Microsoft AI Skill: 2025ರ ಹೊತ್ತಿಗೆ AI ಕೌಶಲ್ಯ ಹೊಂದಿದ ಭಾರತೀಯರ ಸಂಖ್ಯೆ 2 ಮಿಲಿಯನ್: ಹೇಗೆ? ಇಲ್ಲಿದೆ ಡಿಟೇಲ್ಸ್
ಬೆಂಗಳೂರು, ಫೆಬ್ರವರಿ 07: ಭಾರತ ಮಾತ್ರವಲ್ಲದೇ ಪ್ರಪಂಚದಾದ್ಯಂತ ಮುಂದುವರಿದ ತಂತ್ರಜ್ಞಾನಗಳು ಎಲ್ಲ ರಂಗದಲ್ಲೂ ಬಳಕೆ ಆಗುತ್ತಿದೆ. ಅದರಲ್ಲೂ ಆರ್ಟಿಫಿಸಿಯಲ್ ಇಂಟಲಿಜೆನ್ಸ್ (AI)ದ ಪ್ರಭಾವ ಎಲ್ಲಡೆ ಉಂಟಾಗುತ್ತಿದೆ. ಇದು ಭವಿಷ್ಯದ ಭಾಗವೇ ಆಗಲಿದೆ. ಈ ಸಂಬಂಧ ಪ್ರಸಿದ್ಧ ಕಂಪನಿಯೊಂದು ಭಾರತೀಯರಿಗೆ AI ಕೌಶಲ್ಯದ ಅವಕಾಶಗಳನ್ನು ಹೇರಳವಾಗಿ ಒದಗಿಸುವುದಾಗಿ ತಿಳಿಸಿದೆ. ಇದರ ಅಂಕಿ ಅಂಶ, ಮಾಹಿತಿ ಇಲ್ಲಿದೆ.
ತಂತ್ರಜ್ಞಾನದ ದೈತ್ಯ ಅಮೆರಿಕಾ ಮೂಲಕ 'ಮೈಕ್ರೋಸಾಫ್ಟ್' (Microsoft) ಕಂಪನಿಯು 2025ರ ವೇಳೆಗೆ ಭಾರತದಲ್ಲಿ 2 ಮಿಲಿಯನ್ ಜನರಿಗೆ AI ಕೌಶಲ್ಯಗಳನ್ನು ಕಲಿಸಿಕೊಡುವುದಾಗಿ ಎಂದು ಸಿಇಒ ಸತ್ಯ ನಾಡೆಲ್ಲಾ ಬುಧವಾರ ಮಾಹಿತಿ ನೀಡಿದ್ದಾರೆ.

ಕಂಪನಿಯ ಈ ಉದ್ದೇಶಕ್ಕೆ ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ AI ನಿಯಮಗಳು ಮತ್ತು ನಿಯಮಗಳ ಮೇಲೆ ಸಹಕರಿಸುವುದು ಕಡ್ಡಾಯವಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ತರಬೇತಿ ನೀಡುವ ವ್ಯಕ್ತಿಗಳ ಮೇಲೂ ಗಮನ
ಆರ್ಟಿಫಿಸಿಯ್ಲ ಇಂಟಲಿಜೆನ್ಸ್ ಕೌಶಲ್ಯವು ಶ್ರೇಣಿ-2 ಮತ್ತು ಶ್ರೇಣಿ-3 ವರ್ಗವಾಗಿ ವಿಂಗಡಿಸಿದ್ದು, ಅದು ನಗರಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ತರಬೇತಿ ನೀಡುವ ವ್ಯಕ್ತಿಗಳ ಮೇಲೆ ಕೇಂದ್ರೀಕರಿಸುತ್ತದೆ. ಇದು ಹಂತ ಹಂತವಾಗಿ ಅಂತರ್ಗತ ಸಾಮಾಜಿಕ-ಆರ್ಥಿಕ ಪ್ರಗತಿಯನ್ನು ಬೆಳಕಿಗೆ (ಅನ್ಲಾಕ್) ತರುತ್ತದೆ.
ಈ ಎಐ ತಂತ್ರಜ್ಞಾನವು ಒಮ್ಮತ ರೂಪದಲ್ಲಿ ಜಾಗತಿಕವಾಗಿ ಹೊರಹೊಮ್ಮುತ್ತದೆ ಎಂದು ಸಿಇಒ ಸತ್ಯ ನಾಡೆಲ್ಲಾ ಅವರು ಭಾವಿಸಿದ್ದಾರೆ. ತಂತ್ರಜ್ಞಾನದ ಪ್ರಸರಣಕ್ಕೆ ಎಐ ಕೌಶಲ್ಯಗಳು ಹೆಚ್ಚು ಸಹಾಯ ಮಾಡುತ್ತದೆ ಎಂದು ಇತ್ತೀಚೆಗೆ ಮುಂಬೈನಲ್ಲಿ ನಡೆದ ಸಮ್ಮೇಳನದಲ್ಲಿ ನಾಡೆಲ್ಲಾ ಅವರು ಪ್ರತಿಪಾದಿಸಿದರು.

