KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ

ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಬಯಸಿರುವ ಅಭ್ಯರ್ಥಿಗಳ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ 2025ಕ್ಕೆ (NEET PG 2025) ಸಂಬಂಧಿಸಿದಂತೆ ವಿವಿಧ ಸುತ್ತಿನ ಸೀಟು ಹಂಚಿಕೆ ಬಳಿಕವು ನೂರಾರು ಸೀಟುಗಳು ಹಂಚಿಕೆ ಅಗದೇ ಬಾಕಿ ಉಳಿದಿವೆ. ಇವುಗಳ ಹಂಚಿಕೆಗೆ ಮತ್ತೊಂದು ಅವಕಾಶ ನೀಡಲಾಗಿದೆ. ಜೊತೆಗೆ ಈಗಾಗಲೇ ಸೀಟು ಹಂಚಿಕೆ ಆದ ಅಭ್ಯರ್ಥಿಗಳು ನಾಳೆ ಮಾರ್ಚ್ 12ರೊಳಗೆ ಕಾಲೇಜಿಗೆ ವರದಿ ಮಾಡಿಕೊಳ್ಳುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)ದ ಅಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅವರು ತಿಳಿಸಿದ್ದಾರೆ.

ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಸಂಬಂಧಿಸಿದಂತೆ ಸ್ಟ್ರೇ ವೇಕೆನ್ಸಿ ಸುತ್ತಿನ ಮುಂದುವರಿದ ಭಾಗವಾಗಿ ಆನ್‌ಲೈನ್ ಸೀಟು ಹಂಚಿಕೆಗೆ ಮತ್ತೊಂದು ಅವಕಾಶ ನೀಡಲಾಗಿದೆ. ಇದುವರೆಗೂ ಯಾವುದೇ ಸೀಟು ಹಂಚಿಕೆಯಾಗದವರು ಇದರ ಉಪಯೋಗ ಪಡೆಯಬಹುದು. ಒಟ್ಟು 783 ಸ್ನಾತಕೋತ್ತರ ವೈದ್ಯಕೀಯ ಸೀಟು ಹಂಚಿಕೆಯಾಗದೆ ಉಳಿದಿವೆ ಎಂದು ಅವರು ತಿಳಿಸಿದ್ದಾರೆ.

KEA NEET PG 2025

ಬಾಕಿ ಉಳಿದ ಸೀಟುಗಳ ಹಂಚಿಕೆ ಮಾಡಲು ಮತ್ತೊಂದು ಅವಕಾಶ ನೀಡಲಾಗಿದೆ. ಅದರಲ್ಲಿ ಅರ್ಹ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು. ಯಾವ ಕಾಲೇಜಿನಲ್ಲಿ, ಯಾವ ಕೋರ್ಸ್ ನ ಸೀಟು ಉಳಿದಿವೆ ಹಾಗೂ ಅದರ ಶುಲ್ಕ ಎಷ್ಟು ಎನ್ನುವುದನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅಧಿಕೃತ ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗಿದೆ ಎಂದರು.

ಕೋರ್ಸ್ ಶುಲ್ಕ ಪಾವತಿಸಿ, ದಾಖಲೆ ಸಮೇತ ಆಯ್ಕೆ ದಾಖಲಿಸಿ

ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಬಯಸಿದ ಅಭ್ಯರ್ಥಿಗಳು ತಮಗೆ ಯಾವ ಕೋರ್ಸ್ ಸೇರಲು ಇಷ್ಟವಿದೆಯೋ ಅದರ ಪೂರ್ಣ ಶುಲ್ಕವನ್ನು ಡಿ.ಡಿ ಅಥವಾ ಚೆಕ್ ಸಮೇತ ಮಾರ್ಚ್ 11ರಂದು ಮಧ್ಯಾಹ್ನ 3 ಗಂಟೆಯೊಳಗೆ ಮಲ್ಲೇಶ್ವರದ ಕೆಇಎ ಕಚೇರಿಗೆ ಬರಬೇಕು. ಡಿ.ಡಿ ಅಥವಾ ಚೆಕ್ ಅನ್ನು ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಮಲ್ಲೇಶ್ವರ, ಬೆಂಗಳೂರು- ಇವರ ಹೆಸರಿನಲ್ಲಿ ಪಡೆಯಬೇಕು. ಡಿ.ಡಿ ಜತೆಗೆ ಎಲ್ಲ ಮೂಲ ದಾಖಲೆಗಳನ್ನು ಸಲ್ಲಿಸಿದವರಿಗೆ ಮಾತ್ರ ಮಾ.11ರಂದು ಮಧ್ಯಾಹ್ನ 12.30ರಿಂದ ಸಂಜೆ 4 ಗಂಟೆವರೆಗೆ ಆಪ್ಷನ್ಸ್ (ಆಯ್ಕೆ) ದಾಖಲಿಸಲು ಅವಕಾಶ ನೀಡಲಾಗಿದೆ.

ಕಾಲೇಜು ವರದಿ ಮಾಡಿಕೊಳ್ಳುವುದು ಕಡ್ಡಾಯ

ಇನ್ನೂ ಮಾರ್ಚ್ 11ರಂದು ಸಂಜೆ 7 ಗಂಟೆ ನಂತರ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುತ್ತದೆ. ಸೀಟು ಪಡೆದವರು ಮಾರ್ಚ್ 12ರಂದು ಸಂಜೆ 5.30ರೊಳಗೆ ಸಂಬಂಧಪಟ್ಟ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳುವುದು ಕಡ್ಡಾಯವೆಂದು ಆಡಳಿತಾಧಿಕಾರಿ ಗದ್ಯಾಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+