Get Updates
Get notified of breaking news, exclusive insights, and must-see stories!

ಪೊಲೀಸರ ಮೇಲಿನ ನಕ್ಸಲ್‌ ದಾಳಿ ಮರೆಯಲ್ಲ: ಪಿಎಂ ಮೋದಿ

ರಾಯ್ಪುರ: ನಕ್ಸಲರ ದಾಳಿ ಭಾರತೀಯರಲ್ಲಿ ಆಕ್ರೋಶ ತರಿಸಿದೆ. ಭದ್ರತಾ ಪಡೆ ಈ ಭೀಕರ ಘಟನೆಯನ್ನ ಗಂಭೀರವಾಗಿ ಪರಿಗಣಿಸಿ ತಪ್ಪು ಮಾಡಿದವರಿಗೆ ಬುದ್ಧಿ ಕಲಿಸಲು ಕಾರ್ಯಾಚರಣೆ ಆರಂಭಿಸಿದೆ. ಈ ಸಂದರ್ಭದಲ್ಲೇ ಪ್ರಧಾನಿ ಮೋದಿ ಕೂಡ ಖಡಕ್ ಸಂದೇಶ ನೀಡಿದ್ದಾರೆ, 'ಪೊಲೀಸರ ಮೇಲಿನ ನಕ್ಸಲ್‌ ದಾಳಿ ಮರೆಯಲ್ಲ' ಎನ್ನುವ ಮೂಲಕ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

'ನಿಮ್ಮ ತ್ಯಾಗ ಎಂದಿಗೂ ಮರೆಯಲ್ಲ'

'ನಕ್ಸಲ್‌ ದಾಳಿಯಲ್ಲಿ ಮೃತರಾದ ಪೋಲಿಸರ ತ್ಯಾಗವನ್ನು ಎಂದಿಗೂ ಮರೆಯುವುದಿಲ್ಲ. ಛತ್ತೀಸ್‌ಗಢದ ದಾಂತೇವಾಡದಲ್ಲಿ ಪೋಲಿಸರ ಮೇಲೆ ನಡೆದ ನಕ್ಸಲ್‌ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇನೆ. ಘಟನೆಯಲ್ಲಿ ಹುತಾತ್ಮರಾದ ಧೀರ ಸಿಬ್ಬಂದಿಗೆ ಶ್ರದ್ಧಾಂಜಲಿ ಅರ್ಪಿಸುತ್ತೇನೆ. ಈ ತ್ಯಾಗವನ್ನು ಸದಾ ನೆನಪಿನಲ್ಲಿಟ್ಟಿರುತ್ತೇವೆ. ಹುತಾತ್ಮರ ಕುಟುಂಬಗಳಿಗೆ ನನ್ನ ಸಾಂತ್ವಾನ' ಎಂದು ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ಪ್ರಧಾನಿ ಜೊತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಟ್ವೀಟ್ ಮಾಡಿ ಘಟನೆ ಖಂಡಿಸಿದ್ದಾರೆ.

Prime Minister Narendra Modi pays tributes to policemen killed in Naxal attack

ಅಮಿತ್‌ ಶಾ ಖಡಕ್ ವಾರ್ನಿಂಗ್

ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ನಕ್ಸಲರ ಭೀಕರ ದಾಳಿಯನ್ನ ಬಲವಾಗಿ ಖಂಡಿಸಿದ್ದಾರೆ. ಅಮಿತ್ ಶಾ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. 'ದಾಂತೇವಾಡದಲ್ಲಿ ಛತ್ತೀಸ್‌ಗಢ ಪೊಲೀಸರ ಮೇಲೆ ನಡೆದ ಹೇಡಿತನದ ದಾಳಿಯಿಂದ ನೊಂದಿದ್ದೇನೆ. ಛತ್ತೀಸ್‌ಗಢದ ಸಿಎಂ ಜೊತೆ ಮಾತನಾಡಿ ರಾಜ್ಯ ಸರ್ಕಾರಕ್ಕೆ ಸಾಧ್ಯವಿರುವ ಎಲ್ಲ ರೀತಿಯ ನೆರವನ್ನ ನೀಡುವುದಾಗಿ ಭರವಸೆ ನೀಡಲಾಗಿದೆ' ಎಂದು ಮಾಹಿತಿ ನೀಡಿದ್ದಾರೆ ಅಮಿತ್ ಶಾ. ಜೊತೆಗೆ ಹುತಾತ್ಮರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ.

