ವರ್ಷದ ಕೊನೆಯ ಮನ್ ಕಿ ಬಾತ್‌ನಲ್ಲಿ ಪ್ರಮುಖ ಘಟನೆಗಳನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ
ನವದೆಹಲಿ, ಡಿ. 25: ಭಾನುವಾರ 2022 ರ ಕೊನೆಯ ಸಂಚಿಕೆಯಾದ 'ಮನ್ ಕಿ ಬಾತ್' ನ 96 ನೇ ಆವೃತ್ತಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ವರ್ಷದ ವಿವಿಧ ಘಟನೆಗಳು ಮತ್ತು ಮುಖ್ಯಾಂಶಗಳನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ, ಅನೇಕ ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ ಹೀಗಾಗಿ ಸುರಕ್ಷಿತವಾಗಿರಲು ಮತ್ತು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ.
ವರ್ಷದ ಕೊನೆಯಲ್ಲಿ ಅನೇಕ ಜನರು ರಜೆಯಲ್ಲಿದ್ದಾರೆ. ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಆಚರಣೆ ಸಮಯದಲ್ಲಿ ಸಮಾರಂಭಗಳಲ್ಲಿ ಭಾಗವಹಿಸುತ್ತಾರೆ. ಹೀಗಾಗಿ ಸಂತೋಷದ ಸಮಯದಲ್ಲಿಯೂ ವೈರಸ್ ಬಗ್ಗೆ ಜಾಗರೂಕತೆಯಿಂದ ಇರುವುದು ಮತ್ತು ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸುವುದನ್ನು ಮರೆಯಬಾರದು ಎಂದು ಎಚ್ಚರಿಸಿದ್ದಾರೆ.
ಮುಂದುವರಿದು, "2022 ರಲ್ಲಿ, ದೇಶದ ಜನರ ಶಕ್ತಿ, ಅವರ ಸಹಕಾರ, ಅವರ ಸಂಕಲ್ಪ, ಅವರ ಯಶಸ್ಸಿನ ವಿಸ್ತರಣೆಯು ಎಷ್ಟರಮಟ್ಟಿಗೆ ಇತ್ತು ಎಂದರೆ ಅವರೆಲ್ಲರನ್ನೂ 'ಮನ್ ಕಿ ಬಾತ್' ನಲ್ಲಿ ಸೇರಿಸುವುದು ಕಷ್ಟಕರವಾಗಿರುತ್ತದೆ" ಎಂದು ಹೇಳಿದ್ದಾರೆ.

2022 ರ ವರ್ಷವು ಅನೇಕ ರೀತಿಯಲ್ಲಿ ಅದ್ಭುತ ಮತ್ತು ಸ್ಫೂರ್ತಿದಾಯಕ ಎಂದ ಪ್ರಧಾನಮಂತ್ರಿ, "ಈ ವರ್ಷ ಭಾರತವು ತನ್ನ ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸಿದೆ ಮತ್ತು 'ಅಮೃತ ಕಾಲ' ಈ ವರ್ಷದಲ್ಲಿ ಪ್ರಾರಂಭವಾಗಿದೆ. ಈ ವರ್ಷ ದೇಶವು ಹೊಸ ವೇಗವನ್ನು ಪಡೆದುಕೊಂಡಿದೆ. ಎಲ್ಲಾ ದೇಶವಾಸಿಗಳು ಒಂದಕ್ಕಿಂತ ಹೆಚ್ಚು ಕೆಲಸಗಳನ್ನು ಮಾಡಿದ್ದಾರೆ" ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಕ್ರಿಸ್‌ಮಸ್ ಸಂದರ್ಭದಲ್ಲಿ ದೇಶಕ್ಕೆ ಶುಭಾಶಯಗಳನ್ನು ಸಲ್ಲಿಸಿರುವ ಅವರು, ಈ ದಿನವು ಯೇಸುಕ್ರಿಸ್ತನ ಜೀವನ ಮತ್ತು ಬೋಧನೆಗಳ ಸ್ಮರಣೆಯನ್ನು ಸೂಚಿಸುತ್ತದೆ ಎಂದು ಹೇಳಿ, ನಿಮ್ಮೆಲ್ಲರಿಗೂ ನಾನು ಹೃತ್ಪೂರ್ವಕ ಕ್ರಿಸ್ಮಸ್ ಶುಭಾಶಯಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 98 ನೇ ಜನ್ಮದಿನದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರಿಗೆ ಗೌರವ ನಮನ ಸಲ್ಲಿಸಿದರು. ಶಿಕ್ಷಣ, ವಿದೇಶಾಂಗ ನೀತಿ, ಮೂಲಸೌಕರ್ಯ ಕ್ಷೇತ್ರ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ವಾಜಪೇಯಿ ಅವರು ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದರು ಎಂದು ಹೇಳಿದ್ದಾರೆ.

