107ನೇ ವಯಸ್ಸಿನಲ್ಲಿ ಯೂಟ್ಯೂಬ್ ಸ್ಟಾರ್ ಆಗಿದ್ದ ಆಂಧ್ರದ ಅಜ್ಜಿ ಇನ್ನಿಲ್ಲ
ಗುಂಟೂರು, ಡಿಸೆಂಬರ್ 05: ಪೃಕತಿ ಮಡಿಲಲ್ಲಿ, ಹೊಳೆ ದಡದಲ್ಲಿ ಕೂತು ಕೈಯಿಂದಲೇ ಮಸಾಲೆಗಳನ್ನು ತಯಾರಿಸಿ ಇಟ್ಟಿಗೆ ಒಲೆಯ ಮೇಲೆ ಹಣ್ಣು-ಹಣ್ಣು ಅಜ್ಜಿ ಅಡುಗೆ ಮಾಡುತ್ತಿದ್ದ ವಿಡಿಯೋವನ್ನು ಮೊಬೈಲ್ ಹೊಂದಿರುವ ಬಹುತೇಕರು ನೋಡಿರಲಿಕ್ಕೆ ಸಾಕು.
ತನ್ನ 107 ನೇ ವಯಸ್ಸಿನಲ್ಲಿ ಅಡುಗೆಕಲೆಯಿಂದಾಗಿ ಯೂಟ್ಯೂಬ್ ಮೂಲಕ ವಿಶ್ವದಾದ್ಯಂತ ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿದ್ದ ಆಂಧ್ರ ಪ್ರದೇಶ ಗುಂಟೂರಿನ ಮಾಸ್ತಾನಮ್ಮ ನಿನ್ನೆ ವಿಧಿವಶರಾಗಿದ್ದಾರೆ. ಪ್ರಪಂಚದ ಹಿರಿಯ ಯೂಟೂಬರ್ ಎಂಬ ಖ್ಯಾತಿಯೂ ಇವರಿಗಿದೆ.
ಗುಂಟೂರಿನ ಮಾಸ್ತಾನಮ್ಮ ಅವರ ಅಡುಗೆ ರೆಸಿಪಿಗಳು ಯೂಟ್ಯೂಬ್‌ನಲ್ಲಿ ಭಾರಿ ಪ್ರಖ್ಯಾತಿ ಪಡೆದಿದ್ದವು. ಅವರು ಪ್ರಕೃತಿ ನಡುವೆ ಕೂತು ಅಡುಗೆ ಮಾಡುತ್ತಿದ್ದ ವಿಡಿಯೋಗಳು 'ಕಂಟ್ರಿ ಫುಡ್' ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿದ್ದವು. ಚಾನೆಲ್‌ಗೆ 12 ಲಕ್ಷಕ್ಕೂ ಹೆಚ್ಚು ಜನ ಚಂದಾದಾರರಾಗಿದ್ದರು. ಚಂದಾದಾರರಾಗದೇ ನೋಡುತ್ತಿದ್ದವರ ಸಂಖ್ಯೆ ಇದರ ಎರಡರಷ್ಟಿತ್ತು.

ಲಕ್ಷಾಂತರ ಅಭಿಮಾನಿಗಳು ಇದ್ದರು
ಮಾಸ್ತಾನಮ್ಮ ಅಜ್ಜಿಯು ಸಸ್ಯಹಾರಿ, ಮಾಂಸಹಾರಿ ಎರಡೂ ರೀತಿಯ ಅಡುಗೆಗಳನ್ನು ಮಾಡುತ್ತಿದ್ದರು. ಆದರೆ ಅವರ ಸೀಫುಡ್ ರೆಸಿಪಿಗಳು ಬಹು ಖ್ಯಾತವಾಗಿದ್ದವು. ಅವರ ಒಂದೊಂದು ವಿಡಿಯೋಗಳು ಲಕ್ಷಾಂತರ ವೀವ್ಸ್‌ಗಳಿಸುತ್ತಿದ್ದವು.

