Smarphone: ಭಾರತದಲ್ಲಿ ಏಪ್ರಿಲ್ 8ರಂದು ಬಿಡುಗಡೆ ಆಗಲಿದೆ ಸ್ಯಾಮ್‌ಸಾಂಗ್ M55 ಹಾಗೂ M15
ಭಾರತೀಯ ಮಾರುಕಟ್ಟೆಗೆ ಸ್ಯಾಮ್‌ಸಾಂಗ್ ಮೊಬೈಲ್ ತನ್ನ ನೂತನ ಎರಡು ಮಾಡೆಲ್‌ಗಳನ್ನು ಬಿಡುಗಡೆ ಮಾಡಲಿದೆ. ದಕ್ಷಿಣ ಕೊರಿಯಾದ ಕಂಪನಿಯು ಫೋನ್ ಲಾಂಚ್ ಮಾಡುವ ದಿನಾಂಕವನ್ನು ಬಹಿರಂಗಪಡಿಸಿದೆ. ಸ್ಯಾಮ್‌ಸಾಂಗ್ ಎರಡು ಫೋನ್‌ಗಳು ಗ್ರಾಹರನ್ನು ಆಕರ್ಷಿಸುತ್ತಿವೆ.
ಭಾರತದಲ್ಲಿ ಸ್ಮಾರ್ಟ್‌ಫೋನ್ ಮಾರುಕಟ್ಟೆ ಕಳೆದ ವರ್ಷ 146 ಮಿಲಿಯನ್ ಡಾಲರ್‌ನದ್ದಾಗಿದೆ. ಭಾರತದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಸ್ಮಾರ್ಟ್ ಫೋನ್ ಕಂಪನಿಗಳಲ್ಲಿ ಒಂದಾಗಿರುವ ಸ್ಯಾಮ್‌ಸಾಂಗ್ ಭಾರತದ ಮಾರುಕಟ್ಟೆಯಲ್ಲಿ 13.69ರಷ್ಟು ಪ್ರಾಬಲ್ಯವನ್ನು ಹೊಂದಿದೆ. ಈಗ ಮತ್ತೊಂದು ಸ್ಯಾಮ್‌ಸಾಂಗ್ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈ ಮೂಲಕ ಸ್ಯಾಮ್‌ಸಾಂಗ್ ತನ್ನ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಪ್ಲ್ಯಾನ್ ಮಾಡಿಕೊಂಡಿದೆ.

Samsung Galaxy M55 5G ಮತ್ತು Galaxy M15 5G ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ. ಸ್ಯಾಮ್‌ಸಂಗ್‌ನ ಈ ಎರಡು ಬಜೆಟ್ ಸ್ಮಾರ್ಟ್‌ಫೋನ್‌ಗಳನ್ನು ಇತ್ತೀಚೆಗೆ ಇ-ಕಾಮರ್ಸ್ ವೆಬ್‌ಸೈಟ್ ಬಿಡುಗಡೆ ಮಾಡಲಿದೆ. ಈ ಸ್ಮಾರ್ಟ್‌ಫೋನ್‌ಗಳು ಏಪ್ರಿಲ್ 8ರಂದು ಬಿಡುಗಡೆ ಆಗಲಿವೆ..
ಗ್ಯಾಲಕ್ಸಿ M55 5G ಅನ್ನು ಡೆನಿಮ್ ಬ್ಲಾಕ್ ಮತ್ತು ಲೈಟ್ ಗ್ರೀನ್ ಎರಡು ಬಣ್ಣಗಳಲ್ಲಿ ಬರಲಿದೆ. ಗ್ಯಾಲಕ್ಸಿ M15 5G ಅನ್ನು ಮೂರು ಬಣ್ಣಗಳಲ್ಲಿ ಗ್ರಾಹಕರನ್ನು ಆಕರ್ಷಿಸಲಿವೆ. ಬ್ಲೂ ಟೋಪಾಜ್, ಸೆಲೆಸ್ಟೈನ್ ಬ್ಲೂ ಮತ್ತು ಸ್ಟೋನ್ ಗ್ರೇ ಬಣ್ಣಗಳಲ್ಲಿ M15 ಲಭ್ಯವಾಗಲಿದೆ. ಕಳೆದ ವರ್ಷ ಭಾರತದಲ್ಲಿ ಬಿಡುಗಡೆಯಾದ ಗ್ಯಾಲಕ್ಸಿ ಎಂ54 5ಜಿ ಮತ್ತು ಗ್ಯಾಲಕ್ಸಿ ಎಂ14 5ಜಿ ಗೆ ಹೋಲಿಸಿದರೆ, ಈ ಎರಡು ಸ್ಮಾರ್ಟ್‌ಫೋನ್‌ಗಳ ಹಲವು ಹಾರ್ಡ್‌ವೇರ್ ವೈಶಿಷ್ಟ್ಯಗಳನ್ನು ಹೊಂದಿವೆ.
ಸ್ಯಾಮ್‌ಸಾಂಗ್ ಗ್ಯಾಲಕ್ಸಿ ಎಂ15 5ಜಿ ನ ವೈಶಿಷ್ಟ್ಯಗಳು
ಸ್ಯಾಮ್‌ಸಾಂಗ್ ಗ್ಯಾಲಕ್ಸಿ ಎಂ15 5ಜಿ ಫೋನ್ 6.5 ಇಂಚಿನ ಸೂಪರ್ ಅಮ್ಲೋಡ್ ಡಿಸ್‌ಪ್ಲೇ ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6100 ಪ್ಲಸ್ ಪ್ರೊಸೆಸರ್ ಅನ್ನು ಒಳಗೊಂಡಿದೆ. ಈ ಫೋನ್‌ನಲ್ಲಿ 50ಮೆಗಾ ಪಿಕ್ಸಲ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಈ ಫೋನ್ 6,000mAh ಬ್ಯಾಟರಿ ಹಾಗೂ 25 ವ್ಯಾಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿರಲಿದೆ. ಈ ಫೋನ್ 13,499 ರೂಪಾಯಿಗಳನ್ನು ಹೊಂದಿರುವ ಸಾಧ್ಯತೆ ಇದೆ. ಈ ಫೋನ್ 4 ಜಿಬಿ ಹಾಗೂ 6ಜಿಬಿ ರ್ಯಾಮ್ ಹೊಂದಿರಲಿದ್ದು ಇಂಟರ್‌ನಲ್ ಸ್ಟೋರೇಜ್ 128ಜಿಬಿ ಹೊಂದಿದೆ.