ಘಟನೆ ನಡೆದಿದ್ದು ಹೇಗೆ?

ಬುಧವಾರ ಮಧ್ಯಾಹ್ನ ಛತ್ತೀಸ್‌ಗಢದ ದಾಂತೇವಾಡದಲ್ಲಿ ಮಾವೋವಾದಿಗಳು ಈ ದುಷ್ಕೃತ್ಯ ಎಸಗಿದ್ದಾರೆ. ಛತ್ತೀಸ್‍ಗಢದ ಅರನ್‍ಪುರದಲ್ಲಿ ಮಾವೋವಾದಿಗಳು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಹಿನ್ನೆಲೆ ಛತ್ತೀಸ್‍ಗಢದ ಡಿಸ್ಟ್ರಿಕ್ಟ್ ರಿಸರ್ವ್ ಗಾರ್ಡ್ ಸೈನಿಕರು ಆ ಪ್ರದೇಶಕ್ಕೆ ಬಾಡಿಗೆಗೆ ಪಡೆದ ಮಿನಿ ವ್ಯಾನ್‍ನಲ್ಲಿ ತೆರಳಿದ್ದರು. ಆದರೆ ಮಾವೋವಾದಿಗಳ ವಿರುದ್ಧ ಕಾರ್ಯಾಚರಣೆಗೆ ತೆರಳಿದ್ದ ಪೊಲೀಸರು ವಾಪಸ್ ಆಗುವಾಗ ನಕ್ಸಲರು ಭೀಕರ ದಾಳಿ ನಡೆಸಿದ್ದಾರೆ. ಅಲ್ಲದೆ ಈ ದಾಳಿಗೆ ನಕ್ಸಲರು ಖತರ್ನಾಕ್ ಪ್ಲ್ಯಾನ್ ಮಾಡಿದ್ದು ಬಯಲಾಗಿದೆ.

10 ಅಡಿ ಆಳದ ಗುಂಡಿ!

ಪೊಲೀಸರನ್ನು ಬಲಿ ಪಡೆದಿರುವ ನಕ್ಸಲರು ತಮ್ಮ ಕೃತ್ಯಕ್ಕೆ ಅದೆಷ್ಟು ಸಿದ್ಧತೆ ನಡೆಸಿದ್ದರು ಎಂದರೆ, ಬಾಂಬ್ ಸ್ಫೋಟದ ಜಾಗದಲ್ಲಿ ಸುಮಾರು 10 ಅಡಿ ಆಳ ಹಾಗೂ 20 ಅಡಿ ಅಗಲದ ದೊಡ್ಡ ಗುಂಡಿ ತೋಡಿದ್ದರು ಎನ್ನಲಾಗಿದೆ. ಅಲ್ಲದೆ ಇದೇ ಗುಂಡಿ ಒಳಗೆ 50 ಕೆಜಿ ಸುಧಾರಿತ ಸ್ಫೋಟಕ (IED) ತುಂಬಿದ್ದರು. ಪೊಲೀಸರು ಕಾರ್ಯಾಚರಣೆಯನ್ನ ಮುಗಿಸಿ ವಾಪಸ್ ಬರುವ ಸಂದರ್ಭದಲ್ಲೇ ದಾಳಿಗೆ ಸ್ಕೆಚ್ ಹಾಕಲಾಗಿತ್ತು. ವಾಪಸ್ ಬರುತ್ತಿದ್ದ ವಾಹನವನ್ನು ಸ್ಫೋಟಿಸಿ 10 ಪೊಲೀಸರ ಹತ್ಯೆಗೆ ಕಾರಣರಾಗಿದ್ದಾರೆ ನಕ್ಸಲರು.

