ಕಾಶ್ಮೀರದಿಂದ ಬೆಂಗಳೂರಿನವರೆಗೆ: ಪ್ರಯಾಣಿಕರ ಮನ ಗೆದ್ದ 5 ವಂದೇ ಭಾರತ್ ರೈಲು ಮಾರ್ಗಗಳು

ಒಂದು ಕಾಲದಲ್ಲಿ ವಿಮಾನ ಟಿಕೆಟ್‌ಗಳ ಬೆಲೆ ಕಡಿಮೆಯಾಗಿ, ವಿಮಾನ ಪ್ರಯಾಣ ಎಲ್ಲರಿಗೂ ಸುಲಭವಾಗಿ ಲಭ್ಯವಾಗತೊಡಗಿತು. ಇದರಿಂದ ಅನೇಕರು ದೂರದ ಪ್ರಯಾಣಗಳಿಗೆ ರೈಲಿನ ಬದಲಿಗೆ ವಿಮಾನವನ್ನು ಆಯ್ಕೆ ಮಾಡತೊಡಗಿದರು. ದೀರ್ಘ ಪ್ರಯಾಣದ ಸಮಯ, ಸ್ವಚ್ಛತೆಯ ಕುರಿತ ಆತಂಕ ಹಾಗೂ ಹಳೆಯ ಕೋಚ್‌ಗಳ ಕಾರಣದಿಂದ ರೈಲು ಪ್ರಯಾಣದ ಆಕರ್ಷಣೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿತ್ತು.

ಆದರೆ ಭಾರತದಲ್ಲಿ ರೈಲು ಪ್ರಯಾಣ ಎಂದರೆ ಕೇವಲ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವುದಷ್ಟೇ ಅಲ್ಲ. ಕಿಟಕಿಯಾಚೆ ಕಾಣುವ ಸುಂದರ ದೃಶ್ಯಗಳು, ಸಹಪ್ರಯಾಣಿಕರೊಂದಿಗೆ ಬೆಸೆಯುವ ಮಾತುಕತೆಗಳು ಹಾಗೂ ನಿಧಾನಗತಿಯ ಪ್ರಯಾಣದ ವಿಶಿಷ್ಟ ಅನುಭವವೇ ರೈಲಿನ ವಿಶೇಷತೆ. ಈಗ ಈ ಅನುಭವಕ್ಕೆ ಆಧುನಿಕ ಸೌಲಭ್ಯಗಳ ಸ್ಪರ್ಶ ನೀಡಿರುವುದು ಈ ವಂದೇ ಭಾರತ್ ರೈಲುಗಳು. ಇವು ಹಳೆಯ ಗೊಂದಲಗಳಿಗೆ ತೆರೆ ಎಳೆದು ರೈಲು ಪ್ರಯಾಣವನ್ನು ಮತ್ತಷ್ಟು ಆಕರ್ಷಕ ಹಾಗೂ ಐಷಾರಾಮಿಯಾಗಿಸಿವೆ.

5 Vande Bharat Train

ಕಾಶ್ಮೀರದ ಪರ್ವತಗಳಿಂದ ಪಶ್ಚಿಮ ಭಾರತದ ಪ್ರಮುಖ ವ್ಯಾಪಾರ ನಗರಗಳವರೆಗೆ ಸಂಪರ್ಕ ಕಲ್ಪಿಸುತ್ತಿರುವ ವಂದೇ ಭಾರತ್ ರೈಲುಗಳು ಭಾರತೀಯರ ರೈಲು ಪ್ರಯಾಣದ ಶೈಲಿಯನ್ನೇ ಸಂಪೂರ್ಣವಾಗಿ ಬದಲಾಯಿಸಿವೆ. ಒಮ್ಮೆ ಪ್ರಯಾಣಿಸಲೇಬೇಕಾದ 5 ವಂದೇ ಭಾರತ್ ಮಾರ್ಗಗಳ ವಿವರ ಈ ಕೆಳಗಿನಂತಿವೆ.

