ಬೆಂಗಳೂರಿಗೊಂದು ಹೊಸ ಐಷಾರಾಮಿ ಬಸ್ ಸೇವೆ ಆರಂಭ: ಕೋಲ್ಕಾತ್ತಾದಿಂದ ನೇರ ಸಂಪರ್ಕ
ಕೋಲ್ಕತ್ತಾದಿಂದ ಬೆಂಗಳೂರಿಗೆ ಪ್ರಯಾಣ ಮಾಡುವವರಿಗೆ ಇದೀಗ ಹೊಸ ಆಯ್ಕೆ ಕೂಡ ಈಗ ಲಭ್ಯವಿದೆ. ಕೋಲ್ಕತ್ತಾದ ಕರುಣಾಮಯಿ ಬಸ್ ಟರ್ಮಿನಲ್್ನಿಂದ ಬೆಂಗಳೂರಿಗೆ ಐಷಾರಾಮಿ ಬಸ್ ಸೇವೆಯನ್ನು ಪ್ರಾರಂಭ ಮಾಡಲಾಗಿದೆ. ಈ ಮಾರ್ಗದ ಸೇವೆಯು ವಾರದ ಎಲ್ಲಾ ದಿನಗಳಲ್ಲಿ ಸಂಚಾರ ಮಾಡುತ್ತದೆ. ರೈಲು ಮತ್ತು ವಿಮಾನ ಪ್ರಯಾಣಕ್ಕೆ ಪರ್ಯಾಯ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ.
ಕೋಲ್ಕತ್ತಾದಿಂದ ಬೆಂಗಳೂರು ಮಾತ್ರವಲ್ಲ ದೆಹಲಿ, ಚೆನ್ನೈ ಮತ್ತು ಪುರಿ ನಗರಗಳಿಗೂ ಹೊಸ ದೂರದ ಮಾರ್ಗಗಳ ಪ್ರಯಾಣಕ್ಕೆ ಈ ಬಸ್ ಸೇವೆಗಳನ್ನು ಆರಂಭಿಸಲಾಗಿದೆ ಎಂದು ಬಸ್ ಸಂಸ್ಥೆ ತಿಳಿಸಿದೆ.

ಬೆಂಗಳೂರು ಮಾರ್ಗದ ಪ್ರಯಾಣದ ವಿವರ
ಕೋಲ್ಕಾತ್ತಾದಿಂದ ಬೆಂಗಳೂರಿಗೆ ಪ್ರಯಾಣ ಮಾಡುವ ಬಸ್ ಟಿಕೆಟ್ ದರ ₹4,500 ನಿಗದಿಪಡಿಸಲಾಗಿದೆ. ಈ ಪ್ರಯಾಣಕ್ಕೆ ಸುಮಾರು 35 ಗಂಟೆಗಳು ಬೇಕಾಗುತ್ತದೆ.
ಇನ್ನಿತರ ಮಾರ್ಗಗಳ ದರ ಮತ್ತು ಸಮಯ
ಕೋಲ್ಕಾತ್ತ-ದೆಹಲಿ: ₹2,500 ರಿಂದ ₹3,000, ಸುಮಾರು 17 ಗಂಟೆಗಳ ಪ್ರಯಾಣ.
ಕೊಲ್ಕಾತ್ತಾ-ಚೆನ್ನೈ: ₹4,700, ಸರಿ ಸುಮಾರು 24 ಗಂಟೆಗಳ ಪ್ರಯಾಣ.
ಕೋಲ್ಕತ್ತಾ-ಪುರಿ (ವೋಲ್ವೋ ವಿಶೇಷ): ₹1,500 ರಿಂದ ₹2,000, ಸುಮಾರು 8 ಗಂಟೆಗಳ ಪ್ರಯಾಣ.
ಬಸ್ಸಿನಲ್ಲಿ ಸಿಗುವ ಸೌಲಭ್ಯಗಳು
ಪ್ರಾಣಿಕರ ಅನುಕೂಲಕ್ಕನುಗುಣವಾಗಿ ಕೆಲವು ಆಧುನಿಕ ಸೌಲಭ್ಯಗಳನ್ನು ಈ ಬಸ್ಸಿನಲ್ಲಿ ಒದಗಿಸಲಾಗಿದೆ.
ಬಯೋ ಟಾಯ್ಲೆಟ್
ದಿಂಬು ಮತ್ತು ಹೊದಿಕೆ
ಕುಡಿಯುವ ನೀರು
ಮಿನಿ ಸ್ನ್ಯಾಕ್ಸ್ ಬಾರ್
ತಿಂಡಿ, ಚಹಾ ಮತ್ತು ಕಾಫಿ
OTT ಸೌಲಭ್ಯವಿರುವ ಸ್ಕ್ರೀನ್
ಸರ್ಕಾರದಿಂದ ಸಿಕ್ಕ ಪ್ರತಿಕ್ರಿಯೆ
ಈ ಸೇವೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ಅರ್ಜುನ ಸಿಂಗ್ ಹಾಗೂ ಬಿಜೆಪಿ ಅಧ್ಯಕ್ಷ ಶಮಿಕ್ ಭಟ್ಟಾಚಾರ್ಯ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಅಧ್ಯಕ್ಷ ಶಮಿಕ್ ಭಟ್ಟಾಚಾರ್ಯ, ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ ಮೂಲಕ ಸಾರ್ವಜನಿಕ ಸಾರಿಗೆಯ ವ್ಯವಸ್ಥೆಯನ್ನು ಇನ್ನಷ್ಟು ಆಧುನಿಕರಣ ಮಾಡುವ ಉದ್ದೇಶ ಸರ್ಕಾರ ಹೊಂದಿದೆ ಎಂದು ಹೇಳಿದರು. ಖಾಸಗಿ ಸಂಸ್ಥೆಗಳಿಗೆ ಸಾರ್ವಜನಿಕರಿಗೆ ಹೆಚ್ಚು ಸೇವೆಗಳನ್ನು ನೀಡಲು ಅಗತ್ಯವಾದ ಅನುಮತಿ ಮತ್ತು ಪರವಾನಿಗೆಯ ಪ್ರಕ್ರಿಯೆಗಳನ್ನು ಇನ್ನು ಸ್ವಲ್ಪ ಸರಳಗೊಳಿಸಲಾಗುತ್ತಿದೆ.
ಬಸ್ ಸಂಸ್ಥೆಯ ಆರೋಪ
ಖಾಸಗಿ ಬಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಮಾತನಾಡಿ, ಈ ಯೋಜನೆ ಹಲವು ವರ್ಷಗಳಿಂದ ಬಾಕಿ ಇತ್ತು ಎಂದು ಆರೋಪ ಮಾಡಿದರು. ಹಿಂದಿನ ಸರ್ಕಾರದಲ್ಲಿ ಇದರ ಪರವಾನಿಗೆಯ ಪಡೆಯಲು ನಾವು ಹಲವು ಬಾರಿ ಅಧಿಕಾರಿಗಳಿಗೆ ಬೇಟಿ ಮಾಡಿದರು ಆಗಲಿಲ್ಲ,. ಸರ್ಕಾರದಿಂದ ಸರಿಯಾದ ಸಹಕಾರ ದೊರೆಯದ ಕಾರಣ ವಿಳಂಬ ಮಾಡಿದರು ಎಂದು ಅವರು ತಿಳಿಸಿದರು.


Click it and Unblock the Notifications
