Get Updates
Get notified of breaking news, exclusive insights, and must-see stories!

Budh Gochar 2022 Effects : ಮಕರ ರಾಶಿಯಲ್ಲಿ ಬುಧ ಸಂಕ್ರಮಣ: ಈ ರಾಶಿಯವರಿಗೆ ಅದೃಷ್ಟದ ಸಮಯ

ವೈದಿಕ ಜ್ಯೋತಿಷ್ಯದಲ್ಲಿ ಬುಧವನ್ನು ಸಾಕಷ್ಟು ವೇಗವಾಗಿ ಗೋಚರಿಸುವ ಗ್ರಹವೆಂದು ಪರಿಗಣಿಸಲಾಗಿದೆ. ಬುಧನ ಬಲದಿಂದ ಬುದ್ಧಿವಂತಿಕೆ ಹಾಗೂ ಅದೃಷ್ಟ ಹೆಚ್ಚುತ್ತದೆ. ಬುಧನ ಕೃಪೆ ಇರುವ ರಾಶಿಯವರು ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ. ಆದರೆ ಕೆಲವು ಗ್ರಹಗಳ ಸಂಯೋಗದಿಂದ ಸಮಸ್ಯೆಗಳು ಕೂಡ ಎದುರಾಗಬಹುದು.

ಮಕರ ರಾಶಿಯಲ್ಲಿ ಬುಧ ಸಂಕ್ರಮಣ ಡಿಸೆಂಬರ್ 28ರಂದು ಬುಧವಾರ ಮಧ್ಯಾಹ್ನ 11:11ಕ್ಕೆ ಸಂಭವಿಸಲಿದೆ. ಚಂದ್ರನ ನಂತರ ಸೌರವ್ಯೂಹದಲ್ಲಿ ಬುಧ ಚಿಕ್ಕದಾದ ಮತ್ತು ವೇಗವಾಗಿ ಚಲಿಸುವ ಗ್ರಹವಾಗಿದೆ. ವೈದಿಕ ಜ್ಯೋತಿಷ್ಯದ ಪ್ರಕಾರ ಬುಧ ಗ್ರಹವನ್ನು ಬುದ್ಧಿವಂತಿಕೆ, ತಾರ್ಕಿಕ ಸಾಮರ್ಥ್ಯ ಮತ್ತು ಉತ್ತಮ ಸಂವಹನ ಕೌಶಲ್ಯ ಹೊಂದಿರುವ ಗ್ರಹ ಎಂದು ಪರಿಗಣಿಸಲಾಗುತ್ತದೆ. ಹಾಗಾದರೆ ಮಕರ ರಾಶಿಯಲ್ಲಿ ಬುಧ ಸಂಕ್ರಮಣವು 12 ರಾಶಿಗಳ ಮೇಲೆ ಹೇಗೆ ಪ್ರಭಾವ ಬೀರಲಿದೆ ಎಂದು ವಿಸ್ತಾರವಾಗಿ ತಿಳಿಯೋಣ.

ಮೇಷ ರಾಶಿ ಮೇಲೆ ಬುಧ ಸಂಕ್ರಮಣದ ಪ್ರಭಾವ

ಮೇಷ ರಾಶಿ ಮೇಲೆ ಬುಧ ಸಂಕ್ರಮಣದ ಪ್ರಭಾವ

ಮೇಷ ರಾಶಿಮೇಷ ರಾಶಿಯವರ ಮೂರನೇ ಮತ್ತು ಆರನೇ ಮನೆಯನ್ನು ಬುಧ ಆಳುತ್ತಾನೆ ಹೀಗಾಗಿ ಮಕರ ರಾಶಿಯಲ್ಲಿ ಬುಧ ಸಂಕ್ರಮಣದ ಸಮಯದಲ್ಲಿ ಮೇಷ ರಾಶಿಯವರಿಗೆ ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳು ಸಿಗಲಿದೆ. ನಿಮ್ಮ ಕೆಲಸದ ಸ್ಥಳದಲ್ಲಿ ನಿಮ್ಮನ್ನು ಉತ್ತಮ ಸಂಘಟಿತರನ್ನಾಗಿ ಮಾಡುತ್ತದೆ. ನೀವು ಮಾತುಗಾರಿಕೆಯಿಂದ ಪ್ರಭಾವಶಾಲಿಯಾಗುತ್ತೀರಿ. ಮಾಧ್ಯಮ, ಸಮೂಹ ಸಂವಹನ, ಲೆಕ್ಕಪರಿ ಶೋಧಕರು, ಹಣಕಾಸು ವಲಯ ಮತ್ತು ಹೂಡಿಕೆ ಬ್ಯಾಂಕಿಂಗ್ ಕ್ಷೇತ್ರದಲ್ಲಿರುವ ಜನರಿಗೆ ಈ ಅವಧಿ ಅನುಕೂಲಕರವಾಗಲಿದೆ.

