ದೇಶದ ರೈತರಿಗೆ ಸಂಕಷ್ಟ: 2022ರಲ್ಲಿ ನಿಜವಾಯಿತೇ ಬಾಬಾ ವಂಗಾ ಭವಿಷ್ಯವಾಣಿ..?

ಕಣ್ಣುಕಾಣದ ಮಹಿಳೆಯೊಬ್ಬರು ಈ ಹಿಂದೇಯೇ ಹೇಳಿರುವ ಭವಿಷ್ಯವನ್ನು ವಿಶ್ವವೇ ವಿಸ್ಮಯದಿಂದ ನಂಬುವಂತಾಗಿದೆ. ಬಾಬಾ ವಂಗಾ ಈ ಹೆಸರು ಭವಿಷ್ಯ ಎನ್ನುವ ವಿಚಾರದಲ್ಲಿ ಬಹಳ ಚಿರಪರಿಚಿತ. ಆಕೆ ನುಡಿದ ಭವಿಷ್ಯಗಳು ಬಹುತೇಕ ನಿಜವಾಗಿದ್ದು, ಆಕೆಯ ನುಡಿಗಳ ಮೇಲೆ ವಿಶ್ವದ ಮೂಲೆ ಮೂಲೆಯ ಜನ ನಂಬಿಕೆ ಇಟ್ಟಿದ್ದಾರೆ.

ಬಾಬಾ ವಂಗಾ ಜಗತ್ತಿನಲ್ಲಿ 51ನೇ ಶತಮಾನದವರೆಗೂ ಏನೇನು ನಡೆಯಲಿದೆ ಎಂಬುದನ್ನು ಮೊದಲೇ ತಿಳಿಸಿದ್ದು, ಆಕೆಯ ಭವಿಷ್ಯದ ಬಗ್ಗೆ ಅಪಾರ ನಂಬಿಕೆ ಜನರಲ್ಲಿ ಇದೆ. ಭಾರತ ಸೇರಿದಂತೆ ವಿಶ್ವದ ಎಲ್ಲಾ ದೇಶಗಳಲ್ಲಿ ನಡೆಯುವ ಪ್ರಮುಖ ಘಟನೆಗಳ ಬಗ್ಗೆ ಬಾಬಾ ವಂಗಾ ಈ ಹಿಂದೆಯೇ ಊಹಿಸಿದ್ದರು ಎನ್ನಲಾಗಿದೆ.

ಯಾರಿ ಬಾಬಾ ವಂಗಾ..?

ಬಲ್ಗೇರಿಯಾ ಮೂಲದ ಬಾಬಾ ವಂಗಾ ಬಾಲ್ಯದಿಂದಲೇ ಕಣ್ಣುಗಳನ್ನು ಕಳೆದುಕೊಂಡು ಕುರುಡರಾಗಿದ್ದರು. ಆದರೆ ತಮ್ಮ ದಿವ್ಯಾದೃಷ್ಟಿಯ ಮೂಲಕ ಜಗತ್ತಿಗೆ ಜನಪ್ರಿಯವಾಗಿದ್ದರು. 1996ರಲ್ಲಿ ಬಾಬಾ ವಂಗಾ ಸ್ತನ ಕ್ಯಾನ್ಸರ್‌ನಿಂದ ಮೃತಪಟ್ಟರು. ಆಕೆ ಸತ್ತು ಈಗ 23 ವರ್ಷಗಳಾಗಿದ್ದರೂ, ಆಕೆಯ ಭವಿಷ್ಯದ ಬಗ್ಗೆ ಜನರಿಗೆ ಈಗಲೂ ನಂಬಿಕೆ ಇದೆ. ಸೋವಿಯತ್ ಒಕ್ಕೂಟ ಪತನ, ಪ್ರಿನ್ಸ್‌ ಡಯಾನಾ ದುರಂತ ಅಂತ್ಯ, ಚರ್ನೋಬಿಲ್ ದುರಂತ ಈ ಬಗ್ಗೆ ಬಾಬಾ ಬಾಬಾ ವಂಗಾ ಭವಿಷ್ಯವಾಣಿ ನುಡಿದಿದ್ದು, ಆಕೆ ಹೇಳಿದಂತೆಯೇ ಘಟನೆಗಳು ಸಂಭವಿಸಿದೆ ಎನ್ನುವುದು ಜನರ ನಂಬಿಕೆಯಾಗಿದೆ.

