ವಂದೇ ಭಾರತ್ ರೈಲಿನಲ್ಲಿ ಕಿಟಕಿಯಾಚೆ ಕಾಣುವ ಸ್ವರ್ಗ! ಕರ್ನಾಟಕ ಸೇರಿ ಭಾರತದ ಈ 7 ಮನಮೋಹಕ ಮಾರ್ಗ
ಭಾರತೀಯ ರೈಲ್ವೆ ಸೇವೆಗಳ ಇತಿಹಾಸದಲ್ಲಿ ಸೆಮಿ-ಹೈಸ್ಪೀಡ್ ರೈಲುಗಳಾದ 'ವಂದೇ ಭಾರತ್ ಎಕ್ಸ್‌ಪ್ರೆಸ್' ಉಂಟುಮಾಡಿದ ಕ್ರಾಂತಿ ಸಾಮಾನ್ಯದ್ದಲ್ಲ. ಕೇವಲ ಆಧುನಿಕ ಸೌಕರ್ಯ ಮತ್ತು ಸಮಯ ಉಳಿತಾಯಕ್ಕಷ್ಟೇ ಅಲ್ಲದೆ, ಪ್ರವಾಸೋದ್ಯಮದ ದೃಷ್ಟಿಯಿಂದಲೂ ವಂದೇ ಭಾರತ್ ರೈಲುಗಳು ಹೊಸ ದಾರಿಯನ್ನು ತೋರಿಸಿವೆ. ದೇಶದ ಯಾವುದೇ ಸಾಮಾನ್ಯ ರೈಲಿಗಿಂತ ದೊಡ್ಡದಾದ ಮತ್ತು ಅಗಲವಾದ ಗಾಜಿನ ಕಿಟಕಿಗಳನ್ನು ಈ ರೈಲುಗಳು ಹೊಂದಿದ್ದು, ಹೊರಗಿನ ಪ್ರಕೃತಿಯ ಸಂಪೂರ್ಣ ಸೊಬಗನ್ನು ಸವಿಯಲು ಇವು ನೆರವಾಗುತ್ತವೆ.
ಪ್ರಯಾಣವನ್ನು ಕೇವಲ ಒಂದು ಗಮ್ಯಸ್ಥಾನ ತಲುಪುವ ಮಾರ್ಗವಾಗಿ ನೋಡದೆ, ಒಂದು ಸುಂದರ ಅನುಭವಕ್ಕಾಗಿ ಬದಲಾಯಿಸುವ ಹಲವು ವಂದೇ ಭಾರತ್ ಮಾರ್ಗಗಳು ಭಾರತದಲ್ಲಿವೆ. ಭಾರತೀಯ ರೈಲ್ವೆಯ ನಕ್ಷೆಯಲ್ಲಿ ಅದ್ಭುತವಾದ ನೈಸರ್ಗಿಕ ನೋಟಗಳನ್ನು ಒದಗಿಸುವ ಅಂತಹ ಪ್ರಮುಖ ಏಳು ಸುಂದರ ವಂದೇ ಭಾರತ್ ರೈಲು ಮಾರ್ಗಗಳ ಕಣ್ಮನ ಸೆಳೆಯುವ ವಿವರ ಇಲ್ಲಿದೆ. ನೀವು ಮುಂದಿನ ಬಾರಿ ಪ್ರವಾಸ ಆಯೋಜಿಸುವಾಗ ಈ ಮಾರ್ಗಗಳ ಮೂಲಕ ಪ್ರಯಾಣಿಸುವುದನ್ನು ಮರೆಯಬೇಡಿ.

ಚೆನ್ನೈ ಮತ್ತು ಮೈಸೂರು ಸಾಂಸ್ಕೃತಿಕ ಕೃಷಿ ಪಥ
ತಮಿಳುನಾಡು ಮತ್ತು ಕರ್ನಾಟಕ ಈ ಎರಡು ರಾಜ್ಯವನ್ನು ಬೆಸೆಯುವ ಮೊದಲ ದಕ್ಷಿಣ ಭಾರತದ ವಂದೇ ಭಾರತ್ ರೈಲು ಇದಾಗಿದೆ. ತಂತ್ರಜ್ಞಾನ ನಗರಿ ಹಾಗೂ ಸಾಂಸ್ಕೃತಿಕ ತಾಣಗಳನ್ನು ಸಂಪರ್ಕಿಸುವ ಈ ರೈಲು ಕರ್ನಾಟಕದ ಹಸಿರು ಪ್ರಸ್ಥಭೂಮಿ ಹಾಗೂ ಕೃಷಿ ಹಿನ್ನೆಲೆಯನ್ನು ಒಳಗೊಂಡಿದೆ. ಸುಂದರವಾದ ಹಳ್ಳಿಗಳ ವಿಸ್ತಾರವಾದ ಹಸಿರು ಕೃಷಿ ಭೂಮಿಗಳು, ಬೆಟ್ಟಗುಡ್ಡಗಳ ಸಾಲುಗಳು ಮತ್ತು ದಾರಿಯುದ್ದಕ್ಕೂ ಸಿಗುವ ಪ್ರಾಕೃತಿಕ ಕೆರೆಗಳು ನೋಡುಗರ ಮನಸ್ಸಿಗೆ ಶಾಂತಿ ನೀಡುತ್ತವೆ.
