ಸನಾತನ ಧರ್ಮದ ಬಗ್ಗೆ ಮುಕ್ತವಾಗಿ ಮಾತನಾಡಿದ ನಟ ಅರ್ಜುನ್ ಸರ್ಜಾ: ವೈರಲ್ ಆಯ್ತು ಹೇಳಿಕೆ
ತಮಿಳುನಾಡಿನಲ್ಲಿ ಇತ್ತೀಚಿನ ದಿನಗಳಲ್ಲಿ ಸತಾನತ ಧರ್ಮದ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ಇದೀಗ ನಟ ಅರ್ಜುನ್ ಸರ್ಜಾ ಅವರು ಸನಾತನ ಧರ್ಮದ ಬಗ್ಗೆ ಇದೇ ಮೊದಲ ಬಾರಿ ಅತ್ಯಂತ ಮುಕ್ತವಾಗಿ ಮಾತನಾಡಿದ್ದಾರೆ. ಸನಾತನ ಧರ್ಮ ಎನ್ನುವುದು ಜೀವನದ ಭಾಗವಾಗಿದೆ. ಸನಾತನ ಎನ್ನುವುದು ನಮ್ಮ ಜೀವನ ಶೈಲಿಯೇ ಆಗಿದೆ ಎಂದು ಅವರು ಹೇಳಿದ್ದಾರೆ. ಈ ಮೂಲಕ ತಮಿಳುನಾಡಿನ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಉದಯ ನಿಧಿ ಸ್ಟಾಲಿನ್ ಅವರು ನಿರಂತರ ಸತಾನತ ಧರ್ಮದ ಬಗ್ಗೆ ನೀಡುತ್ತಿದ್ದ ಹೇಳಿಕೆಗಳಿಗೆ ತಿರುಗೇಟು ನೀಡಿದ್ದಾರೆ. ಅರ್ಜುನ್ ಸರ್ಜಾ ಅವರ ನಟನೆಯ ಬ್ಲಾಸ್ಟ್ ಸಿನಿಮಾ ಇದೇ ವಾರ ಬಿಡುಗಡೆ ಆಗಲಿದೆ. ಪ್ರೇಕ್ಷಕರೊಂದಿಗೆ ಸಿನಿಮಾ ನೋಡಿದ ಮೇಲೆ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಸನಾತನ ಧರ್ಮದ ಬಗ್ಗೆ ಪತ್ರಕರ್ತರಿಂದ ಪ್ರಶ್ನೆ ಎದುರಾಗಿದ್ದು, ಈ ಪ್ರಶ್ನೆಗೆ ಅಜುರ್ನ್ ಸರ್ಜಾ ಅವರು ಪ್ರತಿಕ್ರಿಯಿಸಿದ್ದು, ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗೆ ಕೌಂಟರ್ ಕೊಟ್ಟಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.
ತಮಿಳುನಾಡು ಮಾಜಿ ಉಪಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ, ನಟ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಬಗ್ಗೆ ಪದೇ ಪದೇ ವಿವಾದಾತ್ಮಕ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಕಳೆದ ಕೆಲವು ವರ್ಷಗಳ ಹಿಂದೆಯೂ ಸನಾತ ಧರ್ಮವನ್ನು ಅವರು ಡೆಂಗ್ಯು, ಮಲೇರಿಯಾಗೆ ಹೋಲಿಸಿದ್ದರು. ಸನಾತನವನ್ನು ನಾಶ ಮಾಡಬೇಕು ಎಂದು ಹೇಳಿದ್ದರು. ಈ ವಿಚಾರ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ದೇಶದಾದ್ಯಂತ ಹಿಂದೂಗಳು ಆಕ್ರೋಶ ಹೊರ ಹಾಕಿದ್ದರು. ಅಲ್ಲದೆ ಉದಯನಿಧಿ ಸ್ಟಾಲಿನ್ ಅವರ ವಿರುದ್ಧ ದೂರು ಸಹ ದಾಖಲಾಗಿತ್ತು. ಕೆಲವರು ಕೊಲೆ ಬೆದರಿಕೆಯನ್ನೂ ಹಾಕಿದ್ದರು. ಈ ಬೆದರಿಕೆಗೆಲ್ಲ ಜಗ್ಗುವವನು ನಾನಲ್ಲ ಎಂದೇ ಉದಯನಿಧಿ ತಿರುಗೇಟು ಕೊಟ್ಟಿದ್ದರು.

