ಬಿಗ್‌ಬಾಸ್‌ನಲ್ಲಿ ಚಂದನಾಗೆ ಕಿಸ್ ಮಾಡಿದ್ದ ಕಿಶನ್ ಈಗ ಟಚ್ ಮಾಡದೇ ಡ್ಯಾನ್ಸ್ ಮಾಡಿದ್ರು! ನೋಡಿದ್ದು 50 ಲಕ್ಷ ಜನ
ಬಿಗ್‌ಬಾಸ್ ಕನ್ನಡ ಸೀಸನ್ 7ರಲ್ಲಿ ಕಿಶನ್ ಬಿಳಗಲಿ ಮತ್ತು ಚಂದನಾ ಅನಂತಕೃಷ್ಣ ಜೋಡಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಆಗ ಕಿಶನ್ ಚಂದನಾಗೆ ಕಿಸ್ ಮಾಡಿದ್ದ ಘಟನೆ ವೈರಲ್ ಆಗಿತ್ತು. ಇದೀಗ ಹಲವು ವರ್ಷಗಳ ಬಳಿಕ ಇದೇ ಜೋಡಿ 'ಕರಾವಳಿ' ಚಿತ್ರದ 'ಮುದ್ದುಗುಮ್ಮ' ಹಾಡಿಗೆ ಮತ್ತೆ ಒಟ್ಟಾಗಿ ಡ್ಯಾನ್ಸ್ ಮಾಡಿದ್ದಾರೆ. ಅದರಲ್ಲೂ ಒಂದು ವಿಶೇಷವಿದೆ.
ಕಿಶನ್ ಬಿಳಗಲಿ ಮತ್ತು ಚಂದನಾ ಅನಂತಕೃಷ್ಣ ಬಿಗ್‌ಬಾಸ್‌ನಲ್ಲಿ ಸಾಕಷ್ಟು ಹವಾ ಎಬ್ಬಿಸಿದ ಕಲಾವಿದರು. ಇದರಲ್ಲಿ ಕಿಶನ್ ಚಂದನಾಗೆ ಕಿಸ್ ಮಾಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈಗ ಮತ್ತೆ ಚಂದನಾ ಜೊತೆ ಕಿಶನ್ ಡಾನ್ಸ್ ಮಾಡಿದ್ದಾರೆ. ಆದರೆ ಸ್ವಲ್ಪವೂ ಟಚ್ ಮಾಡದೆ ರೊಮ್ಯಾಂಟಿಕ್ ಡ್ಯಾನ್ಸ್ ಮಾಡಿದ್ದಾರೆ.
ಕಿಶನ್ ಬಿಳಗಲಿ ಚಿಕ್ಕಮಗಳೂರು ಮೂಲದ ಕಲಾವಿದ. ಅವರ ಟೇಸ್ಟ್ ಸಾಮಾನ್ಯದ್ದಲ್ಲ. ಜೊತೆಗೆ ಹಿಲೇರಿಯಸ್ ತುಂಟಾಟಕ್ಕೂ ಫೇಮಸ್. ಇನ್ನೊಂದು ಇಂಟರೆಸ್ಟಿಂಗ್ ವಿಷಯ ಅಂದರೆ ಮೂರು ದಿನಗಳ ಹಿಂದೆ ಈವರೆಗಿನ ತನ್ನ ರೊಮ್ಯಾಂಟಿಕ್ ಆಲ್ಬಂಗಿಂತ ಡಿಫರೆಂಟಾಗಿ ಚಿನ್ನುಮರಿ ಖ್ಯಾತಿಯ ನಟಿ ಚಂದನಾ ಅನಂತಕೃಷ್ಣ ಜೊತೆಗೆ ಸ್ಟೆಪ್ ಹಾಕಿದ್ದಾರೆ. ಇದರ ವ್ಯೂಸ್ ಇದೀಗ 50 ಲಕ್ಷ ಸಮೀಪಿಸುತ್ತಿದೆ.

ಜನರಿಗೆ ಅಷ್ಟೊಂದು ಕುತೂಹಲ ಯಾಕೆ?
