• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

2018ರಲ್ಲಿ ಹಠಾತ್ತನೆ ಪ್ರಸಿದ್ಧರಾದ ಅದೃಷ್ಟವಂತರಿವರು

|

ಇಂದು ಇದ್ದ ಬದುಕನ್ನು ನಾಳೆಗಾಗಲೇ ಬದಲಾಯಿಸಿಬಿಡುವ ತಾಕತ್ತು ಈ ಅಂತರ್ಜಾಲಕ್ಕಿದೆ. ಅಂತಹಾ ಅದ್ಬುತ ವೇಗ ಮತ್ತು ಸಾಮರ್ಥ್ಯ ಈ ಇಂಟರ್‌ನೆಟ್‌ ಯುಗಕ್ಕೆ ಇದೆ.

ಸಾಮಾನ್ಯ ಕಾಲೇಜಿನ ಉನ್ಯಾಸಕನನ್ನು ರಾತ್ರಿ ಕಳೆಯುವಷ್ಟರಲ್ಲಿ ದೊಡ್ಡ ಡಾನ್ಸರ್‌ ನನ್ನಾಗಿ ಮಾಡಿಬಿಟ್ಟಿದೆ, ಚಹ ಹಾಕುತ್ತಿದ್ದ ನೀಲಿ ಕಣ್ಣಿನ ಹುಡುಗನನ್ನು ರಾತ್ರೋ ರಾತ್ರಿ ಮಾಡೆಲ್‌ ಮಾಡಿ ಬಿಟ್ಟಿದೆ. ಉದಾಹರಣೆಗಳು ಕೊಡುತ್ತಾ ಹೋದರೆ ಕೊನೆಯಾಗದು.

ಈ ವರ್ಷ ಜಗತ್ತಿನಲ್ಲಿ ಏನೇನಾಯ್ತು? 2018ರ 10 ಪ್ರಮುಖ ಘಟನೆಗಳು

2018 ರಲ್ಲಿ ಇಂಟರ್‌ನೆಟ್‌ನಿಂದ ಜಗತ್ತಿನ ಮೂಲೆ-ಮೂಲೆಗೂ ಖ್ಯಾತರಾದ ಹಲವು ಮಂದಿ ಇದ್ದಾರೆ. ಇವರೆಲ್ಲಾ ಸಾಮಾನ್ಯ ಜನರೇ ಆದರೆ ಅಂತರ್ಜಾಲದ ಮಾಯಾಜಾಲದಿಂದ ರಾತ್ರಿ ಕಳೆದು ಬೆಳಗಾಗುವುದರೊಳಗೆ ಫೇಮಸ್‌ ಆಗಿಬಿಟ್ಟರು.

ಗೂಗಲ್ ಟಾಪ್ ಸರ್ಚ್: ಫೀಫಾ ವಿಶ್ವಕಪ್, ಪ್ರಿಯಾ ವಾರಿಯರ್ ಗೆ ಅಗ್ರಸ್ಥಾನ

ಇಂಟರ್‌ನೆಟ್ ಜಮಾನಾದಲ್ಲಿ ರಾತ್ರೋರಾತ್ರಿ ವೈರಲ್‌ ಆದ ಪ್ರತಿಭಾನ್ವಿತರ ಪಟ್ಟಿ ಇಲ್ಲಿದೆ, ಕಣ್ಣಾಡಿಸಿ...

