Tulsi: ತುಳಸಿ ಈ ದಿಕ್ಕಿಗೆ ಇಟ್ಟರೆ ಬಡತನದಿಂದ ಮುಕ್ತಿ ಸಂಪತ್ತಿನಲ್ಲಿ ವೃದ್ಧಿ!
ತುಳಸಿ ಅಂದರೆ ನಮ್ಮ ಮನಸ್ಸಿನಲ್ಲಿ ಪೂಜಾ ಭಾವನೆ ಮೂಡುತ್ತದೆ. ತುಳಸಿಯನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಸಸ್ಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ತುಳಸಿ ನೆಡುವುದು ಧಾರ್ಮಿಕ ದೃಷ್ಟಿಕೋನದಿಂದ ಮಾತ್ರವಲ್ಲದೆ ವಾಸ್ತು ದೃಷ್ಟಿಯಿಂದಲೂ ಮಂಗಳಕರವೆಂದು ಪರಿಗಣಿಸಲಾಗಿದೆ.
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ತುಳಸಿ ನೆಡುವುದರಿಂದ ವಾತಾವರಣದಲ್ಲಿ ಧನಾತ್ಮಕತೆ ಹೆಚ್ಚಾಗುತ್ತದೆ. ಇದರೊಂದಿಗೆ ವಿಷ್ಣುವಿನೊಂದಿಗೆ ಲಕ್ಷ್ಮಿ ದೇವಿಯ ಆಶೀರ್ವಾದವೂ ಸಿಗುತ್ತದೆ ಎಂದು ನಂಬಲಾಗುತ್ತದೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ ತುಳಸಿಯನ್ನು ಪೂಜಿಸುವುದು ಅತ್ಯಂತ ಮಂಗಳಕರವಾಗಿದೆ.

ತುಳಸಿ ಗಿಡವನ್ನು ಸರಿಯಾದ ದಿಕ್ಕಿನಲ್ಲಿ ನೆಡುವುದರಿಂದ ಸಂಪತ್ತು, ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ ಎಮದು ವಾಸ್ತುಶಾಸ್ತ್ರದಲ್ಲಿ ಹೇಳಲಾಗುತ್ತದೆ. ಮಾತ್ರವಲ್ಲದೆ ಇದು ಇಡೀ ಕುಟುಂಬವನ್ನು ದುಃಖದಿಂದ ರಕ್ಷಿಸುತ್ತದೆ. ಹೀಗಾಗಿ ಮನೆಯಲ್ಲಿ ನತುಳಸಿಗಿಡವನ್ನು ನೆಡುವುದು ನಿತ್ಯ ಅದಕ್ಕೆ ಪೂಜೆಯನ್ನು ಸಲ್ಲಿಸುವುದು ಮುಖ್ಯ.
ಆದರೆ ತುಳಸಿ ಗಿಡ ನೆಡುವಾಗ ದಿಕ್ಕಿನತ್ತ ಗಮನ ಹರಿಸದೇ ಇದ್ದರೆ ಲಾಭದ ಬದಲು ನಷ್ಟವೇ ಅಧಿಕ. ಹಾಗಾದರೆ ವಾಸ್ತು ಶಾಸ್ತ್ರದ ಪ್ರಕಾರ ತುಳಸಿ ಗಿಡವನ್ನು ನೆಡಲು ಸರಿಯಾದ ದಿಕ್ಕು ಯಾವುದು? ಯಾವ ದಿಕ್ಕಿನಲ್ಲಿ ತುಳಸಿ ಗಿಡವನ್ನು ಇಡಬೇಕು? ಯಾವ ದಿಕ್ಕಿನಲ್ಲಿ ನಿಂತು ಪೂಜೆ ಮಾಡಬೇಕು? ಎಲ್ಲವನ್ನು ತಿಳಿಯೋಣ.
ತುಳಸಿ ಗಿಡವನ್ನು ಯಾವ ದಿನ ನೆಟ್ಟರೆ ಒಳ್ಳೆಯದು?
