ಪ್ರಯಾಣ ಮಾತ್ರವಲ್ಲ, ಪ್ರವಾಸವೂ ಹೌದು! ವಂದೇ ಭಾರತ್ ಸ್ಲೀಪರ್ ಮಾರ್ಗದ 5 ಬೆಸ್ಟ್ ಸ್ಪಾಟ್‌ಗಳು

ಮುಂಬೈ-ಬೆಂಗಳೂರು ನಡುವೆ ಸಂಚರಿಸಲಿರುವ ವಂದೇ ಭಾರತ್ ಸ್ಲೀಪರ್ ರೈಲು ಪ್ರಯಾಣಿಕರಿಗೆ ಹೊಸ ಅನುಭವ ನೀಡಲು ಸಜ್ಜಾಗುತ್ತಿದೆ. ಆಧುನಿಕ ಸೌಲಭ್ಯಗಳು, ವೇಗದ ಸಂಚಾರ ಮತ್ತು ಆರಾಮದಾಯಕ ರಾತ್ರಿ ಪ್ರಯಾಣದೊಂದಿಗೆ ಈ ರೈಲು ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದೆ. ಈ ರೈಲು ಮಾರ್ಗದಲ್ಲಿ ಕೆಲವೇ ಪ್ರಮುಖ ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ ನೀಡುವ ಸಾಧ್ಯತೆ ಇದ್ದು, ಆ ತಾಣಗಳೂ ಪ್ರವಾಸಿಗರ ಆಕರ್ಷಣೆಯ ಕೇಂದ್ರಗಳಾಗಿವೆ.

ವರದಿಗಳ ಹೇಳುವ ಪ್ರಕಾರ, ಈ ರೈಲು ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ನಿಲ್ದಾಣಗಳಲ್ಲಿ ನಿಲುಗಡೆ ನೀಡುವ ನಿರೀಕ್ಷೆಯಿದೆ. ಈ ಮಾರ್ಗದಲ್ಲಿ ಇಳಿದು ಭೇಟಿ ನೀಡಬಹುದಾದ ಐದು ವಿಶೇಷ ತಾಣಗಳ ವಿವರ ಇಲ್ಲಿದೆ.

Mumbai Bengaluru Vande Bharat Sleeper Route

ತುಮಕೂರು: ಬೆಟ್ಟಗಳು ಮತ್ತು ಪುಣ್ಯಕ್ಷೇತ್ರಗಳ ಸುಂದರ ಸಂಗಮ

ರಾಜಧಾನಿ ಬೆಂಗಳೂರಿಗೆ ಅತ್ಯಂತ ಸಮೀಪದಲ್ಲಿರುವ ತುಮಕೂರು ಜಿಲ್ಲೆಯು ತನ್ನ ಪ್ರಶಾಂತ ವಾತಾವರಣ, ಐತಿಹಾಸಿಕ ದೇವಾಲಯಗಳು ಮತ್ತು ಮನಮೋಹಕ ಕಲ್ಲಿನ ಬೆಟ್ಟಗಳಿಂದಾಗಿ ಪ್ರವಾಸಿಗರ ನೆಚ್ಚಿನ ತಾಣವಾಗಿದೆ.

ಇಲ್ಲಿನ ಪ್ರಮುಖ ಆಕರ್ಷಣೆಗಳು

ದೇವರಾಯನದುರ್ಗ: ಇಲ್ಲಿನ ಹಚ್ಚಹಸಿರಿನ ಬೆಟ್ಟ ಸಾಲುಗಳು ಮತ್ತು ಕಲ್ಲಿನ ಕೋಟೆಯ ಸುಂದರ ದೃಶ್ಯಗಳು ಪ್ರಕೃತಿ ಪ್ರೇಮಿಗಳ ಮನಸೆಳೆಯುತ್ತವೆ.

ನಾಮದ ಚಿಲುಮೆ: ದೇವರಾಯನದುರ್ಗದ ಅರಣ್ಯ ಪ್ರದೇಶದ ಮಧ್ಯೆ ಇರುವ, ಬಂಡೆಯ ಸಂದಿನಿಂದ ಸದಾ ಹರಿಯುವ ನೈಸರ್ಗಿಕ ಜಲಸ್ರೋತ 'ನಾಮದ ಚಿಲುಮೆ' ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ.

Mumbai Bengaluru Vande Bharat Sleeper Route

ದಾವಣಗೆರೆ: ಬೆಣ್ಣೆ ದೋಸೆಯ ರುಚಿ, ಪ್ರಕೃತಿಯ ಸೊಬಗು

ಬೆಣ್ಣೆ ನಗರಿ ದಾವಣಗೆರೆ ಎಂದಾಕ್ಷಣ ಎಲ್ಲರ ಬಾಯಲ್ಲೂ ನೀರೂರಿಸುವುದು ಇಲ್ಲಿನ ಪ್ರಸಿದ್ಧ ಬೆಣ್ಣೆ ದೋಸೆ. ಆಹಾರ ಪ್ರಿಯರ ಪಾಲಿನ ಈ ಸ್ವರ್ಗದಲ್ಲಿ ರುಚಿಕರವಾದ ಊಟದ ಜೊತೆಗೆ ಪ್ರಕೃತಿಯನ್ನು ಆಸ್ವಾದಿಸಲು ಸುಂದರವಾದ ತಾಣಗಳೂ ಇವೆ:

