Realme 12x: ಮಾರುಕಟ್ಟೆಗೆ ಇಂದು ಲಗ್ಗೆ ಇಡಲಿದೆ ಬಜೆಟ್‌ ಫ್ರೆಂಡ್ಲಿ ಸ್ಮಾರ್ಟ್‌ಫೋನ್‌

ಚೀನಾ ಮೂಲದ ಕಂಪನಿ ರಿಯಲ್‌ಮಿ ಇಂದು (ಏ.2) ಬಜೆಟ್‌ ಫ್ರೆಂಡ್ಲಿ ಸೆಗ್ಮೆಂಟ್‌ನಲ್ಲಿ ಸ್ಮಾರ್ಟ್‌ಫೋನ್‌ ಲಾಂಚ್‌ ಮಾಡಲಿದೆ. Realme 12x ಈ ಮೊಬೈಲ್‌ನಲ್ಲಿ ಒಂದಕ್ಕಿಂತ ಒಂದು ಫೀಚರ್‌ಗಳು ಗ್ರಾಹಕರನ್ನು ಕೈ ಬಿಸಿ ಕರೆಯುತ್ತಿವೆ. ಈಗಾಗಲೇ ಚೈನಾದಲ್ಲಿ ಬಿಡುಗಡೆ ಆಗಿರುವ ರಿಯಲ್‌ಮಿ 12 ಎಕ್ಸ್‌ ಫೋನ್‌ ಭಾರತದಲ್ಲಿ ಕೊಂಚ ಬದಲಾವಣೆಯೊಂದಿಗೆ ಮಾರುಕಟ್ಟೆಗೆ ಬರಲಿದೆ. ಮಧ್ಯಾಹ್ನ 12 ರಿಂದ ಇದರ ಬುಕ್ಕಿಂಗ್‌ ಆರಂಭವಾಗುತ್ತದೆ.

ಚೀನಾ ಮೂಲದ ಕಂಪನಿಗಳು ಗ್ರಾಹಕರನ್ನು ತನ್ನತ್ತ ಸೆಳೆಯಲು ಹೊಸ ಹೊಸ ಡಿಸೈನ್‌ ಹಾಗೂ ಫೀಚರ್‌ಗಳೊಂದಿಗೆ ಬರುತ್ತವೆ. ಅಲ್ಲದೆ ಈ ಸ್ಮಾರ್ಟ್‌ಫೋನ್‌ ಭರ್ಜರಿ ಫೀಚರ್‌ಗಳನ್ನು ಹೊಂದಿದ್ದು, ಬೇರೆ ಕಂಪನಿಯ ಫೋನ್‌ಗಳಿಗೆ ತುಲನೆ ಮಾಡಿದರೆ, ಕಡಿಮೆ ಬೆಲೆಯಲ್ಲಿ ಸಿಗುತ್ತವೆ. ಮಂಗಳವಾರ ಬಿಡುಗಡೆಯಾಗುತ್ತಿರುವ ರಿಯಲ್‌ಮಿ ಫೋನ್‌ ಸಹ ಇದಕ್ಕೆ ಹೊರತಾಗಿಲ್ಲ.

Realme 12X Launching in India on April 2 Expected Price Specs and More

ಏನಿದೆ ವಿಶೇಷ?

ರಿಯಲ್‌ಮಿ 12 ಎಕ್ಸ್‌ 45ವ್ಯಾಟ್‌ ವೇಗದ ಚಾರ್ಜಿಂಗ್ ಮತ್ತು 5G ನೆಟ್‌ವರ್ಕ್‌ ಸಪೋರ್ಟ್‌ ಮಾಡಲಿದ್ದು, 12 ಸಾವಿರ ರೂಪಾಯಿಗಳ ಒಳಗೆ ಗ್ರಹಕರ ಕೈಗೆ ಲಭ್ಯ. ಈ ಫೋನ್ ಎರಡು ಬಣ್ಣಗಳಲ್ಲಿ ಗ್ರಾಹಕರನ್ನು ಸೆಳೆಯಲಿದೆ. ಪ್ಲ್ಯಾಸ್ಟಿಕ್‌ ಬಾಡಿ ಹೊಂದಿರುವ ಫೋನ್‌ ಹಿಂಬಾಗದಲ್ಲಿ ವಿಭಿನ್ನ ರೀತಿಯಲ್ಲಿ ಕ್ಯಾಮೆರಾ ಸೆಟ್‌ಅಪ್‌ ಮಾಡಲಾಗಿದೆ.

