Daily Horoscope: ಈ ರಾಶಿಯವರಿಗೆ ಇಂದು ಅದೃಷ್ಟದ ದಿನ, ಉದ್ಯೋಗದಲ್ಲಿ ಸಿಗುವುದು ಹೊಸ ಅವಕಾಶ

Horoscope July 14: ಮಂಗಳವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ಮಂಗಳವಾರ ಮಧ್ಯಾಹ್ನ 3:00 ರಿಂದ ಸಂಜೆ 4:30 ರವರೆಗೆ ಇರುತ್ತದೆ. 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲ ಮಾಹಿತಿ ಹೇಗಿದೆ ಎಂಬ ಪೂರ್ಣ ವಿವರ ತಿಳಿಯಿರಿ.

ಮೇಷ ರಾಶಿ (Aries):

ಮಕ್ಕಳ ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿ ಕೇಳುವಿರಿ. ಅಂದುಕೊಂಡ ಕೆಲಸ ನಿರೀಕ್ಷೆಯಂತೆಯೇ ಮುಗಿಯುವುದು. ಕೆಲಸಕ್ಕೆ ಸಂಬಂಧಿಸಿದಂತೆ ಪ್ರಗತಿಗೆ ಹೊಸ ಅವಕಾಶಗಳು ತೆರೆದುಕೊಳ್ಳುವುದು. ಹೊಸ ಆಸ್ತಿಯನ್ನು ಖರೀದಿಸುವ ಮೊದಲು, ಕುಟುಂಬ ಸದಸ್ಯರೊಂದಿಗೆ ಚರ್ಚಿಸಿ. ಕುಟುಂಬ ಜೀವನವು ಸಂತೋಷವಾಗಿರುತ್ತದೆ. ಆರೋಗ್ಯ ಇಂದು ಉತ್ತಮವಾಗಿರುತ್ತದೆ.

Horoscope July 14

ವೃಷಭ ರಾಶಿ (Taurus):

ಇಂದು ಆತ್ಮವಿಶ್ವಾಸದಿಂದ ತುಂಬಿದ ದಿನವಾಗಿರುತ್ತದೆ. ತಾಳ್ಮೆ ಮತ್ತು ತಿಳುವಳಿಕೆಯಿಂದ ವರ್ತಿಸಿದರೆ, ಖಂಡಿತವಾಗಿಯೂ ಯಶಸ್ಸು ಸಿಗುತ್ತದೆ. ಆರ್ಥಿಕ ಪರಿಸ್ಥಿತಿ ಇಂದು ಬಲವಾಗಿರುತ್ತದೆ. ಆದರೂ ಹೂಡಿಕೆ ಮಾಡುವಾಗ ಎಚ್ಚರ ಇರಲಿ. ಹೊಸ ಆದಾಯದ ಮೂಲ ಹುಟ್ಟಿಕೊಳ್ಳುವುದು. ಕುಟುಂಬ ಜೀವನದಲ್ಲಿ ಶಾಂತಿ ಮತ್ತು ಸಂತೋಷವು ಮೇಲುಗೈ ಸಾಧಿಸುತ್ತದೆ.

ಮಿಥುನ ರಾಶಿ (Gemini):

ಇಂದು ಅನುಕೂಲಕರ ದಿನವಾಗಲಿದೆ. ಆರ್ಥಿಕ ಪರಿಸ್ಥಿತಿ ಇಂದು ಉತ್ತಮವಾಗಿರುತ್ತದೆ. ಅನಗತ್ಯ ಖರ್ಚುಗಳನ್ನು ತಪ್ಪಿಸುವಿರಿ. ಇಂದು ಮಾಡುವ ಉಳಿತಾಯ ಭವಿಷ್ಯದಲ್ಲಿ ಉಪಯುಕ್ತವಾಗಿರುವುದು. ಇಂದು ವಿದ್ಯಾರ್ಥಿಗಳಿಗೆ ಅನುಕೂಲಕರ ದಿನವಾಗಿರುವುದು.

ಕರ್ಕಾಟಕ ರಾಶಿ (Cancer):

ಇಂದು ನಿಮಗೆ ಸಂತೋಷದ ದಿನವಾಗಿರುತ್ತದೆ. ವಿದ್ಯಾರ್ಥಿಗಳು ಇಂದು ಹೆಚ್ಚು ಕಷ್ಟಪಡಬೇಕಾಗುತ್ತದೆ. ಸ್ನೇಹಿತರ ಸಹಾಯ ಸಿಗುವುದು. ಜೀವನಶೈಲಿಯಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಬೇಕಾಗುವುದು. ಆರೋಗ್ಯ ಸುಧಾರಿಸುವುದು.

ಸಿಂಹ ರಾಶಿ (Leo):

ವ್ಯವಹಾರದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಲಾಭವಾಗುವುದು. ಕುಟುಂಬ ಸದಸ್ಯರಿಂದ ಒಳ್ಳೆಯ ಸುದ್ದಿ ಸಿಗಬಹುದು. ಮಕ್ಕಳ ಸಾಧನೆ ಖುಷಿ ತರುವುದು. ಉದ್ಯೋಗಾಕಾಂಕ್ಷಿಗಳಿಗೆ ಅವರ ನೆಚ್ಚಿನ ಕಂಪನಿಗಳಿಂದ ಉದ್ಯೋಗಾವಕಾಶಗಳು ಸಿಗುತ್ತವೆ. ಸಂಗಾತಿಯೊಂದಿಗೆ ಸಂಬಂಧ ಉತ್ತಮವಾಗಿರುವುದು. ಆರೋಗ್ಯದತ್ತ ಗಮನ ಹರಿಸಿ.