ಆಹಾರ ಪ್ರಿಯರ ಸ್ವರ್ಗ: ಇಲ್ಲಿನ ಗರಿಗರಿಯಾದ ಬೆಣ್ಣೆ ಸವರಿದ ದೋಸೆಯ ವಿಶಿಷ್ಟ ರುಚಿ ಪ್ರತಿಯೊಬ್ಬ ಪ್ರವಾಸಿಯ ಆಕರ್ಷಿಸುತ್ತದೆ.

ಪ್ರಮುಖ ಆಕರ್ಷಣೆಗಳು: ಸಂಜೆಯ ವಿಹಾರಕ್ಕೆ ಪ್ರಶಾಂತವಾದ ಕುಂದುವಾಡ ಕೆರೆ ಮತ್ತು ಆಧ್ಯಾತ್ಮಿಕ ನೆಮ್ಮದಿಗಾಗಿ ಐತಿಹಾಸಿಕ ಈಶ್ವರ ದೇವಸ್ಥಾನ

ಮಳೆಗಾಲದ ಸೌಂದರ್ಯ: ಮಳೆಗಾಲದ ಸಮಯದಲ್ಲಿ ದಾವಣಗೆರೆಯ ಸುತ್ತಮುತ್ತಲಿನ ಹಸಿರು ಪರಿಸರ ಮತ್ತು ಕಣ್ಮನ ಸೆಳೆಯುವ ಜಲಪಾತಗಳು ಪ್ರಕೃತಿ ಪ್ರೇಮಿಗಳನ್ನು ಕೈಬೀಸಿ ಕರೆಯುತ್ತವೆ.

ಹುಬ್ಬಳ್ಳಿ, ಗದಗ ಬೈಪಾಸ್ ಮೂಲಕ ಗೋಲಗುಂಬಜ್ ಎಕ್ಸಪ್ರೆಸ್ ರೈಲು ಸಂಚಾರಕ್ಕೆ ರೈಲ್ವೆ ಮಂಡಳಿ ಒಪ್ಪಿಗೆ
ಹುಬ್ಬಳ್ಳಿ, ಗದಗ ಬೈಪಾಸ್ ಮೂಲಕ ಗೋಲಗುಂಬಜ್ ಎಕ್ಸಪ್ರೆಸ್ ರೈಲು ಸಂಚಾರಕ್ಕೆ ರೈಲ್ವೆ ಮಂಡಳಿ ಒಪ್ಪಿಗೆ

ಹಾವೇರಿ: ಚಾಲುಕ್ಯರ ಇತಿಹಾಸದ ಹೆಜ್ಜೆ ಗುರುತು

ಇತಿಹಾಸದ ಹಳೇ ನೆನಪುಗಳು ಮತ್ತು ಅದ್ಭುತ ವಾಸ್ತುಶಿಲ್ಪದ ಕಲಾ ಪ್ರೇಮಿಗಳಿಗೆ ಹಾವೇರಿ ಒಂದು ಅತ್ಯುತ್ತಮ ಪ್ರವಾಸಿ ತಾಣವಾಗಿದೆ. ಈ ಭಾಗದ ಪ್ರಮುಖ ಆಕರ್ಷಣೆಗಳು ಇಲ್ಲಿವೆ:

ಚಾಲುಕ್ಯರ ಕಲಾ ಸಂಸ್ಕೃತಿ: ಚಾಲುಕ್ಯರ ಸುವರ್ಣ ಕಾಲದಲ್ಲಿ ನಿರ್ಮಾಣವಾದ ಇಲ್ಲಿನ ಐತಿಹಾಸಿಕ ಸಿದ್ಧೇಶ್ವರ ದೇವಸ್ಥಾನವು ಅತ್ಯಂತ ಪ್ರಮುಖ ಆಕರ್ಷಣೆಯಾಗಿದೆ. ದೇವಸ್ಥಾನದ ಗೋಡೆಗಳ ಮೇಲಿರುವ ಕಲಾತ್ಮಕ ಶಿಲ್ಪಕಲೆಗಳು ಮತ್ತು ಸೂಕ್ಷ್ಮ ಕೆತ್ತನೆಗಳು ಇಂದಿಗೂ ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತವೆ.

ಹುಬ್ಬಳ್ಳಿ-ಧಾರವಾಡ: ಸಂಸ್ಕೃತಿ, ಪ್ರಕೃತಿ ಮತ್ತು ಸವಿಯಾದ ಪೇಡಾದ ನಾಡು

ಕರ್ನಾಟಕದ ಹೆಮ್ಮೆಯ ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡವು ಶಿಕ್ಷಣ, ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ಹಸಿರಿನ ಆಹ್ಲಾದಕರ ವಾತಾವರಣಕ್ಕೆ ಜಗತ್ಪ್ರಸಿದ್ಧವಾಗಿವೆ. ಈ ನಗರಗಳ ಪ್ರಮುಖ ಆಕರ್ಷಣೆಗಳು ಇಲ್ಲಿವೆ:

ವಿದ್ಯಾಕಾಶಿ ಮತ್ತು ಸಂಸ್ಕೃತಿ: ಕಲೆ, ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಈ ಜೋಡಿನಗರಗಳು ನೀಡಿರುವ ಕೊಡುಗೆ ಅನನ್ಯ.