 ಕೆಲವು ದೇಶಗಳಲ್ಲಿ ನೀರಿನ ಅಭಾವದ ಮುನ್ಸೂಚನೆ

ಕೆಲವು ದೇಶಗಳಲ್ಲಿ ನೀರಿನ ಅಭಾವದ ಮುನ್ಸೂಚನೆ

2022ರ ಕುರಿತಾಗಿ ಕೂಡ ಬಾಬಾ ವಂಗಾ ಭವಿಷ್ಯ ನುಡಿದಿದ್ದು ಇಲ್ಲಿಯವರೆಗೂ ಬಹುತೇಕ ನಿಜವಾಗಿದೆ. ಪತ್ರಿಕೆಯೊಂದರ ವರದಿ ಪ್ರಕಾರ ಬಾಬಾ ವೆಂಗಾ ಅವರು 2022 ರಲ್ಲಿ ಕೆಲವು ದೇಶಗಳು ನೀರಿನ ಕೊರತೆಯಿಂದ ತೊಂದರೆಗೊಳಗಾಗುತ್ತವೆ ಎಂದು ಭವಿಷ್ಯ ನುಡಿದಿದ್ದರು. ಇದರಂತೆ ಪೋರ್ಚುಗಲ್ ಮತ್ತು ಇಟಲಿಯಂತಹ ದೇಶಗಳಲ್ಲಿ ನೀರಿನ ಅಭಾವದ ಮುನ್ಸೂಚನೆಗಳು ಕಂಡುಬರುತ್ತಿದ್ದು, ದೇಶಗಳು ಈಗಾಗಲೇ ನೀರಿನ ಬಳಕೆಯನ್ನು ಕಡಿಮೆ ಮಾಡಲು ತಮ್ಮ ಜನರನ್ನು ಕೇಳಿಕೊಂಡಿದ್ದಾರೆ. ಇನ್ನು ಇಟಲಿ ದೇಶದಲ್ಲಿ ಕೂಡ ಸುಮಾರು 70 ದಶಕಗಳ ನಂತರ ಭೀಕರ ಬರಗಾಲವನ್ನು ಎದುರಿಸುತ್ತಿದೆ.

 ಅನೇಕ ರಾಷ್ಟ್ರಗಳಲ್ಲಿ ಭಾರೀ ಮಳೆಗೆ ಜನ ತತ್ತರ

ಅನೇಕ ರಾಷ್ಟ್ರಗಳಲ್ಲಿ ಭಾರೀ ಮಳೆಗೆ ಜನ ತತ್ತರ

ಬಾಬಾ ವೆಂಗಾ 2022 ರಲ್ಲಿ ಏಷ್ಯನ್ ದೇಶಗಳು ಕೆಲವು ಭಾಗಗಳಲ್ಲಿ ಪ್ರವಾಹದಂತಹ ಪರಿಸ್ಥಿತಿಗಳು, ಸೇರಿದಂತೆ ಪ್ರಾಕೃತಿಕ ವಿಕೋಪ ಉಂಟಾಗುತ್ತದೆ ಎಂದು ಭವಿಷ್ಯ ಹೇಳಿದ್ದರು. ಈ ಬಾರಿ ಭಾರತ, ಥಾಯ್ಲೆಂಡ್, ಬಾಂಗ್ಲಾದೇಶ ಸೇರಿದಂತೆ ಅನೇಕ ದೇಶಗಳಲ್ಲಿ ಭಾರೀ ಮಳೆಯಾಗಿದೆ. ಭಾರತದ ಅನೇಕ ರಾಜ್ಯಗಳಲ್ಲಿ ಅಕಾಲಿಕ ಮಳೆಯಾಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಅನೇಕ ಬೆಳೆಗಳು ಈ ವರ್ಷ ಭಾರೀ ಮಳೆಯಿಂದ ಮಣ್ಣು ಪಾಲಾಗಿದೆ.