*'ಮನ್ ಕಿ ಬಾತ್' ನಲ್ಲಿ ಪ್ರಧಾನಿ ಮೋದಿ ಗುರುತಿಸಿದ ದೇಶದ ಸಾಧನೆಗಳು ಇಲ್ಲಿವೆ*
1. "2022 ರ ಸಾಧನೆಗಳು ವಿಶ್ವದಲ್ಲಿ ಭಾರತಕ್ಕೆ ವಿಶೇಷ ಸ್ಥಾನವನ್ನು ಸೃಷ್ಟಿಸಿವೆ. ಈ ವರ್ಷ ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯ ಸ್ಥಾನಮಾನವನ್ನು ಸಾಧಿಸಿದೆ. ಭಾರತವು 220 ಕೋಟಿ ಕೋವಿಡ್ ಲಸಿಕೆ ನೀಡಿ ವಿಶ್ವ ದಾಖಲೆ ಮಾಡಿದೆ.
2. "2022 ಎಂದರೆ ಭಾರತದ ಪ್ರತಿಯೊಬ್ಬ ನಾಗರಿಕರು 'ಆತ್ಮನಿರ್ಭರ್ ಭಾರತ್' ಮಾದರಿಯನ್ನು ಅಳವಡಿಸಿಕೊಂಡು ಬದುಕುತ್ತಿದ್ದಾರೆ. ಇದರರ್ಥ ಭಾರತದ ಮೊದಲ ವಿಮಾನವಾಹಕ ನೌಕೆ INS ವಿಕ್ರಾಂತ್ ಅನ್ನು ಸ್ವಾಗತಿಸಲಾಗಿದೆ. ಇದರರ್ಥ ಬಾಹ್ಯಾಕಾಶ, ಡ್ರೋನ್ ಮತ್ತು ಸಂಶೋಧನಾ ವಲಯದಲ್ಲಿ ಭಾರತ ಉತ್ತುಂಗಕ್ಕೆ ಏರಿದೆ.
3. "2022 ಅಂದರೆ ಕಾಮನ್‌ವೆಲ್ತ್ ಗೇಮ್ಸ್ ಅಥವಾ ನಮ್ಮ ಮಹಿಳಾ ಹಾಕಿ ತಂಡದ ಗೆಲುವಿನಂತಹ ಕ್ರೀಡಾ ವಲಯದಲ್ಲಿಯೂ ಸಹ, ಪ್ರತಿಯೊಂದು ಕ್ಷೇತ್ರದಲ್ಲೂ ಭಾರತದ ಯಶಸ್ಸನ್ನು ಸೂಚಿಸುತ್ತದೆ. ನಮ್ಮ ಯುವಕರು ಅಪಾರ ಸಾಮರ್ಥ್ಯವನ್ನು ತೋರಿಸಿದ್ದಾರೆ"
4. "ಇವೆಲ್ಲದರ ಜೊತೆಗೆ, 2022 ಅನ್ನು ಇನ್ನೂ ಒಂದು ಕಾರಣಕ್ಕಾಗಿ ನೆನಪಿಸಿಕೊಳ್ಳಲಾಗುತ್ತದೆ. ಅದು 'ಏಕ್ ಭಾರತ್ ಶ್ರೇಷ್ಠ ಭಾರತ್' ಚೈತನ್ಯದ ವಿಸ್ತರಣೆ. ಏಕತೆ ಮತ್ತು ಸಮಗ್ರತೆಯನ್ನು ಆಚರಿಸುವ ಸಲುವಾಗಿ, ಜನರು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದರು. ಗುಜರಾತಿನ ಮಾಧವಪುರ ಮೇಳದಿಂದ ತಮಿಳುನಾಡಿನ ಕಾಶಿ ತಮಿಳು ಸಂಗಮನವರೆಗೆ, ಈ ಉತ್ಸವಗಳು ಏಕತೆಯಯನ್ನು ಸಾರಿವೆ.
5. "ಆಗಸ್ಟ್‌ನಲ್ಲಿ ಆಚರಿಸಲಾದ 'ಹರ್ ಘರ್ ತಿರಂಗ'ವನ್ನು ಯಾರು ಮರೆಯಲು ಸಾಧ್ಯವೇ...? ಅದು ಭಾರತದ ಪ್ರತಿಯೊಬ್ಬ ಪ್ರಜೆಗೂ ಮೈನವಿರೆಳಿಸುವ ಕ್ಷಣಗಳಾಗಿದ್ದವು. ಸ್ವಾತಂತ್ರ್ಯದ 75 ವರ್ಷಗಳ ಸ್ಮರಣಾರ್ಥ ಈ ಅಭಿಯಾನದಲ್ಲಿ ಇಡೀ ದೇಶ ತ್ರಿವರ್ಣ ಧ್ವಜವನ್ನು ಅಪ್ಪಿಕೊಂಡಿತು. ಆರು ಕೋಟಿಗೂ ಹೆಚ್ಚು ಜನರು ತ್ರಿವರ್ಣ ಧ್ವಜದೊಂದಿಗೆ ಸೆಲ್ಫಿ ಸಹ ಕಳುಹಿಸಿದ್ದಾರೆ. ಅಮೃತ್ ಮಹೋತ್ಸವವನ್ನು ಮುಂದಿನ ವರ್ಷವೂ ಅದೇ ಉತ್ಸಾಹದಲ್ಲಿ ಆಚರಿಸಲಾಗುವುದು".
6. "ಈ ವರ್ಷ, ಜಿ20 ಅಧ್ಯಕ್ಷರಾಗುವ ಜವಾಬ್ದಾರಿಯನ್ನು ಭಾರತಕ್ಕೆ ವಹಿಸಲಾಗಿದೆ. ಕಳೆದ ಬಾರಿಯೂ ಈ ಬಗ್ಗೆ ವಿವರವಾಗಿ ಚರ್ಚಿಸಿದ್ದೆ. 2023 ರಲ್ಲಿ, ನಾವು ಈ ಕಾರ್ಯಕ್ರಮವನ್ನು ಸಾಮೂಹಿಕ ಆಂದೋಲನವನ್ನಾಗಿ ಮಾಡಬೇಕಾಗಿದೆ.












Click it and Unblock the Notifications