ಬಿಜೆಪಿ ಬೆಂಬಲಿಗರಿಗೆ SIR ಫಾರ್ಮ್‌ ವಿತರಿಸದಂತೆ ಪ್ಲ್ಯಾನ್‌?: ಕಾರ್ಯಕರ್ತರು, ಏಜೆಂಟ್‌ಗಳಿಗೆ ಬಸವರಾಜ ಬೊಮ್ಮಾಯಿ ಕರೆ

ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ (ಜೂನ್ 30) ಕೇಂದ್ರ ಚುನಾವಣಾ ಆಯೋಗವು (ECI) ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (SIR) ಆರಂಭಿಸಿದೆ. ಈ ಪರಿಷ್ಕರಣೆಯನ್ನು ಮೊದಲಿನಿಂದ ಕಾಂಗ್ರೆಸ್ ನಾಯಕರು ವಿರೋಧಿಸುತ್ತಲೇ ಬಂದಿದ್ದಾರೆ. ಇದೀಗ ಬಿಜೆಪಿ ಬೆಂಬಲಿಗರಿಗೆ SIR ಫಾರ್ಮ್‌ 6 ಸಿಗದಂತೆ ಮಾಡುವ ಸಾಧ್ಯತೆ ಇದೆ. ಅಲ್ಲದೇ ಸರ್ಕಾರ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದೆ ಎಂದು ಮಾಜಿ ಸಿಎಂ ಮತ್ತು ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಅವರು ಸರ್ಕಾರದ ಮೇಲೆ ಗಂಭೀರ ಆರೋಪ ಮಾಡಿದರು.

ಎಸ್‌ ಆರ್ ಐ ಕುರಿತು ಮಂಗಳವಾರ ಪ್ರತಿಕ್ರಿಯಿಸಿ ಎಕ್ಸ್‌ ಪೋಸ್ಟ್ ಮಾಡಿರುವ ಅವರು, ಮೊದಲನೇ ಹಂತದಲ್ಲಿ‌ ಬಿಎಲ್ ಒ ಗಳು ಮನೆ ಮನೆಗೆ ಬಂದು ಫಾರ್ಮ್ 6 ವಿತರಣೆ ಮಾಡುವ ಕಾರ್ಯಕ್ರಮ ಆರಂಭವಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಫಾರ್ಮ್ ವಿತರಣೆಯಲ್ಲಿಯೇ ತಾರತಮ್ಯ ಮಾಡಿ ಬಿಜೆಪಿಯ ಬೆಂಬಲಿಗರಿಗೆ ವಿತರಣೆಯಾಗದಂತೆ ನೋಡಿಕೊಳ್ಳುವ ಸಾಧ್ಯತೆ ಗಳಿವೆ ಎಂದು ಅವರು ಹೇಳಿದರು.

Basavaraj Bommai

ಸರ್ಕಾರದ ಈ ತಾರತಮ್ಯದ ಪ್ಲ್ಯಾನ್ ಕುರಿತು ಜಾಗೃತಿ ವಹಿಸಬೇಕೆಂದು ಬಿಜೆಪಿ ಕಾರ್ಯಕರ್ತರು ಮತ್ತು ಮತಗಟ್ಟೆ ಮಟ್ಟದ ಏಜೆಂಟ್‌ (ಬಿಎಲ್ ಎ) ಅವರು ಅತ್ಯಂತ ಜಾಗೃತವಾಗಿ ಕರ್ತವ್ಯ ನಿರ್ವಹಿಸಬೇಕೆಂದು ಅವರು ಕರೆ ನೀಡಿದರು.

ಬಿಜೆಪಿ ನಮ್ಮ ಪಕ್ಷದ ಎಲ್ಲ ಬಿಎಲ್ ಎ 2 ಗಳಿಗೆ ವಿನಂತಿಸಿಕೊಳ್ಳುವುದೇನೆಂದರೆ ಬಿಎಲ್ ಒ ಗಳ ಜೊತೆಗೆ ಪ್ರತಿ ಬೂತ್ ನಲ್ಲಿ ಪಾರ್ಮ್ ನಂಬರ್ 6 ವಿತರಣೆಯಾಗುವಂತೆ ನೊಡಿಕೊಳ್ಳಬೇಕು. ಅವುಗಳನ್ನು ಸರಿಯಾದ ರೀತಿ ಭರ್ತಿ ಮಾಡುವಂತೆ ನೋಡಿಕೊಳ್ಳಬೇಕು ಎಂದು ವಿನಂತಿಸಿಕೊಂಡಿದ್ದಾರೆ.

