Mahindra XUV 3XO: ಮಹೇಂದ್ರ ನೂತನ ಕಾರಿನ ಬಿಡುಗಡೆಗೆ ಮುಹೂರ್ತ ಫಿಕ್ಸ್: ಏನೆಲ್ಲಾ ವಿಶೇತೆ ಹೊಂದಿದೆ ಈ ಕಾರ್?
ದೇಶದ ಪ್ರಮುಖ ವಾಹನ ತಯಾರಿಕಾ ಕಂಪನಿ ಮಹೇಂದ್ರ ಆಂಡ್ ಮಹೇಂದ್ರ ಈ ತಿಂಗಳ ಅಂತ್ಯದಲ್ಲಿ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲಿದೆ. ಈಗಾಗಲೇ ಘೋಷಿಸಿದ ಮಹೇಂದ್ರ ಎಕ್ಸ್‌ಯುವಿ 3ಎಕ್ಸ್‌ಒ ಕಾರ್‌ನ್ನು ಇದೇ ಏಪ್ರಿಲ್ 29 ರಂದು ಬಿಡುಗಡೆ ಮಾಡುವುದಾಗಿ ಕಂಪನಿ ತಿಳಿಸಿದೆ.
ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯು ಈ ಕಾರಿನ ಹೊಸ ವೀಡಿಯೊವನ್ನು ತನ್ನ ಸಾಮಾಜಿಕ ತಾಣದ ಮೂಲಕ ಹಂಚಿಕೊಂಡಿದೆ. ಕಾರಿನ ಒಳಭಾಗದ ಮೊದಲ ನೋಟವನ್ನು ಈ ಹೊಸ ವೀಡಿಯೊದಲ್ಲಿ ಕಾಣಬಹುದಾಗಿದೆ. ಕಾರಿನಲ್ಲಿ ಪನೋರಮಿಕ್ ಸನ್‌ರೂಫ್ ಅನ್ನು ಕಾಣಬಹುದು. ಇದಲ್ಲದೇ, ಹಳೆಯ XUV 3OO ನಿಂದ ವಿಭಿನ್ನ ಡ್ಯಾಶ್‌ಬೋರ್ಡ್ ಸಹ ನೂತನ ಕಾರ್‌ನಲ್ಲಿ ಹೊಂದಿರುವ ಸಾಧ್ಯತೆ ಇದೆ.

ಮಹೇಂದ್ರ ಎಕ್ಸ್‌ಯುವಿ 3ಎಕ್ಸ್‌ಒ ಕಾರಿನಲ್ಲಿ ಫ್ರೀ-ಸ್ಟ್ಯಾಂಡಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಅಳವಡಿಸಲಾಗಿದೆ. ಕಾರು 5 ಜನರು ಕುಳಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.
Slowly…
— anand mahindra (@anandmahindra) April 8, 2024
Surely…
It will be revealed
pic.twitter.com/EWBANkIKfm
ಹೊಸ ಕಾರಿನ ಪ್ರಮುಖ ಆಕರ್ಷಣೆ ವಿಹಂಗಮ ಸನ್‌ರೂಫ್. ಈ ಸನ್‌ರೂಫ್ 4 ಮೀಟರ್‌ಗಿಂತಲೂ ದೊಡ್ಡದಾಗಿದೆ. ಮಹೀಂದ್ರ ಎಕ್ಸ್‌ಯುವಿ 3XO ಗೆ ಸನ್‌ರೂಫ್ ಸದ್ಯ ಚರ್ಚೆಯ ವಿಷಯವಾಗಲಿದೆ. ಇದು ಎಕ್ಸ್‌ಯುವಿ 3ಎಕ್ಸ್‌ಒ ಕಾರಿನ ಲುಕ್‌ನ್ನು ದುಪ್ಪಟ್ಟು ಮಾಡಿದೆ.

