RCB New Player: ಆರ್‌ಸಿಬಿಗೆ ಹೊಸ ಸ್ಟಾರ್ ಆಟಗಾರನ ಎಂಟ್ರಿ
RCB IPL 2026: ಪ್ರಸ್ತುತ ನಡೆಯುತ್ತಿರುವ 2026ರ ಐಪಿಎಲ್ ಲಿಂಗ್ ಹಂತದ ಪಂದ್ಯಗಳು ಮುಕ್ತಾಯದ ಹಂತದಲ್ಲಿವೆ. ಅದರಲ್ಲೂ ಈ ಸೀಸನ್ ಆರಂಭದಿಂದಲೂ ಆರ್‌ಸಿಬಿ ತಂಡವು ಬ್ಯಾಟಿಂಗ್, ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ 16 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಈ ನಡುವೆಯೇ ಆರ್‌ಸಿಬಿ ಇದೀಗ ಮತ್ತೊಬ್ಬ ಸ್ಟಾರ್ ಆಟಗಾರರನ್ನು ಸೇರ್ಪಡೆ ಮಾಡಿಕೊಂಡಿದೆ. ಹಾಗಾದ್ರೆ ಅವರು ಯಾರು ಹಾಗೂ ಈ ನಿರ್ಧಾರ ಏಕೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಸದ್ಯ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಗಾಯದ ಸಮಸ್ಯೆಯಿಂದಾಗಿ ಹೊರಬಿದ್ದಿರುವ ಆಟಗಾರರಿಗೆ ಬದಲಿಯಾಗಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಇಂದು (ಶುಕ್ರವಾರ ಮೇ 15) ಹೊಸ ಆಟಗಾರರನ್ನು ಸೇರ್ಪಡೆ ಮಾಡಿಕೊಂಡಿವೆ.

ಸಿಎಸ್‌ಕೆ, ಆರ್‌ಸಿಬಿಗೆ ಹೊಸ ಆಟಗಾರರ ಸೇರ್ಪಡೆ
ಚೆನ್ನೈ ಸೂಪರ್ ಕಿಂಗ್ಸ್ ಪ್ರಾಂಚೈಸಿಯು ಗಾಯಾಳು ಖಲೀಲ್ ಅಹ್ಮದ್ ಅವರ ಸ್ಥಾನಕ್ಕೆ ದೆಹಲಿಯ ಎಡಗೈ ವೇಗಿ ಕುಲದೀಪ್ ಯಾದವ್ ಅವರನ್ನು 30 ಲಕ್ಷ ರೂಪಾಯಿ ಮೊತ್ತಕ್ಕೆ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಮತ್ತೊಂದೆಡೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗಾಯದ ಕಾರಣದಿಂದ ಹೊರಗುಳಿದಿರುವ ನುವಾನ್ ತುಷಾರ ಅವರ ಬದಲಿಗೆ ಇಂಗ್ಲೆಂಡ್‌ನ ವೇಗಿ ರಿಚರ್ಡ್ ಗ್ಲೀಸನ್ ಅವರನ್ನು 1.6 ಕೋಟಿ ರೂಪಾಯಿಗೆ ಸೇರಿಸಿಕೊಂಡಿದೆ. ಐಪಿಎಲ್ ಅಧಿಕೃತ ಹೇಳಿಕೆಯ ಪ್ರಕಾರ, ಖಲೀಲ್ ಅಹ್ಮದ್ ಮತ್ತು ನುವಾನ್ ತುಷಾರ ಇಬ್ಬರೂ ಗಾಯದ ಸಮಸ್ಯೆಯಿಂದಾಗಿ ಈ ಬಾರಿಯ ಟೂರ್ನಿಯಿಂದ ಸಂಪೂರ್ಣವಾಗಿ ಹೊರಬಿದ್ದಿದ್ದಾರೆ.
ಸಿಎಸ್‌ಕೆ, ಆರ್‌ಸಿಬಿಯ ಹೊಸ ಆಟಗಾರರ ಹಿನ್ನೆಲೆ
ಕುಲದೀಪ್ ಯಾದವ್ 2021ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರವಾಗಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದು, ಆ ಫ್ರಾಂಚೈಸಿ ಪರವಾಗಿ ಒಟ್ಟು ಮೂರು ಪಂದ್ಯಗಳನ್ನು ಆಡಿದ್ದಾರೆ. ಇನ್ನು ಇಂಗ್ಲೆಂಡ್‌ನ ರಿಚರ್ಡ್ ಗ್ಲೀಸನ್ ಅವರು ತಮ್ಮ ದೇಶದ ಪರವಾಗಿ 6 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದು, ಒಟ್ಟು 9 ತ್ತು ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಅವರು 2024 ಮತ್ತು 2025ರ ಐಪಿಎಲ್ ಆವೃತ್ತಿಗಳಲ್ಲಿ ಸಿಎಸ್‌ಕೆ ಮತ್ತು ಮುಂಬೈ ಇಂಡಿಯನ್ಸ್ ತಂಡಗಳನ್ನು ಪ್ರತಿನಿಧಿಸಿದ್ದರು. ಅವರು ಚೆನ್ನೈ ಸೂಪರ್ ಕಿಂಗ್ಸ್ ಪರ ಎರಡು ಪಂದ್ಯಗಳನ್ನು ಮತ್ತು ಮುಂಬೈ ಇಂಡಿಯನ್ಸ್ ಪರ ಒಂದು ಪಂದ್ಯವನ್ನು ಆಡಿದ ಅನುಭವವನ್ನ ಹೊಂದಿದ್ದಾರೆ.












Click it and Unblock the Notifications