ಕಾಸರಗೋಡು ಮತ್ತು ತಿರುವನಂತಪುರಂ ಕರಾವಳಿ ಸೊಬಗು
ಕಾಸರಗೋಡಿನಿಂದ ತಿರುವನಂತಪುರಕ್ಕೆ ಸಾಗುವ ವಂದೇ ಭಾರತ್ ರೈಲು ಕರ್ನಾಟಕದ ಅತ್ಯಂತ ಸುಂದರ ಕರಾವಳಿ ಮಾರ್ಗಗಳಲ್ಲಿ ಒಂದಾಗಿದೆ. ಕೇರಳದ ಒಟ್ಟು ಉದ್ದಗಲಕ್ಕೂ ಹರಡಿರುವ ಹಳ್ಳಿಗಳು ಮತ್ತು ಪಟ್ಟಣಗಳ ನಡುವೆ ಸಂಚರಿಸುವಾಗ ನಮಗೆ ನೈಸರ್ಗಿಕ ಸಂಪತ್ತಿನ ಸೊಬಗು ಪರಿಚಯವಾಗುತ್ತದೆ. ಸಣ್ಣ ಹಳ್ಳಿಗಳು, ವಿಶಾಲವಾದ ತೆಂಗಿನ ತೋಟಗಳು ಮತ್ತು ಮನಸೆಳೆಯುವ ಹಸಿರು ಭತ್ತದ ಹೊಲಗಳು ಈ ಮಾರ್ಗವನ್ನು ಅಂದಗೊಳಿಸಿವೆ. ಕೇರಳದ ಪ್ರಸಿದ್ಢ ಸರೋವರಗಳು, ನದಿಗಳ ಮತ್ತು ಅರಬ್ಬಿ ಸಮುದ್ರದ ತೀರವು ಇಡೀ ನಮ್ಮ ಪ್ರಯಾಣಕ್ಕೆ ಹೊಸ ಮೆರುಗು ನೀಡುತ್ತದೆ.
ಮುಂಬೈ ಮತ್ತು ಗೋವಾ ನಡುವಿನ ಪ್ರಕೃತಿ ಕಾವ್ಯ
ಮುಂಬೈನಿಂದ ಕಡಲ ಕಿನಾರೆಗಳ ನಾಡು ಗೋವಾಕ್ಕೆ ಸಾಗುವ ವಂದೇ ಭಾರತ್ ರೈಲು ಅತ್ಯಂತ ಮನಮೋಹಕ ಪಶ್ಚಿಮ ಘಟ್ಟಗಳ ಶ್ರೇಣಿಯ ಮೂಲಕ ಹಾದುಹೋಗುತ್ತದೆ. ವರ್ಷಪೂರ್ತಿ ಸುಂದರವಾಗಿದ್ದರೂ, ಮಳೆಗಾಲದಲ್ಲಿ ಈ ಮಾರ್ಗವು ಹಚ್ಚ ಹಸಿರಿನ ಸ್ವರ್ಗದಂತೆ ಕಂಗೊಳಿಸುತ್ತದೆ. ದಟ್ಟವಾದ ಕಾಡು, ಬೆಟ್ಟಗಳ ಮೇಲಿಂದ ಹರಿಯುವ ಜಲಪಾತಗಳು, ಆಳವಾದ ಹಸಿರು ಕಣಿವೆಗಳು ಮತ್ತು ಪ್ರಾಚೀನ ಕೊಂಕಣ ಹಳ್ಳಿಗಳ ಸೊಬಗು ನಮ್ಮ ಕಣ್ಣಮುಂದೆ ಅನಾವರಣಗೊಳ್ಳುತ್ತದೆ.
