ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಣಿಕಟ್ಟಿಗೊಂದು ಎಲ್ ಜಿ ವಾಚ್ ಫೋನ್
ಸ್ಕ್ರಾಚ್ ಪ್ರೂಫ್ ಇರುವ LG GD910 ವಾಚ್ ಫೋನ್ ಗಳು ಸಾಮಾನ್ಯ ವಾಚ್ ನಂತೆ ಕಾಣಿಸುತ್ತದೆ. ಆದರೆ, ನಿಮಗೆ ಬೇಕಾದಾಗ ವಾಚ್ ಅನ್ನು ಫೋನ್ ನಂತೆ ಬಳಸುವ ಸೌಲಭ್ಯ ನೀಡುತ್ತದೆ. 13.9 ಮಿ.ಮೀ ಸುತ್ತಳತೆಯ ಸಪೂರವಾದ ಈ ವಾಚ್ ಅನ್ನು ಎಲ್ ಜಿ ಭಾರತದ ಮಾರುಕಟ್ಟೆಗೆ ಮೊದಲು ಬಿಟ್ಟಿದೆ.3ಜಿ ತಂತ್ರಜ್ಞಾನ, ವಿಡಿಯೋ ಕಾಲಿಂಗ್ ಮುಂತಾದ ಉನ್ನತ ಸೌಲಭ್ಯಗಳು ಇದರಲ್ಲಿ ಲಭ್ಯ. ಬ್ಲೂ ಟೂಥ್ ಹೆಡ್ ಸೆಟ್ ಸೌಲಭ್ಯ ವಿರುವುದರಿಂದ ಕರೆ ಸ್ವೀಕಾರ ಸುಲಭ.
ಸುಂದರ ವಿನ್ಯಾಸದ ಈ ವಾಚ್ ಗಳು ಸ್ಟೈಲೀಷ್ ಹ್ಯಾಂಡ್ ಸೆಟ್ ಸಂಗ್ರಹ ಮಾಡುವವರ ಮೊದಲ ಆದ್ಯತೆ ಆಗುವ ಎಲ್ಲ ಸಾಧ್ಯತೆಯಿದೆ. ಎಲ್ ಜಿ ಯ ಈ ನೂತನ ಮೊಬೈಲ್ ಕಮ್ ವಾಚ್ ಫೋನ್ ನ ಬೆಲೆ ಕೂಡ ಅಷ್ಟೇ ಎತ್ತರದಲ್ಲಿದೆ. ಇದರ ಬೆಲೆ ಸುಮಾರು 49,990.
Story first published: Saturday, February 27, 2010, 13:26 [IST]