ಕಾರ್ತಿಕ ಮಾಸ ವಿಷ್ಣು ಮತ್ತು ಲಕ್ಷ್ಮಿಯ ನೆಚ್ಚಿನ ಮಾಸವಾಗಿದೆ. ಇದಲ್ಲದೆ ತುಳಸಿಯು ವಿಷ್ಣುವಿಗೆ ತುಂಬಾ ಪ್ರಿಯವಾಗಿದೆ. ಆದ್ದರಿಂದ ಈ ದಿನತುಳಸಿಯನ್ನು ಸರಿಯಾಗಿ ಪೂಜಿಸಿ ದೀಪವನ್ನು ಹಚ್ಚಿದರೆ ಶುಭ ಫಲಗಳು ಸಿಗುತ್ತವೆ. ಇದರೊಂದಿಗೆ ಈ ದಿನ ತುಳಸಿ ಗಿಡವನ್ನು ನೆಟ್ಟರೆ ಹಲವಾರು ಪ್ರಯೋಜನಗಳನ್ನು ಪಡೆಯಬಹುದು.

ತುಳಸಿ ಯಾವ ದಿಕ್ಕಿನಲ್ಲಿ ಇಡಬಾರದು?
ತುಳಸಿ ಗಿಡವನ್ನು ನೆಡುವಾಗ ಅದರ ದಿಕ್ಕನ್ನು ನೆನಪಿಟ್ಟುಕೊಳ್ಳಿ. ತುಳಸಿ ಗಿಡವನ್ನು ದಕ್ಷಿಣ ದಿಕ್ಕಿನಲ್ಲಿ ನೆಡಬಾರದು ಏಕೆಂದರೆ ಈ ದಿಕ್ಕನ್ನು ಯಮ ಮತ್ತು ಪೂರ್ವಜರ ದಿಕ್ಕೆಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ತುಳಸಿಯನ್ನು ನೆಡುವುದರಿಂದ ವಾಸ್ತು ದೋಷಗಳು ಹೆಚ್ಚಾಗುತ್ತವೆ. ಹೆಚ್ಚುವರಿಯಾಗಿ ಹಣಕಾಸು, ದೈಹಿಕ ಮತ್ತು ಮಾನಸಿಕ ಆರೋಗ್ಯ ಹಾಗೂ ಪ್ರಗತಿಯ ಮೇಲೆ ಇದು ಕೆಟ್ಟ ಪರಿಣಾಮ ಬೀರುತ್ತದೆ.
ತುಳಸಿ ಯಾವ ದಿಕ್ಕಿನಲ್ಲಿ ಇಡಬೇಕು?
ವಾಸ್ತು ಶಾಸ್ತ್ರದ ಪ್ರಕಾರ, ತುಳಸಿ ಗಿಡವನ್ನು ಮನೆಯ ಉತ್ತರ ಅಥವಾ ಪೂರ್ವ, ಈಶಾನ್ಯ ದಿಕ್ಕಿನಲ್ಲಿ ನೆಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ತುಳಸಿ ಗಿಡವನ್ನು ಬಾಲ್ಕನಿ ಅಥವಾ ಕಿಟಕಿಯ ಮೇಲೆ ನೆಟ್ಟರೆ ಅದನ್ನು ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇರಿಸಿ.
ತುಳಸಿ ಮನೆಯಲ್ಲಿದ್ದರೆ ಪಾಲಿಸಬೇಕಾದ ನಿಯಮಗಳು...
ತುಳಸಿ ಗಿಡವನ್ನು ಮನೆಯಲ್ಲಿ ಇಡುವವರು ಅದಕ್ಕೆ ಸಂಬಂಧಿಸಿದ ಪ್ರಮುಖ ನಿಯಮಗಳನ್ನು ಪಾಲಿಸಬೇಕು. ತುಳಸಿ ಎಲೆಗಳನ್ನು ತಕ್ಷಣ ಕೀಳಬಾರದು ಎಂಬುದು ಈ ನಿಯಮಗಳಲ್ಲಿ ಒಂದಾಗಿದೆ. ಅದನ್ನು ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ದಿನದಲ್ಲಿ ಕಿತ್ತುಕೊಳ್ಳಬೇಕು.

ಯಾವ ದಿನ ತುಳಸಿ ಎಲೆಗಳನ್ನಿ ಕೀಳಬಾರದು?