ಇತ್ತೀಚೆಗೆ ತಮಿಳುನಾಡು ವಿಧಾನಸಭೆ ಅಧಿವೇಶನದಲ್ಲಿಯು ಸಹ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದರು. ಈ ವಿಚಾರವು ಭಾರೀ ಚರ್ಚೆ ಹುಟ್ಟುಹಾಕಿತ್ತು ಅಲ್ಲದೆ ಭಾರೀ ವಿರೋಧಕ್ಕೂ ಕಾರಣವಾಗಿತ್ತು. ಕೆಲವರು ಉದಯನಿಧಿ ಸ್ಟಾಲಿನ್ ಹೇಳಿಕೆಯನ್ನು ಖಂಡಿಸಿ ಪ್ರತಿಭಟನೆಯನ್ನೂ ಮಾಡಿದ್ದರು. ಸದನದಲ್ಲಿ ತಮ್ಮ ಮೊದಲ ಭಾಷಣದಲ್ಲಿಯೇ ಸನಾತನ ಧರ್ಮ ನಿರ್ಮೂಲನೆ ಆಗಬೇಕು ಎಂದು ಪುನರುಚ್ಚರಿಸಿದ್ದರು.
ಈಚೆಗೆ ಉದಯನಿಧಿ ಸ್ಟಾಲಿನ್ ಕೊಟ್ಟ ಹೇಳಿಕೆಯು ಭಾರೀ ಟೀಕೆಗೆ ಕಾರಣವಾಗಿತ್ತು. ತಮ್ಮ ಹೇಳಿಕೆಗೆ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ಸ್ಪಷ್ಟನೆ ಕೊಟ್ಟಿದ್ದ ಅವರು, ಜನರನ್ನು ವಿಭಜಿಸುವ ಪದ್ಧತಿ(ಸನಾತನ)ವನ್ನು ನಿರ್ಮೂಲನೆ ಮಾಡಬೇಕು ಎಂದಷ್ಟೇ ಹೇಳಿದ್ದೆ ಎಂದಿದ್ದರು. ಮುಂದುವರಿದು ಕೆಲವರು ನನ್ನನ್ನು ಟೀಕಿಸುತ್ತಿದ್ದಾರೆ. ನಾನು ಇದಕ್ಕೆಲ್ಲಾ ಹೆದರುವವನಲ್ಲ. ಪ್ರತಿರೋಧದ ನಡುವೆಯೂ ದ್ರಾವಿಡ ಚಳವಳಿ ಬೆಳೆದಿದೆ. ನಾನು ಒಂದು ಸಣ್ಣ ವಿವರಣೆಯನ್ನು ಕೊಡಲು ಬಯಸುತ್ತೇನೆ. ಸನಾತನವನ್ನು ನಿರ್ಮೂಲನೆ ಮಾಡಬೇಕು ಎಂದಾದರೆ, ಯಾರೂ ದೇವಸ್ಥಾನಕ್ಕೆ ಹೋಗಬಾರದು ಅಂತ ಅಲ್ಲ ಎಂದು ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದರು. ಸದ್ಯ ಸನಾತನ ಧರ್ಮದ ಬಗ್ಗೆ ನಟ, ನಿರ್ದೇಶಕ, ನಿರ್ಮಾಪಕ ಅರ್ಜುನ್ ಸರ್ಜಾ ಅವರು ಕೊಟ್ಟಿರುವ ಹೇಳಿಕೆಯು ವೈರಲ್ ಆಗುತ್ತಿದೆ.