AI ಪ್ರಸರಣ ಆರ್ಥಿಕ ಬೆಳವಣಿಗೆ ಸಹಕಾರಿ
ಸದ್ಯ ಎಐ ಕೌಶಲ್ಯಗಳ ಕುರಿತು ನಿಯಮಗಳನ್ನು ರೂಪಿಸಲು ಮತ್ತು ಎಐ ಅನ್ನು ನಿಯಂತ್ರಿಸುವ ಜಾಗತಿಕ ಪ್ರಯತ್ನಗಳ ಚಿಂತನೆ ನಡೆಯುತ್ತಿದೆ. ಜಾಗತಿಕವಾಗಿ AI ಯ ಪ್ರಸರಣವು ಆರ್ಥಿಕ ಬೆಳವಣಿಗೆಗೂ ಸಹಕಾರಿಯಾಗಲಿದೆ. ಇದೊಂದು ಸಾಕಾರಾತ್ಮಕ ಪ್ರತಿಬಿಂಬಕ್ಕೆ ಕಾರಣವಾಗಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.
ಒಂದು ಅರ್ಥದಲ್ಲಿ ಎಐ ತಂತ್ರಜ್ಞಾನವು ಭವಿಷ್ಯದಲ್ಲಿ ಜಗತ್ತನ್ನೆ ಆಳುತ್ತದೆ ಎಂದು ಹೇಳಾಗುತ್ತಿದೆ. ಎಐ ನಷ್ಟು ಪರಿಣಾಮಕಾರಿ ತಂತ್ರಜ್ಞಾನ ಮತ್ತೊಂದಿಲ್ಲ ಎಂಬಷ್ಟರ ಮಟ್ಟಿಗೆ, ಎಲ್ಲ ರಂಗಗಳಲ್ಲಿ ತೊಡಗಿಕೊಂಡಿರುವ ಮನುಷ್ಯನನ್ನೇ ಮೀರಿಸ ಬಲ್ಲ ಶಕ್ತಿ ಈ ತಂತ್ರಜ್ಞಾನಕ್ಕಿದೆ. ಇಷ್ಟು ಪ್ರಬಲವಾದ ತಂತ್ರಜ್ಞಾನವು ದೇಶದ ಅಭಿವೃದ್ಧಿಗೆ ಬಳಕೆ ಆಗಬೇಕಾದರೆ ಅದಕ್ಕೆ ಅನುಗುಣವಾಗಿ ಕೌಶಲ್ಯ ಹೊಂದಿದ ವ್ಯಕ್ತಗಳ ಅಗತ್ಯವಿರುತ್ತದೆ. ಇಂತ ವ್ಯಕ್ತಿಗಳು ರೂಪಗೊಳ್ಳಲೆಂದೇ ಮೈಕ್ರೋಸಾಫ್ಟ್ ಕಂಪನಿಯು ಕಲಿಕೆಗೆ ಅವಕಾಶ ಮಾಡಿಕೊಡಲು ಯೋಜನೆ ರೂಪಿಸಿದೆ.












Click it and Unblock the Notifications