Get Updates
Get notified of breaking news, exclusive insights, and must-see stories!

ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಪ್ರವೇಶ ದ್ವಾರಗಳು ಮತ್ತು ಅವುಗಳ ದಿಕ್ಕುಗಳು ಮನೆಗೆ ಬರುವ ಸಮೃದ್ದಿ, ಶಾಂತಿ, ನೆಮ್ಮದಿ ಹಾಗೂ ಶಕ್ತಿಯ ಮೇಲೆ ಮಹತ್ವದ ಪ್ರಭಾವ ಬೀರುತ್ತವೆ ಎಂದು ಹೇಳಲಾಗುತ್ತದೆ. ಮನೆಯ ಮುಖ್ಯ ಗೇಟು ಮತ್ತು ಮುಖ್ಯ ದ್ವಾರವು ಯಾವ ದಿಕ್ಕಿನಲ್ಲಿ ಇರುತ್ತದೆ ಎಂಬುದುದರ ಮೇಲೆ ವಾಸ್ತು ಶಾಸ್ತ್ರದ ಫಲಗಳು ಬದಲಾಗುತ್ತದೆ. ಕೆಲವು ಮನೆಗಳಲ್ಲಿ ಕಾಂಪಾಂಡ್ ಗೇಟು ದಕ್ಷಿಣ ದಿಕ್ಕಿನಲ್ಲೆ ಇರುತ್ತದೆ ಮತ್ತು ಉತ್ತರ ದಿಕ್ಕಿನಲ್ಲಿ ಇರುತ್ತದೆ. ಇಂತಹ ವ್ಯವಸ್ಥೆ ಇದ್ದಾಗ ಯಾವ ನಿಯಮಗಳನ್ನು ಪಾಲಿಸಬೇಕು ಎಂಬುದನ್ನು ವಾಸ್ತು ತಜ್ಞರು ವಿವರಿಸುತ್ತಾರೆ.

ವಾಸ್ತು ಪ್ರಕಾರ ದಕ್ಷಿಣ ದಿಕ್ಕಿನಲ್ಲಿ ಗೇಟ್ ಇರಬಹುದು ಆದರೆ ಅದು ಸರಿಯಾದ ಸ್ಥಾನದಲ್ಲಿ ಇರಬೇಕು ಎಂಬುದು ಅತಿ ಮುಖ್ಯವಾಗಿದೆ. ದಕ್ಷಿಣ ದಿಕ್ಕಿನಲ್ಲಿ ಇರುವ ಗೇಟ್ ಆಗ್ನೇಯ ಭಾಗದತ್ತ ಇದ್ದರೆ ಅದನ್ನು ಶುಭಕರ ಎಂದು ಪರಿಗಣಿಸಲಾಗುತ್ತದೆ. ಆದರೆ ಅದೇ ಗೇಟ್ ನೈರುತ್ಯ ಭಾಗದಲ್ಲಿ ಇದ್ದರೆ ಅದನ್ನು ಅಶುಭಕರ ಎಂದು ಹೇಳಲಾಗತ್ತದೆ. ನೈರುತ್ಯ ಭಾದಲ್ಲಿ ದ್ವಾರಗಳು ಇದ್ದರೆ ಇದರಿಂದ ಆರ್ಥಿಕ ತೊಂದರೆಗಳು, ಮನಶಾಂತಿ ಕೊರತೆ, ಕಲಹ ಮತ್ತು ಅನಾವಶ್ಯಕವಾದ ಸಮಸ್ಯೆಗಳು ನಮಗೆ ಎದುರಾಗಬಹುದು ಎಂದು ತಜ್ಞರು ಹೇಳುತ್ತಾರೆ.

