Two wheeler: ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಸಜ್ಜಾಗಿದೆ ಬಜಾಜ್ ಪಲ್ಸರ್ N250
ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡಿರುವ ಬಜಾಜ್ ಕಂಪನಿ ತನ್ನ ನೂತನ ಬೈಕ್‌ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಈಗಾಗಲೇ ಬಿಡುಗಡೆ ಗೊಳ್ಳಲಿರುವ ಬೈಕ್ ಹಲವು ಬಾರಿ ಟೆಸ್ಟಿಂಗ್‌ಗೆ ಒಳಪಟ್ಟಿದ್ದು, ಗ್ರಾಹಕರನ್ನು ಸೆಳೆಯಲು ಸಿದ್ಧವಾಗಿದೆ.
ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಹೊಂದಿರುವ ಬಜಾಜ್, 2023ರ ವರ್ಷದ ಮಾರುಕಟ್ಟೆಯಲ್ಲಿ 29ರಷ್ಟು ಪ್ರಾಭಲ್ಯವನ್ನು ಹೊಂದಿದೆ. 2022ಕ್ಕೆ ಹೋಲಿಸಿದರೆ, 2023ರಲ್ಲಿ ಶೇಕಡಾ 7ರಷ್ಟು ಹೆಚ್ಚು ಗ್ರಾಹಕರನ್ನು ಸೆಳೆಯುವಲ್ಲಿ ಕಂಪನಿ ಸಫಲವಾಗಿದೆ. ಈಗ ಮತ್ತೊಂದು ಕ್ಯಾಟಗಿರಿಯನ್ನು ಪ್ರವೇಶಿಸಲಿದೆ. ಬಜಾಜ್ ದ್ವಿಚಕ್ರ ವಾಹನ ಹಲವು ನವೀಕರಣಗಳೊಂದಿಗೆ ತನ್ನ ಪಲ್ಸರ್‌ನ್ನು ಈಗ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಪಲ್ಸರ್ N250 ಯಾವಲ್ಲೆ ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಬರಲಿದೆ, ಇದರ ಬೆಲೆ ಎಷ್ಟು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಪಲ್ಸರ್ N250 ಅನ್ನು ಬುಧವಾರ (ಏ.10)2024 ರಂದು ಬಿಡುಗಡೆ ಮಾಡಲಿದೆ. ಬೈಕ್‌ನ ಹೊಸ ಬೈಕ್ ವಿನ್ಯಾಸ ಹಾಗೂ ಹಲವು ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಬಿಡುಗಡೆ ಆಗಲಿದೆ. ಹೆಡ್‌ಲೈಟ್ ಹಾಗೂ ಇಂಡಿಕೇಟರ್‌ಗಳು ಆಕರ್ಷಕವಾಗಿವೆ. ಇಂಡಿಕೇಟರ್ ಈ ಬೈಕ್ ಹೈಡ್ ಲೈಟ್‌ನಲ್ಲಿ ಹೊಂದಿರುವುದು ವಿಶೇಷವಾಗಿದೆ. ಈ ಬೈಕ್ ಸುಜುಕಿ ಜಿಕ್ಸರ್ 250, ಹೋಂಡಾ ಹಾರ್ನೆಟ್ ಮತ್ತು ಟಿವಿಎಸ್ ಅಪಾಚೆ ಆರ್‌ಡಿಟಿ 200 4ವಿ ಯೊಂದಿಗೆ ಪೈಪೋಟಿ ನಡೆಸುವ ಸಾಧ್ಯತೆ ಇದೆ.
ಏನಿದೇ ಹೊಸದು?
ಪಲ್ಸರ್ N250 ಹೊಸ ಡಿಸ್ ಪ್ಲೇಯನ್ನು ಹೊಂದಿದೆ. ಈ ಬೈಕ್‌ನ ಡಿಸ್ ಪ್ಲೇನಲ್ಲಿ ನಿಮ್ಮ ಮೊಬೈಲ್‌ಗೆ ಬಂದಿರುವ ಮೆಸೆಜ್, ಕಾಲ್‌ಗಳನ್ನು ಡಿಸ್‌ಪ್ಲೇ ಮಾಡಲಿದೆ. ಅಲ್ಲದೆ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಹೊಂದಿದ್ದು, ಸಂಪೂರ್ಣವಾಗಿದೆ LCD ಕನ್ಸೋಲ್ ಅನ್ನು ಹೊಂದಿದೆ. ಈ ಡಿಸ್‌ಪ್ಲೇ ಹೊಸ ರೀತಿಯಲ್ಲಿ ಮಾರುಕಟ್ಟೆಗೆ ಬರಲಿದ್ದು, ಕಪ್ಪು ಮತ್ತು ಬಿಳಿ ಲೈಟ್‌ಗಳ ಬದಲಿಗೆ ಹಿಂಬದಿಯಲ್ಲಿ ನೀಲಿ ಲೈಟ್‌ನ್ನು ಬಳಸಿರುವ ಸಾಧ್ಯತೆ ಇದೆ. ಇದು ಟ್ರಿಪ್‌ಮೀಟರ್, ಟ್ಯಾಕೋಮೀಟರ್ ಮತ್ತು ಓಡೋಮೀಟರ್ ರೀಡಿಂಗ್‌ಗಳನ್ನು ಹೊಂದಿದೆ.

