Get Updates
Get notified of breaking news, exclusive insights, and must-see stories!

Honor X9b: ಗ್ರಾಹಕರನ್ನು ಆಕರ್ಷಿಸುತ್ತಿದೆ ಆಂಟಿ-ಡ್ರಾಪ್ ಡಿಸ್‌ಪ್ಲೇ ಹಾಗೂ 108MP ಕ್ಯಾಮೆರಾ

ಹಾನರ್‌ ಭಾರತೀಯ ಮಾರುಕಟ್ಟೆಯಲ್ಲಿ ಮತ್ತೆ ಸದ್ದು ಮಾಡುತ್ತಿದೆ. ಏಪ್ರಿಲ್‌ 3ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಹಾನರ್‌ ಎಕ್ಸ್‌9ಬಿ (Honor X9b) ಗ್ರಾಹರನ್ನು ತನ್ನತ್ತ ಸೆಳೆಯುತ್ತಿದೆ. ತನ್ನ ವಿಶಿಷ್ಠ ಗುಣ ಲಕ್ಷಣಗಳು ಹಾಗೂ ಲುಕ್‌ನಿಂದಲೇ ಜನರ ಗಮನ ಸೆಳೆಯುತ್ತಿದೆ.

Honor X9b 6.78 ಅಮ್ಲೋಡ್‌ ಡಿಸ್‌ಪ್ಲೇ, 120HZ ರಿಫ್ರೇಶರ್‌ ರೇಟ್‌ ಹೊಂದಿದೆ. 1200 ಯುನಿಟ್ಸ್‌ ಬ್ರೈಟ್‌ನೆಸ್ ನೀಡಲಾಗಿದೆ. ಹಾಗೂ ಕರ್ವ್ ಡಿಸ್‌ ಪ್ಲೇಯನ್ನು Honor X9b ಹೊಂದಿದೆ. ಈ ಸ್ಮಾರ್ಟ್‌ಪೋನ್‌ 185 ಗ್ರಾಮ್‌ನಿಂದ 187.5 ಗ್ರಾಮ್‌ ವರೆಗೆ ಇದೆ. ಹಾನರ್‌ ಎಕ್ಸ್‌9ಬಿ ತೆಳುವಾಗಿದೆ. ಈ ಫೋನ್‌ ಕೇವಲ ಒಂದೇ ಮಾದರಿಯಲ್ಲಿ ಮಾರುಕಟ್ಟೆ ಲಗ್ಗೆ ಇಟ್ಟಿದೆ. ಇದರ ಬೆಲೆ 25999 ರೂಪಾಯಿ ಆಗಿದ್ದು, ಪ್ರೀಮಿಯಂ ಲುಕ್‌ ಹೊಂದಿದೆ.

Honor X9b Anti-drop display and 108MP camera are attracting customers

ಯಾವ ಯಾವ ಬಣ್ಣಗಳಲ್ಲಿ ಲಭ್ಯ?

