Guru Sankramana: ಈ 5 ರಾಶಿಯವರಿಗೆ ಮದುವೆ ಭಾಗ್ಯ, ಗುರು ಸಂಚಾರದ ಮಹಾ ಫಲ, ಶುಭ ಕಾಲ

Jupiter Transit 2026: ಮದುವೆ ಮಾತುಕತೆ ಪದೇ ಪದೇ ಮುರಿದು ಬೀಳುತ್ತಿದೆಯೇ? ವಿವಾಹಕ್ಕೆ ಅಡೆತಡೆಗಳನ್ನು ಎದುರಿಸುತ್ತಿದ್ದೀರಾ? ಈ ಸಮಸ್ಯೆಗೆ ಇದೀಗ ಪರಿಹಾರ ಸಿಗಲಿದೆ. 2026 ಜೂನ್ 2 ರಂದು ಅಂದರೆ ಇಂದಿನ ಗುರುವಿನ ಸಂಚಾರವು ವಿವಾಹ ಯೋಗವನ್ನು ಸೃಷ್ಟಿಸುತ್ತದೆ. ಜ್ಯೋತಿಷ್ಯದ ಪ್ರಕಾರ, ಮದುವೆ, ಸಂತೋಷ ಮತ್ತು ಅದೃಷ್ಟಕ್ಕೆ ಕಾರಣವಾಗಿರುವುದೇ ಗುರು ಗ್ರಹ. ಗುರು ವಿವಾಹದ ಅವಕಾಶಗಳನ್ನು ಸೃಷ್ಟಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಈ ಕಾರಣದಿಂದಲೇ ಗುರು ಅಸ್ತವಾಗಿರುವ ಅವಧಿಯಲ್ಲಿ ಮದುವೆಗೆ ಶುಭ ಸಮಯಗಳು ಸಿಗುವುದಿಲ್ಲ. ಜಾತಕದಲ್ಲಿ ದುರ್ಬಲ ಗುರು ವ್ಯಕ್ತಿಯ ವಿವಾಹಕ್ಕೆ ಗಮನಾರ್ಹ ಅಡೆತಡೆಗಳನ್ನು ಉಂಟುಮಾಡಬಹುದು. ಮತ್ತೊಂದೆಡೆ, ಬಲಿಷ್ಠ ಗುರುವು ವೈವಾಹಿಕ ಆನಂದ ಮತ್ತು ಉತ್ತಮ ಸಂಗಾತಿಯನ್ನು ದಯಪಾಲಿಸುತ್ತಾನೆ.

ಜೂನ್ 2ರಿಂದ ವಿವಾಹ ಯೋಗ

ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ, 2026 ಜೂನ್ 2ರಂದು ಗುರುವು ತನ್ನ ಉತ್ತುಂಗ ರಾಶಿಯಾದ ಕರ್ಕ ರಾಶಿಗೆ ಸಂಕ್ರಮಿಸುತ್ತಾನೆ. ಇನ್ನು 2026 ಅಕ್ಟೋಬರ್ 31 ರವರೆಗೆ ಅದೇ ರಾಶಿಯಲ್ಲಿ ಗುರುವಿನ ಸಂಚಾರ. ಈ ಅವಧಿಯಲ್ಲಿ ಐದು ರಾಶಿಯಲ್ಲಿ ಜನಿಸಿದವರಿಗೆ ಮದುವೆ, ನಿಶ್ಚಿತಾರ್ಥ ಯೋಗ ಕೂಡಿ ಬರುವುದು. ಅಪೇಕ್ಷಿತ ಜೀವನ ಸಂಗಾತಿಯೂ ಸಿಗುವರು.

Jupiter Transit 2026

ಅದೃಷ್ಟ 5 ರಾಶಿಗಳು ಯಾವುವು?