ಇದರ ಎಂಜಿನ್ ಸೆಟಪ್ ನಲ್ಲಿ ಯಾವುದೇ ಬದಲಾವಣೆ ಮಾಡಿರುವ ಸಾಧ್ಯತೆ ಕಡಿಮೆ ಇದೆ. ಪಲ್ಸರ್ N250 24.5PS ಪವರ್ ಮತ್ತು 21.5Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರಲಿದೆ. ಬಜಾಜ್ ಪಲ್ಸರ್‌ನ ಬೆಲೆಯು ಕೊಂಚ ಹೆಚ್ಚಾಗುವ ನಿರೀಕ್ಷೆಯಿದೆ. ಇದರ ಪ್ರಸ್ತುತ ಮಾದರಿಯು 1.50 ಲಕ್ಷ ರೂಪಾಯಿಗಳ ಎಕ್ಸ್ ಶೋ ರೂಂ ಬೆಲೆಯೊಂದಿಗೆ ಲಭ್ಯವಿದ್ದು, ಇದರ ಬೆಲೆ ಹೆಚ್ಚಾಗುವ ಸಾಧ್ಯತೆಯೂ ಇದೆ. ಇದು 249.07 ಸಿಸಿ ಆಯಿಲ್ ಕೂಲ್ಡ್ ಎಂಜಿನ್ ಅನ್ನು ಒದಗಿಸಲಿದೆ. ಇದರಿಂದಾಗಿ 24.5 ಪಿಎಸ್ ಪವರ್ ಮತ್ತು 21.5 ನ್ಯೂಟನ್ ಮೀಟರ್ ಟಾರ್ಕ್ ಪಡೆಯಲಿದೆ.
ವಿನ್ಯಾಸ
ನವೀಕರಿಸಿದ ಪಲ್ಸರ್ N250 ಅದರ ಪ್ರಸ್ತುತ ಆವೃತ್ತಿಯಲ್ಲಿ ಕಂಡುಬರುವಂತೆ ಬ್ಲ್ಯಾಕ್-ಔಟ್ ಎಂಜಿನ್ ಮತ್ತು ಎಕ್ಸಾಸ್ಟ್ ಅನ್ನು ಹೊಂದಿರುವುದಿಲ್ಲ. ಇದರ ಎಕ್ಸಾಸ್ಟ್ ಬ್ರಶ್ಡ್ ಮೆಟಲ್ ಫಿನಿಶ್ ಹೊಂದಿರುತ್ತದೆ. ಈ ಬೈಕ್ ಮಾದರಿಯ ಶ್ರೇಣಿಗಾಗಿ ಬಜಾಜ್ ಹೊಸ ಬಣ್ಣದ ಸ್ಕೀಮ್ ಅನ್ನು ಸಹ ಪರಿಚಯಿಸುತ್ತದೆ. ಪ್ರಸ್ತುತ ಇದು ಬ್ರೂಕ್ಲಿನ್ ಕಪ್ಪು ಬಣ್ಣದಲ್ಲಿ ಮಾತ್ರ ಲಭ್ಯವಿದೆ. ಪ್ರಸ್ತುತ ಬೈಕ್‌ಗೆ ಹೋಲಿಸಿದರೆ 2024 ಪಲ್ಸರ್ N250 ಗೆ ಸ್ವಲ್ಪ ವಿಭಿನ್ನವಾದ ಬಣ್ಣದದೊಂದಿಗೆ ಮಾರುಕಟ್ಟೆಗೆ ಬರಲಿದೆ.
ಇಂಜಿನ್ ಕ್ಯಾಪಿಸಿಟಿ: 249 ಸಿಸಿ
ಮೈಲೇಜ್: 44 kmpl
ಟ್ರಾನ್ಸ್‌ಮಿಷನ್ 5 ಸ್ಪೀಡ್ ಮ್ಯಾನ್ಯೂಯಲ್
ಗಾಡಿಯ ತೂಕ 162 ಕೆ.ಜಿ
ಪೆಟ್ರೋಲ್ ಟ್ಯಾಂಕ್ 14 ಲೀಟರ್
ಸೀಟ್ ಹೈಟ್ 795 mm












Click it and Unblock the Notifications