ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ
ಬೇಸಿಗೆ ಆರಂಭವಾದಾಗ ತಂಪು ಪಾನೀಯಗಳ ಬಳಕೆ ಹೆಚ್ಚಾಗುವುದು ಸಾಮಾನ್ಯ. ಇದೇ ಸಮಯದಲ್ಲಿ ಹಲವರು ಬಿಸಿಲಿನ ತಾಪದಿಂದ ಸ್ವಲ್ಪ ತಂಪಾಗುತ್ತದೆ ಎಂಬ ಕಾರಣದಿಂದ ಬಿಯರ್ ಕುಡಿಯಲು ಹೆಚ್ಚು ಆಸಕ್ತಿಯನ್ನು ತೋರಿಸುತ್ತಾರೆ. ಮದ್ಯಪಾನದ ಪಾನೀಯ ಸೇವನೆಗಳಲ್ಲಿ ಬಿಯರ್ ಪ್ರಮಖ ಸ್ಥಾನದಲ್ಲಿದೆ. ಇದರಲ್ಲಿ ಸಾಮಾನ್ಯವಾಗಿ 4% ರಿಂದ 6% ಆಲ್ಕೊಹಾಲ್ ಅಂಶ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಯುವಕರು ಮಾತ್ರವಲ್ಲದೆ ಕೆಲ ಯುವತಿಯರು ಬಿಯರ್ ಸೇವಿಸುವವರ ಸಂಖ್ಯೆ ಹೆಚ್ಚಾಗಿರುವುದು ಗಮನಾರ್ಹವಾಗಿದೆ.
ತಜ್ಞರ ಪ್ರಕಾರ ಬಿಯರ್ ಮಿತವಾಗಿ ಸೇವಿಸಿದರೆ ಆರೋಗ್ಯಕ್ಕೆ ಕೆಲವು ಪ್ರಯೋಜನಕಾರಿಯಾಗಬಲ್ಲದು ಎಂದು ಹೇಳಲಾಗುತ್ತದೆ. ಆದರೆ ಮಿತಿ ಮೀರಿದ ಪ್ರಮಾಣದಲ್ಲಿ ಕುಡಿಯುವುದರಿಂದ ದೇಹದ ಅಂಗಾಂಗಳ ಮೇಲೆ ಗಂಭೀರ ಪರಿಣಾಮ ಬೀರುತ್ತವೆ ಎಂದು ವೈದ್ಯರು ಎಚ್ಚರಿಕೆಯನ್ನು ನೀಡುತ್ತಾರೆ.

ಮೊದಲೆನೆಯದಾಗಿ ಮದ್ಯ ಸೇವನೆ ಆರೋಗ್ಯಕ್ಕೆ ಹಾನಿಕಾರಕ, ಇನ್ನು ಈ ಮದ್ಯದ ಸೇವನೆಯಿಂದ ಆರೋಗ್ಯದಲ್ಲಿ ಲಿವರ್ ಸಮಸ್ಯೆ, ಕಿಡ್ನಿ ಸಮಸ್ಯೆ, ಹೃದಯ ಸಂಬಂಧಿಸಿದ ಕಾಯಿಲೆ, ಮತ್ತು ಪ್ಯಾಟ್ ಲಿವರ್ ಈ ತರಹದ ಮುಂತಾದ ಗಂಭೀರ ಕಾಯಿಲೆಗಳು ಉಂಟಾಗಬಹುದು. ವಿಶೇಷವಾಗಿ ಕ್ಯಾನ್ಸರ್ , ಗಂಟಲು ಕ್ಯಾನ್ಸರ್ ಬರುವ ಅವಕಾಶವಿದೆ ಎಂದು ತಜ್ಞರು ಹೇಳುತ್ತಾರೆ. ಲಿವರ್ ದೇಹದ ಒಂದು ಪ್ರಮುಖ ಅಂಗಾಂಗ ವಾಗಿರುವುದರಿಂದ ಇದರ ಹಾನಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಇದರಿಂದ ಮೂತ್ರಪಿಂಡ ಮೇಲೊ ಒತ್ತಡ ಹೆಚ್ಚಾಗಿ ಮೂತ್ರಪಿಂಡದ ಕಾಯಿಲೆಗಳು ಹೆಚ್ಚಾಗಬಹುದು ಎಂದು ಹೇಳುತ್ತಾರೆ. ದೇಹವು ದ್ರವ ಸಮತೋಲನದಲ್ಲಿ ವ್ಯತ್ಯಾಸ ಉಂಟಾಗಿ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಬಿಯರ್ ನಲ್ಲಿ ಕ್ಯಾಲರಿಗಳು ಹೆಚ್ಚು ಇರುವುದರಿಂದ ತೂಕ ಹೆಚ್ಚಾಗುವ ಅಪಾಯ ಕೂಡ ಇದೆ.
