Bengaluru: ನರ್ಸರಿ ತರಗತಿಗಳಿಗೆ ಪ್ರವೇಶ ಆರಂಭ: ಭಾರತೀಯ ವಿದ್ಯಾಭವನ ಸಹಯೋಗದಲ್ಲಿ ಅರ್ಜಿ ಆಹ್ವಾನ
ಬೆಂಗಳೂರು: ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ ಪಬ್ಲಿಕ್ ಶಾಲೆಗಳ ಪ್ರವೇಶದ ಬಗ್ಗೆ ಅಪ್ಡೇಟ್ ಸಿಕ್ಕಿದೆ. ಭಾರತೀಯ ವಿದ್ಯಾಭವನ ಮತ್ತು ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಪಬ್ಲಿಕ್ ಶಾಲೆಯ ಜಂಟಿ ಸಹಯೋಗದಲ್ಲಿ ನಡೆಯುತ್ತಿರುವ ನರ್ಸರಿ ತರಗತಿಗೆ (ಸಿ.ಬಿ.ಎಸ್.ಸಿ ಪಠ್ಯಕ್ರಮ) 2026-27ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಮಲ್ಲೇಶ್ವರಂನ ಕೋದಂಡರಾಮಪುರದಲ್ಲಿರುವ ಭಾರತೀಯ ವಿದ್ಯಾಭವನ ಬೃಹತ್ ಬೆಂಗಳೂ ಪಶ್ಚಿಮ ನಗರ ಪಾಲಿಕೆ ಪ್ರೌಢಶಾಲೆಯಲ್ಲಿ ಫ್ರೀ ನರ್ಸರಿ ತರಗತಿಗೆ ಇಂದಿನಿಂದ 27 ಮಾರ್ಚ್ 2026 ರವರೆಗೆ ಬೆಳಗ್ಗೆ 11.00 ರಿಂದ ಮಧ್ಯಾಹ್ನ 03.00 ಅರ್ಜಿಗಳನ್ನು ವಿತರಿಸಲಾಗುತ್ತಿದೆ. ಮಕ್ಕಳನ್ನು ಸೇರಿಸಬಯಸುವ ಪೋಷಕರು ಈ ಮಾಹಿತಿ ಗಮನಿಸಿ ಕೂಡಲೇ ಅರ್ಜಿ ಪಡೆಯುವಂತೆ ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅರ್ಜಿ ಸಲ್ಲಿಸುವವರಿಗೆ ವಿಶೇಷ ಸೂಚನೆಗಳು
* ಮಕ್ಕಳಿಗೆ ಇಲ್ಲಿ ಪ್ರವೇಶ ಕೊಡುವ ಮುನ್ನ ಪೋಷಕರು ಭರ್ತಿ ಮಾಡಿದ ಅರ್ಜಿ ನಮೂನೆಗಳನ್ನು 2026 ಏಪ್ರಿಲ್ 4 ರಂದು 3 ಗಂಟೆಯ ಒಳಗಾಗಿ ಕೋದಂಡರಾಮಪುರದ ಪಾಲಿಕೆ ಪ್ರೌಢಶಾಲೆಯಲ್ಲಿ ಸಲ್ಲಿಸಬೇಕು.
* 2026 ಏಪ್ರಿಲ್ 20 ರಂದು ಸಲ್ಲಿಕೆಯಾಗಿರುವ ಅರ್ಜಿಗಳ ಪರಿಶೀಲನೆ ನಡೆಯಲಿದೆ.
ಅರ್ಜಿ ಸಲ್ಲಿಕೆಗೆ ಬೇಕಾದ ದಾಖಲೆಗಳು
1 . ಮಗುವಿನ ಪಾಸ್ ಪೋರ್ಟ್ ಅಳತೆ ಭಾವಚಿತ್ರಗು - 5
2. ಮಗುವಿನ ಜೊತೆಗಿರುವ ತಂದೆ ತಾಯಿಯ 2ಬಿ ಅಳತೆ ಭಾವಚಿತ್ರ (ಕುಟುಂಬದ ಭಾವ ಚಿತ್ರ)
3. ಮಗುವಿನ ಜನನ ಪ್ರಮಾಣ ಪತ್ರ
4. ಆದಾಯ ಪ್ರಮಾಣ ಪತ್ರ
5. ಜಾತಿ ಪ್ರಮಾಣ ಪತ್ರ
6. ತಂದೆ / ತಾಯಿಯ ಆಧಾರ್ ಕಾರ್ಡ್ ಜೆರಾಕ್ಸ್
7. ಮಗುವಿನ ಆಧಾರ್ ಕಾರ್ಡ್ ಜೆರಾಕ್ಸ್
8. ತಂದೆ / ತಾಯಿಯ ಖಾಯಂ ವಿಳಾಸವಿರುವ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿ
9. ಮಗುವಿನ ವೈಧ್ಯಕೀಯ ಪ್ರಮಾಣ ಪತ್ರ ಸಲ್ಲಿಸಬೇಕು (ಎತ್ತರ, ತೂಕ, ರಕ್ತದ ಗುಂಪು)
10. ಮಗುವಿನ ವರ್ಷ ದಿನಾಂಕ 31-03-2026 ಕ್ಕೆ 03 ವರ್ಷ ತುಂಬಿರಬೇಕು ಹಾಗೂ 01-04-2026 ರಂತೆ 04 ವರ್ಷದ ಒಳಗಿನ ವಿದ್ಯಾರ್ಥಿಗಳು ನರ್ಸರಿ ತರಗತಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ಪಾಲಿಕೆಯು ಗುರುವಾರ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.












Click it and Unblock the Notifications