Realme 12x ಸ್ಮಾರ್ಟ್‌ಫೋನ್‌ 6.72 ಇಂಚಿನ ಎಲ್‌ಸಿಡಿ HD ಪ್ಲಸ್ ರೆಸಲ್ಯೂಶನ್‌ ಡಿಸ್‌ಪ್ಲೇ ಹೊಂದಿರಲಿದೆ. ಈ ಸ್ಮಾರ್ಟ್‌ ಫೋನ್‌ನ ರಿಫ್ರೆಶ್‌ ದರ 120 Hz ಆಗಿರಲಿದೆ. ಇದರಲ್ಲಿ ಮಿಡಿಯಾ ಟೆಕ್‌ ಡೈಮೆನ್ಸಿಟಿ 6100 ಪ್ಲಸ್ ಚಿಪ್‌ ಸೆಟ್‌ ಲಭ್ಯವಿದೆ. ಪ್ರೈಮರಿ ಕ್ಯಾಮೆರಾ 50 ಮೆಗಾಫಿಕ್ಸಲ್‌ ಇರಲಿದ್ದು, ಫ್ರಂಟ್‌ ಕ್ಯಾಮೆರಾ 8 ಮೆಗಾ ಫಿಕ್ಸಲ್‌ ಹೊಂದಿರಲಿದೆ. ಈ ಫೋನ್‌ 5000mAh ಬ್ಯಾಟರಿ ಹೊಂದಿರಲಿದೆ. ಬಜೆಟ್‌ ಫ್ರೆಂಡ್ಲಿ ಫೋನ್‌ ಆದ್ರೂ ಸಹ ಇದು ಆಂಡ್ರಾಯಿಡ್‌ 14 ಓಎಸ್‌ ಹೊಂದಿರುತ್ತದೆ. ಇದರಲ್ಲಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಇರಲಿದೆ.

Realme 12X Launching in India on April 2 Expected Price Specs and More

ಎಷ್ಟು ವಿಧದಲ್ಲಿ ಫೋನ್ ಲಭ್ಯ

ಈ ಫೋನ್‌ನ ಟೀಸರ್‌ನಲ್ಲಿ ತೋರಿಸುವಂತೆ ಈ ಮೊಬೈಲ್‌ ಫೋನ್‌ ಎರಡು ಬಣ್ಣಗಳಲ್ಲಿ ಬರಲಿದೆ. ಅಲ್ಲದೆ ಎರಡು ವಿದಧ ಗ್ರಾಹಕರನ್ನು ಇದು ಟಾರ್ಗೆಟ್‌ ಮಾಡಲಿದೆ. 12 ಸಾವಿರಕ್ಕೂ ಕಡಿಮೆ ಬೆಲೆಯಲ್ಲಿ 6 ಜಿಬಿ ರ್ಯಾಮ್ ಹಾಗೂ 128 ಜಿಬಿ ಇಂಟರ್ನಲ್‌ ಸ್ಟೋರೆಜ್‌ ಇರಲಿದೆ. ಇನ್ನೊಂದು ಮಾಡೆಲ್‌ ಸುಮಾರು 15 ಸಾವಿರ ರೂ. ಆಸುಪಾಸಿನಲ್ಲಿ ಇರಲಿದ್ದು, ಇದರಲ್ಲಿ 8ಜಿಬಿ ರ್ಯಾಮ್‌, 128 ಜಿಬಿ ಇಂಟರ್ನಲ್‌ ಸ್ಟೋರೆಜ್‌ ನೀಡಲಾಗಿದೆ.

ಮಾರುಕಟ್ಟೆಯಲ್ಲಿ ಈಗಾಗಲೇ ಹಲವು ಫೋನ್‌ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಅದರೊಂದಿಗೆ ಈ ಸ್ಮಾರ್ಟ್‌ಫೋನ್‌ ಪೈಪೋಟಿ ನಡೆಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+