AI Impact on Jobs: ಉದ್ಯೋಗಗಳ ಮೇಲೆ 'ಎಐ' ಪ್ರಭಾವ: ಐಎಂಎಫ್ ಹೇಳಿದ್ದೇನು?
ಬೆಂಗಳೂರು, ಜನವರಿ 15: ಜಗತ್ತಿನೆಲ್ಲೆಡೆ ಆರ್ಟಿಫಿಸಿಯಲ್ ಇಂಟಲಿಜೆನ್ಸ್ (ಕೃತಕ ಬುದ್ಧಿಮತ್ತೆ-AI) ತಂತ್ರಜ್ಞಾನ ಬಳಕೆ ಆಗುತ್ತಿದೆ. ಮತ್ತೊಂದೆಡೆ ಇದರಿಂದ ಪ್ರತಿಕೂಲ ಪರಿಣಾಮವು ಇದೆ ಎಂದು ಹೇಳಲಾಗುತ್ತಿದ್ದು, ಆ ಪೈಕಿ 'ಸುಧಾರಿತ ಆರ್ಥಿಕತೆಗಳ ಶೇಕಡಾ 60 ಪ್ರತಿಶತ ಉದ್ಯೋಗಗಳ ಮೇಲೆ AIನ ದುಷ್ಪರಿಣಾಮ ಬೀರಲಿದೆ ಎಂದು ಐಎಂಎಫ್ ಮುಖ್ಯಸ್ಥರು ತಿಳಿಸಿದ್ದಾರೆ.
ಈ ಕುರಿತು ವಾಷಿಂಗ್ಟನ್‌ನಲ್ಲಿ ಸಂದರ್ಶನದಲ್ಲಿ ಮಾಹಿತಿ ನೀಡಿರುವ ಇಂಟರ್ನ್ಯಾಷನಲ್ ಮಾನಿಟರಿ ಫಂಡ್‌ನ (IMF) ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ ಅವರು, ಉತ್ಪಾದಕತೆಯ ಮಟ್ಟವನ್ನು ಹೆಚ್ಚಿಸಲು ಮತ್ತು ಜಾಗತಿಕ ಬೆಳವಣಿಗೆಯನ್ನು ಉತ್ತೇಜಿಸಲು ಈ AI ವಿಫುಲ ಅವಕಾಶ ಒದಗಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ AI ದುಷ್ಪರಿಣಾಮ ಕಡಿಮೆ ಬೀರುವ ಸಾಧ್ಯತೆ ಇದೆ. ಜಾಗತಿಕವಾಗಿ 40ರಷ್ಟು ಉದ್ಯೋಗಗಳ ಮೇಲೆ ಇದರ ಕರಿಛಾಯೆ ಮೂಡಲಿದೆ ಎಂದು ಅವರು ಹೊಸ IMF ವರದಿಯನ್ನು ಉಲ್ಲೇಖಿಸಿ ಪ್ರಸ್ತಾಪಿಸಿದರು. ಈ ವರದಿಯು ಭಾನುವಾರ ಸಂಜೆ ಪ್ರಕಟವಾಗಿದೆ.
ಉದ್ಯೋಗಗಳ ಮೇಲೆ ಎಐ ಪರಿಣಾಮ
ಎಐನಿಂದ ಅರ್ಧದಷ್ಟು ಉದ್ಯೋಗಗಳು ಮಾತ್ರ ಋಣಾತ್ಮಕವಾಗಿ ಪರಿಣಾಮ ಬೀರುತ್ತವೆ. ಇನ್ನೂಳಿದ ಕೆಲವು ಕ್ಷೇತ್ರಗಳಲ್ಲಿ AI ಬಳಕೆಯಿಂದ ಉತ್ಪಾದನೆಯಲ್ಲಿ ಅಧಿಕ ಪ್ರಯೋಜನಗಳು ಸಿಗಲಿವೆ. ಎಐನಿಂದ ಮಾನವ ಸಹಿತ ಕೆಲಸ ಸಂಪೂರ್ಣ ಕಣ್ಮರೆ ಆಗಬಹುದು. ಇಲ್ಲವೇ ಈ ಕೃತಕ ಬುದ್ಧಿಮತ್ತೆ ನಿಮ್ಮ ಕೆಲಸವನ್ನು ಹೆಚ್ಚಿಸಬಹುದು ಎಂದು ಅವರು ಪ್ರತಿಪಾದಿಸಿದರು.
ನವ ಮಾರುಕಟ್ಟೆಗಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ಕಾರ್ಮಿಕ ಮಾರುಕಟ್ಟೆಗಳು AI ನಿಂದ ಸಣ್ಣ ಆರಂಭಿಕ ಪರಿಣಾಮ ಉಂಟಾಗುತ್ತದೆ. ನಂತರದ ಹಂತಗಳಲ್ಲಿ ಅದರಿಂದ ಆಗುವ ವರ್ಧಿತ ಉತ್ಪಾದಕರೆಯಿಂದ ಕಡಿಮೆ ಲಾಭ ಪಡೆಯುತ್ತೇವೆ ಎಂದು ಅವರು ಭವಿಷ್ಯ ನುಡಿದರು.
