ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು
ನವದೆಹಲಿ: ಕಳೆದ 13 ವರ್ಷಗಳಿಂದ ಒಂದು ಭೀಕರ ಅಪಘಾತದಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ 31 ವರ್ಷದ ವ್ಯಕ್ತಿಯೊಬ್ಬರಿಗೆ ಅವರ ಪೋಷಕರ ಮನವಿ ಆಧಾರದಲ್ಲಿ ಸುಪ್ರೀಂ ಕೋರ್ಟ್ ದಯಾಮರಣಕ್ಕೆ ಅವಕಾಶ ನೀಡಿ ಆದೇಶಿಸಿದೆ. ಈ ಮೂಲಕ ದೇಶದಲ್ಲಿ ಮಹತ್ವದ ಆದೇಶವೊಂದು ಹೊರ ಬಿದ್ದಂತಾಗಿದೆ.
ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಹರೀಶ್ ರಾಣಾ ಎಂಬತನಿಗೆ ದಯಾಮರಣ ನೀಡಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಹರೀಶ್ ರಾಣಾ ಅವರು 2013 ರಲ್ಲಿ ಪೇಯಿಂಗ್ ಗೆಸ್ಟ್ ವಸತಿ ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಅಲ್ಲಿಂದ ಅವರು ರಾಣಾಗೆ ತುರ್ತು ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ಕೊಡಲಾಗುತ್ತಿತ್ತು. ಅಲ್ಲಿಂದ ಅವರ ಉಸಿರಾಟಕ್ಕಾಗಿ ಟ್ರಾಕಿಯೊಸ್ಟೊಮಿ ಟ್ಯೂಬ್ ಮತ್ತು ಆಹಾರಕ್ಕಾಗಿ ಗ್ಯಾಸ್ಟ್ರೋಜೆಜುನೊಸ್ಟೊಮಿ ಟ್ಯೂಬ್ ನೀಡಲಾಗುತ್ತಾ ಬರಲಾಗಿತ್ತು. 13 ವರ್ಷಗಳಿಂದ ಹಾಸಿಗೆ ಹಿಡಿದು ಪರದಾಡುತ್ತಿದ್ದರು. ಅವರ ಪೋಷಕರು ಮನದೊಳಗೆ ನಿತ್ಯವು ನರಕಯಾತನೆ ಅನುಭವಿಸುತ್ತಿದ್ದರು.

ಕೊನೆಗೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ ಪೋಷಕರು ಮಗನ ಪರಿಪಾಟಲು ನೋಡಲಾಗುತ್ತಿಲ್ಲ. ಆತನ ಸ್ಥಿತಿ ಬದಲಾಗದಂತಿದೆ. ಆತನಿಗೆ ಗೌರವಯುತ ಸಾವಿಗೆ ಅನುಮತಿ ನೀಡುವಂತೆ ರಾಣಾ ಪೋಷಕರು ಕೇಳಿಕೊಂಡಿದ್ದರು. ಅವರ ಮನವಿಗೆ ಸ್ಪಂದಿಸಿದ ಸುಪ್ರೀಂ ಕೋರ್ಟ್ ಹಾಸಿಯಲ್ಲಿದ್ದ ರಾಣಾಗೆ ನೀಡುತ್ತಿದ್ದ ಐಸಿಯು ಚಿಕಿತ್ಸೆ (ಜೀವ ರಕ್ಷಕ ಬೆಂಬಲ) ನಿಲ್ಲಿಸಲು ಅನುಮತಿ ನೀಡಿತು. ಈ ಮೂಲಕ ದಶಕದಿಂದ ಸಾವು ಬದುಕಿನ ನಡುವಿವ ರಾಣಾ ಹೋರಾಟ ಅಂತ್ಯವಾಗಿದೆ.
ವೈದ್ಯಕೀಯ ಮಂಡಳಿಗಳ ಅಭಿಪ್ರಾಯ ಅಧ್ಯಯನ
ಇದಕ್ಕೂ ಮೊದಲು ವಿಚಾರಣೆ ಹಂತದಲ್ಲಿ ಸುಪ್ರೀಂ ಕೋರ್ಟ್ ರಾಣಾಗೆ ನೀಡಿರುವ ಆರೋಗ್ಯ ಕುರಿತು ಎರಡು ವೈದ್ಯಕೀಯ ಮಂಡಳಿಗಳ ನೀಡಿದ್ದ ಅಭಿಪ್ರಾಯಗಳನ್ನು ಅಧ್ಯಯನ ಮಾಡಿತ್ತು. ಹರೀಶ್ ಆರೋಗ್ಯ ಚೇತರಿಕೆ ಅನುಮಾನ ಎಂದು ವೈದ್ಯರು ತಿಳಿಸಿದ್ದರು. ವಿಚಾರಣೆ ಬಳಿಕ ತೀರ್ಪನ್ನು 2026ರ ಜನವರಿ 15ರಂದು ಕಾಯ್ದಿರಿಸಿದ್ದರು. ಬಳಿಕ ಈ ದಯಾಮರಣಕ್ಕೆ ಅವಕಾಶ ನೀಡಿದೆ. ಭಾರತ ಸರ್ಕಾರ ಇಂತಹ ಪ್ರಕರಣಗಳಲ್ಲಿ ದಯಾಮರಣ ಕುರಿತು ಕಾನೂನನ್ನು ಜಾರಿ ತರಬೇಕೆಂದು ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಅವರಿದ್ದ ವಿಭಾಗೀಯ ಪೀಠವು ಅಭಿಪ್ರಾಯ ಹೊರ ಹಾಕಿತು.