ಪ್ರಯಾಣ ಮಾತ್ರವಲ್ಲ, ಪ್ರವಾಸವೂ ಹೌದು! ವಂದೇ ಭಾರತ್ ಸ್ಲೀಪರ್ ಮಾರ್ಗದ 5 ಬೆಸ್ಟ್ ಸ್ಪಾಟ್‌ಗಳು
ಪ್ರಯಾಣ ಮಾತ್ರವಲ್ಲ, ಪ್ರವಾಸವೂ ಹೌದು! ವಂದೇ ಭಾರತ್ ಸ್ಲೀಪರ್ ಮಾರ್ಗದ 5 ಬೆಸ್ಟ್ ಸ್ಪಾಟ್‌ಗಳು

1. ಮುಂಬೈ-ಬೆಂಗಳೂರು

ವಂದೇ ಭಾರತ್ ರೈಲು ಕುಟುಂಬಕ್ಕೆ ಶೀಘ್ರದಲ್ಲೇ ಸೇರ್ಪಡೆಯಾಗಲಿರುವ ಮುಂಬೈ-ಬೆಂಗಳೂರು ಸ್ಲೀಪರ್ ಸೇವೆ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ದೇಶದ ಎರಡು ಪ್ರಮುಖ ವ್ಯಾಪಾರದ ಕೇಂದ್ರಗಳನ್ನು ಸಂಪರ್ಕಿಸುವ ಈ ರೈಲು ರಾತ್ರಿ ಪ್ರಯಾಣವನ್ನು ಹೆಚ್ಚು ಆರಾಮದಾಯಕವಾಗಿಸಲಿದೆ. ಇತ್ತೀಚೆಗೆ ಅನಾವರಣಗೊಂಡಿರುವ ಫಸ್ಟ್ ಎಸಿ ಕೋಚ್‌ಗಳು ಐಷಾರಾಮಿ ಹೋಟೆಲ್‌ಗಳ ಅನುಭವ ನೀಡುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ರೈಲು ಪ್ರಿಯರ ಗಮನ ಸೆಳೆದಿವೆ.

2. ನವದೆಹಲಿ-ವಾರಾಣಸಿ

ವಂದೇ ಭಾರತ್ ರೈಲುಗಳ ಪ್ರಯಾಣ ಆರಂಭವಾದದ್ದು ಇದೇ ಮಾರ್ಗದಿಂದ. ದೇಶದ ರಾಜಧಾನಿ ನವದೆಹಲಿಯನ್ನು ಆಧ್ಯಾತ್ಮಿಕ ನಗರ ವಾರಾಣಸಿಯೊಂದಿಗೆ ಸಂಪರ್ಕಿಸುವ ಈ ರೈಲು, ಭಾರತದಲ್ಲಿಯೂ ಸೆಮಿ-ಹೈ ಸ್ಪೀಡ್ ರೈಲು ಯಶಸ್ವಿಯಾಗಬಹುದು ಎಂಬುದನ್ನು ಸಾಬೀತುಪಡಿಸಿತು. ಕಡಿಮೆ ಸಮಯದ ಪ್ರಯಾಣ ಮತ್ತು ಉತ್ತಮ ಸೌಲಭ್ಯಗಳಿಂದ ಇದು ಪ್ರಯಾಣಿಕರ ಮೆಚ್ಚುಗೆಗೆ ಆಯ್ಕೆಯಾಗಿದೆ.

