
ನಕ್ಸಲ್ ನಿಗ್ರಹ ದಳ; ಸಿಬ್ಬಂದಿ ಕಡಿತಕ್ಕೆ ಮುಂದಾದ ಕರ್ನಾಟಕ ಸರ್ಕಾರ
ಬೆಂಗಳೂರು, ಜನವರಿ 25; ಕಳೆದ ಏಳು ವರ್ಷಗಳಲ್ಲಿ ಕರ್ನಾಟಕದಲ್ಲಿ ನಕ್ಸಲ್ ಚಟುವಟಿಕೆಯ ಶೂನ್ಯ ಪ್ರಕರಣಗಳು ದಾಖಲಾಗಿವೆ. ಆದ್ದರಿಂದ ಸರ್ಕಾರ ನಕ್ಸಲ್ ನಿಗ್ರಹ ದಳ (ಎಎನ್‌ಎಫ್) ಸಿಬ್ಬಂದಿಗಳನ್ನು ಕಡಿತಗೊಳಿಸಲು ತೀರ್ಮಾನಿಸಿದೆ.
ಕರ್ನಾಟಕದಲ್ಲಿ 2005ರಲ್ಲಿ ನಕ್ಸಲ್ ನಿಗ್ರಹ ದಳ ಸ್ಥಾಪನೆ ಮಾಡಲಾಯಿತು. ಇದರ ಕೇಂದ್ರ ಕಚೇರಿ ಉಡುಪಿಯ ಜಿಲ್ಲೆಯ ಕಾರ್ಕಳದಲ್ಲಿದೆ. ಈಗ ರಾಜ್ಯದಲ್ಲಿ ನಕ್ಸಲ್ ಚಟುವಟಿಕೆ ಕಡಿಮೆಯಾಗಿರುವುದರಿಂದ ಸಿಬ್ಬಂದಿ ಮತ್ತು ಕ್ಯಾಂಪ್ ಸಂಖ್ಯೆ ಕಡಿತಕ್ಕೆ ರೂಪುರೇಷೆ ತಯಾರು ಮಾಡಲಾಗಿದೆ.
ನಕ್ಸಲ್ ನಾಯಕಿ ಹೊಸಗದ್ದೆ ಪ್ರಭಾ ತಮಿಳುನಾಡು ಪೊಲೀಸರಿಗೆ ಶರಣು!
ಮಲೆನಾಡು ಮತ್ತು ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ನಕ್ಸಲ್ ನಿಗ್ರಹ ದಳದ 15 ಕ್ಯಾಂಪ್‌ಗಳಿವೆ, 500 ಸಿಬ್ಬಂದಿಗಳು ಇದ್ದಾರೆ. ಈಗ 250 ಸಿಬ್ಬಂದಿಗಳು ಮತ್ತು 6 ಕ್ಯಾಂಪ್‌ಗಳನ್ನು ಕಡಿತಗೊಳಿಸಲು ಸರ್ಕಾರ ಮುಂದಾಗಿದೆ.
ಕೇರಳ ಎಟಿಎಸ್ ತಂಡ ಕಾರ್ಯಾಚರಣೆ: ನಕ್ಸಲ್ ಲೀಡರ್ ಬಿಜಿಕೆ, ಸಾವಿತ್ರಿ ಕೇರಳದಲ್ಲಿ ಬಂಧನ
ನಕ್ಸಲ್ ಚಟುವಟಿಕೆ ಹೆಚ್ಚು ನಡೆಯುವ ಪ್ರದೇಶಗಳಲ್ಲಿ ನಕ್ಸಲ್ ನಿಗ್ರಹ ದಳದ ಸಿಬ್ಬಂದಿ ಕಡಿತಗೊಳಿಸಿ ಪೊಲೀಸರನ್ನು ನಿಯೋಜನೆ ಮಾಡಲಾಗುತ್ತದೆ. ಆಗುಂಬೆ ವಲಯದಲ್ಲಿ ನಕ್ಸಲ್ ಚಟುವಟಿಕೆ ಇಲ್ಲ, ಆದ್ದರಿಂದ ಕ್ಯಾಂಪ್ ಸ್ಥಗಿತಗೊಳಿಸಿ ಕೊಡಗಿಗೆ ನಿಯೋಜನೆ ಮಾಡಲಾಗುತ್ತದೆ.
ನಕ್ಸಲ್ ನಂಟು ಆರೋಪದಿಂದ ವಿಠಲ್ ಮಲೆಕುಡಿಯ ಮುಕ್ತ
ಗೃಹ ಸಚಿವರ ಪ್ರತಿಕ್ರಿಯೆ; ನಕ್ಸಲ್ ನಿಗ್ರಹ ದಳದ ಸಿಬ್ಬಂದಿ ಕಡಿತದ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಜನರ ಜೀವ ಮತ್ತು ಭದ್ರತೆ ವಿಚಾರದಲ್ಲಿ ಯಾವುದೇ ರಾಜಿ ಆಗುವುದಿಲ್ಲ. ಸರ್ಕಾರ ನಕ್ಸಲ್ ನಿಗ್ರಹ ದಳದ ಸಿಬ್ಬಂದಿ ಸಂಪೂರ್ಣವಾಗಿ ಕಡಿತ ಮಾಡುತ್ತಿಲ್ಲ. ನಾವು ಪೊಲೀಸರನ್ನು ಸಹ ಬಳಕೆ ಮಾಡಿಕೊಳ್ಳುತ್ತೇವೆ" ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಸದ್ಯ 8 ಜನ ನಕ್ಸಲರು ಇದ್ದಾರೆ ಎಂದು ಶಂಕಿಸಲಾಗಿದೆ. ಆದರೆ ಅವರು ಬೇರೆ ರಾಜ್ಯದಲ್ಲಿ ನೆಲೆ ಕಂಡುಕೊಂಡಿದ್ದಾರೆ. ರಾಜ್ಯದಲ್ಲಿ ಸದ್ಯ ನಕ್ಸಲ್ ಚಟುವಟಿಕೆ ಇಲ್ಲ, ಭೂಗತರಾಗಿರುವ ನಕ್ಸಲರ ಮೇಲೆ ಬೆಂಗಳೂರಿನ ಪೊಲೀಸರು ಕಣ್ಗಾವಲು ಇಟ್ಟಿದ್ದಾರೆ.
