ ಅಷ್ಟರಲ್ಲಾಗಲೇ ಝಹೀರುದ್ದೀನ್ ಅಲಿ ಖಾನ್ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಹಾಗೇ ಹೃದಯಾಘಾತವಾಗಿ ಝಹೀರುದ್ದೀನ್ ಅವರು ಪರದಾಡಿದ ವಿಡಿಯೋ ಕೂಡ ಈಗ ಸಂಚಲನ ಸೃಷ್ಟಿಸಿದೆ.
Zaheeruddin Ali Khan, managing editor of The Siasat Daily, has passed away due to cardiac arrest during poet-activist Gaddar’s funeral procession in Alwal on Monday, August 7. He was nearly 62. @zaheer_siasat @TheSiasatDaily#ZaheeruddinAliKhan pic.twitter.com/XLIz0ItqZb
— Damodar Bayya (@damodarbayya) August 7, 2023
ಹೋರಾಟದಲ್ಲೇ ಜೀವನ ಕಳೆದಿದ್ದ ಗದ್ದರ್
ಗದ್ದರ್ ಎಂದರೆ ತೆಲಂಗಾಣ ಹಾಗೂ ಆಂಧ್ರ ಪ್ರದೇಶದ ಜನರಿಗೆ ಒಂದು ಭಾವನೆ ಇದ್ದಂತೆ. ಏಕೆಂದರೆ 76 ವರ್ಷ ಸಂಘರ್ಷದಲ್ಲಿ ಜನತೆ ಜೊತೆ ನಿಕಟ ಸಂಪರ್ಕ ಹೊಂದಿದ್ದ ಅವರನ್ನು ಇಡೀ ದೇಶ ಕ್ರಾಂತಿಕಾರಿ ಕವಿ ಎಂದೇ ಕರೆಯುತ್ತಿತ್ತು. ತಮ್ಮ ಸಾಹಿತ್ಯದ ಮೂಲಕ ಅವರು ದೇಶ & ವಿದೇಶದಲ್ಲಿ ಕ್ರಾಂತಿಕಾರಿ ಎಂದು ಗುರುತಿಸಿಕೊಂಡರು. ಆದರೆ ಗದ್ದರ್ ದಿಢೀರ್ ನಿಧನ ತೆಲುಗು ರಾಜ್ಯದ ಜನರಿಗೆ ಆಘಾತ ನೀಡಿದೆ. ಗಣ್ಯಾತಿ ಗಣ್ಯರು ಆಗಮಿಸಿ, ಗದ್ದರ್ ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಪತ್ರಕರ್ತ ಕೂಡ ಉಸಿರು ಚೆಲ್ಲಿರುವುದು ದುರಂತವೇ ಸರಿ.

ಒಟ್ನಲ್ಲಿ ತೆಲಂಗಾಣದ ಜನಕ್ಕೆ ಎರಡೆರಡು ಆಘಾತ ಎದುರಾಗಿದೆ. ಒಂದು ಸಾವಿನ ನೋವು ಮರೆಯಾಗುವ ಮೊದಲೇ ಮತ್ತೊಂದು ಸಾವಿನ ಸುದ್ದಿ ಕೂಡ ಹೊರಬಿದ್ದಿದೆ. ಪತ್ರಕರ್ತ ಝಹೀರುದ್ದೀನ್ ಅಲಿ ಖಾನ್ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಹಾಗೇ ದಿಢೀರ್ ನಡೆದಿರುವ ಈ ಘಟನೆ ಝಹೀರುದ್ದೀನ್ ಅವರ ಕುಟುಂಬ ಸದಸ್ಯರಿಗೆ ಆಘಾತ ನೀಡಿದೆ.
-
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ












Click it and Unblock the Notifications