Viral Video: ರೈಲು ಶೌಚಾಲಯದಲ್ಲಿ ಟೀ ಕಪ್ ತೊಳೆಯುತ್ತಿದ್ದ ಸಿಬ್ಬಂದಿ: ಐಆರ್‌ಸಿಟಿಸಿಗೆ ನೋಟಿಸ್
Viral Video: ರೈಲುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕೆಲವೊಂದು ಆಘಾತಕಾರಿ ವಿಡಿಯೋಗಳು ವೈರಲ್ ಆಗುತ್ತಿವೆ. ಈ ವಿಡಿಯೋಗಳು ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಲ್ಲಿ ಆತಂಕವನ್ನುಂಟು ಮಾಡಿದೆ. ಚಲಿಸುವ ರೈಲಿನ ಶೌಚಾಲಯದಲ್ಲಿ ರೈಲ್ವೆ ಅಡುಗೆ ಸಿಬ್ಬಂದಿ ಟೀ, ಕಾಫಿ ಕಪ್ ಹಾಗೂ ಪಾತ್ರೆಗಳನ್ನು ತೊಳೆಯುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು. ಈ ವೈರಲ್ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಂದ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಗುರುವಾರ ಸ್ವಯಂಪ್ರೇರಿತವಾಗಿ (IRCTC)ಗೆ ನೋಟಿಸ್ ಜಾರಿ ಮಾಡಿದೆ ಎಂದು ವರದಿಯಾಗಿದೆ. ಏನಿದು ವೈರಲ್ ವಿಡಿಯೋ ಎನ್ನುವ ವಿವರ ಈ ಲೇಖನದಲ್ಲಿದೆ. ಎಫ್‌ಎಸ್‌ಎಸ್‌ಎಐ ಇದು ನಿಜವಾಗಿದ್ದರೆ, ಅದು ಆಹಾರ ಮಾಲಿನ್ಯಕ್ಕೆ ಕಾರಣವಾಗಬಹುದು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
12223 ಡುರೊಂಟೊ ಎಕ್ಸ್‌ಪ್ರೆಸ್‌ನ H1 ಕೋಚ್‌ನ ಒಳಗೆ ಊಟದ ಸಮಯದಲ್ಲಿ ರೈಲಿನ ಶೌಚಾಲಯದಲ್ಲಿ ಕ್ರೇಟ್‌ಗಳಲ್ಲಿ ಸಂಗ್ರಹಿಸಲಾದ ಪ್ಲೇಟ್ ಹಾಗೂ ಗ್ಲಾಸ್‌ಗಳನ್ನು ಇರಿಸಿರುವುದು ಹಾಗೂ ಆ ಪಾತ್ರೆಗಳನ್ನು ಶೌಚಾಲಯದಲ್ಲಿ ತೊಳೆಯುವುದಕ್ಕೆ ಮುಂದಾಗಿದ್ದರು ಎಂದು ಹೇಳಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ IRCTC ಸಿಬ್ಬಂದಿ ವಸ್ತುಗಳನ್ನು ಅಲ್ಲಿಯೇ ಇರಿಸಿರುವುದು ಸಹ ಇದೆ. ರೈಲಿನ ಶೌಚಾಲಯದಲ್ಲಿ ಪಾತ್ರೆಗಳನ್ನು ತೊಳೆಯಲಾಗುತ್ತಿದೆ ಎಂದು ಹೇಳಲಾಗಿರುವ ವೈರಲ್ ವಿಡಿಯೋವನ್ನು ಉಲ್ಲೇಖಿಸಿ FSSAIಯು IRCTCಗೆ ನೋಟಿಸ್ ನೀಡಲಾಗಿದೆ ಎಂದು ವರದಿಯಾಗಿದೆ.