ಬೇರೆ ಬೇರೆ ಜಿಲ್ಲೆಗಳ ಪೊಲೀಸ್ ಸಿಬ್ಬಂದಿಗಳನ್ನು ಬಳಕೆ ಮಾಡಿಕೊಂಡು ಕರ್ನಾಟಕ ಸರ್ಕಾರ ನಕ್ಸಲ್ ನಿಗ್ರಹ ದಳವನ್ನು ರಚನೆ ಮಾಡಿತ್ತು. ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಈಗಾಗಲೇ ನಕ್ಸಲ್ ನಿಗ್ರಹ ದಳವನ್ನು ಸ್ಥಗಿತಗೊಳಿಸಿದ್ದು, ಸಿಬ್ಬಂದಿಗಳನ್ನು ಅವರ ತವರು ಜಿಲ್ಲೆಗೆ ಕಳಿಸಲಾಗಿದೆ.

1990 ರಿಂದ 2012ರ ತನಕ ಕರ್ನಾಟಕದಲ್ಲಿ ನಕ್ಸಲ್ ಚಟುವಟಿಕೆ ಸಕ್ರಿಯವಾಗಿತ್ತು. 40 ರಿಂದ 45 ಸಕ್ರಿಯ ಶಸ್ತ್ರ ಸಜ್ಜಿತ ನಕ್ಸಲರು ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಬೀದರ್, ರಾಯಚೂರು, ಬಳ್ಳಾರಿ ಮತ್ತು ತುಮಕೂರು ಜಿಲ್ಲೆಗಳಲ್ಲಿ ಇದ್ದರು.
2005 ರಿಂದ 2012ರ ಅವಧಿಯಲ್ಲಿ ನಡೆದ 11 ಎನ್‌ಕೌಂಟರ್‌ಗಳಲ್ಲಿ ನಕ್ಸಲ್ ನಿಗ್ರಹ ದಳ 19 ನಕ್ಸಲರನ್ನು ಹತ್ಯೆ ಮಾಡಿತ್ತು. ಕೆಎಸ್‌ಆರ್‌ಪಿಯ 8 ಸಿಬ್ಬಂದಿಗಳು ಸಹ ಹುತಾತ್ಮರಾಗಿದ್ದರು. ಪೊಲೀಸ್ ಮಾಹಿತಿದಾರರಾಗಿದ್ದ 7 ಜನರನ್ನು ನಕ್ಸಲರು ಹತ್ಯೆ ಮಾಡಿದ್ದರು.
ಕಳೆದ 10 ವರ್ಷಗಳಲ್ಲಿ 14 ನಕ್ಸಲರು ತಮ್ಮ ಶಸ್ತ್ರಗಳನ್ನು ತ್ಯಾಗ ಮಾಡಿ ಶರಣಾಗಿದ್ದಾರೆ. ನಕ್ಸಲ್ ಪೀಡಿತ ಪ್ರದೇಶದಲ್ಲಿ ನಕ್ಸಲರ ಯಾವುದೇ ಚಟುಟಿಕೆ ಇಲ್ಲ, ಆದರೆ ಕೆಲವು ಸ್ಯಾಟಲೈಟ್ ಫೋನ್ ಕರೆಗಳ ಮಾಹಿತಿ ಇದ್ದು, ಅದರ ಮೇಲೆ ಕಣ್ಣಿಡಲಾಗಿದೆ. ಆದರೆ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುವ ಜನರು ಸಹ ಸ್ಯಾಟಲೈನ್ ಫೋನ್ ಬಳಕೆ ಮಾಡುತ್ತಾರೆ.
ಕರ್ನಾಟಕದಲ್ಲಿ ನಕ್ಸಲ್ ಚಟುವಟಿಕೆ
* 2003, ನವೆಂಬರ್ 17. ನಕ್ಸಲರಾದ ಹಾಜಿಮಾ ಮತ್ತು ಪಾರ್ವತಿ ಉಡುಪಿಯಲ್ಲಿ ಹತ್ಯೆ
* 2005, ಫೆಬ್ರವರಿ 6. ಎಎನ್‌ಎಫ್‌ನಿಂದ ನಕ್ಸಲ್ ನಾಯಕ ಸಾಕೇತ್ ರಾಜನ್ ಹತ್ಯೆ
* 2005, ಫೆಬ್ರವರಿ 10. ತುಮಕೂರಿನಲ್ಲಿ ನಕ್ಸಲರಿಂದ 6 ಪೊಲೀಸರ ಹತ್ಯೆ
* 2005, ಮೇ 17. ನಕ್ಸಲರಿಂದ ಪೊಲೀಸ್ ಮಾಹಿತಿದಾರ ಶೇಷಯ್ಯ ಹತ್ಯೆ
* 2008, ನೆವೆಂಬರ್ 19. ನಕ್ಸಲ್ ಮತ್ತು ಎಎನ್‌ಎಫ್ ಕಮಾಂಡೋ ಹೊರನಾಡುವಿನಲ್ಲಿ ಹತ್ಯೆ