ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Year Ender 2022 : ಬೆಂಗಳೂರಲ್ಲಿ ಡ್ರಿಂಕ್ & ಡ್ರೈವ್ ಕೇಸ್‌ನಲ್ಲಿ ದಾಖಲೆ

|
Google Oneindia Kannada News

ಬೆಂಗಳೂರು ನಗರದಲ್ಲಿ ಸಂಚಾರಿ ಪೊಲೀಸರು ಡ್ರಿಂಕ್ & ಡ್ರೈವ್ ಪ್ರಕರಣಗಳ ತಪಾಸಣೆ ನಡೆಸುತ್ತಾರೆ. ಆದೆರೆ ಕಳೆದ ಕೆಲವು ವರ್ಷಗಳಿಗೆ ಹೋಲಿಕೆ ಮಾಡಿದರೆ 2022ರಲ್ಲಿ ಇಲ್ಲಿಯ ತನಕ ದಾಖಲೆಯ ಕೇಸುಗಳು ಪತ್ತೆಯಾಗಿವೆ, ಸರ್ಕಾರ ಬೊಕ್ಕಸವೂ ತುಂಬಿದೆ.

ಈ ವರ್ಷ ಬೆಂಗಳೂರು ನಗರದಲ್ಲಿ ಕುಡಿದು ವಾಹನ ಚಲಾಯಿಸಿದ ಸಿಕ್ಕಿ ಬಿದ್ದವರ ಸಂಖ್ಯೆ ಸುಮಾರು 20 ಸಾವಿರಕ್ಕೂ ಅಧಿಕವಾಗಿದೆ. ಸಂಚಾರಿ ಪೊಲೀಸರು ನೀಡಿರುವ ಅಂಕಿ-ಅಂಶಗಳು ಇದನ್ನು ಹೇಳುತ್ತಿವೆ.

Year end 2022; ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ಅನಾವರಣ Year end 2022; ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ಅನಾವರಣ

ನವೆಂಬರ್ ತಿಂಗಳ ತನಕ ಬೆಂಗಳೂರು ನಗರದಲ್ಲಿ 26,017 ವಾಹನ ಸವಾರರು ಡ್ರಿಂಕ್ & ಡ್ರೈವ್ ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾರೆ. ಇದರಿಂದಾಗಿ ಸರ್ಕಾರಕ್ಕೆ ಸುಮಾರು 26 ಕೋಟಿ ರೂ. ಆದಾಯ ಸಂಗ್ರಹವಾಗಿದೆ.

Year end 2022; ಕಾಶಿ ದರ್ಶನ ಮಾಡಲು ವಿಶೇಷ ರೈಲು ಸೇವೆ Year end 2022; ಕಾಶಿ ದರ್ಶನ ಮಾಡಲು ವಿಶೇಷ ರೈಲು ಸೇವೆ

Year End 2022 Drink And Drive Cases Recorded In Bengaluru City

ನಗರದಲ್ಲಿ ಪ್ರತಿದಿನ ಪೊಲೀಸರು ಡ್ರಿಂಕ್ & ಡ್ರೈವ್ ತಪಾಸಣೆ ನಡೆಸುತ್ತಾರೆ. ಆದರೆ ವಾರಾಂತ್ಯದಲ್ಲಿ ಇನ್ನೂ ಹೆಚ್ಚಿನ ತಪಾಸಣೆ ನಡೆಸಲಾಗುತ್ತದೆ. ಕುಡಿದು ವಾಹನ ಓಡಿಸಬೇಡಿ ಎಂದು ಎಷ್ಟು ಜಾಗೃತಿ ಮೂಡಿಸಿದರೂ ಸಹ ಜನರು ಇನ್ನೂ ಎಚ್ಚೆತ್ತುಕೊಂಡಿಲ್ಲ.

Year end 2022; ಈ ವರ್ಷ ಸಂಚಾರ ಆರಂಭಿಸಿದ ವಂದೇ ಭಾರತ್ ರೈಲುಗಳು Year end 2022; ಈ ವರ್ಷ ಸಂಚಾರ ಆರಂಭಿಸಿದ ವಂದೇ ಭಾರತ್ ರೈಲುಗಳು

ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಕಳೆದ ಎರಡು ವರ್ಷ ಡ್ರಿಂಕ್ & ಡ್ರೈವ್ ತಪಾಸಣೆ ಕಡಿಮೆ ಮಾಡಲಾಗಿತ್ತು. ಆದರೆ ಈ ವರ್ಷ ನಿಯಮಿತವಾಗಿ ತಪಾಸಣೆ ಮಾಡಲಾಗುತ್ತಿದೆ. ಕುಡಿದು ವಾಹನ ಓಡಿಸುವವರ ಮೇಲೆ ದಂಡ ಪ್ರಯೋಗ ಮಾಡಲಾಗುತ್ತಿದೆ.

ಅಂಕಿ ಸಂಖ್ಯೆಗಳು; 2022ರ ನವೆಂಬರ್ ತನಕ ದಾಖಲಾದ ಡ್ರಿಂಕ್‌ & ಡ್ರೈವ್ ಪ್ರಕರಣಗಳ ಸಂಖ್ಯೆ 26,017. 2021ರಲ್ಲಿ 4,144 ಮತ್ತು 2020ರಲ್ಲಿ ಬೆಂಗಳೂರು ನಗರದಲ್ಲಿ 5,343 ಪ್ರಕರಣಗಳನ್ನು ದಾಖಲು ಮಾಡಲಾಗಿತ್ತು ಎಂದು ಪೊಲೀಸರು ನೀಡಿರುವ ಅಂಕಿ-ಅಂಶಗಳು ಹೇಳುತ್ತಿವೆ.