Prime Minister Narendra Modi pays tributes to policemen killed in Naxal attack

150 ಮೀ. ದೂರದಲ್ಲಿ ಅವಶೇಷ

ಈ ಸ್ಫೋಟದ ತೀವ್ರತೆ ಅದೆಷ್ಟು ಬಲವಾಗಿತ್ತು ಎಂದರೆ, ವಾಹನ ಸ್ಫೋಟದ ಸ್ಥಳದಿಂದ ಕನಿಷ್ಠ 20 ಅಡಿ ದೂರಕ್ಕೆ ಹಾರಿ ಬಿದ್ದಿದೆ. ಸ್ಫೋಟದ ಸ್ಥಳದಿಂದ ಸುಮಾರು 150 ಮೀ. ದೂರದಲ್ಲಿ ಚೂರಾದ ವಾಹನದ ಅವಶೇಷಗಳು ಸಿಕ್ಕಿವೆ ಎಂದರೆ ಲೆಕ್ಕ ಹಾಕಿ ಅದೆಷ್ಟು ಬಲವಾಗಿ ಸ್ಫೋಟ ಸಂಭವಿಸಿರಬೇಡ. ಘಟನೆ ನಡೆದ ಬಳಿಕ ವಿಶೇಷ ಭದ್ರತಾ ಪಡೆಗಳು ಕಾಡಿನಲ್ಲಿ ಅಡಗಿರುವ ಮಾವೋವಾದಿಗಳನ್ನು ಹುಡುಕುತ್ತಿದ್ದಾರೆ. ಈ ಪ್ರದೇಶ 3 ರಾಜ್ಯಗಳ ಮಧ್ಯೆ ಇದ್ದು, ತ್ರಿ-ಜಂಕ್ಷನ್ ಎಂದು ಕರೆಯಲಾಗುತ್ತದೆ.

ನಕ್ಸಲರ ವಿರುದ್ಧ ಹೋರಾಡಲು ವಿಶೇಷವಾಗಿ ತರಬೇತಿ ಪಡೆದ ಸ್ಥಳೀಯ ಬುಡಕಟ್ಟು ಸಮುದಾಯದ ಭದ್ರತಾ ಸಿಬ್ಬಂದಿ ಈ ದುರ್ಘಟನೆಯಲ್ಲಿ ಹುತಾತ್ಮರಾಗಿದ್ದಾರೆ ಎನ್ನಲಾಗಿದೆ. ಮತ್ತೊಂದು ಕಡೆ ಈಗ ಸ್ಫೋಟಿಸಿರುವ ವಾಹನದ ಮೇಲೆ ಹಲವು ದಿನಗಳಿಂದ ನಕ್ಸಲರು ಕಣ್ಣಿಟ್ಟಿದ್ದರು ಎನ್ನಲಾಗಿದೆ. ಅದರ ಚಲನವಲನ ಸೂಕ್ಷ್ಮವಾಗಿ ಗಮನಿಸಿ ದಾಳಿ ಮಾಡಿದ್ದಾರೆ. ಈ ಮೂಲಕ ದಾಳಿಗೆ ಮೊದಲೇ ನಕ್ಸಲರು ಸಿದ್ಧರಾಗಿದ್ದರು ಎಂಬ ಮಾಹಿತಿ ಸಿಕ್ಕಿದ್ದು, ಘಟನೆ ನಡೆದಿರುವ ಸುತ್ತಮುತ್ತಲ ಪ್ರದೇಶದಲ್ಲಿ ನಕ್ಸಲರಿಗಾಗಿ ಹುಡುಕಾಟ ತೀವ್ರಗೊಂಡಿದೆ.

ಇಷ್ಟೆಲ್ಲದರ ನಡುವೆ ನಕ್ಸಲ್ ದಾಳಿ ಹಿನ್ನೆಲೆಯಲ್ಲಿ ಒಡಿಶಾ ರಾಜ್ಯದ ಒಟ್ಟು 3 ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಜೊತೆಗೆ ಘಟನೆ ನಂತರ ಛತ್ತೀಸ್‍ಗಢದ ಗಡಿಭಾಗದ ಜಿಲ್ಲೆಗಳಾದ ಮಲ್ಕಾನ್‍ಗಿರಿ, ಕೊರಾಪುಟ್, ಬರ್ಗಾರ್ಡ್, ನುವಾಪಾದ ಮತ್ತು ನಬರಂಗ್‍ಪುರದಲ್ಲಿ ಇಂಚಿಂಚು ಜಾಗವನ್ನೂ ಪರಿಶೀಲಿಸಲಾಗುತ್ತಿದೆ. ಭದ್ರತೆಯನ್ನೂ ಹೆಚ್ಚಿಸಿ ಸರ್ಚಿಂಗ್ ಆಪರೇಷನ್ ಮುಂದುವರಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+