ಈ ಸಮಯದಲ್ಲಿ ಕೆಲಸದ ಕಾರಣದಿಂದಾಗಿ ನೀವು ದೂರ ಪ್ರಯಾಣವನ್ನು ಮಾಡಬೇಕಾಗಬಹುದು. ಇದರಿಂದಾಗಿ ಕೆಲವು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ತಾಯಿಯ ಬೆಂಬಲದಿಂದ ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ.

ವೃಷಭ ರಾಶಿ ಮೇಲೆ ಬುಧ ಸಂಕ್ರಮಣದ ಪ್ರಭಾವ

ವೃಷಭ ರಾಶಿ ಮೇಲೆ ಬುಧ ಸಂಕ್ರಮಣದ ಪ್ರಭಾವ

ಮಕರ ರಾಶಿಯಲ್ಲಿ ಬುಧ ಸಂಕ್ರಮಣದ ಸಮಯದಲ್ಲಿ ವೃಷಭ ರಾಶಿಯವರಿಗೆ ಅದೃಷ್ಟದ ಸಮಯವಾಗಲಿದೆ. ಈ ಸಮಯವು ವೃಷಭ ರಾಶಿಯ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಪಿಎಚ್‌ಡಿ ಮತ್ತು ಅವರ ಸ್ನಾತಕೋತ್ತರ ಪದವಿಯಂತಹ ಉನ್ನತ ವ್ಯಾಸಂಗಕ್ಕಾಗಿ ಯೋಜಿಸುತ್ತಿರುವವರಿಗೆ ಬಹಳ ಫಲಪ್ರದವಾಗಿರುತ್ತದೆ. ನಿಮ್ಮ ತಂದೆ ತೀರ್ಥಯಾತ್ರೆಯಂತಹ ದೂರದ ಪ್ರಯಾಣ ಮಾಡಬಹುದು. ನೀವು ಸಹ ಧಾರ್ಮಿಕ ಮತ್ತು ಪೌರಾಣಿಕ ಗ್ರಂಥಗಳು ಮತ್ತು ಪುಸ್ತಕಗಳನ್ನು ಓದುವ ಮತ್ತು ಕಲಿಯುವ ಮನಸ್ಸನ್ನು ಮಾಡುತ್ತೀರಿ. ಈ ಸಮಯದಲ್ಲಿ ತತ್ವಜ್ಞಾನಿ, ಸಲಹೆಗಾರ, ಮಾರ್ಗದರ್ಶಕ, ಶಿಕ್ಷಕರು ನಿಮ್ಮ ಜೊತೆಗಿದ್ದರೆ, ಇನ್ನಷ್ಟು ಉತ್ತಮವಾಗಿರುತ್ತದೆ. ನೀವು ಅವರ ತಂದೆ, ಗುರು ಅಥವಾ ಮಾರ್ಗದರ್ಶಕರ ಬೆಂಬಲವನ್ನು ಪಡೆಯುತ್ತೀರಿ. ನಿಮ್ಮ ಅದೃಷ್ಟವು ನಿಮಗೆ ಅನುಕೂಲಕರವಾಗಿರುತ್ತದೆ.

ಮಿಥುನ ರಾಶಿ ಮೇಲೆ ಬುಧ ಸಂಕ್ರಮಣದ ಪ್ರಭಾವ

ಮಿಥುನ ರಾಶಿ ಮೇಲೆ ಬುಧ ಸಂಕ್ರಮಣದ ಪ್ರಭಾವ

ಮಕರ ರಾಶಿಯಲ್ಲಿ ಬುಧ ಸಂಕ್ರಮಣದ ಸಮಯದಲ್ಲಿ ಮಿಥುನ ರಾಶಿಯವರಿಗೆ ಇದು ಸವಾಲಿನ ಸಮಯ. ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ. ಈ ಸಮಯದಲ್ಲಿ ನೀವು ಕೂಡ ಚರ್ಮ ಮತ್ತು ನರಮಂಡಲದ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬಹುದು. ಕೆಲಸದ ಸ್ಥಳದಲ್ಲಿನ ಹಠಾತ್ ವೆಚ್ಚಗಳ ಕಾರಣದಿಂದಾಗಿ ನೀವು ಮಾನಸಿಕ ಒತ್ತಡವನ್ನು ಎದುರಿಸಬೇಕಾಗಬಹುದು.