ಕಣ್‌ ಮಿಟುಕು ಹುಡುಗಿ ಪ್ರಿಯಾ ವಾರಿಯರ್‌

ಕಣ್‌ ಮಿಟುಕು ಹುಡುಗಿ ಪ್ರಿಯಾ ವಾರಿಯರ್‌

ಪ್ರಿಯಾ ವಾರಿಯರ್‌ ಯಾರಿಗೆ ಗೊತ್ತಿಲ್ಲ. ಈ ವರ್ಷದ ಹಾಟ್‌ಕೇಕ್ ಪ್ರಿಯಾ ವಾರಿಯರ್. ಆಕೆ ಕಣ್ಣು ಮಿಟುಕಿಸುವ ಸಣ್ಣ ವಿಡಿಯೋ ತುಣುಕು ಹೊರಬಿದ್ದದ್ದಷ್ಟೆ ರಾತ್ರೋ ರಾತ್ರಿ ಭಾರಿ ಸ್ಟಾರ್ ಆಗಿ ಬಿಟ್ಟಳು ಕೇರಳದ ಈ ಸರಳ ಸುಂದರಿ. ಈ ವರ್ಷ ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಾಡಲ್ಪಟ್ಟ ವ್ಯಕ್ತಿಗಳಲ್ಲಿ ಪ್ರಿಯಾ ವಾರಿಯರ್‌ಗೆ ಮೊದಲ ಸ್ಥಾನ.

ಕಣ್ ಮಿಟುಕು ಸುಂದರಿ ಪ್ರಿಯಾ ಬರೆದಳು ಹೊಸ ದಾಖಲೆ

ಗೋವಿಂದಾ ಅಂಕಲ್‌

ಗೋವಿಂದಾ ಅಂಕಲ್‌

ಮಧ್ಯ ಪ್ರದೇಶದ ಸಂಜೀವ್ ಶ್ರೀವತ್ಸ ಎಂಬ 'ಅಂಕಲ್‌', ಮದುವೆಯೊಂದರಲ್ಲಿ ಗೋವಿಂದಾ ರೀತಿ 'ಆಪ್‌ ಕೇ ಆಜಾನೆಸೇ' ಹಾಡಿಗೆ ನೃತ್ಯ ಮಾಡಿದ್ದರು ಇದು ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಭಾರಿ ವೈರಲ್ ಆಗಿಬಿಟ್ಟಿತು. ಡಾನ್ಸ್ ವಿಡಿಯೋ ವೈರಲ್ ಆದ ಕೆಲವೇ ದಿನಗಳಲ್ಲಿ ಸಂಜೀವ್ ರ್ಶರೀವತ್ಸ 'ಗೋವಿಂದಾ ಅಂಕಲ್' ಎಂದೇ ಖ್ಯಾತರಾದರು. ಡಾನ್ಸ್‌ ರಿಯಾಲಿಟಿ ಶೋಗಳಲ್ಲಿ ಅವಕಾಶ ಸಿಕ್ಕಿತು. ತಮ್ಮ ಆರಾಧ್ಯ ದೈವ ಗೋವಿಂದಾ ಜೊತೆ ಕುಣಿಯುವ ಅವಕಾಶವೂ ಅವರಿಗೆ ಒಲಿದು ಬಂತು.

ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸಿರುವ ಡಾನ್ಸರ್‌ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ

ಮೀನು ಮಾರೋ ಹುಡುಗಿ

ಮೀನು ಮಾರೋ ಹುಡುಗಿ

ಕಾಲೇಜು ಮುಗಿಸಿ ಸಮವಸ್ತ್ರದಲ್ಲಿಯೇ ರಸ್ತೆ ಬದಿ ಮೀನು ಮಾರುತ್ತಿದ್ದ ಕೇರಳದ ಹನದ್ ಹಮೀದ್‌ ಈ ವರ್ಷ ವೈರಲ್ ಆದ ಹುಡುಗಿ. ಮೊದಲಿಗೆ ಈಕೆಯ ಬಗ್ಗೆ ನೆಟ್ಟಿಗರು ಕುಹುಕದ ಮಾತುಗಳನ್ನಾಡಿದರು. ಆದರೆ ನಂತರ ಆಕೆಯ ಬದುಕಿನ ಕುರಿತ ವರದಿಗಳು ಬಂದ ನಂತರ ನಡೆದದ್ದೇ ಬೇರೆ. ಆಕೆ ಕೇರಳ ಸಿಎಂ ಅನ್ನು ಭೇಟಿ ಮಾಡಿದಳು, ಸರ್ಕಾರದ ಜಾಹೀರಾತಿಗೆ ಮಾಡೆಲ್ ಆದಳು. ಸಾಕಷ್ಟು ಹಣ ಗಳಿಸಿದಳು. ಆದರೆ ಕೇರಳ ಪ್ರವಾಹದ ಸಮಯದಲ್ಲಿ ತಾನು ಗಳಿಸಿದ ಹಣದಲ್ಲಿ ಬಹುಪಾಲು ದಾನ ಮಾಡಿಬಿಟ್ಟಳು.

