ಬೆಂಗಳೂರು ಆಸ್ತಿದಾರರಿಗೆ ಭರ್ಜರಿ ಗುಡ್‌ನ್ಯೂಸ್‌: ಈ ಪ್ರಾಪರ್ಟಿದಾರರಿಗೆ ಟ್ಯಾಕ್ಸ್‌ ವಿನಾಯಿತಿ, ಶೀಘ್ರ ಪಾರ್ಕಿಂಗ್ ನೀತಿ 2.0

ಬೆಂಗಳೂರಿನ ಆಸ್ತಿದಾರರಿಗೆ ಕರ್ನಾಟಕ ಸರ್ಕಾರ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದೆ. ಬೆಂಗಳೂರಿನಲ್ಲಿ ಆಸ್ತಿದಾರರಿಗೆ ಆಸ್ತಿ ತೆರಿಗೆ ಹೆಚ್ಚಾಗಲಿದೆ ಎನ್ನುವ ಆತಂಕದ ನಡುವೆಯೇ ಬೆಂಗಳೂರಿನ ಆಸ್ತಿದಾರರಿಗೆ ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಭರ್ಜರಿ ಗುಡ್‌ನ್ಯೂಸ್ ಸಿಕ್ಕಿದೆ.

ಬೆಂಗಳೂರಿನಲ್ಲಿ ಖಾಲಿ ನಿವೇಶನ ಇರುವ ಆಸ್ತಿಯ ಮಾಲೀಕರು ತಮ್ಮ ಭೂಮಿಯನ್ನು ಸಾರ್ವಜನಿಕ ಪಾರ್ಕಿಂಗ್ ಸೌಲಭ್ಯವನ್ನಾಗಿ ಪರಿವರ್ತಿಸಿದರೆ ಶೀಘ್ರದಲ್ಲೇ 35 ವರ್ಷಗಳವರೆಗೆ ಆಸ್ತಿ ತೆರಿಗೆ ವಿನಾಯಿತಿ ಪಡೆಯಬಹುದು. ಈ ಮಾದರಿಯ ಯೋಜನೆಯನ್ನು ಪರಿಚಯಿಸುವುದಕ್ಕೆ ಸರ್ಕಾರ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಮುಂದಾಗಿದೆ.

Bengaluru Property

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮತ್ತು ನಗರ ಸಂಚಾರ ಪೊಲೀಸರು ಹೊಸ ಪಾರ್ಕಿಂಗ್ ನೀತಿಯನ್ನು ಸಿದ್ಧಪಡಿಸುತ್ತಿದ್ದಾರೆ. ಇದರಲ್ಲಿ ಸಾರ್ವಜನಿಕರು ಹಾಗೂ ಆಸ್ತಿದಾರರು ಭಾಗವಹಿಸುವುದಕ್ಕೆ ಅವಕಾಶ ಸಿಗಲಿದೆ. ರಸ್ತೆ ಹೊರಗಿನ ಪಾರ್ಕಿಂಗ್ ವ್ಯವಸ್ಥೆಗೆ ಆದ್ಯತೆ ನೀಡಿ, ರಸ್ತೆ ಬದಿಯ ಪಾರ್ಕಿಂಗ್‌ಗೆ ಹೆಚ್ಚಿನ ನಿರ್ಬಂಧ ಹಾಗೂ ಹೆಚ್ಚುವರಿ ಶುಲ್ಕ ವಿಧಿಸುವ ಗುರಿಯನ್ನು ಈ ಯೋಜನೆ ಒಳಗೊಂಡಿದೆ. ನಗರಾಭಿವೃದ್ಧಿ ಇಲಾಖೆ (ಯುಡಿಡಿ) ಗ್ರೇಟರ್ ಬೆಂಗಳೂರು ಏರಿಯಾ ಪಾರ್ಕಿಂಗ್ ನಿಯಮಗಳು, 2026 ಅಂತಿಮಗೊಳಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸೇರಿದಂತೆ ವಿವಿಧ ಸಂಸ್ಥೆಗಳ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದೆ. ಸರ್ಕಾರವು ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಕೋರಿ ಕರಡು ಅಧಿಸೂಚನೆಯನ್ನು ಹೊರಡಿಸಲು ಯೋಜಿಸಿದೆ.

