ಕೇವಲ ಮೂರು ತಿಂಗಳಲ್ಲಿ 1ಲಕ್ಷ ಯುನಿಟ್‌ಗಳ ಬುಕ್ಕಿಂಗ್ ದಾಟಿದ ನೂತನ ಹುಂಡೈ ಕ್ರೆಟಾ: ಇದರ ಬೆಲೆ ಎಷ್ಟು?
ಕೊರಿಯಾದ ಮೂಲದ ಅಟೋಮೊಬೈಲ್ ಕಂಪನಿ ಹ್ಯುಂಡೈ ಮೋಟಾರ್ಸ್ ಭಾರತದಲ್ಲಿ ಬಿಡುಗಡೆ ಮಾಡಿದ ನ್ಯೂ ಹ್ಯುಂಡೈ CRETA 2024 ನೂತನ ಕಾರ್‌ನ ಬುಕ್ಕಿಂಗ್ ಆರಂಭಿಸಿತ್ತು. ಈ ಕಾರ್‌ನ್ನು ಪಡೆಯಲು ಗ್ರಾಹಕರು ಮುಗಿಬಿದ್ದಿದ್ದಾರೆ. ಬಕ್ಕಿಂಗ್ ಆರಂಭವಾದ ಮೂರೇ ತಿಂಗಳಲ್ಲಿ ಈ ಕಾರ್‌ನ 1 ಲಕ್ಷ ಯುನಿಟ್ ದಾಟಿದೆ.
ಕ್ರೆಟ್ 2024 ಕಾರ್‌ನ ಪ್ರಿ ಬುಕ್ಕಿಂಗ್‌ನಲ್ಲಿ ಸನ್‌ರೂಪ್ ಕಾರ್‌ಗಳನ್ನು ಶೇಕಡಾ 71 ರಷ್ಟು ಜನರು ಬುಕ್ ಮಾಡಿದ್ದಾರೆ. ಇನ್ನು ಉಳಿದ ಜನ ಕಂಟೆಂಡರ್ ಕಾರ್‌ನ್ನು ಬುಕ್ ಮಾಡಿದ್ದಾರೆ. ತನ್ನ ವಿಶಿಷ್ಠ ಸೌಲಭ್ಯಗಳಿಂದ ಹೊಸ ಕ್ರೆಟಾ ಎಲ್ಲಡೆ ಸದ್ದು ಮಾಡುತ್ತಿದೆ. ಇದರಲ್ಲಿ ಪ್ರಮುಖವಾದವು ಎಂಪಿಐ ಪೆಟ್ರೋಲ್ (6MT/IVT), ಯು1 ಸಿಆರ್‌ಡಿಐ ಡೀಸೆಲ್ (6MT/6AT), ಟರಬೋ ಜಿಡಿಐ ಪೆಟ್ರೋಲ್ (7DCT) ನಲ್ಲಿ ಲಭ್ಯವಿದೆ.

ಸರೌಂಡ್ ವ್ಯೂ ಮಾನಿಟರ್ (SVM), ಟೆಲಿಮ್ಯಾಟಿಕ್ಸ್ ಸ್ವಿಚ್‌ನೊಂದಿಗೆ ಎಲೆಕ್ಟ್ರೋ ಕ್ರೋಮಿಕ್ ಮಿರರ್ (ECM), ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್/ಆಟೋ ಹೋಲ್ಡ್, ಫ್ರಂಟ್ ಪಾರ್ಕಿಂಗ್ ಸೆನ್ಸರ್ ಮತ್ತು ಬ್ಲೈಂಡ್-ಸ್ಪಾಟ್ ವ್ಯೂ ಮಾನಿಟರ್ (BVM) ನಂತಹ ಸುಧಾರಿತ ವೈಶಿಷ್ಟ್ಯಗಳನ್ನು ಹೊಸ ಕ್ರೆಟಾ 2024ಕ್ಕೆ ಸೇರಿಸಲಾಗಿದೆ.
ಸ್ಟ್ಯಾಂಡರ್ಡ್ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಂತೆ ಎಲ್ಲಾ ಆಸನಗಳಿಗೆ 3-ಪಾಯಿಂಟ್ ಸೀಟ್ ಬೆಲ್ಟ್‌ಗಳನ್ನು ಹೊಂದಿದೆ. ಎಲ್ಲಾ ನಾಲ್ಕು ಚಕ್ರಗಳಲ್ಲಿ ಡಿಸ್ಕ್ ಬ್ರೇಕ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಜೊತೆಗೆ ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್, ಹಿಲ್-ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್, ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಹೈಲೈನ್, ಮತ್ತು ಡ್ರೈವರ್ ಆಂಕರ್ ಪ್ರಿಟೆನ್ಷನರ್ ಜೊತೆಗೆ ಫ್ರಂಟ್ ಸೀಟ್‌ಬೆಲ್ಟ್ ಪ್ರಿಟೆನ್ಷನರ್‌ನ್ನು ಹೊಂದಿದೆ. ಹೊಸ ಹ್ಯುಂಡೈ ಕ್ರೆಟಾ 2024 6 ಏರ್‌ಬ್ಯಾಗ್‌ಗಳು ಹೊಂದಿದೆ. ಈ SUV ಯ ಆರಂಭಿಕ ಎಕ್ಸ್ ಶೋ ರೂಂ ಬೆಲೆ 10,99,900 ರೂ. ಆಗಿದೆ.