Year End 2022 Drink And Drive Cases Recorded In Bengaluru City

ಕಳೆದ ಎರಡು ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ವರ್ಷ ಇದುವರೆಗೂ ನಗರದಲ್ಲಿ ಕುಡಿದು ವಾಹನ ಓಡಿಸುವವರ ಸಂಖ್ಯೆ ಹೆಚ್ಚಾಗಿದೆ. ಡಿಸೆಂಬರ್ ಕೊನೆಯ ವಾರದಲ್ಲಿ ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಮತ್ತಷ್ಟು ಜನರು ಕುಡಿದು ವಾಹನ ಓಡಿಸಿ ಸಿಕ್ಕಿ ಬೀಳುವುದರಲ್ಲಿ ಯಾವುದೇ ಸಂಶಯವಿಲ್ಲ.

ನಗರದಲ್ಲಿ ನಡೆಯುತ್ತಿರುವ ವಾಹನ ಅಪಘಾತಗಳಿಗೆ ಡ್ರಿಂಕ್ & ಡ್ರೈವ್ ಸಹ ಒಂದು ಕಾರಣ ಎಂದು ಪೊಲೀಸರು ಅಂಕಿ ಸಂಖ್ಯೆಗಳ ಸಹಾಯದಿಂದ ಕಂಡುಕೊಂಡಿದ್ದಾರೆ. ಅಪಘಾತ ಪ್ರಕರಣ ಕಡಿಮೆ ಮಾಡಲು ವಿಶೇಷ ಅಭಿಯಾನ ನಡೆಸಿ ಡ್ರಿಂಕ್ ಅಂಡ್ ಡ್ರೈವ್ ಪ್ರಕರಣ ಪತ್ತೆ ಹಚ್ಚುತ್ತಿದ್ದಾರೆ.

ಕಳೆದ ಒಂದು ವಾರದಲ್ಲಿ ನಗರದಲ್ಲಿ 146 ಡ್ರಿಂಕ್ & ಡ್ರೈವ್ ಪ್ರಕರಣಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಹೊಸ ವರ್ಷದ ಹಿನ್ನಲೆಯಲ್ಲಿ ಜನವರಿ 1ರ ತನಕ ವಿಶೇಷ ಅಭಿಯಾನವನ್ನು ಮುಂದುವರೆಸಲಾಗುತ್ತದೆ ಎಂದು ಸಂಚಾರಿ ಪೊಲೀಸರು ಹೇಳಿದ್ದಾರೆ.

ಬೆಂಗಳೂರು ಸಂಚಾರಿ ಪೊಲೀಸ್ ವಿಭಾಗದ ವಿಶೇಷ ಪೊಲೀಸ್ ಆಯುಕ್ತ ಡಾ. ಎಂ. ಎ. ಸಲೀಂ ಮಾತನಾಡಿ, ಕುಡಿದು ವಾಹನ ಚಾಲನೆ ಮಾಡುವವರಿಂದ ನಗರದಲ್ಲಿ ರಸ್ತೆ ಅಪಘಾತದಿಂದ ಅಮಾಯಕರು ಜೀವ ಕಳೆದುಕೊಳ್ಳುವುದನ್ನು ತಡೆಯುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ತಿಳಿಸಿದ್ದಾರೆ.

ನಗರದಲ್ಲಿ ಹೆಚ್ಚುತ್ತಿರುವ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ನಗರ ಸಂಚಾರಿ ವಿಭಾಗದಿಂದ ರಾತ್ರಿ ವೇಳೆ ಕುಡಿದು ವಾಹನ ಚಲಾಯಿಸುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ. ಜನವರಿ 1ರ ತನಕ ಇದು ಮುಂದುವರೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

ಕೇಂದ್ರ ಸರ್ಕಾರದ ಮಾಹಿತಿ; ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಬಿಡುಗಡೆ ಮಾಡಿರುವ ಮಾಹಿತಿ ಅನ್ವಯ ಡ್ರಿಂಕ್ & ಡ್ರೈವ್ ಕಾರಣದಿಂದ 2018ರಲ್ಲಿ ದೇಶದಲ್ಲಿ ನಡೆದ ರಸ್ತೆ ಅಪಘಾತಗಳು 12,018. 2019ರಲ್ಲಿ 12,256 ಮತ್ತು 2020ರಲ್ಲಿ 8,355 ಆಗಿದೆ.

ಕರ್ನಾಟಕ ರಾಜ್ಯದಲ್ಲಿ ಡ್ರಿಂಕ್ & ಡ್ರೈವ್‌ನಿಂದ 2015ರಲ್ಲಿ 298 ರಸ್ತೆ ಅಪಘಾತಗಳು ನಡೆದಿವೆ. 2016ರಲ್ಲಿ 396 ಪ್ರಕರಣ ಮತ್ತು 2017ರಲ್ಲಿ 169 ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಹೇಳಿದೆ.

ನವದೆಹಲಿ ಬಳಿಕ ಅತಿ ಹೆಚ್ಚು ವಾಹನಗಳು ಇರುವ ನಗರ ಬೆಂಗಳೂರು. ನಗರದಲ್ಲಿ ಸುಮಾರು 80.45 ಲಕ್ಷ ವಾಹನಗಳು ಇವೆ ಎಂದು ಅಂದಾಜಿಸಲಾಗಿದೆ. ಡ್ರಿಂಕ್ & ಡ್ರೈವ್ ತಪಾಸಣೆ ಮಾಡುವಾಗ ಸಿಕ್ಕಿಬಿದ್ದರೆ 10 ಸಾವಿರ ರೂ. ದಂಡ, 6 ತಿಂಗಳು ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

English summary
Year end 2022; Bengaluru city recorded 26,017 drink and drive case till November month. Special drive to track drink and drive will continue till January 1, 2023 said Bengaluru traffic police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X