ಹಾನರ್ ಹೊಸ ಸ್ಮಾರ್ಟ್‌ ಫೋನ್‌ನ್ನು ಎರಡು ಬಣ್ಣಗಳಲ್ಲಿ ಬಿಡುಗಡೆ ಮಾಡಿದೆ. ಸನ್‌ರೈಸ್ ಆರೆಂಜ್ ಮತ್ತು ಮಿಡ್‌ನೈಟ್ ಬ್ಲ್ಯಾಕ್ ಬಣ್ಣಗಳಲ್ಲಿ ಈ ಮೊಬೈಲ್‌ ಲಭ್ಯವಿದೆ. ಇದರ ಡಿಸ್‌ಪ್ಲೇಯ ಬ್ರೈಟ್‌ನೆಸ್ ತುಂಬಾ ಚೆನ್ನಾಗಿದೆ. ಈ ಫೋನ್‌ನಲ್ಲಿ ನಿಮ್ಮ ಮೆಚ್ಚಿನ ವೀಡಿಯೊ ಹಾಗೂ ನಿಮ್ಮ ಇಷ್ಟದ ಗೇಮ್‌ಗಳನ್ನು ಆಡಬಹುದು. ಮೊಬೈಲ್‌ ಕೆಳಭಾಗದಲ್ಲಿ ಸ್ಲಿಮ್‌ ಸ್ಲಾಟ್‌, ಚಾರ್ಜರ್‌ ಪಾಯಿಂಟ್, ಮೈಕ್‌, ಸ್ಪೀಕರ್‌ ಗ್ರಿಲ್‌ ಸಹ ನೀಡಲಾಗುತ್ತದೆ. ಸ್ಮಾರ್ಟ್‌ ಫೋನ್‌ ಟಾಪ್‌ನಲ್ಲಿ ನಾಯ್ಸ್‌ ಕ್ಯಾನ್ಸಲಿಂಗ್‌ ಮೈಕ್ರೋಫೋನ್‌ ಇದೆ. ಮೊಬೈಲ್‌ ಬಲಗಡೆ ವ್ಯಾಲ್ಯುಮ್‌ ಕಂಟ್ರೋಲ್‌ ಬಟನ್‌ ಹಾಗೂ ಕೆಳಗಡೆ ಪವರ್‌ ಆನ್‌ ಮತ್ತು ಆಫ್‌ ಬಟನ್‌ ನೀಡಲಾಗಿದೆ.

Honor X9b ನಲ್ಲಿ, ಕಂಪನಿಯು ಆಂಟಿ-ಡ್ರಾಪ್ ಡಿಸ್‌ಪ್ಲೇಯನ್ನು ಬಳಸಿದೆ. ಅಂದರೆ ಆಕಸ್ಮಿಕವಾಗಿ ಸ್ಮಾರ್ಟ್‌ಫೋನ್‌ ಕೈ ಇಂದ ಜಾರಿದರೂ ಸಹ ಸ್ಕ್ರೀನ್‌ ಒಡೆಯುವುದಿಲ್ಲ. ಹೆಚ್ಚು ಎತ್ತರದಿಂದ ಒಗೆದರೆ ಒಡೆಯಲು ಬಹುದು. ಈ ಫೋನ್ ಹೊಂದಿರುವ ಬಳಕೆದಾರರಿಗೆ ಸ್ಕ್ರೀನ್ ರಿಪ್ಲೇಸ್ಮೆಂಟ್ ವ್ಯವಸ್ಥೆಯನ್ನು ಸಹ ನೀಡಿದೆ. ನೀವು ಫೋನ್ ಖರೀದಿಸಿದರೆ ಮತ್ತು ಅದರ ಡಿಸ್ಪ್ಲೇ ಆಕಸ್ಮಿಕವಾಗಿ ಒಡೆದರೆ, ಕಂಪನಿಯು 6 ತಿಂಗಳೊಳಗೆ ಒಂದು ಬಾರಿ ಬದಲಿ ಡಿಸ್‌ಪ್ಲೇಯನ್ನು ಹಾಕಿ ಕೊಡಲಿದೆ. ಇದಕ್ಕಾಗಿ ಗ್ರಾಹಕ 2,999 ರೂಪಾಯಿಗಳನ್ನು ಹೆಚ್ಚುವರಿಯಾಗಿ ನೀಡಬೇಕು.

Honor X9b Anti-drop display and 108MP camera are attracting customers

ಏನೆಲ್ಲಾ ವಿಶೆಷತೆ ಇದೆ ಗೊತ್ತಾ?