ಒಂದು ವೇಳೆ ನೀವು ಸಂಶೋಧನಾ ಕಾರ್ಯ ಹಾಗೂ ಇತರ ವಿಶೇಷ ಅಧ್ಯಯನ ಅಥವಾ ಜ್ಯೋತಿಷ್ಯದಲ್ಲಿ ತೊಡಗಿಸಿಕೊಂಡಿದ್ದರೆ, ಇದು ನಿಮ್ಮ ಬೆಳವಣಿಗೆಗೆ ಉತ್ತಮ ಸಮಯವಾಗಿದೆ. ಮಾತಿನಲ್ಲಿ ನೀವು ತುಂಬಾ ಪ್ರಭಾವಶಾಲಿಯಾಗುತ್ತೀರಿ. ಆದರೆ ನೀವು ಎಚ್ಚರದಿಂದ ಇರಬೇಕು. ಯಾಕೆಂದರೆ ನಿಮ್ಮ ಹಾಸ್ಯ ಮತ್ತು ವ್ಯಂಗ್ಯ ಇತರರನ್ನು ನೋಯಿಸಬಹುದು. ಇದರಿಂದ ನಿಮ್ಮ ಕುಟುಂಬ ಸದಸ್ಯರೊಂದಿಗೆ ಅದರಲ್ಲೂ ನಿಮ್ಮ ತಾಯಿಯೊಂದಿಗೆ ಮನಸ್ತಾಪ ಉಂಟಾಗಬಹುದು.

ಕರ್ಕಾಟಕ ರಾಶಿ ಮೇಲೆ ಬುಧ ಸಂಕ್ರಮಣದ ಪ್ರಭಾವ

ಕರ್ಕಾಟಕ ರಾಶಿ ಮೇಲೆ ಬುಧ ಸಂಕ್ರಮಣದ ಪ್ರಭಾವ

ಮಕರ ರಾಶಿಯಲ್ಲಿ ಬುಧ ಸಂಕ್ರಮಣದ ಸಮಯದಲ್ಲಿ ಕರ್ಕಾಟಕ ರಾಶಿಯವರಿಗೆ ಬುಧನ ಅನುಗ್ರಹವಿದೆ. ಈ ಸಮಯದಲ್ಲಿ ವ್ಯಾಪಾರ ಮತ್ತು ಪಾಲುದಾರಿಕೆಯಲ್ಲಿ ನಿಮಗೆ ಉತ್ತಮ ಫಲಿತಾಂಶಗಳು ಸಿಗುತ್ತದೆ. ನೀವು ವಿದೇಶಿ ಕಂಪನಿಗಳೊಂದಿಗೆ ಸಂಪರ್ಕ ಹೊಂದಿದ್ದರೆ, ಅದರಿಂದ ನೀವು ಲಾಭವನ್ನು ಪಡೆಯುತ್ತೀರಿ. ನೀವು ನಿಮ್ಮ ಸಂಗಾತಿಯೊಂದಿಗೆ ವಿದೇಶಿ ಪಯಣ ಮಾಡಬಹುದು. ಒಂದು ವೇಳೆ ಇದು ಕೈಗೂಡದೇ ಇದ್ದರೆ, ಕನಿಷ್ಠ ದೂರದ ಪ್ರಯಾಣವನ್ನು ಆಯೋಜಿಸಿ. ಇದರಿಂದ ನಿಮ್ಮ ಪ್ರೀತಿಯ ಸಂಬಂಧ ಬಲಗೊಳ್ಳಲು ಸಹಾಯ ಮಾಡುತ್ತದೆ.

ಇನ್ನು ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯ ಮತ್ತು ಫಿಟ್ನೇಸ್‌ ಬಗ್ಗೆ ಕಾಳಜಿ ವಹಿಸಬೇಕು. ನಿಮ್ಮ ಆರೋಗ್ಯವನ್ನು ಉತ್ತಮವಾಗಿಡಲು ನೀವು ಉತ್ತಮ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು.