ಸ್ಯಾಮ್‌ಸಾಂಗ್ ಗ್ಯಾಲಕ್ಸಿ ಎಂ 55ಯಲ್ಲಿ ಏನಿದೆ?
ಸ್ಯಾಮ್‌ಸಾಂಗ್ ಗ್ಯಾಲಕ್ಸಿ ಎಂ 55 ಮೊಬೈಲ್‌ನಲ್ಲಿ ಕೊಲಂ ಸ್ನ್ಯಾಪ್‌ಡ್ರಾಗನ್ 7 ಜನರೇಷನ್ 1 ಪ್ರೊಸೆಸರ್ ಹೊಂದಿರುವ ಸಾಧ್ಯತೆ ಇದೆ. ಈ ಸ್ಮಾರ್ಟ್ಫೋನ್ 6.67 ಇಂಚಿನ ಫುಲ್ ಎಚ್‌ಡಿ ಪ್ಲಸ್ ಸೂಪರ್ ಅಮ್ಲೋಡ್ ಡಿಸ್ಪ್ಲೇಯನ್ನು ಹೊಂದಿರುತ್ತದೆ. ಇದು 120Hz ರಿಫ್ರೆಶ್ ರೇಟ್ ಹೊಂದಿರಲಿದೆ. ಈ ಸ್ಮಾರ್ಟ್‌ಪೋನ್ಸ್ 1000 ಯುನಿಟ್ಸ್‌ಗಳ ಹೊಳಪು ನೀಡಲಿದೆ.
ಈ ಬಜೆಟ್‌ನಲ್ಲಿ ಸ್ಯಾಮ್‌ಸಾಂಗ್ ಮೊದಲ ಬಾರಿಗೆ 45 ವ್ಯಾಟ್ ಚಾರ್ಜರ್ ನೀಡಲಿದ್ದು, 5000mAh ಬ್ಯಾಟರಿಯೊಂದಿಗೆ ಫಾಸ್ಟ್ ಚಾರ್ಜಿಂಗ್ ವೈಶಿಷ್ಟ್ಯವನ್ನು ಹೊಂದಿರುತ್ತದೆ. ಸ್ಮಾರ್ಟ್‌ಫೋನ್ ಹಿಂಬಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಇದ್ದು, ಇದರಲ್ಲಿ 50ಮೆಗಾ ಪಿಕ್ಸಲ್ ಕ್ಯಾಮೆರಾ ಇದ್ದು, 8ಮೆಗಾ ಫಿಕ್ಸಲ್ ಅಲ್ಟ್ರಾ-ವೈಡ್ ಮತ್ತು 2 ಮೆಗಾಪಿಕ್ಸಲ್ ಮ್ಯಾಕ್ರೋ ಕ್ಯಾಮೆರಾ ಸೇರಿವೆ. ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 50ಮೆಗಾ ಪಿಕ್ಸಲ್ ಕ್ಯಾಮೆರಾವನ್ನು ಹೊಂದಿರುತ್ತದೆ. ಇದು ಆಂಡ್ರಾಯ್ಡ್ 14 ಹೊಂದಿದೆ.
ಸ್ಯಾಮ್‌ಸಾಂಗ್ ಗ್ಯಾಲಕ್ಸಿ ಎಂ 55 ಭಾರತದಲ್ಲಿ 26,999 ರೂ.ಗೆ ಲಭ್ಯವಾಗುವ ಸಾಧ್ಯತೆ ಇದೆ. 8 ಜಿಬಿ ಹಾಗೂ 12ಜಿಬಿ ರ್ಯಾಮ್ ಹೊಂದಿರಲಿದ್ದು ಇಂಟರ್‌ನಲ್ ಸ್ಟೋರೇಜ್ 128ಜಿಬಿ ಹಾಗೂ 256 ಜಿಬಿ ಹೊಂದಿರಲಿದೆ.












Click it and Unblock the Notifications