Thanks Technology: ಬೆಂಗಳೂರಿನಲ್ಲಿ ನೀರಿನ ಸಮಸ್ಯೆ; ಸದ್ದು ಮಾಡುತ್ತಿದೆ ನೀರು ಉತ್ಪಾದಿಸುವ ಯಂತ್ರ

ಬೆಂಗಳೂರಿನ ಜನ ಹನಿ ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ. ನೀರನ್ನು ಬಳಸುವಾಗಿ ಯೋಚಿಸಿ ನೀರನ್ನು ಬಳಸುವಂತಹ ಸ್ಥಿತಿ. ಇನ್ನು ನಗರದ ಹಲವೆಡೆ ನೀರಿನ ಹಾಹಾಕಾರ. ಮಳೆ ಕೈ ಕೊಟ್ಟಿದ್ದರಿಂದ ಮಹಾನಗರದಲ್ಲಿ ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ನೀರಿನ ಸಮಸ್ಯೆಯನ್ನು ಬಗೆ ಹರಿಸಲು ಹಲವು ಕಂಪನಿಗಳು ತಮ್ಮ ಕೈಲಾದಷ್ಟು ಶ್ರಮಿಸುತ್ತಿವೆ. ಇನ್ನು ಹಲವು ಎನ್‌ಜಿಓಗಳು ಮಳೆ ನೀರಿನ ಸಂಗ್ರಹದ ಬಗ್ಗೆ ಜಾಗೃತಿ ಮೂಡಿಸುತ್ತಿವೆ. ಇದೇ ನಿಟ್ಟಿನಲ್ಲಿ ಬೆಂಗಳೂರು ಮೂಲದ ಸ್ಟಾರ್ಟ್‌ ಅಪ್‌ ಕಂಪನಿಯೊಂದು ದಿಟ್ಟ ಹೆಜ್ಜೆ ಇಟ್ಟಿದೆ.

ವಿಶ್ವದ ನಾನಾ ಭಾಗಗಳಲ್ಲಿ ನೀರಿನ ಕೊರತೆಯನ್ನು ನೀಗಿಸಲು ಹಲವು ಕಂಪನಿಗಳು ತಂತ್ರಜ್ಞಾನವನ್ನು ಬಳಸಿಕೊಂಡು ಪ್ರಯತ್ನ ನಡೆಸಿವೆ. ಮರಳುಗಾಡಿನಲ್ಲಿ ನೀರಿನ ಕೊರತೆ ನೀಗಿಸುವಲ್ಲೂ ಇಂತಹ ಕಂಪನಿಗಳು ಶ್ರಮಿಸುತ್ತಿವೆ. ಮರುಭೂಮಿಯ ಗುಡ್ಡುಗಾಡು ಪ್ರದೇಶದಲ್ಲಿ ಈ ಸೆಟ್‌ಅಪ್ ಅಳವಡಿಸಿ ನೀರನ್ನು ಬಳಸಲಾಗುತ್ತಿದೆ. ಇದೇ ರೀತಿ ಪ್ರಯೋಗಕ್ಕೆ ಬೆಂಗಳೂರು ಮೂಲದ ಕಂಪನಿ ಮುಂದಾಗಿದೆ.

Thanks Technology Water problem in Bengaluru A water generating machine is Sounding

ನೀರನ್ನು ಹೇಗೆ ಉತ್ಪಾದಿಸಲಾಗುತ್ತದೆ?

ಮಳೆ ಬಾರದೆ ಇದ್ದರೂ ನೀರನ್ನು ಹೇಗೆ ಉತ್ಪಾದಿಸಬಹುದು ಎಂಬ ಚಿಂತೆ ನಿಮ್ಮ ತಲೆಯಲ್ಲಿ ಓಡಬಹುದು. ಮಳೆ ಬಾರದ ಪ್ರದೇಶಗಳಲ್ಲೂ ನೀರಿನ ಸಮಸ್ಯೆಯನ್ನು ಬಗೆ ಹರಿಸಲು ಈ ತಂತ್ರಜ್ಞಾನವನ್ನು ವಿಶ್ವದಲ್ಲಿ ಬಳಸಲಾಗುತ್ತಿದೆ. ಈ ನಿಟ್ಟಿನಲ್ಲಿ ಬೆಂಗಳೂರು ಸಹ ಹೆಜ್ಜೆ ಇಟ್ಟಿದೆ.

ನೀವು ಗಿಡಗಳ ಮೇಲೆ ಬೆಳಗ್ಗೆ ನೀರಿನ ಹನಿಗಳನ್ನು ಕಾಣಬಹುದು. ಇದೇ ತಂತ್ರಜ್ಞಾನವನ್ನು ಆಧರಿಸಿ ಹೊಸ ಮಶೀನ್ ನಿರ್ಮಿಸಲಾಗಿದೆ. ಗಾಳಿಯಲ್ಲಿರುವ ನೀರನ್ನು ಬಳಸಿ, ಅದಕ್ಕೆ ತಂತ್ರಜ್ಞಾನದ ಟಚ್‌ ನೀಡಲಾಗುತ್ತದೆ. ಬಳಿಕ ಗಾಳಿಯಲ್ಲಿನ ನೀರಿನ ಆವಿಯನ್ನು ತಾಜಾ ಮತ್ತು ಶುದ್ಧ ಕುಡಿಯುವ ನೀರಾಗಿ ಪರಿವರ್ತಿಸಲಾಗುತ್ತದೆ. ಮನುಷ್ಯನ ದೇಹಕ್ಕೆ ಬೇಕಾದ ಅಗತ್ಯ ಖನಿಜಗಳನ್ನು ಫಿಲ್ಟರ್‌ ಮಾಡುವವ ವೇಳೆ ಸೇರಿಸಲಾಗುತ್ತದೆ. ಇದರಿಂದ ಮನುಷ್ಯನಿಗೆ ಉತ್ತಮವಾದ ಶುದ್ಧ ಕುಡಿಯುವ ನೀರು ಸಿಗುತ್ತದೆ.