ಸಿಂಹ ರಾಶಿ ಮೇಲೆ ಬುಧ ಸಂಕ್ರಮಣದ ಪ್ರಭಾವ

ಸಿಂಹ ರಾಶಿ ಮೇಲೆ ಬುಧ ಸಂಕ್ರಮಣದ ಪ್ರಭಾವ

ಮಕರ ರಾಶಿಯಲ್ಲಿ ಬುಧ ಸಂಕ್ರಮಣದ ಸಮಯದಲ್ಲಿ ಸಿಂಹ ರಾಶಿಯವರಿಗೆ ಹಣಕಾಸಿನ ವಿಚಾರದಲ್ಲಿ ಏರಿಳಿತಗಳನ್ನು ಕಾಣಬಹುದು. ನಿಮ್ಮ ಉಳಿತಾಯದಲ್ಲಿ ನೀವು ಸಮಸ್ಯೆಗಳನ್ನು ಎದುರಿಸಬಹುದು. ಆದರೆ ನೀವು ಯಾವುದೇ ಬ್ಯಾಂಕ್‌ನಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಲು ಯೋಜಿಸುತ್ತಿದ್ದರೆ, ನಿಮ್ಮ ಸಾಲವನ್ನು ಮಂಜೂರು ಮಾಡಬಹುದು. ನಿಮಗೆ ಸಾಲದ ರೂಪದಲ್ಲಿ ಹಣ ಕೈಸೇರಲಿದೆ.

ಬುಧ ಸಂಕ್ರಮಣ ಸಮಯವು ನಿಮ್ಮ ವೃತ್ತಿಪರ ಜೀವನಕ್ಕೆ ಅನುಕೂಲಕರವಾಗಿದೆ. ನೀವು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸುತ್ತಿದ್ದರೆ, ನೀವು ನಿರೀಕ್ಷಿಸಿದ ಉತ್ತಮ ಫಲಿತಾಂಶವನ್ನು ಪಡೆಯುತ್ತೀರಿ. ನಿಮ್ಮ ಆರೋಗ್ಯದ ಬಗ್ಗೆ ನೀವು ಜಾಗೃತರಾಗಿರಬೇಕು. ಹೀಗಾಗಿ ಆರೋಗ್ಯಕರ ಆಹಾರವನ್ನು ಸೇವಿಸಿ. ಜಿಮ್‌ ಹಾಗೂ ಯೋಗ ತರಬೇತಿಗೆ ಸೇರುವುದು ಉತ್ತಮ. ಈ ಸಮಯದಲ್ಲಿ ನೀವು ನಿಮ್ಮ ತಾಯಿ ಮತ್ತು ಚಿಕ್ಕಪ್ಪನ ಬೆಂಬಲವನ್ನು ಪಡೆಯುತ್ತೀರಿ.

ಕನ್ಯಾ ರಾಶಿ ಮೇಲೆ ಬುಧ ಸಂಕ್ರಮಣದ ಪ್ರಭಾವ

ಕನ್ಯಾ ರಾಶಿ ಮೇಲೆ ಬುಧ ಸಂಕ್ರಮಣದ ಪ್ರಭಾವ

ಮಕರ ರಾಶಿಯಲ್ಲಿ ಬುಧ ಸಂಕ್ರಮಣದ ಸಮಯದಲ್ಲಿ ಕನ್ಯಾ ರಾಶಿಯವರಿಗೆ ಶಿಕ್ಷಣ, ಪ್ರೀತಿ ಸಂಬಂಧಗಳು, ಮಕ್ಕಳ ವಿಚಾರದಲ್ಲಿ ಉತ್ತಮ ಸಮಯವಾಗಿದೆ. ವೃತ್ತಿಪರ ಕೋರ್ಸ್ ಮಾಡುತ್ತಿರುವವರು ಹಾಗೂ ಉದ್ಯೋಗವನ್ನು ಹುಡುಕುತ್ತಿರುವ ವಿದ್ಯಾರ್ಥಿಗಳಿಗೆ ಈ ಸಮಯ ಬಹಳ ಫಲಪ್ರದವಾಗಲಿದೆ. ನೀವು ವೃತ್ತಿಜೀವನವನ್ನು ಪ್ರಾರಂಭಿಸಲು ಸಾಧ್ಯವಾಗುತ್ತದೆ.