ಬಿಯರ್ ಸೇವನೆಯಿಂದ ಅಥವಾ ಅತಿಯಾದ ಮದ್ಯ ಸೇವನೆಯಿಂದ ನಿದ್ರೆಯ ಸಮಸ್ಯೆಗಳು ಮತ್ತ ಮಾನಸಿಕ ಒತ್ತಡ ಕೂಡ ಉಂಟಾಗಬಹುದು. ಮೊದಲಿಗೆ ನಿದ್ರೆ ಬಂದಂತೆ ಕಾಣಿಸಿದರೂ ನಂತರ ನಿದ್ರಾಭಂಗವಾಗಿ ಉಂಟಾಗಿ ದೇಹಕ್ಕೆ ಸರಿಯಾದ ರೀತಿಯಲ್ಲಿ ವಿಶ್ರಾಂತಿ ಸಿಗುವುದಿಲ್ಲ ಇದರ ಪರಿಣಾಮ ಮುಂದಿನ ದಿನ ದಣಿವು ಮತ್ತು ಒತ್ತಡವು ಹೆಚ್ಚಾಗುವ ಸಾಧ್ಯತೆಗಳಿರುತ್ತದೆ.
ಮೆದುಳಿನ ಮೇಲೆ ಪರಿಣಾಮ
ಮದ್ಯದ ಅತಿಯಾದ ಸೇವನೆಯಿಂದ ಮೆದುಳಿನ ಕರ್ಯಕ್ಷಮತೆಯ ಮೇಲೊ ಪರಿಣಾಮ ಬೀರುತ್ತದೆ. ಸ್ಮರಣ ಶಕ್ತಿ ಕುಸಿತದಿಂದ ಸರಿಯಾಗಿ ನಿರ್ಧಾರ ತೆಗುದುಕೂಳ್ಳಲು ಸಾಧ್ಯವಾಗುವುದಿಲ್ಲ ಹಾಗೂ ಮಾನಸಿಕ ಸಮಸ್ಯೆಗಳ ಕಾಣಿಸಿಕೊಳ್ಳವ ಸಾಧ್ಯತೆಗಳಿರುತ್ತವೆ ಎಂದು ತಜ್ಞರ ಹೇಳುತ್ತಾರೆ.
ಜೀರ್ಣಕ್ರಿಯೆ ಸಮಸ್ಯೆ
ಬೀರ್ ಹೆಚ್ಚಾಗಿ ಕುಡಿಯುವುದರಿಂದ ಜೀರ್ಣಕ್ರಿಯೆಯ ಮೇಲೂ ಪರಿಣಾಮ ಬೀಳಬಹುದು. ಅಜೀರ್ಣ, ವಾಂತಿ, ವಿಕಾರ, ಹೊಟ್ಟೆ ಉಬ್ಬರ ಮುಂತಾದ ಸಮಸ್ಯೆಗಳು ಎದುರಾಗಬಹುದು.
ಮಿತಿಯೊಳಗಿನ ಸೇವನೆ
ತಜ್ಞರ ಪ್ರಕಾರ, ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಮದ್ಯವನ್ನು ಮಿತಿಯೊಳಗೆ ಮಾತ್ರ ಸೇವಿಸುವುದು ಮುಖ್ಯ. ಸಾಮಾನ್ಯವಾಗಿ ಪುರುಷರು ದಿನಕ್ಕೆ ಒಂದು ಅಥವಾ ಎರಡು ಗ್ಲಾಸ್‌ಗಳಿಗಿಂತ ಹೆಚ್ಚು ಕುಡಿಯಬಾರದು ಎಂದು ವೈದ್ಯರು ಸಲಹೆ ನೀಡುತ್ತಾರೆ. ಆರೋಗ್ಯ ಸಮಸ್ಯೆಗಳಿರುವವರು ಮದ್ಯಪಾನವನ್ನು ಸಂಪೂರ್ಣವಾಗಿ ದೂರವಿರುವುದು ಉತ್ತಮ ಎಂದು ತಜ್ಞರು ಸೂಚಿಸುತ್ತಾರೆ.
ಒಟ್ಟಿನಲ್ಲಿ ಬೇಸಿಗೆಯಲ್ಲಿ ತಂಪಿಗಾಗಿ ಬಿಯರ್ ಕುಡಿಯುವುದು ಕೆಲವರಿಗೆ ಆಕರ್ಷಕವಾಗಿರಬಹುದು. ಆದರೆ ಮಿತಿಮೀರಿದ ಮದ್ಯಪಾನ ಆರೋಗ್ಯಕ್ಕೆ ಗಂಭೀರ ಸಮಸ್ಯೆಗಳನ್ನುಂಟುಮಾಡಬಹುದು ಎಂಬುದನ್ನು ಮರೆಯಬಾರದು.
-
Vastu Tips for Kitchen: ವಾಸ್ತು ಪ್ರಕಾರ ಅಡುಗೆ ಮನೆಯಲ್ಲಿ ಇವು ಇರಬಾರದು.. ಒಮ್ಮೆ ನೋಡಿ! -
Summer Walking: ಬೇಸಿಗೆಯಲ್ಲಿ ವಾಕಿಂಗ್ ಮಾಡುವವರು ಈ ನಿಯಮ ತಪ್ಪದೇ ಪಾಲಿಸಿ.. -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ












Click it and Unblock the Notifications