ಮಿಥುನ ರಾಶಿ: ಮುಂದುವರಿಯಲಿವೆ ವಿವಾಹ ಮಾತುಕತೆ

ಮಿಥುನ ರಾಶಿಯಲ್ಲಿ ಗುರುವಿನ ಸಂಚಾರವು ವಿವಾಹ ಪ್ರಸ್ತಾಪ ಮತ್ತು ಸಂಬಂಧ ಕೂಡಿ ಬರುವಂತೆ ಮಾಡುತ್ತದೆ. ಗುರುವು ನಿಮ್ಮ ರಾಶಿಯಿಂದ ಎರಡನೇ ಮನೆಗೆ ಪ್ರವೇಶಿಸುತ್ತಿದ್ದಾನೆ. ಈ ಮನೆಯನ್ನು ಕುಟುಂಬ ವಿಸ್ತರಣೆ ಮತ್ತು ವಿವಾಹ ಮಾತುಕತೆಗಳ ಮನೆ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ, ದೀರ್ಘಕಾಲದಿಂದ ನಿಂತು ಹೋಗಿದ್ದ ವಿವಾಹ ಮಾತುಕತೆಗಳು ಇದ್ದಕ್ಕಿದ್ದಂತೆ ಮುಂದುವರಿಯಬಹುದು. ಪ್ರೇಮ ವಿವಾಹಕ್ಕೆ ಕುಟುಂಬದ ಒಪ್ಪಿಗೆ ಪಡೆಯಲು ಸಾಧ್ಯವಾಗದಿದ್ದರೆ, ಈಗ ನಿಮ್ಮ ಹಿರಿಯರು ಕೂಡಾ ನಿಮ್ಮ ಪ್ರೇಮ ಸಂಬಂಧಕ್ಕೆ ಹಸಿರು ನಿಶಾನೆ ತೋರುವರು. ಪ್ರೇಮ ಸಂಬಂಧವು ವಿವಾಹವಾಗಿ ಬದಲಾಗುವ ಸಾಧ್ಯತೆಗಳಿವೆ. ಜುಲೈ ಮತ್ತು ಅಕ್ಟೋಬರ್ ನಡುವೆ ನಿಶ್ಚಿತಾರ್ಥ ಅಥವಾ ವಿವಾಹ ಸಂಪನ್ನವಾಗುವ ಸಾಧ್ಯತೆ ಹೆಚ್ಚು.

Daily Horoscope: ಈ ರಾಶಿಯವರಿಗೆ ವೃತ್ತಿಯಲ್ಲಿ ಹೊಸ ಅವಕಾಶ, ಖರ್ಚುವೆಚ್ಚಗಳ ಬಗ್ಗೆ ಇರಲಿ ಎಚ್ಚರ, ಆರ್ಥಿಕ ಸ್ಥಿತಿ ಸ್ಥಿರ
Daily Horoscope: ಈ ರಾಶಿಯವರಿಗೆ ವೃತ್ತಿಯಲ್ಲಿ ಹೊಸ ಅವಕಾಶ, ಖರ್ಚುವೆಚ್ಚಗಳ ಬಗ್ಗೆ ಇರಲಿ ಎಚ್ಚರ, ಆರ್ಥಿಕ ಸ್ಥಿತಿ ಸ್ಥಿರ

ಕನ್ಯಾ ರಾಶಿ: ಬಯಸಿದ ಜೀವನ ಸಂಗಾತಿ ಪಡೆಯುವಿರಿ

ಕನ್ಯಾ ರಾಶಿಯವರಿಗೆ, ಗುರುವಿನ 11 ನೇ ಮನೆಯಲ್ಲಿನ ಸ್ಥಾನವು ಆಸೆಗಳನ್ನು ಈಡೇರಿಸಲು ಮತ್ತು ಸಂಬಂಧಗಳಲ್ಲಿ ಯಶಸ್ಸಿಗೆ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಮದುವೆಯ ಪ್ರಸ್ತಾಪಗಳು ಹಲವು ಕಡೆಗಳಿಂದ ಬರಬಹುದು. ಸರಿಯಾದ ಜೀವನ ಸಂಗಾತಿಗಾಗಿ ಕಾಯುತ್ತಿದ್ದವರಿಗೆ ಈಗ ಸ್ನೇಹಿತರು ಅಥವಾ ಪರಿಚಯಸ್ಥರ ಮೂಲಕ ಸೂಕ್ತ ಜೋಡಿ ಸಿಗುವ ಸಾಧ್ಯತೆಯಿದೆ. ಈ ಸಮಯ ಪ್ರೇಮ ವಿವಾಹಗಳಿಗೂ ಅನುಕೂಲಕರವಾಗಿದೆ.