ಇದಕ್ಕೆ ಕಾರಣ ಇದೆ. ಹೊಸತಾಗಿ ನೋಡುವವರಿಗೆ ಗೊತ್ತಾಗಲ್ಲ. ಆದರೆ ಹಿಂದೆ ಇವರಿಬ್ಬರೂ ಬಿಗ್‌ಬಾಸ್‌ನಲ್ಲಿದ್ದವರು. ಆ ಬಿಗ್‌ಬಾಸ್ ಸೀಸನ್ ನೋಡಿದವರ ಕಣ್ಣಲ್ಲಿ ಈ ಡ್ಯಾನ್ಸ್‌ಗೆ ಬೇರೆಯದೇ ಮಹತ್ವ ಇದೆ. ಈ ಹಿಂದೆ ಬಿಗ್‌ಬಾಸ್‌ನಲ್ಲಿ ಇವರಿಬ್ಬರನ್ನು ನೋಡಿದ ಹೆಚ್ಚಿನ ಮಂದಿ ಇದೀಗ ಈ ಡ್ಯಾನ್ಸ್ ಅನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನೋಡಿ ಅದರ ವೀಕ್ಷಣೆ ಹೆಚ್ಚಲು ಕೊಡುಗೆ ಕೊಟ್ಟಿದ್ದಾರೆ.
ಬಿಗ್‌ಬಾಸ್‌ನಲ್ಲಿ ಏನಾಗಿತ್ತು..
ಬಿಗ್ ಬಾಸ್ ಸೀಸನ್ 7ರ ಹೈಲೈಟ್ ಇದು. ಅದರಲ್ಲಿ ಭೂಮಿ ಶೆಟ್ಟಿ, ಕಿಶನ್, ಚಂದನಾ ಅನಂತಕೃಷ್ಣ, ಚೈತ್ರ ಕೋಟೂರು ಸೇರಿ ಸಾಕಷ್ಟು ಮಂದಿ ಸ್ಪರ್ಧಿಗಳಿದ್ದರು. ದೊಡ್ಡ ಮನೆಯಲ್ಲಿ ಕಿಶನ್ ಅವಕಾಶ ಸಿಕ್ಕಿದಾಗಲೆಲ್ಲ ಮಹಿಳಾ ಸ್ಪರ್ಧಿಗಳಿಗೆ ಕಿಸ್ ನೀಡುತ್ತಾ ಕಿಸ್ಸಿಂಗ್ ಸ್ಟಾರ್ ಎನ್ನಿಸಿಕೊಂಡಿದ್ದರು. ನಟಿ ರಕ್ಷಾ ಎಲಿಮಿನೇಷನ್ ಆಗಿ ಮನೆಯಿಂದ ಹೊರಡುವಾಗಲೂ ಅಡ್ವಾಂಟೇಜ್ ತಗೊಂಡು ಕೆನ್ನೆಗೆ ಚುಂಬಿಸಿದ್ದರು. ದುಃಖ, ಸಂತೋಷ, ನೋವು, ಪ್ರೀತಿ ಎಲ್ಲದಕ್ಕೂ ಕಿಸ್ ಒಂದೇ ಮದ್ದು ಎಂಬಂತಾಗಿದ್ದರು.
ಇನ್ನೊಮ್ಮೆ ದೀಪಿಕಾ ಅಥವಾ ಭೂಮಿ ಶೆಟ್ಟಿ ಕಿಸ್ ಕೊಟ್ಟರೆ ಚಳಿಯಲ್ಲೂ ಸ್ವಿಮ್ಮಿಂಗ್ ಪೂಲ್ಗೆ ಜಿಗಿಯುತ್ತೇನೆ ಎಂದು ಹೇಳಿದ್ದರು. ಅದರಂತೆ ಭೂಮಿಕಾ ಕಿಸ್ ಕೊಟ್ಟಾಗ ಕೊರೆಯುವ ಚಳಿಯಲ್ಲೂ ನೀರಿಗೆ ಜಿಗಿದಿದ್ದರು. ಐವತ್ತೇಳನೇ ದಿನ ಹಾಗೆ ಸುಮ್ಮನೇ ಚೈತ್ರಾ ಕೋಟೂರ್ ಹಾಗೂ ಕಿಶನ್ರನ್ನು ನಟ-ನಟಿಯರಂತೆ ಡೈರೆಕ್ಷನ್ ಮಾಡುತ್ತಿರಬೇಕಾದರೆ ಇದ್ದಕ್ಕಿದ್ದಂತೆ ಚಂದನಾಗೆ ಕೆನ್ನೆಗೆ ತುಟಿಯೊತ್ತುವ ಮೂಲಕ ಹೊಸ ಚರ್ಚೆಗೆ ಗ್ರಾಸವಾಗಿದ್ದರು ಕಿಶನ್. ಇವರ ಜೋಡಿ ಬಗ್ಗೆ ಜನ ಆಗ ಬಹಳ ಮಾತನಾಡುತ್ತ ಇದ್ದರು. ಆದರೆ ಇವರು ತಾವಿಬ್ಬರೂ ಜಸ್ಟ್ ಫ್ರೆಂಡ್ಸ್ ಅಷ್ಟೇ ಅನ್ನುವ ಮೂಲಕ ಇದಕ್ಕೆ ತೆರೆ ಎಳೆದಿದ್ದರು.