ವಿಶ್ವಪ್ರಸಿದ್ದ ಧಾರವಾಡ ಪೇಡಾ: ಇಲ್ಲಿಗೆ ಬೇಟಿ ನೀಡುವ ಪ್ರತಿಯೊಬ್ಬರೂ ಬಾಯಲ್ಲಿ ಕರಗುವ ಜಗತ್ಪ್ರಸಿದ್ದ ಧಾರವಾಡ ಪೇಡಾ ಸವಿಯುವುದನ್ನು ಮರೆಯುವಂತಿಲ್ಲ.

ನೈಸರ್ಗಿಕ ತಾಣಗಳು: ಪ್ರಕೃತಿ ಪ್ರೇಮಿಗಳನ್ನು ಕೈಬೀಸಿ ಕರೆಯುವ ಸುಂದರ ಉಣಕಲ್ ಕೆರೆ ಮತ್ತು ನಗರದ ವಿಹಂಗಮ ನೋಟವನ್ನು ನೀಡುವ ನೃಪತುಂಗ ಬೆಟ್ಟ ಸೇರಿದಂತೆ ಹಲವು ಪ್ರವಾಸಿ ತಾಣಗಳು ಇಲ್ಲಿವೆ.

ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ಶೀಘ್ರದಲ್ಲೇ ಆರಂಭ: ಪ್ರತಿದಿನ ಸೇವೆ, ಫಸ್ಟ್ ಎಸಿ ಕೋಚ್‌ಗೆ ಲಕ್ಸುರಿ ಟಚ್!
ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ಶೀಘ್ರದಲ್ಲೇ ಆರಂಭ: ಪ್ರತಿದಿನ ಸೇವೆ, ಫಸ್ಟ್ ಎಸಿ ಕೋಚ್‌ಗೆ ಲಕ್ಸುರಿ ಟಚ್!

ಬೆಳಗಾವಿ: ಇತಿಹಾಸ, ಜಲಪಾತ ಮತ್ತು ಬೆಟ್ಟಗಳ ಸೊಬಗು

ಕರ್ನಾಟಕ ಮತ್ತು ಮಹಾರಾಷ್ಟ್ರ ಸಂಸ್ಕೃತಿಗಳ ಸಂಗಮವಾಗಿರುವ ಬೆಳಗಾವಿ ತನ್ನ ಐತಿಹಾಸಿಕ ಕೋಟೆ, ಗೊಕಾಕ್ ಜಲಪಾತ ಹಾಗೂ ಜಾಂಬೋಟಿ ಬೆಟ್ಟಗಳಿಂದ ಪ್ರಸಿದ್ಧಿ ಪಡೆದಿದೆ. ಪ್ರಕೃತಿ ಪ್ರಿಯರಿಗೆ ಇದು ಅತ್ಯುತ್ತಮ ತಾಣವಾಗಿದೆ.

ಬೆಳಗಾವಿ: ಇತಿಹಾಸ, ಜಲಪಾತ ಮತ್ತು ಬೆಟ್ಟಗಳ ಸೊಬಗು. ಕರ್ನಾಟಕ ಮತ್ತು ಮಹಾರಾಷ್ಟ್ರ ಸಂಸ್ಕೃತಿಗಳ ಸುಂದರ ಸಂಗಮವಾಗಿರುವ ಬೆಳಗಾವಿ ತನ್ನ ಐತಿಹಾಸಿಕ ಕೋಟೆ, ರಮಣೀಯ ಗೊಕಾಕ್ ಜಲಪಾತ ಹಾಗೂ ಹಸಿರು ಹೊದ್ದ ಜಾಂಬೋಟಿ ಬೆಟ್ಟಗಳಿಂದಾಗಿ ಪ್ರಕೃತಿ ಪ್ರಿಯರ ನೆಚ್ಚಿನ ತಾಣವಾಗಿದೆ.

ವಂದೇ ಭಾರತ್ ತರಲಿದೆ ಪ್ರವಾಸೋದ್ಯಮಕ್ಕೆ ಹೊಸ ವೇಗ:

ಕೇವಲ ಸಂಪರ್ಕವಲ್ಲ, ಹೊಸ ಅವಕಾಶ: ಮುಂಬೈ-ಬೆಂಗಳೂರು ವಂದೇ ಭಾರತ್ ಸ್ಲೀಪರ್ ರೈಲು ಕೇವಲ ಎರಡು ಮಹಾನಗರಗಳನ್ನು ಜೋಡಿಸುವ ಸಾರಿಗೆಯಷ್ಟೇ ಅಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+