New Year 2024: ವರ್ಷಾಚರಣೆ ಸಂಭ್ರಮಕ್ಕೆ ಇಲ್ಲಿವೆ ದೇಶದ 5 'ಬಜೆಟ್ ಸ್ನೇಹಿ' ತಾಣಗಳು
ಬೆಂಗಳೂರು, ಡಿಸೆಂಬರ್ 20: ಹೊಸ ವರ್ಷಚರಣೆಗೆ ದಿನಗಳು ಸನಿಹವಾಗುತ್ತಿವೆ. ಒಂದು ವರ್ಷ ಕಳೆದೇ ಹೋಯ್ತು ಅನ್ನುವವರು ಸಹ ಸಂಭ್ರಮಾಚರಣೆ ಎಲ್ಲಿ ಮಾಡೋದು, 2024 ಅನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ. ಈ ದಿನವನ್ನು ಸ್ಮರಣೀಯವಾಗಿಸಲು, ಕಡಿಮೆ ಬಜೆಟ್‌ನಲ್ಲಿ ಪ್ರವಾಸಿ ಸ್ಥಳ, ಬೀಚ್‌ಗಳನ್ನು ಹುಡುಕುತ್ತಿದ್ದಾರೆ. ಈ ಪೈಕಿ ಭಾರತದಲ್ಲಿ ಕಡಿಮೆ ಖರ್ಚಿನಲ್ಲಿ ಎಲ್ಲಿಗೆ ಹೋಗಬಹುದು ಎಂದು ಪ್ಲಾನ್ ಮಾಡುವವರಿಗೆ ಇಲ್ಲಿವೆ ಒಂದಷ್ಟು ಮಾಹಿತಿ.
ಹೊಸ ವರ್ಷಾಚರಣೆಯನ್ನು ಸಾಧ್ಯವಾದಷ್ಟು ಕಡಿಮೆ ಹಣದಲ್ಲಿ ಎಂಜಾಯ್ ಮಾಡಲು ನಿಮ್ಮ ಹತ್ತಿರದಲ್ಲಿರುವ ದೇಶದ ಐದು ಪ್ರದೇಶಗಳ ಮಾಹಿತಿ ಬಗ್ಗೆ ಮನಿಕಂಟ್ರೋಲ್ ವರದಿ ಮಾಡಿದೆ.

ಪುದುಚೇರಿ/ಪಾಂಡಿಚೆರಿ (Pondicherry)
ಭಾರತೀಯರಿಗೆ ಬೀಚ್‌ಗಳು ಎಂದರೆ ಅಚ್ಚು ಮೆಚ್ಚು. ತನ್ನದೇ ಆದ ಮೋಡಿ, ವಿಶಿಷ್ಟ ಸಂಸ್ಕೃತಿಗಳ ಮಿಶ್ರಣದಿಂದ ಪುದುಚೇರಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ವಸಾಹತುಶಾಹಿ ವಾಸ್ತುಶೈಲಿ, ಕಲ್ಲುಮಣ್ಣುಗಳಿಂದ ಕೂಡಿದ ಬೀದಿಗಳು ಮತ್ತು ಪ್ರಶಾಂತ ಕಡಲತೀರಗಳಲ್ಲಿ ಹೊಸ ವರ್ಷಾಚರಣೆ ಮಾಡಿ ಆ ದಿನವನ್ನು ಸ್ಮರಣೀಯವಾಗಿಸಿಕೊಳ್ಳಬೇಕು ಎಂಬುದು ಅನೇಕ ಆಸೆಯಾಗಿರುತ್ತದೆ. ಇದಕ್ಕಾಗಿ ಹೊಸ ವರ್ಷದ ಮುನ್ನಾದಿನವೇ ನೀವು ತೆರಳಬೇಕಿರುತ್ತದೆ. ಕಡಲ ತೀರದ ಕೆಫೆಗಳಲ್ಲಿ ನೀವು ಬೇರೆ ಪ್ರದೇಶಗಳಿಗಿಂಲೂ ಇಲ್ಲಿ ಕಡಿಮೆ ಬಜೆಟ್ ನಲ್ಲಿ ವರ್ಷಾಚರಣೆ ಆನಂದಿಸಬಹುದು. ಇಲ್ಲಿನ ಸಂಗೀತ, ಫ್ರೆಂಚ್ ಕ್ವಾರ್ಟರ್ ದೀಪ, ಕಡಲ ಅಲೆಗಳು ಅಂದು ನಿಮ್ಮ ಖುಷಿಯನ್ನು ಹಿಮ್ಮಡಿಗೊಳಿಸಲಿವೆ.