ವರದಿಗಳ ಪ್ರಕಾರ, ಏಪ್ರಿಲ್ 2024 ರಲ್ಲಿ XUV 300 ಕಾರ್ ಬೆಲೆ ಲಕ್ಷ ರೂಪಾಯಿಗಳನ್ನು ಉಳಿಸಬಹುದು. ಈ ತಿಂಗಳು XUV 300 ಖರೀದಿಸಿದರೆ, ಕಂಪನಿಯು 1.59 ಲಕ್ಷದವರೆಗೆ ಆಫರ್‌ಗಳನ್ನು ನೀಡುತ್ತಿದೆ.
ಹೊಸ ಎಸ್‌ಯುವಿಯಲ್ಲಿ ಕಂಪನಿಯು ಡ್ಯುಯಲ್ ಟೋನ್ ನೀಡಲಿದ್ದು, ಇದರಲ್ಲಿ ಪಿಯಾನೋ ಬ್ಲ್ಯಾಕ್ ಫಿನಿಶ್ ಬಳಸಲಾಗಿದೆ. ಇದು ಎಲೆಕ್ಟ್ರಿಕ್ ಸನ್‌ರೂಫ್, ರಿಯರ್ ಸ್ಪಾಯ್ಲರ್, ವೆಂಟಿಲೇಟೆಡ್ ಸೀಟ್‌ಗಳು, ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್ ಜೊತೆಗೆ ಒಳಭಾಗದಲ್ಲಿ ಕ್ರೋಮ್ ಬಣ್ಣದ ಸೀಟ್‌ಗಳು, ಸ್ಟೀರಿಂಗ್‌ನಲ್ಲಿ ಆಡಿಯೊ ನಿಯಂತ್ರಣಗಳು, LED ಹೆಡ್‌ಲೈಟ್‌ಗಳು, ವೆಂಟಿಲೇಟೆಡ್ ಸೀಟ್‌ಗಳು, ಗ್ಲಾಸಿ ಫಿನಿಶ್ ಮಿಶ್ರಲೋಹದ ಚಕ್ರಗಳನ್ನು ಮುಂಭಾಗದಲ್ಲಿ ಒದಗಿಸುವ ಸಾಧ್ಯತೆ ಇದೆ.

ಸ್ಟೈಲ್‌ಗೆ ಸಂಬಂಧಿಸಿದಂತೆ, XUV 3XO ಹೊಸ ಗ್ರಿಲ್, ಹೆಡ್‌ಲ್ಯಾಂಪ್‌ಗಳು ಮತ್ತು ಹಿಂಭಾಗದಲ್ಲಿ ಪೂರ್ಣ ಅಗಲವಾದ LED ಲೈಟ್ ಬಾರ್ ಮತ್ತು ಹೊಸ ಲುಕ್‌ನೊಂದಿಗೆ ಬರುತ್ತದೆ. ಇದೇ ಈ ಕಾರಿನ ಬಹು ದೊಡ್ಡ ಆಕರ್ಷಣೆ ಆಗಿದೆ.
ಏನು ವಿಶೇಷತೆ ಹೊಂದಿದೆ ಈ ಕಾರ್?
ಇಲ್ಲಿಯವರೆಗೆ ಬಂದಿರುವ ಮಾಹಿತಿ ಪ್ರಕಾರ ಕಂಪನಿಯು ಇಂಟೀರಿಯರ್ ಮತ್ತು ಎಕ್ಸ್ಟೀರಿಯರ್ ಲುಕ್ ಅನ್ನು ಮಾತ್ರ ಬಿಡುಗಡೆ ಮಾಡಿದೆ. ಆದರೆ ಅದರ ಕಾರ್ಯಕ್ಷಮತೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿರುವ ಸಾಧ್ಯತೆ ಇಲ್ಲ. ಎಲ್ಲವೂ ಅಂದುಕೊಂಡತೆ ಆದಲ್ಲಿ ಈ ವಾಹನವು 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುವ ಸಾಧ್ಯತೆ ಇದೆ. ಇದು 108bhp ಮತ್ತು 200Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರಲಿದೆ. ಅಲ್ಲದೆ 1.5 ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ನಿರೀಕ್ಷೆಯಿದೆ. ಇದು 115bhp ಮತ್ತು 300Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಅಂದಾಜು ಬೆಲೆ ಎಷ್ಟು?
ಎಕ್ಸ್‌ಯುವಿ 3ಎಕ್ಸ್‌ಒ ಬೆಲೆಯನ್ನು ಮಹೀಂದ್ರಾ ಇನ್ನೂ ಘೋಷಿಸಿಲ್ಲ. ಆದರೆ ಅದರ ಬೆಲೆ ಎಕ್ಸ್‌ಯುವಿ 300 ಕ್ಕಿಂತ ಹೆಚ್ಚಿರಬಹುದು ಎಂದು ಅಂದಾಜಿಸಲಾಗಿದ್ದು, ಇದು ಭಾರತದಲ್ಲಿ 7.99 ಲಕ್ಷದಿಂದ 14.76 ಲಕ್ಷ ರೂಪಾಯಿಗೆ ಲಭ್ಯವಾಗುವ ಸಾಧ್ಯತೆ ಇದೆ.












Click it and Unblock the Notifications