ನಿಮ್ಮ ಪ್ರೀತಿ ಮತ್ತು ಪ್ರಣಯವು ಉತ್ತುಂಗದಲ್ಲಿರುತ್ತದೆ. ಆಗಾಗ ನಿಮ್ಮ ಸಂಗಾತಿಯೊಡನೆ ಚಿಕ್ಕಪುಟ್ಟ ಜಗಳ ನಡೆಯುತ್ತಿದ್ದರೂ, ಬುಧನ ಅನುಗ್ರಹದಿಂದ ಅದು ನಿವಾರಣೆಯಾಗುತ್ತದೆ. ಹೀಗಾಗಿ ನೀವು ನಿಮ್ಮ ಸಂಗಾತಿಯೊಡನೆ ಬಲವಾದ ಸಂಬಂಧವನ್ನು ಹೊಂದಿರುತ್ತೀರಿ. ಕನ್ಯಾ ರಾಶಿಯವರು ಈ ಸಮಯದಲ್ಲಿ ನಿಮ್ಮ ಮಕ್ಕಳ ಒಡನಾಟವನ್ನು ಖುಷಿಯಿಂದ ಅನುಭವಿಸುತ್ತೀರಿ. ಮಕ್ಕಳೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ. ಇನ್ನು ಸಂತಾನಕ್ಕಾಗಿ ಪ್ರಾರ್ಥಿಸುತ್ತಿರುವವರು ಒಳ್ಳೆಯ ಸುದ್ದಿ ಪಡೆಯಬಹುದು. ನೀವು ಉತ್ತಮ ಆಹಾರವನ್ನು ಸೇವಿಸಬೇಕು. ಯಾವುದೇ ಒತ್ತಡವನ್ನು ತೆಗೆದುಕೊಳ್ಳಬಾರದು.

ತುಲಾ ರಾಶಿ ಮೇಲೆ ಬುಧ ಸಂಕ್ರಮಣದ ಪ್ರಭಾವ

ತುಲಾ ರಾಶಿ ಮೇಲೆ ಬುಧ ಸಂಕ್ರಮಣದ ಪ್ರಭಾವ

ಮಕರ ರಾಶಿಯಲ್ಲಿ ಬುಧ ಸಂಕ್ರಮಣದ ಸಮಯದಲ್ಲಿ ತುಲಾ ರಾಶಿಯವರ ಮನೆಗೆ ಸಂತೋಷವನ್ನು ತುಂಬುತ್ತದೆ.

ನಿಮ್ಮ ಮನೆಗೆ ಆಧುನಿಕ ವಸ್ತುಗಳನ್ನು ಖರೀದಿಸಲು ಉತ್ತಮ ಸಮಯ ಹಾಗೂ ಇದಕ್ಕಾಗಿ ನೀವು ಕಷ್ಟು ಹಣವನ್ನು ಖರ್ಚು ಮಾಡುತ್ತೀರಿ. ಮನೆಯಿಂದ ಕೆಲವು ವೃತ್ತಿಪರ ಕೆಲಸ ಅಥವಾ ವ್ಯವಹಾರವನ್ನು ಪ್ರಾರಂಭಿಸಲು ಬಯಸುವ ಜನರಿಗೆ ಬುಧ ಸಂಕ್ರಮಣವು ಉತ್ತಮ ಸಮಯವಾಗಿದೆ.

ಕೌಟುಂಬಿಕ ವ್ಯವಹಾರದಲ್ಲಿರುವವರು ಮಂಗಳಕರ ಸಮಯವಾಗಿರುತ್ತದೆ. ನಿಮ್ಮ ಅದೃಷ್ಟ ಮತ್ತು ಕಠಿಣ ಪರಿಶ್ರಮವು ನಿಮ್ಮನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯುತ್ತದೆ. ರಿಯಲ್ ಎಸ್ಟೇಟ್ ಡೆವಲಪರ್ ಮತ್ತು ಏಜೆಂಟ್‌ಗಳಿಗೆ ಇದು ಉತ್ತಮ ಸಮಯವಾಗಿದೆ. ನೀವು ತಾಯಿಯೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ.

