India-Swiss: ಸ್ವಿಟ್ಜರ್ಲೆಂಡ್ ರೈಲ್ವೆ ತಂತ್ರಜ್ಞಾನಕ್ಕೆ ಮನಸೋತ ಭಾರತ, ಅಶ್ವಿನಿ ವೈಷ್ಣವ್ ಹೇಳಿದ್ದೇನು?
ಬೆಂಗಳೂರು, ಜನವರಿ 23: ಹೊಸ ತಂತ್ರಜ್ಞಾನ ಅಳಡಿಕೆಗೆ ಸದಾ ಸಿದ್ದವಿರುವ ಭಾರತೀಯ ರೈಲ್ವೆಯು ಸ್ವಿಟ್ಜರ್ಲೆಂಡ್ ರೈಲ್ವೇಯ ಹಬ್ ಮತ್ತು ಸ್ಪೋಕ್ ಮಾಡೆಲ್ ಮತ್ತು ಟನೆಲಿಂಗ್ ತಂತ್ರಜ್ಞಾನಕ್ಕೆ ಮನಸೋತಿದೆ. ಭವಿಷ್ಯ ಯೋಜನೆಗಳಿಗಾಗಿ ಸ್ವೀಸ್ ಜೊತೆ ಮಹತ್ವದ ಒಪ್ಪಂದಕ್ಕೆ ಮುಂದಾಗಿದೆ
ಈ ಕುರಿತು ಭಾರತೀಯ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, ಸ್ವಿಸ್ ತಂತ್ರಜ್ಞಾನ ಸೇರಿದಂತೆ ಅವರ ಉತ್ತಮ ಅಭ್ಯಾಸಗಳು ಮತ್ತು ಕಾರ್ಯವಿಧಾನಗಳಿಂದ ಕಲಿಯಲು ಭಾರತೀಯ ರೈಲ್ವೇ ಆ ದೇಶದ ಸಹಯೋಗ ಸಾಧಿಸಲು ಚಿಂತನೆ ನಡೆಸಿದೆ ಎಂದು ಅವರು ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯಲ್ಲಿ ಪಿಟಿಐ ಸಂದರ್ಶನದಲ್ಲಿ ಮಾಹಿತಿ ನೀಡಿದ್ದರು.

ಸಚಿವರು ಆಧುನಿಕ ಮತ್ತು ಸಾಂಪ್ರದಾಯಿಕ ತಂತ್ರಜ್ಞಾನಗಳಲ್ಲಿ ಸ್ವಿಟ್ಜರ್ಲೆಂಡ್‌ನೊಂದಿಗೆ ತಾಂತ್ರಿಕೆಯ ಕಲಿಕೆಗೆ ಹೊಸ ಅವಕಾಶಗಳು ಇವೆ. ಹೀಗಾಗಿ ಭಾರತ ಆ ದೇಶದ ಸಹಯೋಗ ಹೊಂದಲಿದೆ ಎಂಬುದನ್ನು ಅವರು ಖಚಿತಪಡಿಸಿದರು.
ಸ್ವಿಟ್ಜರ್ಲೆಂಡ್ ಪರಿಣಿಗೆ ವೈಷ್ಣವ್ ಮೆಚ್ಚುಗೆ
ರೈಲ್ವೆ ವ್ಯಾಪ್ತಿಯಲ್ಲಿನ ಸುರಂಗ ತಂತ್ರಜ್ಞಾನದ ಮೇಲೆ ಸ್ವಿಸ್ ಗಮನ ಕೇಂದ್ರೀಕರಿಸಿದೆ. ಅಲ್ಲಿನ ರೈಲ್ವೆಯ ಹಿರಿಯ ಅಧಿಕಾರಿಗಳು ಮತ್ತು ನೀತಿ ನಿರೂಪಕರೊಂದಿಗಿನ ನಡೆದ ಸಭೆಯಲ್ಲಿ ಲಭ್ಯವಾದ ಮಾಹಿತಿ, ಒಳನೋಟಗಳನ್ನು ಅಶ್ವಿನಿ ವೈಷ್ಣವ್ ಅವರು ಪ್ರಸ್ತಾಪಿಸಿದರು. ಜೊತೆಗೆ ಈ ಕ್ಷೇತ್ರದಲ್ಲಿ ಮುಂದಿರುವ ಸ್ವಿಟ್ಜರ್ಲೆಂಡ್‌ನ ಪರಿಣತಿಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ವಿಸ್ ಕಾರ್ಯವೈಖರಿಗೆ ವಿಶ್ವದ ಅತಿ ಉದ್ದದ 57-ಕಿಮೀ ಗಾಥಾರ್ಡ್ ಸುರಂಗ ಸಾಕ್ಷಿಯಾಗಿದೆ. ಸ್ವಿಟ್ಜರ್ಲೆಂಡ್‌ನ ಉತ್ತಮವಾಗಿ ಅಭಿವೃದ್ಧಿ ಹೊಂದಿದ ಟ್ರ್ಯಾಕ್ ತಂತ್ರಜ್ಞಾನ ಬಳಸುತ್ತದೆ. ಆ ದೇಶದ ರೈಲ್ವೆ ಟ್ರ್ಯಾಕ್‌ಗಳ ಆಸಕ್ತಿದಾಯಕ ರಚನೆಯಲ್ಲಿವೆ ಎಂದು ಅವರು ವಿವರಿಸಿದರು.
ತಂತ್ರಜ್ಞಾನ ಹೇಗೆ ಪ್ರಯೋಜನ?