ಕಷ್ಟದ ಬದುಕು ನೋಡಿದ್ದ ಮಾಸ್ತಾನಮ್ಮ
ಮಾಸ್ತಾನಮ್ಮ 22 ವಯಸ್ಸಿನವರಿದ್ದಾಗಲೇ ಅವರ ಪತಿ ತೀರಿಕೊಂಡಿದ್ದರು. ಮಕ್ಕಳನ್ನು ಒಬ್ಬರೇ ಸಾಕಿ ಬೆಳೆಸಿದ ಗಟ್ಟಿಗಿತ್ತಿ ಅವರು. ಅವರ ಊರಿನವರೇ ಆದ ಕೆ.ಲಕ್ಷ್ಮಣ್ ಮತ್ತು ಶ್ರೀನಾಥ್ ರೆಡ್ಡಿ ಎಂಬುವರು ಮಾಸ್ತಮ್ಮನ ಅಡುಗೆ ಕಲೆ ಕಂಡು ಮೆಚ್ಚಿಕೊಂಡು 2016ರಲ್ಲಿ ಮೊದಲು ವಿಡಿಯೋ ಮಾಡಲು ಶುರುವಿಟ್ಟರು, ಆಮೆಲೆ ನೆಡದಿದ್ದು ಪವಾಡ, ಅಜ್ಜಿ ಅಡುಗೆಗೆ ವಿಶ್ವದಾದ್ಯಂತ ಅಭಿಮಾನಿಗಳು ಹುಟ್ಟಿಕೊಂಡರು.

ವಯೋಸಹಜ ಖಾಯಿಲೆಯಿಂದ ಬಳಲಿದ್ದರು
ಮಾಸ್ತಮ್ಮ ಕಳೆದ ಆರು ತಿಂಗಳಿನಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಆ ನಂತರ ನಿನ್ನೆ ಅವರು ಅಸುನೀಗಿದರು. ಈ ಸುದ್ದಿಯನ್ನು ಯೂಟ್ಯೂಬ್ ಚಾನೆಲ್ 'ಕಂಟ್ರಿ ಫೂಡ್'ನಲ್ಲಿಯೇ ಹಾಕಿದ್ದಾರೆ ಲಕ್ಷ್ಮಣ್ ಮತ್ತು ಶ್ರೀನಾಥ್. ಅಜ್ಜಿ ಬಹಳಾ ಸಕ್ರಿಯರಾಗಿದ್ದರು, ವಿಡಿಯೋ ಸಮಯದಲ್ಲಿ ಎಲ್ಲ ಅಡುಗೆ ಕೆಲಸ ಅವರೇ ಮಾಡಿಕೊಳ್ಳುತ್ತಿದ್ದರು ಯಾರ ಸಹಾಯವನ್ನೂ ಕೇಳುತ್ತಿರಲಿಲ್ಲ ಎಂದು ನೆನೆಯುತ್ತಾರೆ ಲಕ್ಷ್ಮಣ್ ಮತ್ತು ಶ್ರೀನಾಥ್.

'ಕಂಟ್ರಿ ಫುಡ್ಸ್' ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋ
ಮಾಸ್ತಾನಮ್ಮ ಅವರ ಕಲ್ಲಂಡಗಿ ಚಿಕನ್, ಸುಟ್ಟ ಸೀಗಡಿ , ಸುಟ್ಟ ಬದನೆಫ್ರೈ, ಟಮೆಟೋ ಆಮ್ಲೆಟ್, ಏಡಿ ಮಸಾಲಾ, ಎಗ್ 65, ಸಾಂಪ್ರದಾಯಿಕ ಬಿರಿಯಾನಿ, ಬಾತುಕೋಳಿ ಸಾರು, ಚಿಕನ್ 65 ಇನ್ನೂ ಹಲವು ರೆಸಿಪಿಗಳು ಬಹು ಫೇಮಸ್ ಆಗಿದ್ದವು.
-
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ












Click it and Unblock the Notifications