‘ಐಟಿ ನಗರಗಳಲ್ಲಿ ಐಷಾರಾಮಿ ಬದುಕು, ಆದರೆ ಅಪ್ಪ-ಅಮ್ಮನ ಅಪ್ಪುಗೆಯಿಲ್ಲ’: ಕಣ್ಣೀರು ತರಿಸುತ್ತಿದೆ ಯುವತಿಯ Viral ಪೋಸ್ಟ್‌

ಹೊಸ ಕನಸುಗಳು, ಉತ್ತಮ ಭವಿಷ್ಯ ಹಾಗೂ ಆರ್ಥಿಕ ಸ್ವಾತಂತ್ರ್ಯದ ನಿರೀಕ್ಷೆಯೊಂದಿಗೆ ಹುಟ್ಟೂರು ಬಿಟ್ಟು ಹೊಸ ನಗರಕ್ಕೆ ಕಾಲಿಡುವುದು ಆರಂಭದಲ್ಲಿ ಎಲ್ಲಿಲ್ಲದ ಖುಷಿ ನೀಡುತ್ತದೆ. ಆದರೆ, ದಿನಗಳೆದಂತೆ ಆ ಹೊಸತನದ ಹೊಳಪು ಮಾಸಿ, ಒಂಟಿತನ ಆವರಿಸಿದಾಗ, ಅಪ್ಪ-ಅಮ್ಮನ ಪ್ರೀತಿ, ಒಡಹುಟ್ಟಿದವರೊಂದಿಗಿನ ಜಗಳ, ಮನೆಯ ಬಿಸಿ ಊಟದ ನೆನಪುಗಳು ಕಾಡಲು ಶುರುವಾಗುತ್ತವೆ.

ಉದ್ಯೋಗಕ್ಕಾಗಿ ತಮ್ಮವರನ್ನು ಬಿಟ್ಟು ದೂರದ ಊರುಗಳಲ್ಲಿ ನೆಲೆಸಿರುವ ಲಕ್ಷಾಂತರ ಯುವಜನರ ಮನಸ್ಸಿನ ಮೂಲೆಮೂಲೆಗಳಲ್ಲಿ ಅಡಗಿರುವ ಇಂತಹದ್ದೇ ಭಾವನಾತ್ಮಕ ತೊಳಲಾಟಗಳ ಬಗ್ಗೆ ಲಿಂಕ್ಡ್‌ಇನ್ ಪೋಸ್ಟ್‌ವೊಂದು ಇದೀಗ ಜಗತ್ತಿನೆದುರು ತೆರೆದಿಟ್ಟಿದೆ.

Pain Of Leaving Family

ಉದ್ಯೋಗ ಅರಸಿ, ಅದರಲ್ಲೂ ವಿಶೇಷವಾಗಿ ಐಟಿ ಕ್ಷೇತ್ರವನ್ನು ಆಯ್ದುಕೊಂಡು ಮಹಾನಗರಗಳಿಗೆ ವಲಸೆ ಬರುವ ಯುವಜನರ ಬದುಕು ಹೊರಗಿನಿಂದ ನೋಡಲು ಅತ್ಯಂತ ಆಕರ್ಷಕವಾಗಿ ಕಾಣುತ್ತದೆ. ಕೈತುಂಬಾ ಸಂಬಳ, ವಾರಾಂತ್ಯದ ಪಾರ್ಟಿಗಳು, ಸ್ವಾತಂತ್ರ್ಯ ಎಲ್ಲವೂ ಇರುತ್ತದೆ. ಆದರೆ, ಈ 'ಐಟಿ ಲೈಫ್' ಹಿಂದಿರುವ ಕಟು ಸತ್ಯವನ್ನು, ಕುಟುಂಬದಿಂದ ದೂರವಿರುವ ನೋವನ್ನು ಯಾರೂ ಮಾತನಾಡುವುದಿಲ್ಲ ಎಂದು ಈಶಾ ಮಲ್ಹೋತ್ರಾ ಎಂಬುವವರು ಲಿಂಕ್ಡ್‌ಇನ್‌ನಲ್ಲಿ ಬರೆದುಕೊಂಡಿದ್ದಾರೆ. ಅವರ ಈ ಪೋಸ್ಟ್ ಇದೀಗ ಭಾರಿ ವೈರಲ್ ಆಗಿದ್ದು, ಮನೆ ಬಿಟ್ಟು ದೂರವಿರುವ ಅಸಂಖ್ಯಾತ ವೃತ್ತಿಪರರ ಹೃದಯಕ್ಕೆ ತಟ್ಟಿದೆ.