ಮೀನು ಮಾರಿ ಟ್ರೋಲ್ ಆದ ಹುಡುಗಿಯ ಕರುಣಾಜನಕ ಕತೆ ಕೇಳಿ...

ಮೋದಿ ಮಿಮಿಕ್ರಿ ಮಾಡಿದ ಶಾಮ್ ರಂಗೀಲಾ

ಮೋದಿ ಮಿಮಿಕ್ರಿ ಮಾಡಿದ ಶಾಮ್ ರಂಗೀಲಾ

ಮೋದಿ ಮಿಮಿಕ್ರಿಯಿಂದ ರಾತ್ರೋ ರಾತ್ರಿ ಖ್ಯಾತಿ ಗಳಿಸಿದರು ಶಾಮ್ ರಂಗೀಲಾ. ರಾಜಸ್ಥಾನದ ಮನಕ್ತೇರಿ ಎಂಬ ಸಣ್ಣ ಹಳ್ಳಿಯಲ್ಲಿ ಹುಟ್ಟಿದ ಅನಕ್ಷರಸ್ಥ ಶ್ಯಾಮ್ ರಂಗೀಲಾ ಅವರು ಮೋದಿಯ ಮಿಮಿಕ್ರಿ ಮಾಡಿ ಭಾರಿ ಖ್ಯಾತಿ ಗಳಿಸಿದರು. ಇವರ ಒಂದು ವಿಡಿಯೋ ಇಂಟರ್‌ನೆಟ್‌ಗೆ ಅಪ್‌ಲೋಡ್ ಆಗಿದ್ದೇ ತಡ ಭಾರಿ ವೈರಲ್ ಆಗಿಬಿಟ್ಟಿತು. ಇಂದು ಶ್ಯಾಮ್ ರಂಗೀಲಾ ಹೆಸರಿಗೆ ವಿಟಿಪೀಡಿಯಾ ಪೇಜ್ ಇದೆ. ಮೋದಿ ಅವರನ್ನು ಮಿಮಿಕ್ರಿ ಮಾಡಿದ ಕಾರಣ ಅವರಿಗೆ ಹಲವು ಬೆದರಿಕೆಗಳು ಸಹ ಬಂದಿದ್ದವು.

ದೇರಾ ಮುಖ್ಯಸ್ಥ ಮಿಮಿಕ್ರಿ ಮಾಡಿದ್ದಕ್ಕೆ ನಟ ಕಿಕು ಬಂಧನ

ಯೂಟ್ಯೂಬರ್‌ ದ್ರುವ್ ರಾಟೆ

ಯೂಟ್ಯೂಬರ್‌ ದ್ರುವ್ ರಾಟೆ

ದ್ರುವ್ ರಾಟೆ ಈ ವರ್ಷ ಬಹು ವೈರಲ್ ಆದ ವ್ಯಕ್ತಿಗಳಲ್ಲಿ ಒಬ್ಬರು. ಯೂಟ್ಯೂಬ್ ವಿಡಿಯೋಗಳ ಮೂಲಕ ಬಿಜೆಪಿಯನ್ನು ಸಾಕ್ಷಿ ಸಹಿತವಾಗಿ ಟೀಕಿಸುವವರಲ್ಲಿ ಧ್ರುವ್ ರಾಟೆ ಮೊದಲಿಗರು. ಬುಲೆಟ್ ಟ್ರೇನ್ ಕುರಿತಾದ ವಿಡಿಯೋ, ಸರ್ದಾರ್ ಪಟೇಲ್ ಕುರಿತಾದ ವಿಡಿಯೋ, ರಾಮ ಮಂದಿರ, ಮೋದಿ ಸುಳ್ಳುಗಳು, ನೋಟ್ ಬ್ಯಾನ್ ಕುರಿತಾದ ವಿಡಿಯೋಗಳೆಲ್ಲಾ ಬಹು ಫೇಮಸ್‌. ಇವರು ಕಳೆದ ವರ್ಷದಿಂದಲೂ ವಿಡಿಯೋ ಮಾಡುತ್ತಿದ್ದಾರಾದರೂ ಅತಿ ಹೆಚ್ಚು ಜನಕ್ಕೆ ತಲುಪುವಂತಾಗಿದ್ದು ಈ ವರ್ಷವೇ.