5 Vande Bharat Train

3. ಕಟ್ರಾ-ಶ್ರೀನಗರ

ಕಟ್ರಾ ಮತ್ತು ಶ್ರೀನಗರ ನಡುವಿನ ಪ್ರಯಾಣವು ಸುಮಾರು 191 ಕಿ.ಮೀ ದೂರವಿದೆ. ಇದು ಅತ್ಯಂತ ಸುಂದರ ದೃಶ್ಯಾವಳಿಗಳನ್ನು ಹೊಂದಿರುವ ವಂದೇ ಭಾರತ್ ಮಾರ್ಗಗಳಲ್ಲಿ ಇದು ಪ್ರಮುಖವಾಗಿದೆ. ಪರ್ವತಗಳು, ಸುರಂಗಗಳು ಹಾಗೂ ಕಣಿವೆಗಳ ನಡುವೆ ಸಾಗುವ ಈ ರೈಲು ಕಾಶ್ಮೀರಕ್ಕೆ ಸಂಪರ್ಕವನ್ನು ಮತ್ತಷ್ಟು ಸುಲಭಗೊಳಿಸಿದೆ. ಪ್ರವಾಸಿಗರು ಮತ್ತು ಸ್ಥಳೀಯರಿಗೆ ವೇಗದ ಹಾಗೂ ಸುರಕ್ಷಿತ ಪ್ರಯಾಣದ ಅನುಭವ ನೀಡುತ್ತಿದೆ.

ವಂದೇ ಭಾರತ್ ರೈಲಿನ ಬಾಗಿಲು ಮುಚ್ಚಿದ ಬಳಿಕ ಒಳಗೆ ಸಿಲುಕಿದರೆ ಏನು ಮಾಡಬೇಕು?
ವಂದೇ ಭಾರತ್ ರೈಲಿನ ಬಾಗಿಲು ಮುಚ್ಚಿದ ಬಳಿಕ ಒಳಗೆ ಸಿಲುಕಿದರೆ ಏನು ಮಾಡಬೇಕು?

4. ಮುಂಬೈ-ಗಾಂಧಿನಗರ

ಮುಂಬೈನಿಂದ ಗಾಂಧಿನಗರಕ್ಕೆ ಪ್ರಯಾಣಿಸಲು ರೈಲು ಅತ್ಯಂತ ಜನಪ್ರಿಯ ಮತ್ತು ಅನುಕೂಲಕರ ಮಾರ್ಗವಾಗಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಮೂಲಕ ಕೇವಲ 5.50 ರಿಂದ 6 ಗಂಟೆಗಳಲ್ಲಿ 522 ಕಿ.ಮೀ. ದೂರವಿದೆ. ವ್ಯಾಪಾರ ಮತ್ತು ಉದ್ಯೋಗ ಕಾರಣಗಳಿಂದ ಪ್ರಯಾಣಿಸುವವರಲ್ಲಿ ಈ ಮಾರ್ಗಕ್ಕೆ ಹೆಚ್ಚಿನ ಬೇಡಿಕೆ ಇದೆ. ಮಹಾರಾಷ್ಟ್ರದ ಆರ್ಥಿಕ ರಾಜಧಾನಿ ಮುಂಬೈಯನ್ನು ಗುಜರಾತ್‌ನ ಆಡಳಿತ ಕೇಂದ್ರ ಗಾಂಧಿನಗರದೊಂದಿಗೆ ಸಂಪರ್ಕಿಸುವ ಈ ರೈಲು ಆಧುನಿಕ ಅಂತರ್‌ನಗರ ಸಂಪರ್ಕದ ಸಂಕೇತವಾಗಿ ಗುರುತಿಸಿಕೊಂಡಿದೆ.

5 Vande Bharat Train

5. ಹೌರಾ-ಕಾಮಾಖ್ಯ

ಹೌರಾ (ಕೋಲ್ಕತ್ತಾ) ದಿಂದ ಕಾಮಾಖ್ಯ (ಗುವಾಹಟಿ) ನಡುವಿನ ಪ್ರಯಾಣವು ರೈಲುಗಳ ಮೂಲಕ ಅತ್ಯಂತ ಸುಲಭವಾಗಿದೆ. ಇದು ಅತ್ಯಂತ ವೇಗದ ರೈಲು ಆಗಿದ್ದು ಕೇವಲ 14 ಗಂಟೆಗಳಲ್ಲಿ ತನ್ನ ಪ್ರಯಾಣ ಮುಗಿಸುತ್ತದೆ. ಈಶಾನ್ಯ ರಾಜ್ಯಗಳಿಗೆ ಆಧುನಿಕ ರೈಲು ಸಂಪರ್ಕದ ಹೊಸ ಅಧ್ಯಾಯವನ್ನೇ ಇದು ಆರಂಭಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+