"ಐಟಿ ನಗರದಲ್ಲಿ ಬ್ಯುಸಿಯಾಗಿರುವಾಗ ನಮ್ಮ ಕುಟುಂಬವನ್ನು ಬಿಟ್ಟು ಬಂದಿರುವ ನೋವಿನ ಬಗ್ಗೆ ಯಾರೂ ಮಾತನಾಡುವುದಿಲ್ಲವೇಕೆ? ಇಲ್ಲಿನ ಸೌಲಭ್ಯಗಳು ಅದ್ಭುತವಾಗಿರಬಹುದು, ಆದರೆ ದಿನದ ಕೊನೆಯಲ್ಲಿ ಮನೆಗೆ ಮರಳಿ ಅಮ್ಮನಿಂದ ಒಂದು ಅಪ್ಪುಗೆ ಪಡೆಯಲು, ಅಪ್ಪನ ಪಕ್ಕ ಕುಳಿತು ದಿನವಿಡೀ ನಡೆದಿದ್ದನ್ನು ಹಂಚಿಕೊಳ್ಳಲು ಅಥವಾ ಸಹೋದರಿಯೊಂದಿಗೆ ಬಟ್ಟೆ ಆಯ್ಕೆ ಮಾಡಲು ಯಾರು ತಾನೇ ಇಷ್ಟಪಡುವುದಿಲ್ಲ? ನಮ್ಮ ಸುತ್ತಲಿರುವವರಿಗೆ ನಮ್ಮ ಸ್ವಾತಂತ್ರ್ಯ ಮತ್ತು ನಾವು ಆರಿಸಿಕೊಂಡಿರುವ ಜೀವನಶೈಲಿ ಮಾತ್ರ ಕಾಣುತ್ತದೆ. ಯಾವುದೇ ಜಗಳಗಳಿಲ್ಲದೆ, ನಮಗೆ ಬೇಕಾದಂತೆ ಬದುಕುವ ಸ್ವಾತಂತ್ರ್ಯವಿರುತ್ತದೆ. ಆದರೆ, ಕುಟುಂಬದೊಂದಿಗೆ ಕಳೆಯಬಹುದಾಗಿದ್ದ ಆ ಅಮೂಲ್ಯ ಸಮಯವನ್ನು ನಾವು ಶಾಶ್ವತವಾಗಿ ಕಳೆದುಕೊಳ್ಳುತ್ತಿದ್ದೇವೆ" ಎಂದು ಈಶಾ ತಮ್ಮ ಪೋಸ್ಟ್‌ನಲ್ಲಿ ಭಾವುಕವಾಗಿ ಬರೆದುಕೊಂಡಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ ಏನು?

ಈಶಾ ಅವರ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ, ನೂರಾರು ಬಳಕೆದಾರರು ತಮ್ಮದೇ ಆದ ಅನುಭವಗಳನ್ನು ಹಂಚಿಕೊಳ್ಳಲು ಆರಂಭಿಸಿದ್ದಾರೆ. ವೃತ್ತಿಪರ ಬೆಳವಣಿಗೆಯ ಜೊತೆಗೆ ಬರುವ ಇಂತಹ ವೈಯಕ್ತಿಕ ತ್ಯಾಗಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಯಾರೂ ಮುಕ್ತವಾಗಿ ಮಾತನಾಡುವುದಿಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. "ಕುಟುಂಬ ಮತ್ತು ಸ್ನೇಹಿತರನ್ನು ಬಿಟ್ಟು ಬರುವ ನೋವನ್ನು ಬೇರೆ ಯಾವುದರಿಂದಲೂ ಮರೆಮಾಚಲು ಸಾಧ್ಯವಿಲ್ಲ" ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು, "ಸ್ನೇಹಿತರೊಡನೆ ಇದ್ದಾಗ ಸ್ವಲ್ಪ ಹೊತ್ತು ಈ ನೋವು ಮರೆತುಹೋಗಬಹುದು, ಆದರೆ ಅದು ಸದಾ ಹೃದಯದಲ್ಲಿರುತ್ತದೆ" ಎಂದಿದ್ದಾರೆ.

"ನಮ್ಮ ದೈನಂದಿನ ಜೀವನದಲ್ಲಿ ನಾವು ಅತಿ ಹೆಚ್ಚು ಪ್ರೀತಿಸುವವರೇ ಇಲ್ಲ ಎಂಬ ವಾಸ್ತವ ಅರಿವಾದಾಗ, ಈ ಸ್ವಾತಂತ್ರ್ಯದ ಮೇಲಿನ ವ್ಯಾಮೋಹ ಕಡಿಮೆಯಾಗುತ್ತದೆ" ಎಂದು ಇನ್ನೊಬ್ಬರು ಬರೆದಿದ್ದಾರೆ. ವೃತ್ತಿಜೀವನದಲ್ಲಿ ಬೆಳೆಯುತ್ತಿರುವಾಗ, ಭಾವನಾತ್ಮಕವಾಗಿ ಮನೆಯನ್ನು ಮಿಸ್ ಮಾಡಿಕೊಳ್ಳುವುದು ಜೀವನದ ಅತ್ಯಂತ ವಿಚಿತ್ರ ಹಂತ ಎಂದು ಹಲವರು ಹೇಳಿಕೊಂಡಿದ್ದಾರೆ. "ನಮ್ಮ ಸಂಬಳ ಬೆಳೆಯುತ್ತದೆ, ಅನುಭವ ಬೆಳೆಯುತ್ತದೆ... ಆದರೆ ಕೆಲವೊಮ್ಮೆ ನಮ್ಮವರೊಂದಿಗಿನ ಅಂತರವೂ ಬೆಳೆಯುತ್ತದೆ" ಎಂಬ ಕಾಮೆಂಟ್ ಎಲ್ಲರ ಗಮನ ಸೆಳೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+