South Gate Vastu

ಇನ್ನೊಂದಡೆ ಮನೆಯ ಮುಖ್ಯ ದ್ವಾರ ಉತ್ತರ ದಿಕ್ಕಿನಲ್ಲಿ ಇದ್ದರೆ ಅದು ಸಾಮಾನ್ಯವಾಗಿ ಅದನ್ನು ಶುಭಕರ ಎಂದು ವಾಸ್ತು ಹೇಳಲಾಗುತ್ತದೆ. ಉತ್ತರ ದಿಕ್ಕನ್ನು ಕುಬೇರನ ದಿಕ್ಕು ಎಂದು ಹೇಳಲಾಗುತ್ತದೆ. ಸಂಪತ್ತು ಮತ್ತು ಅಭಿವೃದ್ದಿಯನ್ನು ಸೂಚಿಸುವ ದಿಕ್ಕು ಇದಾಗಿದೆ. ಆದ್ದರಿಂದ ಮನೆಯ ಮುಖ್ಯ ದ್ವಾರವು ಮನೆಯ ಮುಖ್ಯ ದ್ವಾರವು ಉತ್ತರ ಗೋಡೆಯಲ್ಲಿದ್ದು, ಈಶಾನ್ಯ ಭಾಗದತ್ತ ಸ್ವಲ್ಪ ತಿರುಗಿ ಇದ್ದರೆ ಕುಟುಂಬದ ಆರ್ಥಿಕ ಬೆಳವಣಿಗೆಗೆ ಸಹಾಯವಾಗುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ.

ಉತ್ತರದ ಮುಖ್ಯ ದ್ವಾರ

ಒಂದು ಪ್ರಮುಖ ನಿಯಮವೆನೆಂದರೆ ದಕ್ಷಿಣದ ಗೇಟು ಮತ್ತು ಉತ್ತರದ ಮುಖ್ಯ ದ್ವಾರ ನೇರವಾಗಿ ಒಂದಕ್ಕೊಂದು ಎದುರುಬರುವಂತೆ ಇರಬಾರದು. ಗೇಟಿನ ಒಳಗಡೆ ನೋಡಿದಾಗ ಮನೆಯ ಮುಖ್ಯ ದ್ವಾರ ನೇರವಾಗ ಕಾಣಿಸುವುದು ವಾಸ್ತು ಪ್ರಕಾರ ಸೂಕ್ತವಲ್ಲ ಎಂದು ಹೇಳಲಾಗುತ್ತದೆ. ಗೇಟಿನಿಂದ ಒಳಗೆ ಪ್ರವೇಶಿಸಿದ ನಂತರ ಸ್ವಲ್ಪ ಖಾಲಿ ಜಾಗ ಇರಬೇಕು. ಮನೆಯೊಳಗೆ ಹೋಗುವ ದಾರಿ ನೇರವಾಗಿ ಸ್ವಲ್ಪ ತಿರುಗಿ ಅಥವಾ ಮನೆಯ ಸುತ್ತು ಹೋಗುವಂತೆ ಇದ್ದರೆ ಉತ್ತಮ ಎಂದು ವಾಸ್ತು ತಜ್ಞರು ವಿವರಿಸುತ್ತಾರೆ.

ಕಾಂಪೌಂಡ್ ಗೋಡೆಗಳ ಎತ್ತರಕ್ಕೂ ವಾಸ್ತುವಿನಲ್ಲಿ ಮಹತ್ವ ಇದೆ. ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನ ಗೋಡೆಗಳು ಸ್ವಲ್ಪ ಹೆಚ್ಚು ಎತ್ತರವಾಗಿರಬೇಕು ಮತ್ತು ಗಟ್ಟಿಯಾಗಿರಬೇಕು. ಉತ್ತರ ಮತ್ತು ಪೂರ್ವ ದಿಕ್ಕಿನ ಗೋಡೆಗಳು ಅದರಿಗಿಂತ ಸ್ವಲ್ಪ ಕಡಿಮೆ ಎತ್ತರದಲ್ಲಿದ್ದರೆ ಶಕ್ತಿಯ ಸಮತೋಲನ ಕಾಪಾಡಿಕೊಳ್ಳಬಹುದು ಎಂದು ಹೇಳಲಾಗುತ್ತದೆ.

ಮನೆಯ ಸುತ್ತಲಿನ ಖಾಲಿ ಜಾಗದ ವ್ಯವಸ್ಥೆಯೂ ವಾಸ್ತು ಪ್ರಕಾರ ಮುಖ್ಯವಾಗಿದೆ. ದಕ್ಷಿಣ ಭಾಗದಲ್ಲಿ ಖಾಲಿ ಜಾಗ ಕಡಿಮೆ ಇದ್ದು, ಉತ್ತರ ಮತ್ತು ಪೂರ್ವ ಭಾಗಗಳಲ್ಲಿ ಹೆಚ್ಚು ತೆರವಾದ ಜಾಗ ಇರಬೇಕು. ಈ ರೀತಿ ಇದ್ದರೆ ಮನೆಗೆ ಒಳಬರುವ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಎಂದು ವಾಸ್ತು ನಂಬಿಕೆ ಹೇಳುತ್ತದೆ.