ಈ ತಂತ್ರಜ್ಞಾನ ಈಗಾಗಲೇ ಬೆಂಗಳೂರಿನ ಸುತ್ತಮುತ್ತಲು ಬಹಳ ಪ್ರಚಾರ ಪಡೆಯುತ್ತಿದೆ. ಈಗಾಗಲೇ ಬೆಂಗಳೂರಿನ ಕೆಆರ್‌ ಪುರಂ ಸರ್ಕಾರಿ ಆಸ್ಪತ್ರೆಯಲ್ಲಿಈ ತಂತ್ರಜ್ಞಾನದ ಸಹಾಯದಿಂದ ದಿನಂ ಪ್ರತಿ 300 ಲೀಟರ್‌ ನೀರನ್ನು ಉತ್ಪಾದಿಸಲಾಗುತ್ತಿದೆ. ಇಲ್ಲಿ ಶೇಖರಣೆಯಾದ ನೀರನ್ನು ಡಯಾಲಿಸಿಸ್‌ ಹಾಗೂ ಹೆರಿಗೆ ವಿಗಾಗಳಲ್ಲಿ ಬಸಲಾಗುತ್ತಿದೆ.

Thanks Technology Water problem in Bengaluru A water generating machine is Sounding

ಈ ಪ್ರಯೋಗಕ್ಕೆ ಮೈತ್ರಿ ಅಕ್ವಾಟೆಕ್ ಟೆಕ್‌ನಾಲಜಿ ಕೈ ಜೋಡಿಸಿದ್ದು, ಇದಕ್ಕೆ ಮೇಘದುತ ಎಂದು ಹೆಸರಿಡಲಾಗಿದೆ. ಈಗಾಗಲೇ ಬೆಂಗಳೂರು ಸೆರಿದಂತೆ 21 ಸ್ಥಳಗಳಲ್ಲಿ ಇದನ್ನು ಅಳವಿಡಿಸಲಾಗಿದೆ. ಈ ಮಶೀನ್‌ಗಳು 40 ರಿಂದ 5 ಸಾವಿರ ಲೀಟರ್‌ ನೀರಿನ ಸಾಮರ್ಥ್ಯವನ್ನು ಹೊಂದಿವೆ. ಇವರುಗಳನ್ನು ಈಗಾಗಲೇ ವಸತಿ ಕಟ್ಟಡಗಳು, ಕಾರ್ಪೊರೇಟ್ ಕಂಪನಿಗಳು, ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳಲ್ಲಿ ಕಾಣಬಹುದಾಗಿದೆ.

ಪ್ರಯೋಜನ ಏನು?

ಈ ತಂತ್ರಜ್ಞಾನವನ್ನು ಬಳಸುವದರಿಂದ ಜೇಬಿಗೆ ಕತ್ತರಿ ಬೀಳುತ್ತದೆ. ಅಲ್ಲದೆ ವಿದ್ಯುತ್‌ ಹೆಚ್ಚು ಪೋಲಾಗುತ್ತದೆ ಎಂದು ನೀವು ನಂಬಿದ್ದರೆ ಅದು ತಪ್ಪು. ಪ್ರತಿ ಲೀಟರ್‌ಗೆ 0.25 ಯೂನಿಟ್‌ಗಳನ್ನು ಬಳಸುತ್ತದೆ. ಒಟ್ಟಾರೆಯಾಗಿ, ಪ್ರತಿ ಲೀಟರ್‌ಗೆ ₹2 ವರೆಗೆ ವೆಚ್ಚವಾಗುತ್ತಿದ್ದು, ಇದರ ನಿರ್ವಹಣೆ ಕಡಿಮೆಯಾಗಿದೆ. ಇದರಲ್ಲಿ ಆರ್‌ಒ ವ್ಯವಸ್ಥೆ ಹಾಗೂ ಎರಡು ಫಿಲ್ಟರ್‌ಗಳಿವೆ. ಇವುಗಳನ್ನು ವರ್ಷಕ್ಕೊಮ್ಮೆ ಸ್ವಚ್ಛಗೊಳಿಸಿದರೂ ಸಾಕು.

ಈ ತಂತ್ರಜ್ಞಾನ ಮುಂದಿನ ದಿನಗಳಲ್ಲಿ ಎಲ್ಲ ಮನೆಗಳಿಗೂ ಬಂದರೂ ಅಚ್ಚರಿಯಿಲ್ಲ. 30 ಲೀಟರ್‌ ಸಾಮರ್ಥ್ಯದ ಮಶೀನ್‌ಗಳಿಗೂ ಭಾರೀ ಬೇಡಿಕೆ ಇದೆ. ಈ ನೀರನ್ನು ದಿನಂಪ್ರತಿ ಬಳಕೆ ಹಾಗೂ ಕುಡಿಯಲು ಸಹ ಉಪಯೋಗಿಸಬಹುದ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+