ಇತ್ತೀಚೆಗೆ ಬಿಡುಗಡೆಯಾದ ಹೊಸ ಕ್ರೆಟಾಗೆ ಸಹ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೊಸ ಹ್ಯುಂಡೈ ಕ್ರೆಟಾದೊಂದಿಗೆ, ನಾವು ಭಾರತೀಯ ಮಾರುಕಟ್ಟೆಗೆ ಉತ್ತಮ ಉತ್ಪನ್ನಗಳನ್ನು ನೀಡುವ ನಮ್ಮ ಪ್ರಯತ್ನವನ್ನು ಮುಂದುವರಿಸುತ್ತೇವೆ, 'ಮೇಕ್ ಇನ್ ಇಂಡಿಯಾ' ಕಂಪನಿಯ ಬದ್ಧತೆಯನ್ನು ನಾವು ಬಲಪಡಿಸುತ್ತೇವೆ ಎಂದು ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್‌ನ ಸಿಒಒ ತರುಣ್ ಗಾರ್ಗ್ ಹೇಳಿದ್ದಾರೆ.
ಹೊಸ ಕಾರಿನ ಬೆಲೆ ಎಷ್ಟು?
ಹುಂಡೈ ಕ್ರೆಟಾವನ್ನು ಮಾರ್ಚ್‌ನಲ್ಲಿ 16,458 ಗ್ರಾಹಕರು ಖರೀದಿಸಿದ್ದರು. ಇದು ವಾರ್ಷಿಕ ಶೇಕಡಾ 17 ರಷ್ಟು ಹೆಚ್ಚಳವಾಗಿದೆ. ಸರಿಯಾಗಿ ಒಂದು ವರ್ಷದ ಹಿಂದೆ ಮಾರ್ಚ್‌ನಲ್ಲಿ 14,026 ಗ್ರಾಹಕರು ಖರೀದಿಸಿದ್ದರು. ಕ್ರೆಟಾ ಈ ವರ್ಷದ ಫೆಬ್ರವರಿಯಲ್ಲಿ ಟಾಪ್ 10 ಕಾರುಗಳ ಪಟ್ಟಿಯಲ್ಲಿ 7 ನೇ ಸ್ಥಾನದಲ್ಲಿದೆ, ಆದ್ದರಿಂದ ಮಾರಾಟದ ಹೆಚ್ಚಳದೊಂದಿಗೆ, ಇದು ಶ್ರೇಯಾಂಕದಲ್ಲಿ ಅಗಾಧವಾದ ಏರಿಕೆಯನ್ನು ಸಾಧಿಸಿದೆ. ಮಾರುತಿ ಸುಜುಕಿ ಬ್ರೆಝಾ, ಟಾಟಾ ನೆಕ್ಸಾನ್ ಮತ್ತು ಮಹೀಂದ್ರಾ ಮುಂತಾದ ಟಾಪ್ 10 SUV ಗಳನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದೆ. ಈ ವರ್ಷದ ಫೆಬ್ರವರಿಯಲ್ಲಿ ಕ್ರೆಟಾವನ್ನು 15,276 ಗ್ರಾಹಕರು ಖರೀದಿಸಿದ್ದಾರೆ.
ಹ್ಯುಂಡೈ ಕ್ರೆಟಾದ ಒಟ್ಟು 28 ಮಾಡೆಲ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟಕ್ಕಿವೆ. ಇದರ ಎಕ್ಸ್ ಶೋ ರೂಂ ಬೆಲೆಗಳು ರೂ 11 ಲಕ್ಷದಿಂದ ರೂ 20.15 ಲಕ್ಷದವರೆಗೆ ಪ್ರಾರಂಭವಾಗುತ್ತವೆ. ಕ್ರೆಟಾ ಕಳೆದ ಮಾರ್ಚ್‌ನಲ್ಲಿ N ಲೈನ್ ರೂಪಾಂತರವನ್ನು ಬಿಡುಗಡೆ ಮಾಡಿತು, ಇದರ ಎಕ್ಸ್ ಶೋ ರೂಂ ಬೆಲೆ 16.82 ಲಕ್ಷದಿಂದ ಪ್ರಾರಂಭವಾಗುತ್ತದೆ ಮತ್ತು 20.45 ಲಕ್ಷಕ್ಕೆ ಏರುತ್ತದೆ. ಈ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ.












Click it and Unblock the Notifications