ನಿಯಮಗಳನ್ನು ಅಂತಿಮಗೊಳಿಸುವ ಮೊದಲು ಇನ್ನೂ ಹಲವು ಸುತ್ತಿನ ಸಭೆಗಳು ನಡೆಯಲಿವೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಹೇಳಿದ್ದಾರೆ. ಕರಡು ಪಾರ್ಕಿಂಗ್ ನಿಯಮಗಳ ಪ್ರಕಾರ, ಖಾಸಗಿ ಭೂಮಾಲೀಕರು ಖಾಲಿ ಸ್ಥಳಗಳನ್ನು ಸಾರ್ವಜನಿಕ ಪಾರ್ಕಿಂಗ್‌ಗಾಗಿ ತೆರೆಯಲು ಪ್ರೋತ್ಸಾಹಿಸುವ ಮೂಲಕ ನಗರದಲ್ಲಿ ಪಾರ್ಕಿಂಗ್ ಮೂಲಸೌಕರ್ಯವನ್ನು ರಚಿಸಲು ಜಿಬಿಎ ಅತಿದೊಡ್ಡ ಪ್ರೋತ್ಸಾಹ ಕಾರ್ಯಕ್ರಮಗಳಲ್ಲಿ ಒಂದನ್ನು ಪ್ರಸ್ತಾಪಿಸುತ್ತಿದೆ.

ಪಾರ್ಕಿಂಗ್ ಸೌಲಭ್ಯ ದೊಡ್ಡದಾಗಿದ್ದರೆ, ತೆರಿಗೆ ವಿನಾಯಿತಿ ಹೆಚ್ಚು ಕಾಲ ಇರುತ್ತದೆ ಎಂದು ಹೇಳಲಾಗಿದೆ. ತಮ್ಮ ಭೂಮಿಯನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸಿದರೆ ಮಾಲೀಕರು ಹೆಚ್ಚಿನ ಲಾಭ ಗಳಿಸುತ್ತಾರೆ ಎಂಬ ಆಧಾರದ ಮೇಲೆ ತೆರಿಗೆ ವಿನಾಯಿತಿಗಳನ್ನು ಒದಗಿಸುವ ಪ್ರಸ್ತಾವನೆ ಇದೆ. ಆದಾಗ್ಯೂ, ಹೊಸ ಪಾರ್ಕಿಂಗ್ ನೀತಿಯು ಮಾಲೀಕರು ವಿಧಿಸಬಹುದಾದ ಪಾರ್ಕಿಂಗ್ ಶುಲ್ಕ ಸುಂಕವನ್ನು ನಿಗದಿಪಡಿಸುವುದಿಲ್ಲ ಎಂದು ಹೇಳಲಾಗಿದೆ.

ಹೊಸ ಪ್ರಸ್ತಾವನೆಯಲ್ಲಿ ಕನಿಷ್ಠ 200 ಪ್ರಯಾಣಿಕ ಕಾರು ಘಟಕಗಳ (PCU) ಸಾಮರ್ಥ್ಯವಿರುವ ಸ್ವಯಂಚಾಲಿತ ಪಾರ್ಕಿಂಗ್ ರಚನೆಯನ್ನು ಅಭಿವೃದ್ಧಿಪಡಿಸುವ ಮಾಲೀಕರಿಗೆ 35 ವರ್ಷಗಳ ಆಸ್ತಿ ತೆರಿಗೆ ವಿನಾಯಿತಿ ಸಿಗಲಿದೆ. ಅದೇ ಸಾಮರ್ಥ್ಯದ ಬಹು-ಹಂತದ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದರೆ, 25 ವರ್ಷಗಳ ವಿನಾಯಿತಿಯನ್ನು ಇರಲಿದೆ. ಆದರೆ ಸಣ್ಣ ಬಹು-ಹಂತದ ಅಥವಾ ಸ್ವಯಂಚಾಲಿತ ಪಾರ್ಕಿಂಗ್ ಸೌಲಭ್ಯಗಳು 15 ವರ್ಷಗಳವರೆಗೆ ಅರ್ಹತೆ ಪಡೆಯುತ್ತವೆ. ಮೇಲ್ಮೈ-ಹಂತದ ಪಾರ್ಕಿಂಗ್ ಸ್ಥಳಗಳು ಐದು ವರ್ಷಗಳ ವಿನಾಯಿತಿ ಸಿಗಲಿದೆ. ವಿನಾಯಿತಿ ಅವಧಿ ಮುಗಿದ ನಂತರ ಆಸ್ತಿ ಮಾಲೀಕರು ಸೇವಾ ಶುಲ್ಕವನ್ನು ಮಾತ್ರ ಪಾವತಿಸಬೇಕಾಗುತ್ತದೆ ಎಂದು ಕರಡು ಪಾರ್ಕಿಂಗ್ ನೀತಿಯಲ್ಲಿ ಉಲ್ಲೇಖಿಸಲಾಗಿದೆ.

