ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸಿರುವ ಡಾನ್ಸರ್‌ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ

ಸ್ವತಃ ಬಾಲಿವುಡ್ ಸ್ಟಾರ್ ಗೋವಿಂದಾ ಕೂಡ ನಾಚುವಂತೆ ಡಾನ್ಸ್‌ ಮಾಡಿರುವ 'ಅಂಕಲ್‌' ಒಬ್ಬರು ಇಂಟರ್ನೆಟ್‌ ನಲ್ಲಿ ಧೂಳೆಬ್ಬಿಸಿದ್ದಾರೆ.

'ಆಪ್‌ ಕೆ ಆ ಜಾನೇ ಸೇ' ಹಾಡಿಗೆ ಸಖತ್ ಸ್ಟೆಪ್ ಹಾಕಿರುವ ಅಂಕಲ್‌ ಒಬ್ಬರ ವಿಡಿಯೋ ಕಳೆದೆರಡು ದಿನದಿಂದ ಭಾರಿ ವೈರಲ್ ಆಗಿದೆ. ಸುಮಾರು 50ರ ಆಸುಪಾಸು ವಯಸ್ಸಿನ ಈ ಅಂಕಲ್‌ ಸ್ಟೆಪ್‌ಗೆ ಇಡೀ ಭಾರತ ಫಿದಾ ಆಗಿದೆ.

ಸ್ಟಾರ್ ನಟ ಗೋವಿಂದಾ ಕೂಡ ನಾಚುವಂತೆ ಅವರದೇ ಹಾಡಿಗೆ ಸ್ಟೆಪ್ ಹಾಕಿರುವ ಈ ಅಂಕಲ್‌ ಅವರ ನಿಜ ಹೆಸರು ಸಂಜೀವ್ ಶ್ರೀವಾತ್ಸವ್. ಇವರು ಭೂಪಾಲ್‌ನಲ್ಲಿ ಫ್ರೊಫೆಸರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Viral video of an uncle dancing like Govinda

1982 ರಿಂದಲೂ ಡಾನ್ಸ್‌ ಮಾಡುತ್ತಿರುವ ಇವರಿಗೆ ಗೋವಿಂದಾ ಆರಾಧ್ಯ ದೈವವಂತೆ. ಅವರ ಡಾನ್ಸ್ ವಿಡಿಯೋದಲ್ಲಿ ಕೂಡ ಅವರು ಗೋವಿಂದಾ ಅವರನ್ನೇ ಅನುಕರಿಸಿದ್ದಾರೆ. ಕೇವಲ ಕೈ ಕಾಲು ಕುಣಿಸಿ ಅವರ ನರ್ತಿಸಿಲ್ಲ ಅವರ ಮುಖಭಾವದಲ್ಲೂ ಡಾನ್ಸ್ ಕಾಣಿಸುತ್ತದೆ.

ಕಾರ್ಯಕ್ರಮವೊಂದರಲ್ಲಿ ತಮ್ಮ ಮಡದಿಯೊಂದಿಗೆ ಸ್ಟೇಜ್ ಏರಿ ಸುಮ್ಮನೆ ಕುಣಿದ ಕುಣಿತ ಇಂದು ಅವರಿಗೆ ಭಾರಿ ಪ್ರಸಿದ್ಧಿ ಒದಗಿಸಿಕೊಟ್ಟಿದೆ. 'ನನ್ನ ಡಾನ್ಸ್ ವಿಡಿಯೋ ಮೆಚ್ಚಿಕೊಂಡ ಎಲ್ಲರಿಗೂ ಧನ್ಯವಾದ, ನನ್ನ ಡಾನ್ಸ್ ವಿಡಿಯೋ ವೈರಲ್ ಆದ ನಂತರ ನನಗೆ ಹೆಚ್ಚಿನ ಅವಕಾಶಗಳು ಬರಬಹುದು ಎಂಬ ನಿರೀಕ್ಷೆಯಲ್ಲಿದ್ದೇನೆ' ಎಂದಿದ್ದಾರೆ ಅವರು.

ಡಾನ್ಸ್ ವಿಡಿಯೋ ವೈರಲ್ ಆಗುತ್ತಿದ್ದಂತೆ ಇವರ ಖ್ಯಾತಿ ಯಾವ ಮಟ್ಟಕ್ಕೆ ಏರಿಕೆಯಾಗಿದೆ ಎಂದರೆ ರಾಷ್ಟ್ರೀಯ ವಾಹಿನಿಗಳು ಇವರ ಸಂದರ್ಶನಕ್ಕೆ ಸಾಲುಗಟ್ಟಿವೆ. ಇವರ ಡಾನ್ಸ್‌ ವಿಡಿಯೋ ನೋಡಲು ಜನರಿಂದ ಭಾರಿ ಒತ್ತಡ ಬರುತ್ತಿದೆ. ಹೀಗಾಗಿ ವಿರು ತಮ್ಮ ಡಾನ್ಸ್ ವಿಡಿಯೋಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಪ್‌ಲೋಡ್ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+