ವಿಶೇಷವಾಗಿ ಈ ಮಾರ್ಗದಲ್ಲಿ ಹಾದುಹೋಗುವ ಕೆಲವು ಕತ್ತಲೆಯ ಸುರಂಗಗಳು ಮತ್ತು ಎತ್ತರದ ನದಿಯ ಸೇತುವೆಗಳ ಪ್ರಯಾಣ ಅತ್ಯಂತ ಸಾಹಸಮಯ ಅನುಭವವನ್ನು ಉಂಟುಮಾಡುತ್ತವೆ. ದಾರಿಯುದ್ದಕ್ಕೂ ಹಸಿರಿನಿಂದ ಮಿಂದೆದ್ದಂತೆ ಕಾಣುವ ಕಾಡುಗಳ ಸೌಂದರ್ಯವು ಈ ಜರ್ನಿಯನ್ನು ಎಂದಿಗೂ ಮರೆಯಲಾಗದಂತೆ ಮಾಡುತ್ತದೆ.
ಚೆನ್ನೈ ಮತ್ತು ಮೈಸೂರು ಸಾಂಸ್ಕೃತಿಕ ಕೃಷಿ ಪಥ
ತಮಿಳುನಾಡು ಮತ್ತು ಕರ್ನಾಟಕ ಈ ಎರಡು ರಾಜ್ಯವನ್ನು ಬೆಸೆಯುವ ಮೊದಲ ದಕ್ಷಿಣ ಭಾರತದ ವಂದೇ ಭಾರತ್ ರೈಲು ಇದಾಗಿದೆ. ತಂತ್ರಜ್ಞಾನ ನಗರಿ ಹಾಗೂ ಸಾಂಸ್ಕೃತಿಕ ತಾಣಗಳನ್ನು ಸಂಪರ್ಕಿಸುವ ಈ ರೈಲು ಕರ್ನಾಟಕದ ಹಸಿರು ಪ್ರಸ್ಥಭೂಮಿ ಹಾಗೂ ಕೃಷಿ ಹಿನ್ನೆಲೆಯನ್ನು ಒಳಗೊಂಡಿದೆ. ಸುಂದರವಾದ ಹಳ್ಳಿಗಳ ವಿಸ್ತಾರವಾದ ಹಸಿರು ಕೃಷಿ ಭೂಮಿಗಳು, ಬೆಟ್ಟಗುಡ್ಡಗಳ ಸಾಲುಗಳು ಮತ್ತು ದಾರಿಯುದ್ದಕ್ಕೂ ಸಿಗುವ ಪ್ರಾಕೃತಿಕ ಕೆರೆಗಳು ನೋಡುಗರ ಮನಸ್ಸಿಗೆ ಶಾಂತಿ ನೀಡುತ್ತವೆ.
ನವದೆಹಲಿ ಮತ್ತು ಡೆಹ್ರಾಡೂನ್ ಹಿಮಾಲಯದ ತಪ್ಪಲು
ಉತ್ತರ ಭಾರತದ ಸಮತಟ್ಟಾದ ಮೈದಾನ ಪ್ರದೇಶದಿಂದ ಉತ್ತರಾಖಂಡದ ಪರ್ವತಗಳ ಸುಂದರ ಪ್ರದೇಶಕ್ಕೆ ಪ್ರಯಾಣಿಕರನ್ನು ಕೊಂಡೊಯ್ಯುವ ಈ ಮಾರ್ಗವು ದಟ್ಟವಾದ ಶಿವಾಲಿಕ್ ಅರಣ್ಯ ಪ್ರದೇಶದ ಮೂಲಕ ಹಾದುಹೋಗುತ್ತದೆ. ದೆಹಲಿಯ ಜನನಿಬಿಡ ಪ್ರದೇಶದಿಂದ ಹಸಿರಿನಿಂದ ಕಂಗೊಳಿಸುವ ಶಿವಾಲಿಕ್ ಬೆಟ್ಟಗಳ ಕಡೆಗೆ ಸಾಗುವಾಗ ವಿಶಾಲವಾದ ಕೃಷಿ ಭೂಮಿಗಳು ನಮ್ಮ ಕಣ್ಣಿಗೆ ಬೀಳುತ್ತವೆ. ಡೆಹ್ರಾಡೂನ್ ಸಮೀಪಿಸುತ್ತಿದ್ದಂತೆ ಭವ್ಯವಾದ ಕಣಿ, ಬೆಟ್ಟಗಳಿಗೆ ಹಿಮ ಹೊದಿಕೆಯಂತಹ ಮತ್ತು ತಂಪಾದ ಅನುಭವ ನೀಡುತ್ತದೆ.