ದೇವರು ಒಪ್ಪಿಗೆ ಕೇಳದೇ ಜೀವ ನೀಡುವನು
ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಅವರ ಪೀಠವು ನೀಡಿದ ಆದೇಶದಲ್ಲಿ, "ದೇವರು ಮನುಷ್ಯನಿಗೆ ಜೀವನವನ್ನು ನೀಡುವಾಗ ಅವನ ಒಪ್ಪಿಗೆ ಕೇಳುವುದಿಲ್ಲ, ಅದನ್ನು ನಾವು ಸ್ವೀಕರಿಸಲೇಬೇಕು" ಎಂಬ ಅಮೆರಿಕದ ಧರ್ಮಗುರು ಹೆನ್ರಿ ವಾರ್ಡ್ ಬೀಚರ್ ಅವರ ಮಾತುಗಳನ್ನು ಉಲ್ಲೇಖಿಸಲಾಗಿದೆ.
ವ್ಯಕ್ತಿಯೊಬ್ಬರು ಸಾಯಲು ಬಯಸುವ ಹಕ್ಕಿನ ಬಗ್ಗೆ ತೀರ್ಮಾನಿಸುವಾಗ ಈ ಮಾತುಗಳು ಬಹಳ ಪ್ರಾಮುಖ್ಯತೆ ಪಡೆಯುತ್ತದೆ. ಶೇಕ್ಸ್‌ಪಿಯರ್‌ನ ಹ್ಯಾಮ್ಲೆಟ್ ನಾಟಕದ ಪ್ರಮುಖ ಸಾಲುಗಳಾದ "ಇರಬೇಕೋ ಅಥವಾ ಬೇಡವೋ" ಎಂಬ ನುಡಿಗಟ್ಟು ಸ್ಮರಿಸಿದ ನ್ಯಾಯಮೂರ್ತಿಗಳು ಒಬ್ಬ ವ್ಯಕ್ತಿಯ "ಸಾಯುವ ಹಕ್ಕನ್ನು" ಕಾನೂನುಬದ್ಧವಾಗಿ ಹೇಗೆ ನೋಡಲಾಗುತ್ತದೆ ಎಂಬುದನ್ನು ಅವರು ವಿವರಿಸಿದ್ದಾರೆ.
ಜೀವರಕ್ಷಕ ಸಾಧನಗಳನ್ನು ಅಥವಾ ವೆಂಟಿಲೇಟರ್ ವ್ಯವಸ್ಥೆ ಹಿಂತೆಗೆದುಕೊಳ್ಳುವುದರ ಮೇಲೆ ದಯಾಮರಣ ನಿಂತಿರಬೇಕು. ರೋಗಿಗೆ ನೀಡುತ್ತಿರುವ ವೈದ್ಯಕೀಯ ಚಿಕಿತ್ಸೆಯಿಂದ ಯಾವುದೇ ಪ್ರಯೋಜನ ಇಲ್ಲವಾಗಿರಬೇಕು. ರೋಗಿಯ ಆರೋಗ್ಯದಲ್ಲಿ ಸುಧಾರಣೆ ಆಗದಂತಹ ಸ್ಥಿತಿ ಇರಬೇಕು. ಜೀವರಕ್ಷಕ ಸಾಧನ ತೆಗೆಯುವುದು ರೋಗಿಯ ಹಿತದೃಷ್ಟಿಯಿಂದ ಅತ್ಯಂತ ಸೂಕ್ತ ಹಾಗೂ ಗೌರವಯುತ ನಿರ್ಧಾರ ಆಗಿರಬೇಕು. ಅಂದಾಗ ಕಾನೂನುಬದ್ಧವಾಗಿ ನೀರ್ಣಯಿಸಲು ಸಾಧ್ಯವಾಗಿದೆ. 13 ವರ್ಷಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ರಾಣಾ ಅನುಭವಿಸುತ್ತಿದ್ದ ನೋವು ಅಂತ್ಯಗೊಳಿಸುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ದಯಾಮರಣಕ್ಕೆ ಅನುಮತಿ ನೀಡಿದ್ದು, ತೀರ್ಪಿನಲ್ಲಿ ಸ್ಪಷ್ಟವಾಗಿ ತಿಳಿಸಿದೆ.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ












Click it and Unblock the Notifications