ವೃಶ್ಚಿಕ ರಾಶಿ ಮೇಲೆ ಬುಧ ಸಂಕ್ರಮಣದ ಪ್ರಭಾವ

ವೃಶ್ಚಿಕ ರಾಶಿ ಮೇಲೆ ಬುಧ ಸಂಕ್ರಮಣದ ಪ್ರಭಾವ

ಮಕರ ರಾಶಿಯಲ್ಲಿ ಬುಧ ಸಂಕ್ರಮಣದ ಸಮಯದಲ್ಲಿ ವೃಶ್ಚಿಕ ರಾಶಿಯವರಿಗೆ ವೃತ್ತಿಪರರಾಗಿ ನಿಮ್ಮ ಹವ್ಯಾಸಗಳನ್ನು ಹಾಗೂ ಉತ್ಸಾಹಗಳನ್ನು ಹೆಚ್ಚಿಸಲು ಉತ್ತಮ ಸಮಯವಾಗಿದೆ. ನಿಮ್ಮ ಕಿರಿಯ ಒಡಹುಟ್ಟಿದವರು ಅಥವಾ ಸಹೋದರ ಸಂಬಂಧಿಯೊಂದಿಗೆ ಕೆಲವು ಹೊಸ ವ್ಯಾಪಾರವನ್ನು ಪ್ರಾರಂಭಿಸಬಹುದು. ಈ ಅವಧಿಯು ಬರವಣಿಗೆ, ಸಂಶೋಧನೆ, ಲೇಖಕ, ಕ್ರೈಮ್ ವರದಿಗಾರ, ಚಲನಚಿತ್ರ ನಿರ್ದೇಶಕರಾಗಿರುವವರಿಗೆ ಉತ್ತಮ ಸಮಯವಾಗಿದೆ.

ದೂರದ ಪ್ರಯಾಣ ಅಥವಾ ತೀರ್ಥಯಾತ್ರೆ ಕೂಡ ಇದ್ದಕ್ಕಿದ್ದಂತೆ ಯೋಜಿಸಬಹುದು. ಇದರಿಂದ ನಿಮ್ಮ ತಂದೆ-ತಾಯಿಯೊಂದಿಗಿನ ಸಂಬಂಧ ಉತ್ತಮವಾಗಿರುತ್ತದೆ. ನಿಮ್ಮ ಒಳ್ಳೆಯ ಕೆಲಸಕ್ಕೆ ಪೋಷಕರು ಮೆಚ್ಚುತ್ತಾರೆ. ನಿಮ್ಮ ಕಿರಿಯ ಸಹೋದರ ಅಥವಾ ಸೋದರಸಂಬಂಧಿಗೆ ಏನನ್ನಾದರೂ ಉಡುಗೊರೆಯಾಗಿ ನೀಡಿ.

ಧನು ರಾಶಿ ಮೇಲೆ ಬುಧ ಸಂಕ್ರಮಣದ ಪ್ರಭಾವ

ಧನು ರಾಶಿ ಮೇಲೆ ಬುಧ ಸಂಕ್ರಮಣದ ಪ್ರಭಾವ

ಮಕರ ರಾಶಿಯಲ್ಲಿ ಬುಧ ಸಂಕ್ರಮಣದ ಸಮಯದಲ್ಲಿ ಧನು ರಾಶಿಯವರಿಗೆ ಉಳಿತಾಯದಲ್ಲಿ ಉತ್ತಮವಾಗಿರುತ್ತದೆ.ಬುಧ ಸಂಕ್ರಮಣದ ಸಮಯದಲ್ಲಿ ನೀವು ನಿಮ್ಮ ಸಂವಹನ ಮತ್ತು ಮಾತಿನಲ್ಲಿ ಬಹಳ ಪ್ರಭಾವಶಾಲಿಯಾಗಿರುತ್ತೀರಿ. ಲೆಕ್ಕಚಾರ, ಹೂಡಿಕೆ, ಬ್ಯಾಂಕಿಂಗ್‌ ಕೆಲಸದಲ್ಲಿ ತೊಡಗಿರುವವರಿಗೆ ಇದು ಉತ್ತಮ ಸಮಯವಾಗಿದೆ. ಈ ಸಮಯದಲ್ಲಿ ನಿಮ್ಮ ವ್ಯಾಪಾರ ಮತ್ತು ಪಾಲುದಾರಿಗಳು ಬೆಳೆಯುತ್ತದೆ. ಆಸ್ತಿ ಹೆಚ್ಚಾಗುವ ಸಾಧ್ಯತೆಯಿದೆ. ಕೆಲಸದ ಒತ್ತಡಲ್ಲಿ ನಿಮ್ಮ ಆರೋಗ್ಯವನ್ನು ನೀವು ಮರೆಯಬಾರದು. ಜೊತೆಗೆ ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಎಚ್ಚರದಿಂದ ಇರಬೇಕು. ಚರ್ಮ ಹಾಗೂ ನರಮಂಡಲಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಅವರಿಗೆ ರೋಗ್ಯ ತಪಾಸಣೆ ಮಾಡಿ.