ಸ್ವಿಟ್ಜರ್ಲೆಂಡ್‌ನ ರೈಲ್ವೇ ನೆಟ್‌ವರ್ಕ್‌ನ ನಿರ್ಣಾಯಕ ಅಂಶ ಗಮನಿಸಿರುವ ಅಶ್ವಿನಿ ವೈಷ್ಣವ್ ಹಬ್ ಮತ್ತು ಸ್ಪೋಕ್ ವಿನ್ಯಾಸದಲ್ಲಿ ತಮಗಿರುವ ಆಸಕ್ತಿಯನ್ನು ತೋರ್ಪಡಿಸಿದ್ದಾರೆ. ಈ ಮಾದರಿಯಲ್ಲಿ, ಜ್ಯೂರಿಚ್‌ನಂತಹ ಕೇಂದ್ರ ಹಬ್‌ನಲ್ಲಿ ಬಹು ರೈಲುಗಳು ಒಮ್ಮುಖವಾಗುತ್ತವೆ, ಪ್ರಯಾಣಿಕರು ಅದೇ ಸಮಯದಲ್ಲಿ ಹೊರಡುವ ಇತರ ರೈಲುಗಳಿಗೆ ಸುಲಭವಾಗಿ ಬದಲಾಯಿಸಲು ಅನುವು ಮಾಡಿಕೊಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ದೂರದ ಮಾರ್ಗ ಸಂಪರ್ಕಿಸಲು ಸಹಾಯ
ಬೆಂಗಳೂರು ಅಥವಾ ಕೋಲ್ಕತ್ತಾದಿಂದ ಚೆನ್ನೈನಂತಹ ದೂರದ ನಗರಗಳನ್ನು ಸಂಪರ್ಕಿಸಲು ತಂತ್ರಜ್ಞಾನ ಸಹಾಯ ಮಾಡುತ್ತದೆ. ಇಂತಹ ದೂರ ಸಂಪರ್ಕದಲ್ಲಿ ಸ್ವಿಟ್ಜರ್ಲೆಂಡ್ ಹಲವಾರು ಕನೆಕ್ಟಿಂಗ್ ಸ್ಪೋಕ್‌ಗಳೊಂದಿಗೆ ಆರು ಹಬ್‌ಗಳನ್ನು ಬಳಸಿಕೊಂಡಿದೆ. ಸಮರ್ಥ ಬದಲಾವಣೆಗಳಿಗಾಗಿ ಸಿಂಕ್ರೊನೈಸ್ ಆಗಮನ ಮತ್ತು ನಿರ್ಗಮನಗಳಿಗೆ ಒತ್ತು ನೀಡುತ್ತದೆ. ಅವರ ನೆಟ್‌ವರ್ಕ್ ಯೋಜನೆಯಲ್ಲಿ ಹಬ್ ಮತ್ತು ಸ್ಪೋಕ್ ಮಾದರಿಯಲ್ಲಿದೆ ಎಂದು ಅವರು ಪುನುರಚ್ಚರಿಸಿದರು.
ರೈಲುಗಳು, ಬಸ್ಸುಗಳು, ಕೇಬಲ್ ಕಾರ್‌ಗಳು ಮತ್ತು ಮೆಟ್ರೋ ಸೇರಿದಂತೆ ವಿವಿಧ ಸಾರ್ವಜನಿಕ ಸಾರಿಗೆ ವಿಧಾನಗಳ ನಡುವೆ ಸ್ವಿಟ್ಜರ್ಲೆಂಡ್‌ನ ದಕ್ಷ ಅಂತರ-ಸಂಪರ್ಕವನ್ನು ಶ್ಲಾಘಿಸಿದ ಕೇಂದ್ರ ಸಚಿವರು ಉಭಯ ದೇಶಗಳ ಮಧ್ಯೆ ಒಪ್ಪಂದ ಏರ್ಪಡುವ ಮುನ್ಸೂಚನೆ ನೀಡಿದರು.
ಸಾಮಾನ್ಯ ಕಾರ್ಡ್ ಅಥವಾ ಟಿಕೆಟ್ ಅನ್ನು ಬಳಸಿಕೊಂಡು ಪ್ರಯಾಣಿಕರು ತಡೆರಹಿತ ಪ್ರಯಾಣದ ಅನುಭವ ಪಡೆಯುತ್ತಾರೆ. ಸ್ವಿಟ್ಜರ್ಲೆಂಡ್ 5,200 ಕಿಲೋಮೀಟರ್ ನಷ್ಟು ವ್ಯಾಪಿಸಿರುವ ದಟ್ಟವಾದ ರೈಲ್ವೆ ಜಾಲವು ವಿದ್ಯುದೀಕರಣವಾಗಿದೆ ಎಂದರು.
ಭಾರತೀಯ ರೈಲ್ವೆಯು ಜಪಾನಿನಿಂದ ಏಳು ನಿಮಿಷದಲ್ಲಿ ಒಂದು ರೈಲನ್ನು ಸ್ವಚ್ಛಗೊಳಿಸುವ ತಂತ್ರಜ್ಞಾನದಿಂದ ಸ್ಪೂರ್ತಿ ಪಡೆದಿದೆ. 2023ರಲ್ಲಿ ಅಕ್ಟೋಬರ್ 1ರಂದು, ಭಾರತೀಯ ರೈಲ್ವೆಯು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಕೇವಲ 14ನಿಮಿಷದಲ್ಲಿ ಶುಚಿಗೊಳಿಸಿದ್ದನ್ನು ಸ್ಮರಿಸಿದರು.












Click it and Unblock the Notifications