ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕ್ಸಲರು , ಮಾವೋವಾದಿ ನಿಯಂತ್ರಣಕ್ಕೆ 4 ವಿಶೇಷ ಪಡೆ ರಚಿಸಿದ ರಾಜ್ಯ ಸರ್ಕಾರ

|
Google Oneindia Kannada News

ಬೆಂಗಳೂರು, ಆಗಸ್ಟ್ 22: ಸಮಾಜದಲ್ಲಿ ಶಾಂತಿ ಭಂಗವನ್ನು ತರುವಂತಹ ಅಧಿಕಾರ ಯಾರಿಗೂ ಇರುವುದಿಲ್ಲ. ಕೆಲವು ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗಿಯಾಗುವ ಮಾವೋವಾದಿ ಹಾಗೂ ನಕ್ಸಲೀಯರನ್ನು ನಿಯಂತ್ರಣ ತರಲು ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ರಾಜ್ಯ ಸರ್ಕಾರ ನಾಲ್ಕು‌ ವಿಶೇಷ ಪಡೆ ರಚಿಸಿ‌ ಆದೇಶ ಹೊರಡಿಸಿದೆ.

ನಕ್ಸಲ್ ಚಟುವಟಿಕೆ ಹೆಚ್ಚಿರುವ ಪ್ರದೇಶಗಳಲ್ಲಿ‌ ಈ ವಿಶೇಷ ಪಡೆಗಳು ಕಾರ್ಯನಿರ್ವಹಿಸಲಿವೆ. ಇತ್ತೀಚಿನ ವರ್ಷಗಳಲ್ಲಿ ಮಾವೋವಾದಿಗಳು ಕಾನೂನು‌ ಸುವ್ಯವಸ್ಥೆಗೆ‌ ಸವಾಲಾಗಿ‌‌ ಪರಿಣಾಮಿಸಿದ್ದಾರೆ.‌ ತನ್ನದೇ‌ ಆದ ತತ್ವ‌‌- ಸಿದ್ದಾಂತ ಆಧಾರದ‌ ಮೇರೆಗೆ ಯುವಕರನ್ನ‌ ಒಗ್ಗೂಡಿಸಿ ಸಂಘಟನಾತ್ಕವಾಗಿ ಗುಪ್ತವಾಗಿ ಕಾರ್ಯನಿರ್ವಹಿಸಿ ಹಲವು ದಶಕಗಳಿಂದಲೂ ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುುದು ಹಲವು ಘಟನೆಗಳಿಂದ ಸಾಭೀತಾಗಿದೆ.

‌ಕೆಲವು ವರ್ಷಗಳಿಂದ ರಾಜ್ಯದಲ್ಲಿ ನಕ್ಸಲೇಟ್ ಚಟುವಟಿಕೆ ಗೌಣವಾದರೂ‌ ನಿರ್ಲಕ್ಷ್ಯ ವಹಿಸುವಂತಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಸೂಚನೆ ಮೇರೆಗೆ ಎಡಪಂಥೀಯರ ದುಷ್ಟ ಕಾರ್ಯಗಳನ್ನ ತಡೆಯುವ ನಿಟ್ಟಿನಲ್ಲಿ ರಾಜ್ಯದ ನಾಲ್ಕು ಪ್ರತ್ಯೇಕ ಕಡೆಗಳಲ್ಲಿ ಕರ್ನಾಟಕ ಪೊಲೀಸ್ ಮೀಸಲು ಪಡೆ (ಕೆಎಸ್ ಆರ್ ಪಿಎಫ್ ) ಒಳಗೊಂಡಂತೆ ನಾಲ್ಕು ವಿಶೇಷ ತಂಡ ರಚಿಸಿದೆ. ಆ ಮೂವಕ ರಾಜ್ಯದಲ್ಲಿ ನಕ್ಸಲೇಟ್ ಸೇರಿದಂತೆ ಇತರರು ನಡೆಸುವ ದುಷ್ಕೃತ್ಯಕ್ಕೆ ಕಡಿವಾಣವನ್ನು ಹಾಕಲು ಸರ್ಕಾರ ಮುಂದಾಗಿದೆ.