ಸಕ್ತ್‌ ಲೋಂಡಾ ಝಾಕಿರ್ ಖಾನ್

ಸಕ್ತ್‌ ಲೋಂಡಾ ಝಾಕಿರ್ ಖಾನ್

ಕಮಿಡಿಯನ್ ಝಾಕಿರ್ ಖಾನ್ ತಮ್ಮ ಒಂದೇ ಒಂದು ಶೋ ನಿಂದಾಗಿ ದೊಡ್ಡ ಮಟ್ಟದ ಕಮೀಡಿಯನ್ ಆಗಿ ಬದಲಾಗಿಬಿಟ್ಟರು. ಈ ವರ್ಷ 'ಎಐಬಿ' ಆಯೋಜಿಸಿದ್ದ ಶೋ ಒಂದರಲ್ಲಿ 'ಸಕ್ತ್‌ ಲೋಂಡಾ' ಹೆಸರಿನಲ್ಲಿ ಅವರು ಮಾಡಿದ ಕಾಮಿಡಿ ಝಾಕಿರ್ ಖಾನ್ ಅವರನ್ನು ರಾತ್ರೋ ರಾತ್ರಿ ಫೇಮಸ್ ಮಾಡಿಬಿಟ್ಟಿತು. ಇಂದು ಅವರು ಭಾರತದ ಅತಿ ದಿಬಾರಿ ಕಾಮಿಡಿಯನ್‌ಗಳಲ್ಲಿ ಒಬ್ಬರು. ನಟ ಅಕ್ಷಯ್‌ ಕುಮಾರ್‌ ಜೊತೆ ಒಂದು ಶೋಗೆ ಜಡ್ಜ್‌ ಸಹ ಆಗಿದ್ದದರು. ಇದಕ್ಕೆ ಕಾರಣವಾಗಿದ್ದು ಇಂಟರ್‌ನೆಟ್‌.

ರೆಹಮಾನ್ ಗುರುತಿಸಿದ ಹಳ್ಳಿ ಹಾಡುಗಾರ್ತಿ

ರೆಹಮಾನ್ ಗುರುತಿಸಿದ ಹಳ್ಳಿ ಹಾಡುಗಾರ್ತಿ

ಆಂದ್ರದ ಯಾವುದೋ ಮೂಲೆಯಲ್ಲಿ ಕೂತು 'ಓ ಚಲಿಯಾ, ನಾ ಪ್ರಿಯ ಸಖಿಯಾ' ಹಾಡು ಹಾಡಿದ ಬೇಬಿ ಎಂಬ ಮಹಿಳೆ ರಾತ್ರೋ ರಾತ್ರಿ ಭಾರಿ ಖ್ಯಾತರಾದರು. ಎಷ್ಟರ ಮಟ್ಟಿಗೆ ಎಂದರೆ ಸ್ವತಃ ಸಂಗೀತ ಸಾಮ್ರಾಟ ಎ.ಆರ್.ರೆಹಮಾನ್ ಅವರು ಅವರ ಹಾಡು ಮೆಚ್ಚು ಫೇಸ್‌ಬುಕ್‌ನಲ್ಲಿ ಅವರ ಹಾಡನ್ನು ಶೇರ್‌ ಮಾಡಿದ್ದರು. ರೆಹಮಾನ್ ಶೇರ್ ಮಾಡಿದ ಮೇಲೆಯೇ ಆ ಮಹಿಳೆಯ ಬಗ್ಗೆ ಮಾಹಿತಿಗಳು ಹೊರ ಬಂದಿದ್ದು. ಬೇಬಿ ಹೆಸರಿನ ಅವರು ಆಂಧ್ರದ ಈಸ್ಟ್‌ ಗೋದಾವರಿ ಜಿಲ್ಲೆಯ ವಡಿಸಾಲೇರು ಗ್ರಾಮದವರು.