ವಿಫುಲ ಅವಕಾಶಕ್ಕೆ ಎಐ ಸಹಕಾರಿ
ಅಭಿವೃದ್ಧಿ ಶೀಲ ದೇಶ ಹೊರತುಪಡಿಸಿದರೆ, ಕಡಿಮೆ ಆದಾಯ ಗಳಿಕೆಯ ದೇಶಗಳಿಗೆ ನಿರ್ದಿಷ್ಟವಾಗಿ AI ಸೃಷ್ಟಿಸುವ ಅವಕಾಶಗಳನ್ನು ಹಿಡಿಯಲು ಮತ್ತು ಅದಕ್ಕಾಗಿ ವೇಗವಾಗಿ ಚಲಿಸಲು ಇದು ಸಹಾಯ ಮಾಡುತ್ತದೆ. ಇದೆಲ್ಲದರ ಮಧ್ಯೆಯೆ ಕೃತಕ ಬುದ್ಧಿಮತ್ತೆಯಿಂದ (AI) ತೊಂದರೆ ಇದೆ ಎಂಬುದನ್ನು ಅವರು ಒಪ್ಪಿಕೊಂಡರು.

ಜನವರ ತಿಂಗಳಾಂತ್ಯಕ್ಕೆ ಐಎಂಎಫ್ ಆರ್ಥಿಕ ಮುನ್ಸೂಚನೆ ಪ್ರಕಟಿಸಲಿದೆ. ಹಣಕಾಸು ನೀತಿಯು ಉತ್ತಮ ಕೆಲಸ ಮಾಡುತ್ತಿದೆ, ಹಣ ದುಬ್ಬರವು ಕಡಿಮೆ ಆಗುತ್ತದೆ. ನಾವು ಆರ್ಥಿಕವಾಗಿ ವೇಗವು ಅಲ್ಲದೇ, ನಿಧಾನವು ಅಲ್ಲದ ಸರಾಗವಾಗದ ಟ್ರಿಕಿಸ್ಟ್ ಸ್ಥಳದಲ್ಲಿದ್ದೇವೆ. ಇನ್ನೂ ಜಾಗತಿಕ ಆರ್ಥಿಕತೆಯು AI- ಸಂಬಂಧಿತ ಉತ್ಪಾದಕತೆಯ ವರ್ಧಕವನ್ನು ಬಳಸಬಹುದು ಎಂದರು.
ಹಣಕಾಸಿನ ನೀತಿಗೆ 2024 ಕಠಿಣ ವರ್ಷ?
ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಎದುರಾದ ಸಾಲದ ಹೊರೆಗಳನ್ನು ನಿಭಾಯಿಸಲು ಮತ್ತು ಖಾಲಿಯಾದ ಬಫರ್‌ಗಳನ್ನು ಮರು ನಿರ್ಮಾಣ ಮಾಡಲು ಸವಾಲುಗಳನ್ನು ಎದುರಿಸಿದ ದೇಶಗಳು ಹಣಕಾಸಿನ ನೀತಿಗೆ 2024ಕ್ಕೆ ಬಹಳ ಕಠಿಣ ವರ್ಷ ಆಗಲಿದೆ.
ಈ ವರ್ಷ ಲೋಕಸಭಾ ಚುನಾವಣೆಗೆ ಜರಿಗಲಿದೆ. ಜನಾಶೀರ್ವಾದ ಪಡೆಯಲು ಮತ್ತಷ್ಟು ತೆರಿಗೆ ಕಡಿತ, ಯೋಜನೆ ಘೋಷಣೆಯಂತಹ ಕೆಲಸ ಮಾಡಬಹುದು. ಇದು ಸಹ ಸರ್ಕಾರಕ್ಕೆ ಮತ್ತೆ ಹೊರೆ ಅಗಲಿದೆ. ಈ ವರ್ಷ ಸುಮಾರು 80 ದೇಶಗಳಲ್ಲಿ ಚುನಾವಣೆಗಳು ನಡೆಯಲಿವೆ. ಇದು ಸಹ ಆರ್ಥಿಕ ಸಂಕಷ್ಟ ಒಡ್ಡಲಿದೆ ಎಂದು ಅವರು ಹೇಳಿದರು.
ಹಣದುಬ್ಬರವನ್ನು ತಗ್ಗಿಸುವ ಉದ್ದೇಶಕ್ಕೆ ವಿರುದ್ಧವಾಗಿ ವಿತ್ತೀಯ ನೀತಿಯನ್ನು ಬಿಗಿಗೊಳಿಸಿದರೆ ಮತ್ತು ಹಣಕಾಸಿನ ನೀತಿಯನ್ನು ವಿಸ್ತರಿಸಿದರೆ, ನಾವು ದೀರ್ಘ ಪ್ರಯಾಣಕ್ಕಾಗಿ ಇರಬಹುದು" ಎಂದು ಅವರು ಅಭಿಪ್ರಾಯಪಟ್ಟರು.












Click it and Unblock the Notifications