ಆದಾಗ್ಯೂ, ಆಸ್ತಿ ತೆರಿಗೆ ವಿನಾಯಿತಿ ಅಥವಾ ಪ್ರೋತ್ಸಾಹಕ್ಕೆ ಸಂಬಂಧಿಸಿದಂತೆ ಕೆಲವೊಂದು ಷರತ್ತುಗಳನ್ನು ಸಹ ವಿಧಿಸಲಾಗುತ್ತಿದೆ. ಪಾರ್ಕಿಂಗ್ ಸೌಲಭ್ಯವು ವರ್ಷಕ್ಕೆ ಕನಿಷ್ಠ 250 ದಿನಗಳು ಮತ್ತು ದಿನಕ್ಕೆ ಕನಿಷ್ಠ 12 ಗಂಟೆಗಳ ಕಾಲ ಕಾರ್ಯನಿರ್ವಹಿಸಬೇಕು, ಕನಿಷ್ಠ ಪಾರ್ಕಿಂಗ್ ಸಾಮರ್ಥ್ಯವನ್ನು ಕಾಯ್ದುಕೊಳ್ಳಬೇಕು, GBA ಯೊಂದಿಗೆ ನೈಜ-ಸಮಯದ ಪಾರ್ಕಿಂಗ್ ಡೇಟಾವನ್ನು ಹಂಚಿಕೊಳ್ಳಬೇಕು ಮತ್ತು ಸಾರ್ವಜನಿಕ ಪಾರ್ಕಿಂಗ್‌ಗೆ ಮಾತ್ರ ಬಳಸಬೇಕು. ಮಿಶ್ರ ವಾಣಿಜ್ಯ ಅಥವಾ ವಸತಿ ಬಳಕೆಗೆ ತೆರಿಗೆ ವಿನಾಯಿತಿ ಇರುವುದಿಲ್ಲ.

ಮುಂದುವರಿದು ಬೈಸಿಕಲ್‌ಗಳು ಮತ್ತು ಗೊತ್ತುಪಡಿಸಿದ ಆಟೋ-ರಿಕ್ಷಾ ನಿಲ್ದಾಣಗಳನ್ನು ಹೊರತುಪಡಿಸಿ ನಗರದಾದ್ಯಂತ ಉಚಿತ ಸಾರ್ವಜನಿಕ ಪಾರ್ಕಿಂಗ್ ವ್ಯವಸ್ಥೆಯನ್ನು ಕೊನೆಗೊಳಿಸಲು ಕರಡು ನೀತಿ ಪ್ರಸ್ತಾಪಿಸಿದೆ. ಜೊತೆಗೆ, ರಸ್ತೆಗಳ ವರ್ಗೀಕರಣದ ಆಧಾರದ ಮೇಲೆ ಕನಿಷ್ಠ ಪಾರ್ಕಿಂಗ್ ಶುಲ್ಕ ಜಾರಿಗೆ ತರಲಾಗುತ್ತದೆ.

ಅತಿ ಹೆಚ್ಚು ವಾಹನ ದಟ್ಟಣೆ ಇರುವ 'ಎ' ವರ್ಗದ ರಸ್ತೆಗಳಲ್ಲಿ, ಕಾರುಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಲು ಗಂಟೆಗೆ ಕನಿಷ್ಠ 80 ರೂಪಾಯಿ ಶುಲ್ಕ ವಿಧಿಸುವ ಪ್ರಸ್ತಾಪವಿದೆ. ವಸತಿ ಪ್ರದೇಶಗಳ ರಸ್ತೆಗಳಲ್ಲಿ ವಾಹನ ನಿಲ್ಲಿಸುವ ನಿವಾಸಿಗಳು ಪಾರ್ಕಿಂಗ್ ಪರವಾನಗಿ ಖರೀದಿಸಬೇಕಾಗಬಹುದು. ಈ ಪ್ರಸ್ತಾಪವನ್ನು 2020ರ ಮಾರ್ಚ್‌ನಲ್ಲಿ ಪ್ರಕಟಿಸಲಾಗಿದ್ದ ಪಾರ್ಕಿಂಗ್ ನೀತಿ 2.0 ಕರಡಿನಲ್ಲೂ ಉಲ್ಲೇಖಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+