ವಿಶ್ವ ದಾಖಲೆ ಬರೆದ ಅಜ್ಜಿ

ವಿಶ್ವ ದಾಖಲೆ ಬರೆದ ಅಜ್ಜಿ

ಆಂಧ್ರ ಪ್ರದೇಶದ ಅಜ್ಜಿ ಈ ವರ್ಷ ಬಹು ಫೇಮಸ್ ಆದವರಲ್ಲೊಬ್ಬರು. ಅವರ ಅಡುಗೆಯ ವಿಡಿಯೋಗಳಿಗೆ ಲಕ್ಷಾಂತರ ನೋಡುಗರು ಇದ್ದರು. ಮಾಸ್ತಾನಮ್ಮ ಹೆಸರಿನ ಅವರು ಇದೇ ತಿಂಗಳ ಆರಂಭದಲ್ಲಿ ಕಾಲವಾದರು. ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದ ಹಿರಿಯ ಯೂಟ್ಯೂಬರ್ ಎಂಬ ವಿಶ್ವ ಖ್ಯಾತಿಗೆ ಅಜ್ಜಿ ಭಾಜನರಾಗಿದ್ದರು.

107ನೇ ವಯಸ್ಸಿನಲ್ಲಿ ಯೂಟ್ಯೂಬ್ ಸ್ಟಾರ್ ಆಗಿದ್ದ ಆಂಧ್ರದ ಅಜ್ಜಿ ಇನ್ನಿಲ್ಲ

ಕೇರಳದ ಫರ್ಸ್ಟ್‌ಕ್ಲಾಸ್ ಅಜ್ಜಿ

ಕೇರಳದ ಫರ್ಸ್ಟ್‌ಕ್ಲಾಸ್ ಅಜ್ಜಿ

96 ವರ್ಷದ ಕೇರಳದ ಕಾರ್ತಿಯಾನಿ ಅಜ್ಜಿ ಈ ವಯಸ್ಸಿನಲ್ಲಿ ಹತ್ತನೆ ತರಗತಿ ಪರೀಕ್ಷೆ ಬರೆದು ಡಿಸ್ಟಿಂಕ್ಷನ್‌ನಲ್ಲಿ ಪಾಸಾದರು. ಅಜ್ಜಿ 98% ಅಂಕ ಗಳಿಸಿದ್ದೆ ತಡ ದೇಶಾದ್ಯಂತ ಅಜ್ಜಿಯದ್ದೇ ಸುದ್ದಿ. ಕೇರಳ ಸಿಎಂ ಪಿಣರಾಯಿ ವಿಜಯ್ ಸೇರಿ ಸೇರಿದಂತೆ ಹಲವು ಪ್ರಮುಖ ಅಜ್ಜಿಗೆ ಶೂಭಾಶಯ ಹೇಳಿದರು. ಅಜ್ಜಿಯನ್ನು ಕೇರಳದ ಶಿಕ್ಷಣ ಮಂತ್ರಿ ಭೇಟಿ ಮಾಡಿದರು. ಆಕೆಗೆ ಲ್ಯಾಪ್‌ಟಾಪ್‌ ಒಂದನ್ನು ಉಡುಗೊರೆಯಾಗಿ ಕೊಟ್ಟರು.