ಮಡಿಕೇರಿ, ಮೈಸೂರು, ಚಾಮರಾಜನಗರ ಕೇಂದ್ರ ಸ್ಥಾನ

ಮಡಿಕೇರಿ, ಮೈಸೂರು, ಚಾಮರಾಜನಗರ ಕೇಂದ್ರ ಸ್ಥಾನ

ಕೊಡಗಿನ ವಿರಾಜಪೇಟೆ ತಾಲೂಕಿನ ಕುಟ್ಟಾ, ಮಡಿಕೇರಿಯ ಕರಿಕೆ, ಮೈಸೂರು ಎಚ್.ಡಿ.ಕೋಟೆ ಬಳಿ ಬವಾಲಿ ಹಾಗೂ ಚಾಮರಾಜನಗರ ಗುಂಡ್ಲುಪೇಟೆಯ ಮೂಲೆಹೊಳೆ ಬಳಿ ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡು ಪೊಲೀಸ್ ಪಡೆ ಕಾರ್ಯನಿರ್ವಹಿಸಲಿದೆ. ಮಾವೋವಾದಿ, ನಕ್ಸಲೀಯರ ಚಟುವಟಿಕೆ ಹೆಚ್ಚಿರುವ‌ ಹಾಗೂ ಹೆಚ್ಚು ಎಡಪಂಥೀಯರು ಇರುವ ಪ್ರದೇಶಗಳಲ್ಲಿ ನಾಲ್ಕು ವಿಶೇಷ ತಂಡ ಕೆಲಸ ಮಾಡಲಿದೆ. ನಕ್ಸಲ್ ನಿರ್ಣಾಮವನ್ನು ಕೇಂದ್ರ ಸರ್ಕಾರದ ಆದೇಶದಂತೆ ರಾಜ್ಯ ಕಾರ್ಯವನ್ನು ನಿರ್ವಹಿಸಲಿದೆ.

ಕರ್ತವ್ಯ ನಿರ್ವಹಿಸಲಿದೆ ಬೆಲ್ಜಿಯಂ ಶೆರ್ಪಡ್ ಡಾಗ್ ಸ್ಕ್ಯಾಡ್

ಕರ್ತವ್ಯ ನಿರ್ವಹಿಸಲಿದೆ ಬೆಲ್ಜಿಯಂ ಶೆರ್ಪಡ್ ಡಾಗ್ ಸ್ಕ್ಯಾಡ್

ಕೇಂದ್ರದ ಅಧಿಸೂಚನೆಯಂತೆ ರಾಜ್ಯ ಸರ್ಕಾರ ವಿಶೇಷ ತಂಡ ಕಾರ್ಯನಿರ್ವಹಿಸಲಿದ್ದು ಒಟ್ಟು 267 ಮಂದಿ ಪೊಲೀಸರನ್ನು ನಿಯೋಜಿಸಿದೆ. ಇಬ್ಬರು ಎಸಿಪಿಗಳು ಕಾರ್ಯಾಚರಣೆ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ. ಆಪರೇಷನ್‌ ಟೀಮ್ ಕಮಾಂಡರ್ ಆಗಿ 8 ಮಂದಿ, ಸಹಾಯಕ‌ ಕಮಾಂಡರ್ ಆಗಿ ಪಿಐ‌ ಅಥವಾ ಆರ್ ಎಸ್ಐ, 16 ಪಿಎಸ್ಐ, ಮಹಿಳಾ ಪಿಎಸ್ಐ 1, (ವೈರ್ ಲೇಸ್ ಇನ್ ಚಾರ್ಜ್) 4 ಮಹಿಳಾ ಎಎಸ್ಐ, ಹೆಡ್ ಕಾನ್ ಸ್ಟೇಬಲ್‌ 40, 120 ಪೊಲೀಸ್ ಕಾನ್ ಸ್ಟೇಬಲ್, ಶ್ವಾನದಳ ಸಿಬ್ಬಂದಿ 16 ಸೇರಿದಂತೆ‌ ವಿವಿಧ ರೀತಿಯ ಸಿಬ್ಬಂದಿ ಸೇರಿ ಒಟ್ಟು 267 ಮಂದಿ ಪೊಲೀಸರನ್ನು ನಿಯೋಜಿಸಿದೆ. ವಿಶೇಷವಾಗಿ ಬೆಲ್ಜಿಯಂ ಶೆರ್ಪಡ್ ಸೇರಿದಂತೆ ವಿವಿಧ ತಳಿ ಶ್ವಾನಗಳಿಗೂ ವಿಶೇಷ ತರಬೇತಿ‌ ನೀಡಲಿದೆ.