ಗೋವಾ (Goa)
ಗೋವಾಗೆ ಹೆಸರು ಹೇಳುತ್ತಿದ್ದಂತೆಯೇ ಅತ್ಯುತ್ಸಾಹದ ವಾತಾವರಣ, ರೋಮಾಂಚಕಾರಿ ಅನುಭವ ನೀಡುವ ಬೀಚ್, ತನ್ನದೇ ಆದ ಸಂಸ್ಕೃತಿಯು ಕಣ್ಣಮುಂದೆ ಬರುತ್ತದೆ. ಈ ಗೋವಾ ಬಜೆಟ್ ಸ್ನೇಹಿ ಹೊಸ ವರ್ಷದ ಮುನ್ನಾ ದಿನದ ಆಚರಣೆಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಹೊಸ ವರ್ಷದ ಸಂಭ್ರಮವನ್ನು ದುಪ್ಪಟ್ಟು ಮಾಡುವ ನೆಚ್ಚಿನ ತಾಣಗಳಲ್ಲಿ ಇದು ಪ್ರಮುಖವಾದದ್ದು ಅಂತಲೇ ಪ್ರವಾಸಿಗರ ಭಾವನೆ. ರಾಜ್ಯದ ಪ್ರಾಚೀನ ಕಡಲತೀರಗಳು ಉತ್ಸಾಹಭರಿತ ಪಾರ್ಟಿ ಹಬ್‌ಗಳಾಗಿ ರೂಪಾಂತರಗೊಳ್ಳುತ್ತವೆ. ಹಲವಾರು ಶಾಕ್‌ಗಳು ಮತ್ತು ಕ್ಲಬ್‌ಗಳು ಕೈಗೆಟುಕುವ ಈವೆಂಟ್‌ಗಳನ್ನು ಇಲ್ಲಿ ಹೋಸ್ಟ್ ಮಾಡಿರುತ್ತಾರೆ. ಕಡಿಮೆ ಬಜೆಟ್‌ನಲ್ಲಿ ನೀವು ಇದೆಲ್ಲವನ್ನು ಆನಂದಿಸಬಹುದಾಗಿದೆ. ಬೀಚ್ ವ್ಯಾಪ್ತಿಯಲ್ಲಿ ರಾತ್ರಿ ಕರಾವಳಿ ಸಂಗೀತ ಮೊಳಗುತ್ತಿರುತ್ತದೆ. ನೃತ್ಯ, ಸಿಡಿಸುವ ಪಟಾಕಿಗಳು ಎಂತವರಿಗೂ ಹಬ್ಬದ ಉಲ್ಲಾಸವನ್ನು ನೀಡುತ್ತವೆ.
ಉದಯಪುರ, ರಾಜಸ್ಥಾನ
ರಾಜಸ್ಥಾನದ ಉದಯಪುರದಲ್ಲಿ ರೆಗಲ್ ಆಚರಣೆಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಭವ್ಯ ಅರಮನೆಗಳು, ಮಿನುಗುವ ಸರೋವರಗಳು, ಐತಿಹಾಸಿಕ ಆಕರ್ಷಣೆಗಳು ಹೊಸ ವರ್ಷಾಚರಣೆಗೆ ಮತ್ತಷ್ಟು ಮೆರಗು ತುಂಬುವ ವಾತಾವರಣ ಇಲ್ಲಿರುತ್ತದೆ. ಉದಯಪುರದಲ್ಲಿ ಸಾಕಷ್ಟು ಹೋಟೆಲ್‌ಗಳು, ಕೆಲವು ಸ್ಥಳಗಳಲ್ಲಿ ಕಡಿಮೆ ಬೆಲೆಯಲ್ಲಿ ಹೊಸ ವರ್ಷದ ಪಾರ್ಟಿಗಳನ್ನು ಆಯೋಜಿಸಲಾಗಿರುತ್ತದೆ. ಕೆಲವರಿಗೆ ಇಲ್ಲಿ ಸಿಕ್ಕ ರಾಯಲ್ ಅನುಭವ ಪ್ರತಿ ವರ್ಷ ಪಡೆಯಲು ಇಷ್ಟಪಡುತ್ತಾರೆ. ಈ ವರ್ಷ ನಿಮ್ಮ ಹೊಸ ವರ್ಷಾಚರಣೆ ಪ್ಲಾನಿನ ಪಟ್ಟಿಯಲ್ಲಿ ನೀವು ಈ ತಾಣವನ್ನು ಸೇರಿಸಿಕೊಳ್ಳಬಹುದು.