ಚಂದನಾ ಮದುವೆಯಿಂದ ಎಲ್ಲಕ್ಕೂ ತೆರೆ
ಚಂದನಾ ಮಾತ್ರ ಇದ್ಯಾವುದಕ್ಕೂ ಸೊಪ್ಪು ಹಾಕದೇ ಪ್ರತ್ಯಕ್ಷ್ ಎಂಬವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಎರಡು ವರ್ಷಗಳ ಕೆಳಗೆ ಇವರಿಬ್ಬರ ವಿವಾಹ ಬಹಳ ವಿಜೃಂಭಣೆಯಿಂದ ನಡೆದಿತ್ತು.
ಚಂದನಾ ಕಿಶನ್ ಮತ್ತೆ ಡ್ಯಾನ್ಸ್
ಈಗ ಚಂದನಾಗೆ ಮದುವೆ ಆಗಿದೆ. ಆದರೆ ಹಳೆಯ ಸ್ನೇಹದಲ್ಲಿ ಕಿಶನ್ ಜೊತೆಗೆ ಡ್ಯಾನ್ಸ್ ಮಾಡಲು ಒಪ್ಪಿದ್ದಾರೆ. ಕರಾವಳಿ ಸಿನಿಮಾದ ಮುದ್ದುಗುಮ್ಮ ಹಾಡಿಗೆ ಈ ಇಬ್ಬರೂ ಸ್ಟೆಪ್ಸ್ ಹಾಕಿದ್ದಾರೆ. ಇಬ್ಬರ ಕೆಮೆಸ್ಟ್ರಿಯನ್ನು ಜನ ಮೆಚ್ಚಿಕೊಂಡಿದ್ದಾರೆ. ಇದರಲ್ಲಿ ಕಿಶನ್ ಯಕ್ಷಗಾನದ ವೇಷದಲ್ಲಿ ಮಿಂಚಿದರೆ ಚಂದನಾ ಭರತನಾಟ್ಯ ಮಾಡುತ್ತ ಗಮನಸೆಳೆಯುತ್ತಾರೆ.
ಟಚ್ ಮಾಡದೆ ರೊಮ್ಯಾನ್ಸ್ 50 ಲಕ್ಷದತ್ತ ವೀಕ್ಷಣೆ
ಈ ರೀಲ್ಸ್ ಲಕ್ಷಗಟ್ಟಲೆ ಜನರ ಗಮನಸೆಳೆದಿದೆ. ಈಗಾಗಲೇ ಬರೋಬ್ಬರಿ 50 ಲಕ್ಷದ ಸನಿಹ ಜನ ಇದನ್ನು ನೋಡಿದ್ದಾರೆ. ಆದರೆ ಇಲ್ಲೀವರೆಗೂ ಹಾಡಿನಲ್ಲಿ ನಾಯಕಿ ಜೊತೆ ಹಸಿಬಿಸಿಯಾಗಿ ಕಾಣಿಸಿಕೊಳ್ತಿದ್ದ ಕಿಶನ್ ಇಲ್ಲಿ ಒಳ್ಳೆ ಹುಡುಗನ ಥರ ಟಚ್ ಮಾಡದೇ ಮುದ್ದಾಡದೇ ರೊಮ್ಯಾನ್ಸ್ ಮಾಡಿದ್ದಾರೆ. ಚಂದನಾ ಈಗ ವಿವಾಹಿತೆ ಆಗಿರುವುದು ಇದಕ್ಕೆ ಕಾರಣ ಇದ್ದಿರಬಹುದು. ಆದರೆ ಈ ಜೋಡಿಯ ಈ ಟಚ್ಚಿಲ್ಲದ ರೊಮ್ಯಾನ್ಸ್ ಜನರಿಗೆ ಲೈಕಾಗಿದೆ. ಅವರು ಈ ಜೋಡಿಯ ಡ್ಯಾನ್ಸ್ ಅನ್ನು ಸಿಕ್ಕಾಪಟ್ಟೆ ಹೊಗಳಿ ಮೆಚ್ಚಿಕೊಂಡಿದ್ದಾರೆ. ಅಪಸ್ವರದ ಒಂದೆಳೆಯೂ ಇಲ್ಲ ಅನ್ನೋದೆ ದೊಡ್ಡ ವಿಶೇಷ.
(ಬರಹ: ಭವಾನಿ ಭಟ್)














Click it and Unblock the Notifications