ವೃಶ್ಚಿಕ ರಾಶಿ: ನಿಮಗೆ ಅದೃಷ್ಟ, ಅಡೆತಡೆಗಳು ದೂರ

ವೃಶ್ಚಿಕ ರಾಶಿಯವರಿಗೆ, ಗುರುವಿನ ಈ ಸಂಚಾರವು ಅದೃಷ್ಟವನ್ನು ತರುತ್ತದೆ. ಜೊತೆಗೆ ವಿವಾಹದ ಅವಕಾಶಗಳನ್ನು ಸೃಷ್ಟಿಸುತ್ತದೆ. ಮದುವೆಗೆ ಇರುವ ಎಲ್ಲಾ ರೀತಿಯ ಅಡೆತಡೆಗಳು ದೂರವಾಗುತ್ತವೆ. ದೂರದ ಸ್ಥಳ ಅಥವಾ ಬೇರೆ ನಗರಗಳಲ್ಲಿ ಸಂಬಂಧವು ರೂಪುಗೊಳ್ಳುವ ಸಾಧ್ಯತೆಗಳಿವೆ. ಪ್ರೇಮ ವಿವಾಹದಲ್ಲಿ ಆಸಕ್ತಿ ಹೊಂದಿರುವವರು ತಮ್ಮ ಕುಟುಂಬಗಳಿಂದ ಸಕಾರಾತ್ಮಕ ಸಂಕೇತಗಳನ್ನು ಪಡೆಯಬಹುದು. ಸ್ಥಗಿತಗೊಂಡಿದ್ದ ಚರ್ಚೆಗಳು ಪುನರಾರಂಭಗೊಳ್ಳಬಹುದು.

ಮಕರ ರಾಶಿ: ಪ್ರಬಲ ಸ್ಥಾನದಲ್ಲಿ ಗುರು

ಗುರುವಿನ ಸಂಚಾರವು ವಿವಾಹದ ಸಾಧ್ಯತೆಗಳನ್ನು ಸೃಷ್ಟಿಸುತ್ತಿರುವ ರಾಶಿಗಳಲ್ಲಿ ಮಕರ ರಾಶಿಯವರು ಅತ್ಯಂತ ಪ್ರಬಲ ಸ್ಥಾನದಲ್ಲಿದ್ದಾರೆ. ಗುರುವು ನೇರವಾಗಿ ತಮ್ಮ ಏಳನೇ ಮನೆಯನ್ನು ಸಕ್ರಿಯಗೊಳಿಸುತ್ತಾನೆ. ಪರಿಣಾಮವಾಗಿ, ಈ ರಾಶಿಯ ಅವಿವಾಹಿತ ವ್ಯಕ್ತಿಗಳಿಗೆ ವಿವಾಹ ನಿಶ್ಚಯವಾಗುವ ಸಾಧ್ಯತೆ ಹೆಚ್ಚು. ಇವರ ವಿವಾಹ ನಿಶ್ಚಯವಾಗುತ್ತಿದ್ದ ಹಾಗೆಯೇ ಮದುವೆ ಕೂಡಾ ಮುಗಿದು ಬಿಡಬಹುದು. ಇವರಿಗೆ ತಮ್ಮ ಮನಸ್ಸಿನ ಇಚ್ಛೆಯಂತೆ ಸೂಕ್ತ ಜೀವನ ಸಂಗಾತಿ ಸಿಗುವರು. ಈ ಮಧ್ಯೆ, ಈಗಾಗಲೇ ತಮ್ಮ ಸಂಬಂಧದ ಬಗ್ಗೆ ಈಗಾಗಲೇ ಮಾತುಕತೆ ನಡೆಸುತ್ತಿರುವವರ ನಿಶ್ಚಿತಾರ್ಥ ನೆರವೇರುವುದು. ತ್ವರಿತ ನಿಶ್ಚಿತಾರ್ಥ ಮತ್ತು ತ್ವರಿತ ವಿವಾಹದ ಸಾಧ್ಯತೆಗಳು ಹೆಚ್ಚಿವೆ.