2000 ಕೋಟಿ ರೂ ಪ್ಯಾಕೇಜ್‌ನಲ್ಲಿ ಬಿಜೆಪಿ ಶಾಸಕರಿಗೆ ಅನ್ಯಾಯ? ಡಿಕೆ ಶಿವಕುಮಾರ್ ವಿರುದ್ಧ ವಿಪಕ್ಷ ನಾಯಕ ಕಿಡಿ
2000 ಕೋಟಿ ರೂ ಪ್ಯಾಕೇಜ್‌ನಲ್ಲಿ ಬಿಜೆಪಿ ಶಾಸಕರಿಗೆ ಅನ್ಯಾಯ? ಡಿಕೆ ಶಿವಕುಮಾರ್ ವಿರುದ್ಧ ವಿಪಕ್ಷ ನಾಯಕ ಕಿಡಿ

ಅಧಿಕಾರಿಗಳ ಮೇಲೆ ಸರ್ಕಾರ ಒತ್ತಡ

ಮೊದಲನೆ ಹಂತದ ಈ ಕಾರ್ಯಕ್ರಮ ನಡೆಸುತ್ತಿರುವ ರಾಜ್ಯ ಸರ್ಕಾರದ ಅಧಿಕಾರಿಗಳ ಮೇಲೆ ರಾಜ್ಯದ ಸಿಎಂ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಿರಂತರವಾಗಿ ಹೇಳಿಕೆ ಕೊಡುತ್ತಿದ್ದಾರೆ. ಇದೆಲ್ಲ ನೋಡಿದಾಗ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಒತ್ತಡ ಹಾಕುತ್ತಿದ್ದಾರೆ.

ಎಸ್‌ ಐ ಆರ್ ಫಾರ್ಮ್ ವಿತರಣೆಯಲ್ಲಿಯೇ ತಾರತಮ್ಯ ಮಾಡಿ ಬಿಜೆಪಿಯ ಬೆಂಬಲಿಗರಿಗೆ ವಿತರಣೆಯಾಗದಂತೆ ನೋಡಿಕೊಳ್ಳುವ ಸಾಧ್ಯತೆ ಗಳಿವೆ. ಆದ್ದರಿಂದ ನಮ್ಮ ಬಿಎಲ್ ಎ 2 ಗಳು ಅತ್ಯಂತ ಜಾಗೃತವಾಗಿ ತಮ್ಮ ಕರ್ತವ್ಯ ನಿರ್ವಹಿಸಬೇಕು. ಅಲ್ಲದೇ ಫಾರ್ಮ್ ನಂಬರ್ 6 ಹಂಚುವಿಕೆ, ಅರ್ಹ ಮತದಾರರ ಹೆಸರು ಬಿಟ್ಟು ಹೋಗದಂತೆ ನೋಡುವುದು, ಅನರ್ಹ ಮತದಾರರ ಹೆಸರು ಸೇರಿಸದಂತೆ ನೋಡುವುದು ಮುಂದಿನ ಎಲ್ಲ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಅವರು ಮನವಿ ಮಾಡಿದ್ದಾರೆ.

ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಉದ್ದೇಶವೇನು?

ಭಾರತೀಯ ಚುನಾವಣೆ ಆಯೋಗದಿಂದ ಕಾಲ ಕಾಲಕ್ಕೆ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡುವುದು ನಿರಂತರ ಪ್ರಕ್ರಿಯೆಯಾಗಿದೆ. ಈ ಬಾರಿಯು ಸಹ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ (SIR) ನಡೆಸಲಾಗುತ್ತದೆ. ಇಂದು ಜೂನ್ 30ರಿಂದ ಜುಲೈ 29ರವರೆಗೆ ಈ ಮನೆ ಮನೆ ಭೇಟಿ, ಪರಿಷ್ಕರಣೆ ನಡೆಯಲಿದೆ. ಮತದಾರರ ಪಟ್ಟಿಯಲ್ಲಿ ಮೃತಪಟ್ಟವರ, ನಕಲಿ ಮತದಾರರನ್ನು ಪಟ್ಟಿಯಿಂದ ಕೈ ಬಿಡುವುದು ಹಾಗೂ ಹೊಸ ಅರ್ಹ ಮತದಾರರನ್ನು ಪಟ್ಟಿಗೆ ಸೇರಿಸುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+