KPSC: ಕರ್ನಾಟಕದಲ್ಲೂ ಸ್ವಜನಪಕ್ಷಪಾತ, ಪ್ರಶ್ನೆ ಪತ್ರಿಕೆ ಸೋರಿಕೆ: ಗಂಭೀರ ಕ್ರಮವಾಗಬೇಕು ಎಂದ ಬಸನಗೌಡ ಪಾಟೀಲ್ ಯತ್ನಾಳ್

KPSC: ಕರ್ನಾಟಕದಲ್ಲೂ ಸರ್ಕಾರಿ ಉದ್ಯೋಗ ಪಡೆಯುವುದಕ್ಕೆ ಯುವಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲೂ ಸ್ವಜನಪಕ್ಷಪಾತ, ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವ ಅವಶ್ಯಕತೆ ಇದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಆಗ್ರಹಿಸಿದ್ದಾರೆ.

ಈ ಸಂಬಂಧ ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಸರ್ಕಾರಿ ಉದ್ಯೋಗ ಪಡೆಯಲು ಆಕಾಂಕ್ಷಿಗಳು ಹಗಲು ರಾತ್ರಿ ಕಷ್ಟ ಪಟ್ಟು ಓದುತ್ತಾರೆ. ಆರ್ಥಿಕವಾಗಿ ದುರ್ಬಲವಾಗಿರುವವರು ಪದವಿ ಮುಗಿಸಿ ಕೆಲಸ ಮಾಡಿಕೊಂಡು ರಾತ್ರಿಯಲ್ಲಿ ಅಭ್ಯಾಸ ಮಾಡುತ್ತಾರೆ. ಆಕಾಂಕ್ಷಿಗಳ ಪೋಷಕರೂ ಸಹ ನಮ್ಮ ಮಕ್ಕಳು ಸರ್ಕಾರೀ ಹುದ್ದೆ ಸಿಗಲಿ ಎಂದು ಹಂಬಲಿಸುತ್ತಿರುತ್ತಾರೆ. ಆದರೆ, ಕರ್ನಾಟಕ ಲೋ(ಪ)ಕ ಸೇವಾ ಆಯೋಗದ [KPSC] ಅಧ್ಯಕ್ಷರು ತಮ್ಮ ಮಗಳಿಗೆ ಸರ್ಕಾರಿ ಹುದ್ದೆ ಸಿಗಲೆಂದು ಆದಾಯ ಪ್ರಮಾಣ ಪತ್ರವನ್ನೇ ನಕಲು ಮಾಡಿದ್ದಾರೆ ಎಂದು ದೂರಿದ್ದಾರೆ.

KPSC

ಮುಂದುವರಿದು ಕರ್ನಾಟಕ ಲೋಕ ಸೇವಾ ಆಯೋಗದ ಅಧ್ಯಕ್ಷರ ವೇತನ, ಸೌಲಭ್ಯ ಹಾಗೂ ಭತ್ಯೆಗಳು ತಿಂಗಳಿಗೆ ರೂ ₹2.25 ಲಕ್ಷ ಇದೆ ಎಂದು ಗೊತ್ತಾಗಿದೆ. ವಾರ್ಷಿಕ ₹ 27 ಲಕ್ಷ ವೇತನ ಪಡೆಯುವ ಆಯೋಗದ ಅಧ್ಯಕ್ಷರು ಆದಾಯ ಪ್ರಮಾಣ ಪತ್ರದಲ್ಲಿ ₹40,000 ವಾರ್ಷಿಕ ವರಮಾನ ಎಂದು ಘೋಷಿಸಿರುವುದು ದೊಡ್ಡ ಅಪರಾಧ. ಅವರ ಮಗಳಿಗೆ ನೌಕರಿ ಸಿಗುವ ಸಲುವಾಗಿ ಆದಾಯ ಪ್ರಮಾಣ ಪತ್ರದಲ್ಲಿ ತಪ್ಪು ಮಾಹಿತಿ ನೀಡಿರುವುದು ಬಹುತೇಕ ಖಚಿತವಾಗಿದೆ. ಇದೊಂದು Open & Shut Case of Nepotism ಎಂದು ಗೊತ್ತಾಗುತ್ತದೆ.

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಲೋಪ, ನಕಲು, ಸ್ವಜನಪಕ್ಷಪಾತ, ಪ್ರಶ್ನೆ ಪತ್ರಿಕೆ ಸೋರಿಕೆಯಾದರೆ ವರ್ಷಗಟ್ಟಲೆ ಓದಿದ ಆಕಾಂಕ್ಷಿಗಳ ಕನಸಿಗೆ ತಣ್ಣೀರೆರಚದಂತೆ ಆಗುತ್ತದೆ. ಅರ್ಹ, ಪ್ರತಿಭಾನ್ವಿತ, ಬುದ್ದಿವಂತ ಹಾಗೂ ಭವಿಷ್ಯತ್ತಿನಲ್ಲಿ ಒಳ್ಳೆಯ ಆಡಳಿತ ಮಾಡಬಲ್ಲ ಆಕಾಂಕ್ಷಿಗಳ ಭವಿಷ್ಯಕ್ಕೆ ಕೊಳ್ಳಿ ಇಟ್ಟಂಗಾಗುತ್ತದೆ. ಶಿವಶಂಕರಪ್ಪನವರ ಪ್ರಕರಣದಲ್ಲಿ ಮಾನ್ಯ ಸುಪ್ರೀಂ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಲು ನಿರಾಕರಿಸಿದೆ. ಹಲವು ವರ್ಷಗಳಿಂದ ತಮಗೆ ಒಂದು ಸರ್ಕಾರಿ ಉದ್ಯೋಗ ಸಿಗುತ್ತದೆ ಎಂದು ಓದುತ್ತಿರುವ, ಕಷ್ಟಪಡುತ್ತಿರುವ ಆಕಾಂಕ್ಷಿಗಳ ಹಿತದೃಷ್ಟಿಯಿಂದ ಶಿವಶಂಕರಪ್ಪ ಅವರ ಪ್ರಕರಣವನ್ನು ಕೇಂದ್ರ ತನಿಖಾ ದಳ (CBI) ಗೆ ನೀಡಿದರಷ್ಟೇ ವಸ್ತುನಿಷ್ಠವಾಗಿ ತನಿಖೆ ನಡೆಸಿ ಯಾವುದೇ ಬಾಹ್ಯ ಒತ್ತಡಕ್ಕೆ ಮಣಿಯದೆ ಆರೋಪಿಗಳನ್ನು ಕೃಷ್ಣ ಪರಮಾತ್ಮನ ಜನ್ಮ ಸ್ಥಳಕ್ಕೆ ಕಳುಹಿಸಬಹುದು.

ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಸಿ.ಬಿ.ಐಗೆ ವಹಿಸಿ ಲಕ್ಷಾಂತರ ಸರ್ಕಾರಿ ಉದ್ಯೋಗಾಕಾಂಕ್ಷಿಗಳ ಹಿತವನ್ನು ಕಾಪಾಡಬೇಕು ತನ್ಮೂಲಕ ಪರೀಕ್ಷಾ ಅಕ್ರಮದಲ್ಲಿ ' Zero Tolerance' ನೀತಿಯನ್ನು ಅನುಸರಿಸಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಅವರು ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+