ಇದಲ್ಲದೆ ದಕ್ಷಿಣ ಗೇಟಿನಿಂದ ಉತ್ತರ ದಿಕ್ಕಿನ ಮನೆಯ ಮುಖ್ಯ ದ್ವಾರದ ಕಡೆಗೆ ಹೋಗುವಾಗ ಸ್ವಲ್ಪ ಮೆಟ್ಟಿಲು ಅಥವಾ ಎತ್ತರದ ಮಾರ್ಗ ಇರಿಸುವುದು ಉತ್ತಮ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಇದರಿಂದ ಮನೆಗೆ ಪ್ರವೇಶಿಸುವ ಶಕ್ತಿ ಸಮತೋಲನವಾಗಿರುತ್ತದೆ ಎಂಬ ನಂಬಿಕೆ ಇದೆ.

ಬಣ್ಣಗಳ ಆಯ್ಕೆ

ಬಣ್ಣಗಳ ಆಯ್ಕೆಯೂ ವಾಸ್ತು ಪ್ರಕಾರ ಮಹತ್ವದ್ದಾಗಿದೆ. ದಕ್ಷಿಣ ದಿಕ್ಕಿನ ಗೇಟಿಗೆ ಕೆಂಪು, ಮುದುರು ಬ್ರೌನ್ ಅಥವಾ ಮಣ್ಣಿನ ಬಣ್ಣಗಳನ್ನು ಬಳಸುವುದು ಉತ್ತಮ. ಇವು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ ಎಂದು ನಂಬಲಾಗಿದೆ. ಆದರೆ ಕಪ್ಪು ಅಥವಾ ಗಾಢ ನೀಲಿ ಬಣ್ಣಗಳನ್ನು ಬಳಸುವುದನ್ನು ತಪ್ಪಿಸುವುದು ಒಳ್ಳೆಯದು.

ವಾಸ್ತು ದೋಷಗಳ ನಂಬಿಕೆ

ಗೇಟಿನ ಮೇಲ್ಬಾದಲ್ಲಿ ಅಥವಾ ಪಕ್ಕದಲ್ಲಿ ಸ್ವಸ್ತಿಕ್ ಅಥವಾ ಓಂ ಚಿಹ್ನೆಯನ್ನು ಅಳವಡಿಸುವುದು ಶುಭಕರವೆಂದು ಪರಿಗಣೆಸಲಾಗುತ್ತದೆ. ಕೆಲವರು ಪಂಚಮುಖದ ಆಂಜನೇಯ ಸ್ವಾಮಿಯ ಚಿತ್ರವನ್ನು ಇಡುತ್ತಾರೆ. ಇಂತಹ ಧಾರ್ಮಿಕ ಚಿಹ್ನೆಗಳು ಮತ್ತು ದಿಕ್ಕುಗಳಿಗೆ ಸಂಬಂಧಿಸಿದ ವಾಸ್ತು ದೋಷಗಳನ್ನು ಕಡಿಮೆ ಮಾಡುತ್ತವೆ ಎಂಬ ನಂಬಿಕೆ ಇದೆ.

ಒಟ್ಟಿನಲ್ಲಿ ದಕ್ಷಿಣ ಗೇಟ್ ಮತ್ತು ಉತ್ತರದ ಮುಖ್ಯದ್ವಾರ ಇರುವ ಮನೆಗಳಲ್ಲಿ ಸರಿಯಾದ ವಾಸ್ತು ನಿಯಮಗಳನ್ನು ಪಾಲಿಸಿದರೆ ಮನೆಗೆ ಶಾಂತಿ, ಸಮೃದ್ದಿ ಬರಲು ಸಹಕಾರಿಯಾಗುತ್ತದೆ ಎಂದು ವಾಸ್ತು ತಜ್ಞರು ಅಭಿಪ್ರಾಯಪಡುತ್ತಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+