ನೆರೆ ರಾಜ್ಯಗಳ ಕಿಡಿಗೇಡಿಗಳು ಕೃತ್ಯ ಸಾಧ್ಯತೆ

ನೆರೆ ರಾಜ್ಯಗಳ ಕಿಡಿಗೇಡಿಗಳು ಕೃತ್ಯ ಸಾಧ್ಯತೆ

ಚಾಮರಾಮನಗರ, ಕೊಡಗು ಹಾಗೂ‌‌ ಮೈಸೂರಿನಲ್ಲಿ ಪ್ರತ್ಯೇಕ ತಂಡಗಳಾಗಿ ಕಾರ್ಯಾಚರಣೆ ನಡೆಸಲಿದೆ. ತಮಿಳುನಾಡು ಹಾಗೂ ಕೇರಳ ರಾಜ್ಯಗಳಿಗೂ ಕರ್ನಾಟಕ ಹತ್ತಿರವಾಗಿದೆ. ಬೇರೆ ಬೇರೆ ರಾಜ್ಯಗಳಿಂದ ರಾಜ್ಯಕ್ಕೆ ನುಸುಳುವ ಮಾವೋವಾದಿಗಳು ಯುವಕರ ತಲೆಕೆಡಿಸಿ ತನ್ನ ಕಾರ್ಯಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಹೆಚ್ಚಾಗಿದೆ. ಇಲ್ಲಿನ‌ ಹಿಂಸಾತ್ಮಕ ಚಟುವಟಿಕೆಗಳಿಗೆ ನೆರೆ ರಾಜ್ಯಗಳ ಕಿಡಿಗೇಡಿಗಳು ಕೃತ್ಯವೆಸಗಿರುತ್ತಿರುವುದು ಹೆಚ್ಚಾಗಿದೆ. ಹಲವು ಕಡೆಗಳಲ್ಲಿ ನಾಕಾಬಂದಿ ಹಾಕಿ ಗಸ್ತುಕಾದರೂ‌ ತಮ್ಮ ಚಾಣಕ್ಷತನ ಮೆರೆದು ಆರೋಪಿಗಳು ತಲೆಮರೆಸಿಕೊಳ್ಳುತ್ತಿದ್ದಾರೆ.

ಮಾವೋವಾದಿ, ನಕ್ಸಲರನ್ನು ಮಟ್ಟ ಹಾಕುವ ಉದ್ದೇಶ

ಮಾವೋವಾದಿ, ನಕ್ಸಲರನ್ನು ಮಟ್ಟ ಹಾಕುವ ಉದ್ದೇಶ

ಯುವಕರನ್ನು ತಲೆಕೆಡಿಸುವ ನಕ್ಸಲ್ ಬೆಂಬಲಿತರ ಕಿಡಿಗೇಡಿಗಳ ಮಟ್ಟ ಹಾಕುವುದಕ್ಕಾಗಿ ವಿಶೇಷ ತಂಡಗಳನ್ನ ರಚಿಸಲಾಗಿದೆ. ಮಾವೋವಾದಿಗಳ ಹಾಗೂ‌ ಎಡಪಂಥೀಯರ ದುಷ್ಟ ಕಾರ್ಯಗಳ ಗಮನ ಕೇಂದ್ರಿಕರಿಸಿ ಈ ತಂಡಗಳು ಕಾರ್ಯಾಚರಣೆ ಹೆಡೆಮುರಿಕಟ್ಟಲಿವೆ. ಅಸ್ಸಾಂ ಮಾವೋವಾದಿ ಹಾಗೂ ನಕ್ಸಲೀಯರ ಕೇಂದ್ರ ಸ್ಥಾನವಾಗಿದ್ದು ಆಂಧ್ರಪ್ರದೇಶ, ಕರ್ನಾಟಕ, ಕೇರಳ ಹಾಗೂ ತಮಿಳುನಾಡು ನಕ್ಸಲೀಯರ ಕಾರಿಡಾರ್ ಪ್ರದೇಶವಾಗಿದೆ ಎಂದು ಕೇಂದ್ರ ಗುಪ್ತಚರ ಇಲಾಖೆಯು ವರದಿ ನೀಡಿತ್ತು. ಈ ವರದಿ ಆಧರಿಸಿ ಕೇಂದ್ರದ ಸೂಚನೆ ಮೇರೆಗೆ ರಾಜ್ಯ ಸರ್ಕಾರ ನಾಲ್ಕು ವಿಶೇಷ ತಂಡ ರಚಿಸಲಾಗಿದೆ.

Recommended Video

Basavaraj Bommai ಮಠ, ದೇವಾಲಯ, ಟ್ರಸ್ಟ್ ಗಳಿಗೆ ಕೋಟಿ ಕೋಟಿ ನೀಡಿದ ಬೊಮ್ಮಾಯಿ ಸರಕಾರ | Oneindia Kannada

English summary
No one has the power to disturb the peace in the society. On the instructions of the central government, the state government has issued an order to form four special forces to control the Maoists and Naxalites who are involved in some violent acts, Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X