ಪ್ರಯಾಣಿಕರೊಬ್ಬರು ಈ ವಿಡಿಯೋ ಮಾಡಿದ್ದಾರೆ. ರೈಲು 12223 LTT-ERS ಡುರೊಂಟೊ ಎಂದು ಹೇಳಲಾಗಿದೆ. ಈ ಪಾತ್ರೆಗಳನ್ನು ಅಡುಗೆ ಸಿಬ್ಬಂದಿ ಅಥವಾ IRCTC ಯಿಂದ ನೇಮಿಸಲ್ಪಟ್ಟ ಗುತ್ತಿಗೆ ಕಾರ್ಮಿಕರು ಸ್ವಚ್ಛಗೊಳಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಈ ವಿಷಯದ ಬಗ್ಗೆ ಐಆರ್‌ಸಿಟಿಸಿಯಿಂದ ಆದಷ್ಟು ಬೇಗ ಉತ್ತರ ಕೊಡುವಂತೆ ಸೂಚನೆ ನೀಡಿದೆ. ಶೌಚಾಲಯ ಪ್ರದೇಶಗಳಲ್ಲಿ ಪಾತ್ರೆಗಳನ್ನು ತೊಳೆಯುವುದು ಗಂಭೀರ ಅಪಾಯವನ್ನುಂಟು ಮಾಡುತ್ತದೆ ಮತ್ತು ಆಹಾರ ಸುರಕ್ಷತೆಯ ದೃಷ್ಟಿಕೋನದಿಂದ ಇದು ಒಪ್ಪುವ ವಿಷಯವಲ್ಲ ಎಂದು ಹೇಳಲಾಗಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ನಿಯಮಗಳ ಪ್ರಕಾರ, ಆಹಾರ ಮಾಲಿನ್ಯ ತಪ್ಪಿಸಲು ಸ್ವಚ್ಛತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇದೇ ವೇಳೆ, ಕಳಪೆ ಗುಣಮಟ್ಟದ ಮೊಟ್ಟೆಗಳ ಮಾರಾಟದ ಬಗ್ಗೆ ಗ್ರಾಹಕರ ದೂರು ಹಿನ್ನೆಲೆಯಲ್ಲಿ Blinkit ಸಂಸ್ಥೆಯಿಂದ FSSAI ಸ್ಪಷ್ಟನೆ ಕೇಳಿತ್ತು ಎಂದು ವರದಿ ತಿಳಿಸಿದೆ.
Viral Video: ಪ್ರಯಾಣಕರಿಗೆ ಸಿಕ್ಕಿಬಿದ್ದ ಸಿಬ್ಬಂದಿಗೆ ಶಾಕ್
ಇನ್ನು ವೈರಲ್ ಆಗಿರುವ ವಿಡಿಯೋದಲ್ಲಿ ರೈಲಿನ ಶೋಚಾಲಯದಲ್ಲಿ ಪಾತ್ರೆ ಹಾಗೂ ಲೋಟಗಳನ್ನು ತೊಳೆಯುವುದಕ್ಕೆ ಸಿಬ್ಬಂದಿ ಮುಂದಾಗಿರುವುದು ಇದೆ. ವಿಡಿಯೋ ಮಾಡಿಕೊಂಡಿರುವ ವ್ಯಕ್ತಿ ಇಲ್ಲಿ ಏನು ಮಾಡುತ್ತಿದ್ದೀರಿ, ಈ ಪಾತ್ರೆಗಳನ್ನು ಶೌಚಾಲಯದಲ್ಲಿ ಯಾಕೆ ಇರಿಸಿದ್ದೀರಿ ಅಂತ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ರೈಲ್ವೆ ಸಿಬ್ಬಂದಿ ಯಾವೂದೇ ಉತ್ತರ ನೀಡಿಲ್ಲ.
Shocking hygiene fail on 12223 Duronto Express 1A coach H1: Food plates & cutlery stored in a crate right next to the toilet during lunch! IRCTC staff caught on video. Complaint filed.
— Ghar Ke Kalesh (@gharkekalesh) May 28, 2026
pic.twitter.com/fnLWCuCNUX












Click it and Unblock the Notifications