Arjun Sarja: ಸನಾತನ ಧರ್ಮದ ಬಗ್ಗೆ ಅರ್ಜುನ್ ಸರ್ಜಾ ಹೇಳಿದ್ದೇನು
ಸನಾತನ ಧರ್ಮದ ಬಗ್ಗೆ ಮಾತನಾಡಿರುವ ಅರ್ಜುನ್ ಸರ್ಜಾ ಅವರು, ನನ್ನ ಪ್ರಕಾರ ಸನಾತನ ಎನ್ನುವುದು ಜೀವನ ಶೈಲಿ ಆಗಿದೆ. ನಾವು ಜೀವನದಲ್ಲಿ ಹೇಗೆ ಇರುಬೇಕು ಎನ್ನುವು: ದನ್ನು ಇದು ಕಲಿಸುತ್ತದೆ. ತಪ್ಪು ಮಾಡಬೇಡಿ, ಕಳ್ಳತನ ಮಾಡಬೇಡಿ ಹಾಗೂ ಮತ್ತೊಬ್ಬರ ವಸ್ತುವಿಗೆ ಆಸೆ ಪಡಬೇಡ ಎಂದು ಅದು ಹೇಳುತ್ತದೆ. ಚಿಕ್ಕಂದಿನಲ್ಲಿ ನಮ್ಮ ಪೋಷಕರು ನಮ್ಮನ್ನು ಎಷ್ಟು ಚೆನ್ನಾಗಿ ನೋಡಿಕೊಂಡರೂ. ವಯಸ್ಸಾದ ಸಮಯದಲ್ಲಿ ಅವರನ್ನು ನಾವು ದೇವರಂತೆ ನೋಡಿಕೊಳ್ಳಬೇಕು ಎಂದು ಸನಾತನ ಧರ್ಮ ಹೇಳುತ್ತದೆ. ಸನಾತನ ಧರ್ಮ ಬೇಡ ಅಂತಾದ್ರೆ, ಅವರವರ ಅಪ್ಪ - ಅಮ್ಮನನ್ನು ಮನೆಯಿಂದ ಹೊರಗೆ ಹಾಕಬೇಕು, ಆಗುತ್ತಾ ಹೇಳಿ ಅಂತ ಅರ್ಜುನ್ ಸರ್ಜಾ ಅವರು ಪ್ರಶ್ನಿಸಿದ್ದಾರೆ.
Arjun Sarja: ಸನಾತನ ಧರ್ಮ ಒಂದು ಧರ್ಮವಲ್ಲ
ಸನಾತನ ಧರ್ಮ ಎನ್ನುವುದು ಒಂದು ಧರ್ಮವಲ್ಲ. ಅದು ಜೀವನಶೈಲಿಯೇ ಆಗಿದೆ. ನನಗೆ ಗೊತ್ತಿರುವಷ್ಟು ನಾನು ಹೇಳಿದ್ದೀನಿ. ಎಲ್ಲರೂ ಅದನ್ನು ತಿಳಿದುಕೊಂಡರೆ ಒಳ್ಳೆಯದು ಎಂದು ಅರ್ಜುನ್ ಸರ್ಜಾ ಅವರು ಹೇಳಿದ್ದಾರೆ. ತಮಿಳುನಾಡಿನ ಹೊಸ ಸರ್ಕಾರದ ಬಗ್ಗೆ ಸಹ ಆಕ್ಷನ್ ಕಿಂಗ್ ಮಾತನಾಡಿದ್ದಾರೆ. ನಮ್ಮ ಸ್ನೇಹಿತರು ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದಾರೆ ಎಂದಿದ್ದಾರೆ. ನಾನು ರೀಲ್‌ನಲ್ಲಿ ಮುಖ್ಯಮಂತ್ರಿ ಪಾತ್ರದಲ್ಲಿ ನಟಿಸಿದ್ದೆ. ವಿಜಯ್ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಸಮಾಜಕ್ಕೆ ಒಳ್ಳೆದು ಮಾಡಬೇಕು ಅಂತ ರಾಜಕೀಯಕ್ಕೆ ಬಂದಿದ್ದಾರೆ. ಈಗ ತಾನೇ ಸರ್ಕಾರ ಶುರುವಾಗಿದೆ. ಒಳ್ಳೆ ಕೆಲಸಗಳನ್ನು ಮಾಡ್ತಾರೆ ಎನ್ನುವ ಭರವಸೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Actor @arjunsarjaa Sir🙏🔥❤️ absolutely roasts those who abused our Sanatan Dharma
— Kumar Bhanu (@KBSharm63460260) May 29, 2026
He says Sanatan Dharma is a way of life that teaches us how to live and to treat parents like gods.
“So can you reject your own parents?”
“No.”
“Likewise, Sanatan can never be rejected or erased.” pic.twitter.com/AvcCJDnblU












Click it and Unblock the Notifications