ಹಳ್ಳಿ ಹೈದರ ಕೀಕೀ ಡ್ಯಾನ್ಸ್,ಅಮೆರಿಕ ಪತ್ರಿಕೆಯಲ್ಲಿ ಪ್ರಮುಖ ಸುದ್ದಿ!
Recommended Video

ನ್ಯೂಯಾರ್ಕ್, ಆಗಸ್ಟ್ 22: ದಕ್ಷಿಣ ಭಾರತದ ರಾಜ್ಯದ ಮೂಲೆಯೊಂದರ ಹಳ್ಳಿಯಲ್ಲಿ ತಮ್ಮ ಇಷ್ಟಕ್ಕೆ ಇಂಗ್ಲಿಷ್ ಹಾಡಿಗೆ ಕುಣಿದ ಇಬ್ಬರು ಹಳ್ಳಿ ಹೈದರು ಈಗ ವರ್ಲ್ಡ್ ಫೇಮಸ್ ಆಗಿಬಿಟ್ಟಿದ್ದಾರೆ.
ಹೌದು, ವಿಶ್ವ ಪ್ರಸಿದ್ಧ ಕೀ-ಕೀ ಡ್ಯಾನ್ಸ್‌ಗೆ ಬಾಲಿವುಡ್, ಹಾಲಿವುಡ್ ಸೆಲೆಬ್ರಿಟಿಗಳೆಲ್ಲಾ ರಸ್ತೆಯಲ್ಲಿ ಕುಣಿದಿದ್ದು ನೋಡಿಯೇ ಇರುತ್ತೀರಿ. ಅಂತೆಯೇ ಇದೇ ಸಮಯದಲ್ಲಿ ಹಳ್ಳಿ ಹುಡುಗರಿಬ್ಬರು ತಮ್ಮ ಗದ್ದೆಯಲ್ಲಿ ಎತ್ತುಗಳ ಜೊತೆಯಲ್ಲಿ 'ಕಿ-ಕೀ ಡು ಯು ಲವ್ ಮೀ' ಎಂದು ಹಾಡಿ ಕುಣಿದಿದ್ದರು. ಅದು ಬಹಳ ವೈರಲ್ ಆಗಿತ್ತು.
ಈಗ ಆ ವಿಡಿಯೋ ಅಮೆರಿಕದ ಪ್ರತಿಷ್ಠಿತ ದಿನ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್‌ನ ಗಮನ ಸೆಳೆದಿದೆ. ಈ ಇಬ್ಬರು ಹುಡುಗರ ನೃತ್ಯ ಜಗತ್ತನ್ನೇ ಸೆಳೆದಿದೆ, ಈ ಹುಡುಗರು ಕೀ-ಕೀ ಹಾಡಿಗೆ ಕುಣಿಯುವುದು ಹೇಗೆ ಎಂದು ವಿಶ್ವಕ್ಕೆ ತೋರಿಸಿದ್ದಾರೆ ಎಂದೆಲ್ಲಾ ಪತ್ರಿಕೆ ಹೊಗಳಿ ವಿಶೇಷ ವರದಿ ಪ್ರಕಟಿಸಿದೆ.

ಆಗಸ್ಟ್ 6ರಂದು ನ್ಯೂಯಾರ್ಕ್ ಟೈಮ್ಸ್ ಈ ವರದಿಯನ್ನು ಪ್ರಕಟಿಸಿತ್ತು. ಕೀ-ಕೀ ಚಾಲೆಂಜ್‌ನ ಚಾಂಪಿಯನ್‌ಗಳು ಇವರೇ ಎಂದು ಯುವಕರ ನೃತ್ಯವನ್ನು ಹೊಗಳಿ, ಹಳ್ಳಿ ಹುಡುಗರ ಕಿ-ಕೀ ನೃತ್ಯವನ್ನು ಜಗತ್ತಿನಾದ್ಯಂತ ಫೇಮಸ್ ಆಗುವಂತೆ ನ್ಯೂ ಯಾರ್ಕ್ ಟೈಮ್ಸ್ ಪತ್ರಿಕೆ ಮಾಡಿದೆ.
ಅಂದಹಾಗೆ ಈ ಹುಡುಗರು ತೆಲಂಗಾಣ ರಾಜ್ಯದ ಲಂಬಾಡಿಪಲ್ಲಿಯವರು. ಅನಿಲ್ ಗೀಲಾ ಮತ್ತು ಪಿಲ್ಲಿ ತಿರುಪತಿ ಎಂಬ ಈ ಇಬ್ಬರು ಯುವಕರು ತಮ್ಮ ಅಸಡಾ-ಬಸಡಾ ನೃತ್ಯದಿಂದ ವಿಶ್ವದ ಗಮನ ಸೆಳೆದಿದ್ದಾರೆ. ಭತ್ತ ನಾಟಿ ಮಾಡುವ ಸಮಯದಲ್ಲಿ ತಮ್ಮದೇ ಊರಿನ ಆದರೆ ಪಟ್ಟಣದಲ್ಲಿ ಕಲಿಯುತ್ತಿರುವ ಗೆಳೆಯನ ಒತ್ತಾಯದಂತೆ ತಮಗೆ ಬಂದಂತೆ ಹಾಡಿಗೆ ಕುಣಿದಿದ್ದಾರೆ ಅಷ್ಟೆ ಆದರೆ ಅವರಿಂದು ವರ್ಲ್ಡ್ ಫೇಮಸ್ ಆಗಿಬಿಟ್ಟಿದ್ದಾರೆ.
ನ್ಯೂಯಾರ್ಕ್ ಟೈಮ್ಸ್‌ನ ವೆಬ್ ಆವೃತ್ತಿಯಲ್ಲಿ ಈ ವರದಿ ಓದಲು ಲಭ್ಯವಿದೆ. ಆಗಸ್ಟ್ 6ರಂದು ಈ ವರದಿಯು ವಿಶ್ವ ವಿಭಾಗದದ ಏಷಿಯಾ ಸೆಕ್ಷನ್‌ನಲ್ಲಿ ಪ್ರಕಟವಾಗಿದೆ. ಆಸಕ್ತರು ಓದಬಹುದು.












Click it and Unblock the Notifications