Smartphone: ಇಂದು ಮೊಟೊರೊಲಾ ಎಡ್ಜ್ 50 ಪ್ರೊ ಬಿಡಗಡೆ: ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ ಗೊತ್ತಾ ಈ ಸ್ಮಾರ್ಟ್‌ಫೋನ್
ಮೊಟೊರೊಲಾ ಭಾರತೀಯ ಮಾರುಕಟ್ಟೆಗೆ ಇನ್ನೊಂದು ಸರಣಿಯ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಲಿದೆ. Motorola Edge 50 Pro ಸ್ಮಾರ್ಟ್ ಫೋನ್ ಹಲವು ವೈಶಿಷ್ಟಗಳನ್ನು ಹೊಂದಿದ್ದು, ಮೊದಲ ಎಐ ಚಾಲಿತ ಕ್ಯಾಮೆರಾವನ್ನು ಈ ಸ್ಮಾರ್ಟ್‌ಫೋನ್ ಹೊಂದಿದೆ. ಈ ಮೊಬೈಲ್ ಫೋನ್ ಇಂದು (ಏ.3)ರಂದು ಮಾರುಕಟ್ಟೆಗೆ ಲಗ್ಗೆ ಇಡಲಿದೆ.
ಮೊಟೊರೊಲಾ ಮೊಬೈಲ್‌ಗಳು ಕಂಪನಿಯ ವೆಬ್ ಸೈಟ್ ಹಾಗೂ ಫ್ಲಿಪ್ ಕಾರ್ಟ್‌ನಲ್ಲಿ ಲಭ್ಯವಿರುತ್ತದೆ. ಈ ಫೋನ್‌ನಲ್ಲಿ ನೀವು ಮೋಟೋ ಸಿಗ್ನಿಚರ್ ಕಾಣಬಹುದು. ಅಂದರೆ ಲುಕ್ ಸಖತ್‌ಆಗಿದೆ. ಈ ಫೋನ್ ಪಡೆದುಕೊಳ್ಳಲು ಗ್ರಾಹಕರು ಕ್ಯೂನಲ್ಲಿ ನಿಂತಿದ್ದಾರೆ.

ಮೊಟೊರೊಲಾ ಕಂಪನಿಯ ಎಡಜ್ 40 ಭಾರತದಲ್ಲಿ ಪ್ರಾಖ್ಯತಿ ಪಡೆದಿತ್ತು. ಹೀಗಾಗಿ ಎಡ್ಜ್ 50 ಪ್ರೊ ಮೇಲೆ ಗ್ರಾಹಕ ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾನೆ. ಮೊಟೊರೊಲಾ ಎಡ್ಜ್ 50 ಪ್ರೊ Motorola Edge 40 Pro ನ ಅಪ್‌ಗ್ರೇಡ್ ಆವೃತ್ತಿಯಾಗಿದೆ.
ಎಷ್ಟು ಬಣ್ಣಗಳಲ್ಲಿ ಸ್ಮಾರ್ಟ್‌ಫೋನ್ ಲಭ್ಯ?
ಈ ಫೋನ್ ಮೂರು ಬಣ್ಣಗಳಲ್ಲಿ ಗ್ರಾಹಕರನ್ನು ಸೆಳೆಯಲಿದೆ. ಈ ಸ್ಮಾರ್ಟ್‌ಫೋನ್ ಬಿಳಿ, ಪರ್ಪಲ್ ಹಾಗೂ ಕಪ್ಪು ಬಣ್ಣದಲ್ಲಿ ಮಾರುಕಟ್ಟೆಗೆ ಬರಲಿದೆ. ಈ ಮೊಬೈಲ್ ಸಹ ಮೊಟೊರೊಲಾದ water resistant ಗುಣವನ್ನು ಹೊಂದಿದೆ.
ಪ್ರೊಸೆಸರ್ ಯಾವದು?
ಮೊಟೊರೊಲಾ ಎಡ್ಜ್ 40ಯಲ್ಲಿ ಕಂಪನಿ ಮಿಡಿಯಾಟೆಕ್ ಡೈಮೆನ್‌ಸಿಟಿ 7030 ಪ್ರೊಸೆಸರ್ ಬಳಸಲಾಗಿತ್ತು. ಆದರೆ ಈ ಬಾರಿ ಮೊಟೊರೊಲಾ ಸ್ನಾಪ್ಡ್ರಾಗನ್ 7 Gen 3 ಪ್ರೊಸೆಸರ್ ನೀಡಲಿದೆ.