ಕೇರಳದ 96 ವರ್ಷದ ಈ 'ಹುಡುಗಿ' ಪಡೆದದ್ದು 98 ಪರ್ಸೆಂಟ್

'ಚಾಯ್ ಪೀಲೋ' ಆಂಟಿ

'ಚಾಯ್ ಪೀಲೋ' ಆಂಟಿ

'ಚಾಯ್ ಪೀಲೋ ಆಂಟಿ' ಸಹ ಈ ವರ್ಷ ಭಾರಿ ಖ್ಯಾತಿ ಗಳಿಸಿದರು ಆದರೆ ಇದನ್ನು ಕುಖ್ಯಾತಿ ಎಂದೇ ಕರೆಯಬೇಕು. ಪ್ರತಿ ದಿನ ಬೆಳಿಗ್ಗೆ ಎದ್ದು ಫೇಸ್‌ಬುಕ್‌ನಲ್ಲಿ 'ಹಾಯ್ ಫ್ರೆಂಡ್ಸ್‌ ಚಾಯ್ ಪೀಲೋ' ಎಂದು ವಿಡಿಯೋ ಹಾಕುವ /// ಆಂಟಿ ಇಂಟರ್‌ನೆಟ್‌ ಸೆನ್ಸೇಷನ್ ಆಗಿಬಿಟ್ಟಿದ್ದರು. ಕೇವಲ ಚಾಯ್ ಮಾತ್ರವಲ್ಲ ಅವರು ಪ್ರತಿ ದಿನ ಊಟ ಮಾಡುವುದನ್ನು, ಹಣ್ಣು ತಿನ್ನುವುದನ್ನು, ಫ್ರೂಟಿ ಕುಡಿಯುವುದನ್ನು ಸಹ ವಿಡಿಯೋ ಮಾಡಿ ಹಾಕುವ (ದುರ)ಅಭ್ಯಾಸ ಅವರಿಗೆ. ಹೊಸ ನೆಕ್‌ಲೆಸ್ ತಗೊಂಡೆ, ಇಂದು ಪಾಯಸ ಮಾಡಿದ್ದೇನೆ ಇಂತಹುಗಳನ್ನೆಲ್ಲಾ ವಿಡಿಯೋದಲ್ಲಿ ಹೇಳುತ್ತಿದ್ದರು ಆಂಟಿ.

ಆಂಧ್ರದ ಕೀ-ಕೀ ಡಾನ್ಸ್‌ ಹುಡುಗರು

ಆಂಧ್ರದ ಕೀ-ಕೀ ಡಾನ್ಸ್‌ ಹುಡುಗರು

ಚಲಿಸುತ್ತಿರುವ ಗಾಡಿಯಿಂದ ಇಳಿದು ಮಾಡುವ ಕಿ-ಕೀ ನೃತ್ಯ ವಿಶ್ವದಾದ್ಯಂತ ವೈರಲ್ ಆಗಿತ್ತು. ಬೆಂಗಳೂರು ಪೊಲೀಸರು ಇದಕ್ಕೆ ನಿಷೇಧ ಹೇರಿದ್ದರು. ಆದರೆ ಈ ಕಿ-ಕೀ ಚಾಲೆಂಜ್‌ ಅನ್ನು ಬೇರೆ ಲೆವೆಲ್‌ಗೆ ತೆಗೆದುಕೊಂಡು ಹೋಗಿದ್ದು ಆಂಧ್ರ ಪ್ರದೇಶದ ಇಬ್ಬರು ಹುಡುಗರು. ಗದ್ದೆಯಲ್ಲಿ ಎತ್ತುಗಳನ್ನು ಹೊಡೆಯುತ್ತಾ ಇವರು ಮಾಡಿದ ಕಿ-ಕೀ ನೃತ್ಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಗಳಿಸಿತು. ಅಮೆರಿಕದ ವಾಷಿಂಗ್ಟನ್ ಪೋಸ್ಟ್‌ನಲ್ಲಿ ಇವರ ಬಗ್ಗೆ ಸುದ್ದಿ ಪ್ರಕಟವಾಗಿತ್ತು.

ಹಳ್ಳಿ ಹೈದರ ಕೀಕೀ ಡ್ಯಾನ್ಸ್‌,ಅಮೆರಿಕ ಪತ್ರಿಕೆಯಲ್ಲಿ ಪ್ರಮುಖ ಸುದ್ದಿ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Year end special 2018. Here is the list of persons who went viral this year for some good reasons and some for bad reasons.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more