1.ಧಾರ್ಮಿಕ ಗ್ರಂಥಗಳ ಪ್ರಕಾರ, ತುಳಸಿ ಎಲೆಗಳನ್ನು ಮನಬಂದಂತೆ ಕೀಳುವುದನ್ನು ತಪ್ಪಿಸಬೇಕೆಂದು ಹೇಳಲಾಗುತ್ತದೆ. ಭಾನುವಾರ, ಮಂಗಳವಾರ ಮತ್ತು ಶುಕ್ರವಾರದಂದು ತುಳಸಿ ಎಲೆಗಳನ್ನು ಕೀಳಬಾರದು. ಜೊತೆಗೆ ಏಕಾದಶಿ, ದ್ವಾದಶಿ, ಅಮವಾಸ್ಯೆ ಮತ್ತು ಹುಣ್ಣಿಮೆಯಂದು ತುಳಸಿಯನ್ನು ಕೀಳುವುದು ಅತ್ಯಂತ ಅಶುಭವೆಂದು ಪರಿಗಣಿಸಲಾಗಿದೆ.
2.ಮಗು ಹುಟ್ಟಿದಾಗ ಅಥವಾ ಮನೆಯಲ್ಲಿ ಯಾರಾದರೂ ಸತ್ತಾಗ ತುಳಸಿಯನ್ನು ಎಂದಿಗೂ ಕೀಳಬಾರದು. ಜೊತೆಗೆ ಸೂರ್ಯನ ಉದಯ ಹಾಗೂ ಅಸ್ತದ ಸಮಯದಲ್ಲಿ ತುಳಸಿ ಎಲೆಗಳನ್ನು ಕೀಳಬಾರದು. ಇದು ಅಪಶಕುನವಾಗಿದೆ. ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿಯೂ ತುಳಸಿ ಎಲೆಗಳನ್ನು ಕೀಳುವುದನ್ನು ನಿಷೇಧಿಸಲಾಗಿದೆ.
3.ತುಳಸಿಯನ್ನು ಕೀಳುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕಾದ ಎರಡು ಸನ್ನಿವೇಶಗಳನ್ನು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಅವರು ಸ್ನಾನ ಮಾಡದೆ ತುಳಸಿಯನ್ನು ಕೀಳಬಾರದು. ಇದರಿಂದ ತುಳಸಿ ಅಶುದ್ಧವಾಗುತ್ತದೆ. ಮಾಂಸಾಹಾರಿ ಆಹಾರವನ್ನು ಮುಟ್ಟಿ ತುಳಸಿಯನ್ನು ಮುಟ್ಟಬಾರದು.
ತುಳಸಿ ಆರೋಗ್ಯಕ್ಕೆ ಸಂಜೀವಿನಿ
ಆಯುರ್ವೇದ ಗುಣಗಳಿಂದ ತುಂಬಿರುವ ತುಳಸಿಯು ಭಾರತದ ಬಹುತೇಕ ಮನೆಗಳಲ್ಲಿ ಕಂಡು ಬರುತ್ತದೆ. ಇದು ಅನೇಕ ಔಷಧಿ ಗುಣಗಳನ್ನು ಹೊಂದಿದ್ದು ಶೀತ ಮತ್ತು ಕೆಮ್ಮಿನಿಂದ ಹಿಡಿದು ಅನೇಕ ರೋಗಗಳಿಂದ ಚಿಕಿತ್ಸೆ ನೀಡುತ್ತದೆ. ಇದು ಮಾನಸಿಕ ಒತ್ತಡ, ತೂಕ ಇಳಿಕೆ, ಜೀರ್ಣಕ್ರಿಯೆ ಸುಧಾರಣೆ, ರೋಗನಿರೋಧಕ ಶಕ್ತಿ ಹೆಚ್ಚಳ,ಸಕ್ಕರೆ ಮಟ್ಟ ನಿಯಂತ್ರಣ, ಬಾಯಿಯ ಆರೋಗ್ಯವನ್ನು ಕಾಪಾಡುತ್ತದೆ. ಅಲ್ಲದೆ ಸಾಕಷ್ಟು ಆರೋಗ್ಯಕರ ಪ್ರಯೋಜನಗಳನ್ನು ಈ ತುಳಸಿ ಹೊಂದಿದೆ.












Click it and Unblock the Notifications