ಮಕರ ರಾಶಿ ಮೇಲೆ ಬುಧ ಸಂಕ್ರಮಣದ ಪ್ರಭಾವ

ಮಕರ ರಾಶಿ ಮೇಲೆ ಬುಧ ಸಂಕ್ರಮಣದ ಪ್ರಭಾವ

ಮಕರ ರಾಶಿಯಲ್ಲಿ ಬುಧ ಸಂಕ್ರಮಣದ ಸಮಯದಲ್ಲಿ ಮಕರ ರಾಶಿಯವರ ಬುದ್ಧಿವಂತಿಕೆ ಹೆಚ್ಚಾಗುತ್ತದೆ. ವ್ಯಾಪಾರ ಜಗತ್ತಿನಲ್ಲಿರುವ ನಿಮ್ಮ ಬುದ್ಧಿವಂತಿಕೆ ಹೆಚ್ಚಾಗುತ್ತದೆ. ಇದರಿಂದ ಧನಾತ್ಮಕ ಬೆಳೆವಣಿಗೆಗಳು ಕಂಡುಬರುತ್ತದೆ. ಸಹ ಶಿಕ್ಷಕರು, ಮಾರ್ಗದರ್ಶಕರು, ರಾಜಕಾರಣಿಗಳು ಮುಂತಾದವರು ನೀಡುವ ಸಲಹೆಯಿಂದ ಮಕರ ರಾಶಿಯವರು ಬುಧ ಸಂಕ್ರಮಣದ ಸಮಯದಲ್ಲಿ ಉತ್ತಮ ಲಾಭವನ್ನು ಪಡೆಯುತ್ತಾರೆ. ನಿಮ್ಮ ವೈಯಕ್ತಿಕ ವೃತ್ತಿ ಜೀವನ ಹಾಗೂ ಪಾಲುದಾರಿಕೆ ಸುಧಾರಿಸುತ್ತದೆ. ನೀವು ನಿಮ್ಮ ಹಿತ ಬಯಸುವವರ ಬೆಂಬಲವನ್ನು ಪಡೆಯುತ್ತೀರಿ. ಬುಧನ ಅನುಗ್ರಹದಿಂದ ನೀವು ಅದೃಷ್ಟವಂತರಾಗುತ್ತೀರಿ. ನಿಮ್ಮ ತಂದೆಯ ಬೆಂಬಲ ನಿಮಗೆ ಇನ್ನಷ್ಟು ಶಕ್ತಿಯನ್ನು ಕೊಡುತ್ತದೆ.

ಕುಂಭ ರಾಶಿ ಮೇಲೆ ಬುಧ ಸಂಕ್ರಮಣದ ಪ್ರಭಾವ

ಕುಂಭ ರಾಶಿ ಮೇಲೆ ಬುಧ ಸಂಕ್ರಮಣದ ಪ್ರಭಾವ

ಮಕರ ರಾಶಿಯಲ್ಲಿ ಬುಧ ಸಂಕ್ರಮಣದ ಸಮಯದಲ್ಲಿ ಕುಂಭ ರಾಶಿಯ ವಿದ್ಯಾರ್ಥಿಗಳಿಗೆ ಉತ್ತಮ ಫಲವನ್ನು ನೀಡುತ್ತದೆ. ವಿಶೇಷವಾಗಿ ವಿದೇಶದಲ್ಲಿ ಅಧ್ಯಯನ ಮಾಡಲು ಅಥವಾ ವಿದೇಶಿ ವಿಶ್ವವಿದ್ಯಾಲಯದಿಂದ ಯಾವುದೇ ವೃತ್ತಿಪರ ಕೋರ್ಸ್ ಮುಂದುವರಿಸಲು ಬಯಸುವವರಿಗೆ ಈ ಸಮಯ ಉತ್ತಮವಾಗಿದೆ. ಎಮ್‌ಎನ್‌ಸಿ ಅಥವಾ ಗ್ಲೋಬಲ್ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಉತ್ತಮ ಸಮಯ ಇರುತ್ತದೆ.

