Rashmika Mandanna: ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋ ಪ್ರಕರಣ: ಶೇರ್ ಮಾಡಿದವರಿಗೂ ಸಂಕಷ್ಟ
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ಪ್ರಕರಣವನ್ನು ದೆಹಲಿ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ನಾಲ್ವರು ಶಂಕಿತ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಆರೋಪಿಗಳು ವಿಡಿಯೋವನ್ನು ಅಪ್‌ಲೋಡ್ ಮಾಡಿದವರು ಎಂದು ಪೊಲೀಸರು ತಿಳಿಸಿದ್ದು, ವಿಡಿಯೋ ಎಡಿಟ್ ಮಾಡಿದವರು ಹಾಗೂ ಅದರ ಸೃಷ್ಟಿಕರ್ತ ಆರೋಪಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ.
ಜಾರಾ ಪಟೇಲ್ ಎಂಬ ಯುವತಿಯ ಮುಖವನ್ನು ಬದಲಾಯಿಸಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ತಯಾರಿಸಿ ವಿಡಿಯೋ ಹರಿಬಿಟ್ಟಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಅಲ್ಲದೇ ಬಾಲಿವುಡ್ ಚಿತ್ರರಂಗ ಸೇರಿದಂತೆ ನಟ ನಟಿಯರು ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಆರೋಪಿಗಳನ್ನು ಬಂಧಿಸುವಂತೆ ನೇರವಾಗಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ದೆಹಲಿ ಪೊಲೀಸರು ಸದ್ಯ ನಾಲ್ವರನ್ನು ವಶಕ್ಕೆ ಪಡೆದಿದ್ದು, ಎ-೧ ಆರೋಪಿಗಾಗಿ ತನಿಖೆ ಮುಂದುವರಿಸಿದ್ದಾರೆ. ಇದೀಗ ವಿಡಿಯೋ ಹಂಚಿಕೊಂಡವರಿಗೂ ಕೂಡ ಆತಂಕ ಹೆಚ್ಚಾಗಿದ್ದು, ಪೊಲೀಸರು ಮುಂದಿನ ದಿನಗಳಲ್ಲಿ ಯಾವ ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕಿದೆ.
ಡೀಪ್‌ಫೇಕ್ ವಿಡಿಯೋಗಳು ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೆಂಡ್ ಆಗಿದ್ದು, ಅಶ್ಲೀಲ ಡೀಪ್‌ಫೇಕ್ ವಿಡಿಯೋಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಬಾಲಿವುಡ್ ನಟಿಯರಾದ ಆಲಿಯಾ ಭಟ್‌ರಶ್ಮಿಕಾ ಮಂದಣ್ಣ, ಕಾಜೋಲ್, ಕತ್ರಿನಾ ಕೈಫ್ ಮತ್ತು ಸಾರಾ ತೆಂಡೂಲ್ಕರ್ ಸೇರಿದಂತೆ ಹಲವಾರು ಜನಪ್ರಿಯ ನಟಿಯರ ಡೀಪ್‌ಫೇಕ್‌ಗಳು ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಜನಪ್ರಿಯ ನಟ-ನಟಿಯರನ್ನು ಗುರಿಯಾಗಿಸಿಕೊಂಡು ಕಿಡಿಗೇಡಿಗಳು ನಕಲಿ ವಿಡಿಯೋಗಳನ್ನು ಸೃಷ್ಟಿಸಿ ಹರಿ ಬಿಡುತ್ತಿರುವುದು ಆತಂಕ ಹೆಚ್ಚಿಸಿತ್ತು.

ಈ ಬಗ್ಗೆ ಕೇಂದ್ರ ಸರ್ಕಾರ ಕೂಡ ಶೀಘ್ರ ತೆಗೆದುಕೊಂಡಿದ್ದು, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಭಾರತದಲ್ಲಿ ಸಕ್ರಿಯವಾಗಿರುವ ಸೋಷಿಯಲ್ ಮೀಡಿಯಾಗಳುಕಂಪನಿಗಳ ಜೊತೆ ಸಭೆ ನಡೆಸಿ ಎಚ್ಚರಿಕೆ ನೀಡಿದ್ದರು. ಒಂದು ವೇಳೆ ಡೀಪ್‌ಫೇಕ್ ವಿಡಿಯೋಗಳನ್ನು ಕಿತ್ತುಹಾಕಲು ಕಂಪನಿ ವಿಫಲರಾದರೆ, ಅಂತಹ ಕಂಪನಿಗಳ ವಿರುದ್ಧ ವಿಚಾರಣೆ ಮತ್ತು ಡೀಪ್‌ಫೇಕ್ ವಿಡಿಯೋ ರಿಮೂವ್ ಮಾಡಲು ಬೇಕಾದ ಅಗತ್ಯ ಕ್ರಮಗಳನ್ನು ಕೇಂದ್ರ ಸರ್ಕಾರವು ಕೈಗೊಳ್ಳಲಿದೆ ಅಲ್ಲದೇ ಡೀಪ್‌ಫೇಕ್‌ಗಳನ್ನು ಸೃಷ್ಟಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದರೆ ₹1 ಲಕ್ಷ ದಂಡ ಮತ್ತು ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಸಹ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿತ್ತು.












Click it and Unblock the Notifications