ಡಿಸ್ ಪ್ಲೇ ಹಾಗೂ ಕ್ಯಾಮೆರಾ ಹೇಗಿವೆ?
ಮೊಟೊರೊಲಾ ಎಡ್ಜ್ 50 ಪ್ರೊ ಮೊಬೈಲ್‌ನಲ್ಲಿ 6.7 ಇಂಚಿನ ಫುಲ್ ಎಚ್‌ಡಿ ಪ್ಲಸ್ ಡಿಸ್‌ಪ್ಲೇ ನೀಡಲಾಗುತ್ತದೆ. ಈ ಡಿಸ್‌ಪ್ಲೇಯು 1200X 2780 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಬೆಂಬಲಿಸುತ್ತದೆ. ಅಲ್ಲದೆ 3ಡಿ ಕರ್ವ್ ಡಿಸ್‌ಪ್ಲೇ ಹೊಂದಿದೆ.
ಮೊಟೊರೊಲಾ ಹಿಂಬಾಗದಲ್ಲಿ ಮೂರು ಕ್ಯಾಮೆರಾಗಳನ್ನು ನೀಡಲಿದ್ದು, 50 ಮೆಗಾ ಫಿಕ್ಸಲ್, 13 ಮೆಗಾ ಪಿಕ್ಸಲ್, 10 ಮೆಗಾ ಪಿಕ್ಸಲ್ ಸೆನ್ಸಾರ್ ಇರಲಿದೆ. ಮುಂಭಾಗದಲ್ಲಿ 50 ಮೆಗಾ ಫಿಕ್ಸಲ್ ಸೆಲ್ಫಿ ಕ್ಯಾಮೆರಾ ನೀಡಲಾಗುದೆ.
ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ 4G, 5G, VoLTE, Vo5G, ಬ್ಲೂಟೂತ್ v5.3, ವೈಫೈ, NFC, USB-C v3.2 ಆಯ್ಕೆಗಳು ಇರಲಿವೆ. ಈ ಬಾರಿ ಮೊಟೊರೊಲಾ ತನ್ನ ಮೊಬೈಲ್‌ನ್ನು ಅಪ್‌ಡೇಟ್ ಮಾಡಿದೆ ಅಲ್ಲದೆ, ಆಂಡ್ರಾಯಿಡ್ 14ನೊಂದಿಗೆ ಮಾರುಕಟ್ಟೆಗೆ ಬರಲಿದೆ. ಮೊಬೈಲ್ ಸ್ಕ್ರೀನ್ ಮೇಲೆ ಫಿಂಗರ್ ಪ್ರಿಂಟ್ ಸೌಲಭ್ಯವನ್ನು ನೀಡಲಾಗಿದೆ. ಆಡಿಯೊ ಜಾಕ್ ಟೈಪ್ ಸಿಯನ್ನು ಹೊಂದಿದೆ. ಈ ಸ್ಮಾರ್ಟ್ ಫೋಮ್ 12 ಜಿಬಿ ram ಹಾಗೂ 256 ಇಂಟರ್ನಲ್ ಸ್ಟೋರೆಜ್ ಹೊಂದಿರಲಿದೆ. ಈ ಫೋನ್ ಸುಮಾರು 30 ಸಾವಿರದ ಆಸುಪಾಸಿನಲ್ಲಿ ಲಭ್ಯ.












Click it and Unblock the Notifications