ಕಸೋಲ್, ಹಿಮಾಚಲ ಪ್ರದೇಶ
ಪರ್ವತದಂತಹ ಪ್ರದೇಶದಿಂದ ದೂರ ಉಳಿದು ಹೊಸ ವರ್ಷದ ಸಡಗರದಲ್ಲಿ ತೊಡಗಿಕೊಳ್ಳುವವರಿಗೆ ಹಿಮಾಚಲ ಪ್ರದೇಶದ 'ಕಸೋಲ್' ಪರಿಪೂರ್ಣ ತಾಣ ಎನ್ನಬಹುದು. ಪಾರ್ವತಿ ಕಣಿವೆಯ ರಮಣೀಯ ಸೌಂದರ್ಯದಿಂದ ಸುತ್ತುವರೆದಿರುವ ಕಸೋಲ್‌ನ ಶಾಂತ ವಾತಾವರಣ ಸದಾ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ನೂತನ ವರ್ಷದ ಒಂದು ದಿನ ಮೊದಲು ನೀವು ಇಲ್ಲಿ ಚೆಂದದ ಸಮಯ ಕಳೆಯಬಹುದಾಗಿದೆ. ಇಲ್ಲಿ ಕೆಫೆಗಳಲ್ಲಿ ಗ್ರಾಹಕ ಸ್ನೇಹಿ ಆಚರಣೆಗೆ ಅವಕಾಶ ಇದೆ. ಲೈವ್ ಸಂಗೀತ, ಲೈಟಿಂಗ್ಸ್, ಕತ್ತಲು ಬೆಳಕಿನ ವಾತಾವರಣ ಇರುತ್ತದೆ.
ಅಲೆಪ್ಪಿ, ಕೇರಳ
ಕೇರಳ ಜಿಲ್ಲೆಯ 'ಅಲೆಪ್ಪಿ'ಯ ಪ್ರಶಾಂತ ಹಿನ್ನೀರಿನ ಉದ್ದಕ್ಕೂ ಹೊಸ ವರ್ಷದ ಮುನ್ನಾದಿನದಂದು ಬಹುವಿಜೃಂಭಣೆಯಿಂದ ಕಾರ್ಯಕ್ರಮಗಳು ನಡೆಯುತ್ತವೆ. ಅನೇಕ ಹೌಸ್‌ಬೋಟ್‌ಗಳು ಮತ್ತು ರಿವರ್‌ಸೈಡ್ ರೆಸಾರ್ಟ್‌ಗಳು ಹೊಸ ವರ್ಷ ಸ್ವಾಗತಿಸುವವರಿಗೆಂದೆ ವಿವಿಧ ಕೈಗೆಟುಕುವ ಪ್ಯಾಕೇಜ್‌ಗಳನ್ನು ಘೋಷಿಸಿವೆ. ಹೆಚ್ಚ ಹಸಿರು ಹೊಸಿಕೆ ಜೊತೆಗೆ ಇಲ್ಲಿನ ಸಾಂಪ್ರದಾಯಿಕ, ಕೇರಳದ ವಾಸ್ತುಶಿಲ್ಪ ಅನುಭವ ಪಡೆಯಬಹುದು. ರಮಣೀಯ ಜಲ ಮಾರ್ಗಗಳ ಮೂಲಕ ವಿಹರಿಸಿ ನೀವು ಹಾಲಿ ವರ್ಷವನ್ನು ಬಿಳ್ಕೋಡಬಹುದು. ಸರೋವರದ ಶಾಂತತೆ ಜತೆಗೆ ನೀವು ಮನೋಲ್ಲಾಸದಿಂದ ಸಂಭ್ರಮಿಸಲು ಇಲ್ಲಿ ಅವಕಾಶ ಸಿಗುತ್ತದೆ. ಈ ಮೇಲಿನ ಎಲ್ಲ ಸ್ಥಳಗಳನ್ನು ನೀವು ಈ ವರ್ಷಾಂತ್ಯ ಮತ್ತು ಹೊಸ ವರ್ಷಾರಂಭಕ್ಕೆ












Click it and Unblock the Notifications