ಕನ್ಯಾ ರಾಶಿ (Virgo):

ಜವಾಬ್ದಾರಿಗಳು ಹೆಚ್ಚಾಗುವುದು. ಸಾಮಾಜಿಕ ಸ್ಥಾನಮಾನ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳಿಗೆ ಒಳ್ಳೆಯ ದಿನವಾಗಿರುತ್ತದೆ. ಆದಾಯದ ಹೊಸ ಮೂಲಗಳು ತೆರೆಯುವ ಸಾಧ್ಯತೆಯಿದೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಣದಲ್ಲಿ ಆಶ್ಚರ್ಯಕರ ಫಲಿತಾಂಶಗಳನ್ನು ನೋಡಬಹುದು. ಮನೆಯಲ್ಲಿ ಸಂತೋಷ ಮತ್ತು ಶಾಂತಿಯ ವಾತಾವರಣವಿರುತ್ತದೆ.

ತುಲಾ ರಾಶಿ (Libra):

ಮನೆ ಮತ್ತು ವ್ಯವಹಾರದ ನಡುವೆ ಸರಿಯಾದ ಸಮತೋಲನವನ್ನು ಕಾಯ್ದುಕೊಳ್ಳುವ ಮೂಲಕ, ಕುಟುಂಬ ಸಾಮರಸ್ಯ ಕಾಪಾಡಿಕೊಳ್ಳಬಹುದು. ದೈಹಿಕವಾಗಿ ಮತ್ತು ಮಾನಸಿಕವಾಗಿ ಚೈತನ್ಯಶೀಲರಾಗಿರುತ್ತೀರಿ. ನಿರ್ಮಾಣ ಕಾರ್ಯಗಳಿಗೆ ಖರ್ಚುಗಳು ಹೆಚ್ಚಾಗುವ ಸಾಧ್ಯತೆಯಿದೆ.ಹೊಸ ಉದ್ಯೋಗದ ಆಫರ್‌ ಬರಬಹುದು.

ವೃಶ್ಚಿಕ ರಾಶಿ (Scorpio):

ಕೆಲವು ದಿನಗಳಿಂದ ಎದುರಾಗಿದ್ದ ಸಮಸ್ಯೆಗಳು ಬಗೆಹರಿಯುವುದು. ವ್ಯಾಪಾರ ವ್ಯವಹಾರದಲ್ಲಿ ಲಾಭವಾಗುವುದು. ದೂರದ ಊರಿಗೆ ಪ್ರಯಾಣ ಬೆಳೆಸಬೇಕಾಗಬಹುದು. ಈ ಪ್ರವಾಸವು ಮುಂದಿನ ದಿನಗಳಲ್ಲಿ ನಿಮಗೆ ಪ್ರಯೋಜನಕಾರಿಯಾಗಿರುವುದು.

ಧನು ರಾಶಿ (Sagitarius):

ಇಂದು ನಿಮಗೆ ಒಳ್ಳೆಯ ದಿನವಾಗಲಿದೆ. ವೃತ್ತಿಯಲ್ಲಿ ಬಡ್ತಿ ಸಿಗುವುದು. ಮೇಲಧಿಕಾರಿಗಳಿಂದ ಪ್ರಶಂಸೆ ಸಿಗುವುದು. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ. ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗುವುದು.

ಮಕರ ರಾಶಿ (Capricorn):

ಆದಾಯದ ಮೂಲದಲ್ಲಿ ಹೆಚ್ಚಳವಾಗುವುದು. ವ್ಯಾಪಾರ, ವ್ಯವಹಾರದಲ್ಲಿ ಲಾಭವಾಗುವುದು. ಇಂದು ನಿಮ್ಮ ಕೆಲಸದ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗಬಹುದು. ನಿಮ್ಮ ಅದೃಷ್ಟ ಹೆಚ್ಚಾಗುವುದು. ನಿರ್ವಹಣಾ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಬಡ್ತಿ ಸಿಗಬಹುದು. ಸಂಗಾತಿಯೊಂದಿಗಿನ ಹಿಂದಿನ ಎಲ್ಲಾ ಭಿನ್ನಾಭಿಪ್ರಾಯಗಳು ಬಗೆಹರಿಯುತ್ತವೆ.

ಕುಂಭ ರಾಶಿ (Aquarius):

ನಿಂತು ಹೋದ ಆದಾಯದ ಮೂಲ ಮತ್ತೆ ಪುನರಾರಂಭವಾಗಬಹುದು. ಬರವಣಿಗೆ ಮತ್ತು ಕಲಾ ಕ್ಷೇತ್ರಗಳಲ್ಲಿರುವವರಿಗೆ ವಿಶೇಷ ಮನ್ನಣೆ ಸಿಗುತ್ತದೆ. ವ್ಯವಹಾರ ಲಾಭಗಳು ಹೆಚ್ಚಿರುತ್ತದೆ. ವೈವಾಹಿಕ ಜೀವನ ಉತ್ತಮವಾಗಿರುತ್ತದೆ.

ಮೀನ ರಾಶಿ (Pisces):

ಆಧ್ಯಾತ್ಮದತ್ತ ವಾಲುವಿರಿ. ಮಕ್ಕಳಿಂದ ಒಳ್ಳೆಯ ಸುದ್ದಿ ಕೇಳುವಿರಿ. ಸಂಗಾತಿಯ ಬೆಂಬಲ ಸಿಗುವುದು. ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುವುದು. ಹಣಕಾಸಿಗೆ ಸಂಬಂಧಪಟ್ಟಂತೆ ಇಂದು ಒಳ್ಳೆಯ ದಿನ, ತಲೆನೋವಿನ ಸಮಸ್ಯೆ ಬೆಳಗ್ಗಿನಿಂದಲೇ ಕಾಡುವುದು.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+