ಮೀನ ರಾಶಿ: ಪ್ರೇಮಿಗಳಿಗೆ ಕುಟುಂಬದಿಂದ ಗ್ರೀನ್ ಸಿಗ್ನಲ್

ಪ್ರೇಮ ವಿವಾಹಕ್ಕೆ ಕುಟುಂಬದಿಂದ ಹಸಿರು ನಿಶಾನೆ ಸಿಗಲಿದೆ. ಕುಟುಂಬದ ಅನುಮೋದನೆಗಾಗಿ ಕಾಯುತ್ತಿರುವ ಮೀನ ರಾಶಿಯ ದಂಪತಿಗಳಿಗೆ ಗುರುವಿನ ಸಂಚಾರವು ಶುಭಕರವಾಗಿದೆ. ಮಕ್ಕಳನ್ನು ಹೊಂದಲು ಬಯಸುವ ದಂಪತಿಗಳು ಈ ಸಮಯದಲ್ಲಿ ಒಳ್ಳೆಯ ಸುದ್ದಿಯನ್ನು ಪಡೆಯಬಹುದು. ಐದನೇ ಮನೆಯಲ್ಲಿ ಗುರುವಿನ ಸ್ಥಾನವು ಮೀನ ರಾಶಿಯವರಿಗೆ ಪ್ರೀತಿ, ಪ್ರಣಯ ಮತ್ತು ಮದುವೆಯ ಯೋಗವನ್ನು ಬಲಪಡಿಸುತ್ತದೆ. ಒಂಟಿ ಜನರ ಬಾಳಿನಲ್ಲಿ ಸಂಗಾತಿಯ ಪ್ರವೇಶ ಆಗಬಹುದು. ಮದುವೆಯು ಭವಿಷ್ಯದ ಕುಟುಂಬ ಯೋಜನೆಗಳನ್ನು ಸಹ ಬಲಪಡಿಸಬಹುದು.

ಈ ರಾಶಿಯವರಿಗೆ ಕೂಡ ಶುಭ ವಿವಾಹ ಯೋಗ

ಈ ಕೆಳಗಿನ ಯಾವುದೇ ಸ್ಥಿತಿಗಳನ್ನು ಹೊಂದಿರುವ ಜಾತಕಗಳು ಜೂನ್ 2ರ ನಂತರ ವಿವಾಹ ವಿಷಯಗಳಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ಕಾಣಬಹುದಾಗಿದೆ.

ಗುರು ಮಹಾದಶಾ/ಅಂತರದಶಾ ಚಾಲನೆಯಲ್ಲಿದ್ದರೆ, ಏಳನೇ ಮನೆ ಅಥವಾ ಏಳನೇ ಮನೆಯ ಅಧಿಪತಿ ಬಲಶಾಲಿಯಾಗಿದ್ದರೆ ಮತ್ತು ಶುಕ್ರ ಶುಭ ಸ್ಥಾನದಲ್ಲಿದ್ದರೆ, ಗುರು ಅಥವಾ ಚಂದ್ರ ಜನ್ಮ ಕುಂಡಲಿಯಲ್ಲಿ ಶುಭವಾಗಿದ್ದರೆ ಅಂತಹ ರಾಶಿಯವರಿಗೂ ಕಂಕಣ ಭಾಗ್ಯ ಕೂಡಿ ಬರಲಿವೆ. ಇಲ್ಲಿಯವರೆಗೆ ತಮ್ಮ ಮದುವೆ ವಿಳಂಬವಾಗುತ್ತಿದೆ ಎಂದುಕೊಂಡವರಿಗೆ ಈಗ ಪರಿಸ್ಥಿತಿಗಳು ಪರವಾಗಿ ನಿಲ್ಲುತ್ತವೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+