ಈ ಫೋನ್‌ 8 ಜಿಬಿ RAM, 256 GB ಇಂಟರನಲ್‌ ಸ್ಟೋರೇಜ್‌ ಹೊಂದಿದೆ. ಅಲ್ಲದೆ android 13 ಅನ್ನು ಈ ಮೊಬೈಲ್ ಹೊಂದಿದ್ದು, ಎರಡು ವರ್ಷ ಮೇಜರ್‌ ಅಪ್‌ಡೇಟ್ ಮತ್ತು ಮೂರು ವರ್ಷ ಸೆಕ್ಯೂರೆಟಿ ಅಪ್‌ಡೇಟ್‌ ನೀಡುವುದಾಗಿ ಕಂಪನಿ ತಿಳಿಸಿದೆ. ಹಿಂಬಾಗದಲ್ಲಿ ಮೂರು ಕ್ಯಾಮೆರಾ ನೀಡಲಾಗಿದೆ. ಕ್ಯಾಮೆರಾ 108 ಮೆಗಾ ಪಿಕ್ಸಲ್‌ ಪ್ರೈಮರಿ ಕ್ಯಾಮೆರಾ ಹೊಂದಿದೆ. ಅಲ್ಲದೆ 5 ಮೆಗಾ ಪಿಕ್ಸಲ್‌ ಅಲ್ಟ್ರಾವೈಡ್‌ ಹಾಗೂ 2 ಮೆಗಾ ಪಿಕ್ಸಲ್ ಮೈಕ್ರೋ ಸೆನ್ಸರ್‌ ಹೊಂದಿದೆ. ಫ್ರಂಟ್‌ ಕ್ಯಾಮೆರಾ 16 MP ಹೊಂದಿದೆ. ಈ ಮೊಬೈಲ್‌ ಸ್ನ್ಯಾಪ್‌ ಡ್ರಾಗನ್‌ 6 ಜನರೇಷನ್‌ 1 ಪ್ರೊಸೆಸರ್‌ ನೀಡಲಾಗುತ್ತದೆ.

ಸ್ಮಾರ್ಟ್‌ಫೋನ ತೆಳಗಿದ್ದರೂ 5,800mAh ಬ್ಯಾಟರಿಯನ್ನು ಹೊಂದಿದೆ. ಒಮ್ಮೆ ಫೋನಿನ ಬ್ಯಾಟರಿ ಪೂರ್ತಿಯಾಗಿ ಚಾರ್ಜ್ ಮಾಡಿದರೆ ಒಂದೂವರೆಯಿಂದ ಎರಡು ದಿನ ಆರಾಮವಾಗಿ ಬಳಸಬಹುದು. ಕಂಪನಿಯು ಫೋನ್ ಬಾಕ್ಸ್‌ನೊಂದಿಗೆ ಚಾರ್ಜರ್ ಅನ್ನು ನೀಡಿಲ್ಲ. ಈ ಫೋನ್‌ನ ಚಾರ್ಜರ್ ಅನ್ನು ನೀವು ಪ್ರತ್ಯೇಕವಾಗಿ ಖರೀದಿಸಬೇಕು.

ಬಾಕ್ಸ್‌ನಲ್ಲಿ ಏನೆಲ್ಲಾ ಇದೆ?

- ಹಾನರ್‌ 9ಎಕ್ಸ್‌ಬಿ ಸ್ಮಾರ್ಟ್‌ಫೋನ್‌
- ಟೈಪ್‌ ಎ ಟೂ ಟೈಪ್‌ ಸಿ ಚಾರ್ಜರ್‌
- ಡಾಕ್ಯೂಮೆಂಟ್ಸ್‌
- ಮೊಬೈಲ್‌ ಕವರ್‌
- ಸಿಮ್‌ ಕಾರ್ಡ್‌ ಟೂಲ್‌
- ಈ ಮೊಬೈಲ್‌ಗೆ ಅಡ್ಪಾಟರ್‌ ನೀಡುವುದಿಲ್ಲ.

ಕನೆಕ್ಟಿವಿಟಿಯಲ್ಲಿ ಈ ಸೌಲಭ್ಯ ಇವೆ

ಸಿಮ್‌ 1 5ಜಿ
ಸಿಮ್‌ 2 ಡ್ಯುಲ್‌ 4ಜಿ ವೋಲ್ಟ್‌
ಬ್ಲ್ಯೂಟುತ್‌ 5.1
ವೈಫೈ 5

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+