 ಸಂಕಷ್ಟದಲ್ಲಿ ಭಾರತದ ರೈತರು..?

ಸಂಕಷ್ಟದಲ್ಲಿ ಭಾರತದ ರೈತರು..?

ಇನ್ನು ಬಾಬಾ ವೆಂಗಾ ತಾಪಮಾನ 50 ಡಿಗ್ರಿ ಸೆಲ್ಸಿಯಸ್ ಅಧಿಕವಾಗಲಿದೆ, ಕೃಷಿ ಬೆಳೆಗಳು ಅಪಾರವಾಗಿ ಹಾನಿಯಾಗಲಿದೆ. ಪ್ರಮುಖವಾಗಿ ಕೃಷಿ ಬೆಳೆಗಳ ಮೇಲೆ ಮಿಡತೆಗಳ ಹಾವಳಿ ಹೆಚ್ಚಾಗಲಿದ್ದು, ರೈತರು ಸಂಕಷ್ಟ ಅನುಭವಿಸಲಿದ್ದಾರೆ. ಮಿಡತೆ ಹಾಗೂ ಕೀಟಗಳ ದಾಳಿಯಿಂದ ಅಪಾರ ಪ್ರಮಾಣದ ನಷ್ಟ ಉಂಟಾಗಲಿದೆ ಎಂದು ಭಾರತದ ಕುರಿತು ಭವಿಷ್ಯ ನುಡಿದಿದ್ದರು ಎನ್ನಲಾಗಿತ್ತು. ಅದರಂತೆಯೇ ಭಾರತಲ್ಲಿ ಈ ಘಟನೆಗಳು ಈಗಾಗಲೇ ಸಂಭವಿಸಿವೆ. ದೇಶದಲ್ಲಿ ರೈತರು ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

 ಭೂಮಿಗೆ ಲಗ್ಗೆ ಇಡಲಿವೆಯಾ ಏಲಿಯನ್‌ಗಳು..?

ಭೂಮಿಗೆ ಲಗ್ಗೆ ಇಡಲಿವೆಯಾ ಏಲಿಯನ್‌ಗಳು..?

ಇನ್ನು 2023ರ ಬಗ್ಗೆಯೂ ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. 2023ರಲ್ಲಿ ಸೌರ ಚಂಡಮಾರುತ ಉಂಟಾಗಬಹುದು. ಸೌರ ಚಂಡಮಾರುತ ಎಂದರೆ ಸೂರ್ಯನಿಂದ ಹೊರಹೊಮ್ಮುವ ಶಕ್ತಿಯ ಸ್ಫೋಟಗಳು. ಅವುಗಳ ಪರಿಣಾಮವು ಶಕ್ತಿಯುತವಾಗಿರುತ್ತದೆ.

ಇನ್ನು ಏಲಿಯನ್‌ಗಳು ಭೂಮಿಗೆ ಬರಬಹುದು. ಅನ್ಯಗ್ರಹ ಜೀವಿಗಳು ಭೂಮಿಗೆ ಬಂದರೆ ಲಕ್ಷಾಂತರ ಜನರು ಸಾಯಬಹುದು. 2023ರಲ್ಲಿ ಭೂಮಿಯು ಸೂರ್ಯನ ಸುತ್ತ ಸುತ್ತುತ್ತಿರುವ ತನ್ನ ಮಾರ್ಗವನ್ನು ಬದಲಾಯಿಸಬಹುದು ಎಂದು ಬಾಬಾ ವಂಗಾ ಭಯಾನಕ ಭವಿಷ್ಯ ನುಡಿದಿದ್ದಾರೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+