ನವದೆಹಲಿಯಿಂದ ಕತ್ರಾ ವರೆಗಿನ ಆಧ್ಯಾತ್ಮಿಕ ಮತ್ತು ಹಿಮಾಲಯ ಪಯಣ
ನವದೆಹಲಿಯಿಂದ ಶ್ರೀ ಮಾತಾ ವೈಷ್ಣೋದೇವಿಯ ಸನ್ನಿಧಾನ ಶ್ರೈನ್ ಆರಾಧಕರಿಗೆ ಮಾತ್ರವಲ್ಲದೆ ಸಾಹಸ ಮತ್ತು ಪ್ರಕೃತಿ ಪ್ರೇಮಿಗಳಿಗೂ ಇದು ಸಾಟಿಯಿಲ್ಲದ ರೈಲು ಪ್ರಯಾಣ ಇದಾಗಿದೆ. ಈ ರೈಲು ಜಮ್ಮುವಿನ ಒಳಹೊಗುತ್ತಿದ್ದಂತೆ ಬಯಲು ಪ್ರದೇಶಗಳ ಬದಲು ದೈತ್ಯಾಕಾರದ ಹಿಮಾಲಯ ಶ್ರೇಣಿಯ ಪರ್ವತಗಳು ಕಣ್ಣಮುಂದೆ ನಿಲ್ಲುತ್ತವೆ. ಶಿವಾಲಿಕ್ ಬೆಟ್ಟಗಳ ಸುಂದರ ಹಿನ್ನೆಲೆಯು ಕೊನೆಯ ಹಂತದ ಪ್ರಯಾಣವನ್ನು ಅಮೋಘವಾಗಿ ಮಾರ್ಪಡಿಸುತ್ತದೆ.
ಸಿಕಂದರಾಬಾದ್ ಮತ್ತು ವಿಶಾಖಪಟ್ಟಣಂ ಪೂರ್ವ ಘಟ್ಟಗಳ ಅದ್ಭುತ
ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ ನೈಸರ್ಗಿಕ ವೈವಿಧ್ಯತೆಯನ್ನು ಇದು ಬಹಳ ಚಂದವಾಗಿ ಎತ್ತಿ ತೋರಿಸುತ್ತದೆ. ಬೆಟ್ಟಗಳು, ಕೃಷಿ ಪ್ರದೇಶಗಳು ಮತ್ತು ನದಿ ಕಣಿವೆಗಳ ಮೂಲಕ ಹಾದು ಹೋಗುವಾಗ ಪೂರ್ವ ಘಟ್ಟಗಳ ಸಾಲಿನ ಅರಣ್ಯಗಳು ನಮ್ಮ ಪ್ರಯಾಣದ ಸಂಗಾತಿಯಾಗುತ್ತವೆ. ವಿವಿಧ ಜಲಾಶಯಗಳ ಸುಂದರ ಜಲರಾಶಿಯು ದಾರಿಯುದ್ದಕ್ಕೂ ಕಣ್ಣಿಗೆ ಹಬ್ಬವನ್ನು ಉಂಟು ಮಾಡುತ್ತದೆ.
ಭೋಪಾಲ್ ಮತ್ತು ನವದೆಹಲಿ ನಡುವಿನ ಮನಮೋಹಕ ಮಧ್ಯ ಭಾರತ
ವೇಗದ ಮತ್ತು ಅತ್ಯಾಧುನಿಕ ಪ್ರಯಾಣಕ್ಕೆ ಹೆಸರಾಗಿರುವ ಈ ವಂದೇ ಭಾರತ್ ರೈಲು ಅದೇ ವೇಳೆ ಮಧ್ಯ ಭಾರತದ ಅತ್ಯಂತ ಸುಂದರವಾದ ಹಾಗೂ ಜೀವವೈವಿಧ್ಯದ ಪ್ರಕೃತಿಯನ್ನು ಅನಾವರಣಗೊಳಿಸುತ್ತದೆ. ದಟ್ಟವಾದ ರಕ್ಷಿತ ಅರಣ್ಯಗಳು, ವಿಶಾಲ ಹೊಲಗಳು ಹಾಗೂ ಹೆಮ್ಮೆಯ ಸರೋವರಗಳು ಈ ಪಯಣದ ಜ್ಞಾಪಕಗಳಲ್ಲಿ ವಿಶಿಷ್ಟ ಸ್ಥಾನ ಪಡೆಯುತ್ತವೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಭಾರತದ ಸಾರಿಗೆ ಕ್ಷೇತ್ರಕ್ಕೆ ಕೇವಲ ವೇಗವನ್ನು ಮಾತ್ರ ತಂದಿಲ್ಲ, ಅದರ ಜೊತೆಗೆ ಪ್ರವಾಸದ ಮಾರ್ಗಗಳ ಅತ್ಯುನ್ನತ ಸೌಂದರ್ಯವನ್ನು ವಿಶ್ವಕ್ಕೆ ತಲುಪಿಸಲು ನೆರವಾಗಿವೆ.














Click it and Unblock the Notifications