ಬುಧ ಸಂಕ್ರಮಣದ ಸಮಯದಲ್ಲಿ ಕುಂಭ ರಾಶಿಯವರು ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ನಿಮ್ಮ ಸುತ್ತಮುತ್ತಉತ್ತಮ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ. ಆಹಾರವನ್ನು ಸಮತೋಲನವಾಗಿ ಸೇವಿಸಿ. ಆರೋಗ್ಯ ಸಮಸ್ಯೆ ನಿಮ್ಮ ವೆಚ್ಚಗಳನ್ನು ನಷ್ಟಗಳನ್ನು ಹೆಚ್ಚಿಸಬಹುದು ಆದ್ದರಿಂದ ಅನಾರೋಗ್ಯ ತಪ್ಪಿಸಲು ಜಾಗರೂಕರಾಗಿರಿ. ಈ ಸಮಸ್ಯೆಗಳಿಂದ ದೂರಾಗಲು ಕುಂಬಳಕಾಯಿಯನ್ನು ತೆಗೆದುಕೊಂಡು ಅದನ್ನು ನಿಮ್ಮ ಹಣೆಗೆ ಸ್ಪರ್ಶಿಸಿ ಮತ್ತು ಹರಿಯುವ ನೀರಿನಲ್ಲಿ ದಾನ ಬಿಡಿ.

ಮೀನ ರಾಶಿ ಮೇಲೆ ಬುಧ ಸಂಕ್ರಮಣದ ಪ್ರಭಾವ

ಮೀನ ರಾಶಿ ಮೇಲೆ ಬುಧ ಸಂಕ್ರಮಣದ ಪ್ರಭಾವ

ಮಕರ ರಾಶಿಯಲ್ಲಿ ಬುಧ ಸಂಕ್ರಮಣದ ಸಮಯದಲ್ಲಿ ಮೀನ ರಾಶಿಯವರಿಗೆ ನಿಮ್ಮ ಶ್ರಮಕ್ಕೆ ಲಾಭ ಸಿಗುವ ಸಮಯವಾಗಿದೆ. ಈ ಸಮಯದಲ್ಲಿ ನೀವು ಆಸ್ತಿಯಿಂದ ಲಾಭ ಪಡೆಯುತ್ತೀರಿ. ಶ್ರಮದಿಂದ ನಿಮ್ಮ ಆಸೆಗಳು ಈಡೇರುತ್ತವೆ ಮತ್ತು ಕೆಲಸದ ಸ್ಥಳದಲ್ಲಿ ನೀವು ಖ್ಯಾತಿಯನ್ನು ಪಡೆಯುತ್ತೀರಿ ಹಾಗೂ ಅದೃಷ್ಟ ನಿಮ್ಮದಾಗಿರುತ್ತದೆ. ವಿದ್ಯಾರ್ಥಿಗಳಿಗೆ ವಿಶೇಷವಾಗಿ ಸಮೂಹ ಸಂವಹನ, ಬರವಣಿಗೆ ಮತ್ತು ಯಾವುದೇ ಭಾಷೆ ವಿಭಾದಲ್ಲಿ ಉತ್ತಮ ಸಮಯವಾಗಿರುತ್ತದೆ. ನಿಮ್ಮ ಎಲ್ಲಾ ಶ್ರಮ ನಿಮಗೆ ಲಾಭ ನೀಡುತ್ತದೆ. ಬುಧ ಸಂಕ್ರಮಣದ ಮೀನ ರಾಶಿಯವರು ಸಮಯದಲ್ಲಿ ಕುಟುಂಬದ ಬೆಂಬಲವನ್ನು ಪಡೆಯುತ್ತಾರೆ. ಎದುರಾಗುವ ಸಮಸ್ಯೆಗಳಿಂದ ದೂರ ಇರಲು ಚಿಕ್ಕ ಮಕ್ಕಳಿಗೆ ಹಸಿರು ಬಣ್ಣದ ಉಡುಗೊರೆ ನೀಡಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+