ಅದ್ಭುತ ವಾಸ್ತುಶಿಲ್ಪಕ್ಕೆ ಹೆಸರಾದ ದಕ್ಷಿಣ ಭಾರತದ 7 ಪ್ರಸಿದ್ಧ ದೇವಾಲಯಗಳು
ದಕ್ಷಿಣ ಭಾರತವು ತನ್ನ ಅದ್ಭುತ ದೇವಾಲಯಗಳ ವಾಸ್ತುಶಿಲ್ಪ, ಶಿಲ್ಪಕಲೆ ಮತ್ತು ಐತಿಹಾಸಿಕ ಪರಂಪರೆಯಿಂದ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಈ ದೇವಾಲಯಗಳು ಧಾರ್ಮಿಕ ಮಹತ್ವದ ಜೊತೆಗೆ ಪ್ರವಾಸಿಗರಿಗೂ ಪ್ರಮುಖ ಆಕರ್ಷಣೆಯ ಕೇಂದ್ರಗಳಾಗಿವೆ. ಇಲ್ಲಿವೆ ವಾಸ್ತುಶಿಲ್ಪದ ವೈಭವಕ್ಕೆ ಹೆಸರಾದ ದಕ್ಷಿಣ ಭಾರತದ 7 ಪ್ರಸಿದ್ಧ ದೇವಾಲಯಗಳು.

1. ವಿರೂಪಾಕ್ಷ ದೇವಾಲಯ
ಕರ್ನಾಟಕದ ಹಂಪಿಯ ತುಂಗಭದ್ರಾ ನದಿಯ ದಂಡೆಯಲ್ಲಿರುವ ಈ ಐತಿಹಾಸಿಕ ವಿರೂಪಾಕ್ಷ ದೇವಾಲಯ ಭಾರತದಲ್ಲಿಯೇ ಅತ್ಯಂತ ಹಳೆಯದಾದ, ನಿರಂತರವಾಗಿ ಪೂಜೆ ನಡೆಯುತ್ತಿರುವ ದೇವಾಲಯಗಳಲ್ಲಿ ಒಂದಾಗಿದೆ. ಈ ಐತಿಹಾಸಿಕ ದೇವಾಲಯವು ವಿಜಯನಗರ ಸಾಮ್ರಾಜ್ಯದ ವಾಸ್ತುಶಿಲ್ಪದ ಅದ್ಭುತ ಉದಾಹರಣೆಯಾಗಿದೆ. ಭವ್ಯ ಗೋಪುರ, ಸೂಕ್ಷ್ಮ ಶಿಲ್ಪಕಲೆ ಹಾಗೂ ಖಗೋಳಶಾಸ್ತ್ರಕ್ಕೆ ಹೊಂದುವ ವಿನ್ಯಾಸ ಈ ದೇವಾಲಯದ ಪ್ರಮುಖ ಆಕರ್ಷಣೆಗಳಾಗಿವೆ.
2. ಚೆನ್ನಕೇಶವ ದೇವಾಲಯ
ಕರ್ನಾಟಕದ ಹಾಸನ ಜಿಲ್ಲೆಯ ಬೇಲೂರಿನಲ್ಲಿರುವ ಚನ್ನಕೇಶವ ದೇವಾಲಯವು ಹೊಯ್ಸಳ ಶೈಲಿಯ ಅದ್ಭುತ ಶಿಲ್ಪಕಲೆಗೆ ಪ್ರಸಿದ್ಧಿ ಪಡೆದಿದೆ. ಪುರಾಣ ಕಥೆಗಳು, ನೃತ್ಯಗಾರರು ಹಾಗೂ ದೈನಂದಿನ ಜೀವನದ ದೃಶ್ಯಗಳನ್ನು ಅತ್ಯಂತ ಸೂಕ್ಷ್ಮವಾಗಿ ಕೆತ್ತಲಾಗಿದೆ. ಭಾರತೀಯ ಶಿಲ್ಪಕಲೆಯ ಅತ್ಯುತ್ತಮ ಉದಾಹರಣೆಗಳಲ್ಲಿ ಇದೂ ಒಂದು.

3. ಮೀನಾಕ್ಷಿ ಅಮ್ಮನ್ ದೇವಾಲಯ
ತಮಿಳುನಾಡಿನ ಮಧುರೈಯಲ್ಲಿರುವ ವೈಗೈ ನದಿಯ ದಕ್ಷಿಣ ದಂಡೆಯಲ್ಲಿರುವ ಮೀನಾಕ್ಷಿ ಅಮ್ಮನ್ ದೇವಾಲಯವು ತನ್ನ ಭವ್ಯ ಹಾಗೂ ಬಣ್ಣಬಣ್ಣದ ಗೋಪುರಗಳಿಂದ ಪ್ರಸಿದ್ಧಿ ಪಡೆದಿದೆ. ಇದು ದ್ರಾವಿಡ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾದ ಈ ದೇವಾಲಯದ ಶಿಲ್ಪಕಲೆ, ಕಂಬಗಳ ಮಂಟಪಗಳು ಮತ್ತು ಸಮತೋಲನ ವಿನ್ಯಾಸ ಪ್ರವಾಸಿಗರನ್ನು ಆಕರ್ಷಿಸುತ್ತದೆ.
4. ಬೃಹದೀಶ್ವರ ದೇವಾಲಯ
ತಂಜಾವೂರಿನಲ್ಲಿರುವ ಬೃಹದೀಶ್ವರ ದೇವಾಲಯವು ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾಗಿ ಗುರುತಿಸಿಕೊಂಡಿದೆ. ಚೋಳರ ಕಾಲದಲ್ಲಿ ನಿರ್ಮಿಸಲಾದ ಈ ದೇವಾಲಯವು ಭವ್ಯ ವಿಮಾನ ಹಾಗೂ ಏಕಶಿಲಾ ಗೋಪುರದಿಂದ ಪ್ರಸಿದ್ಧಿ ಪಡೆದಿದೆ. ಸಾವಿರಕ್ಕೂ ಹೆಚ್ಚು ವರ್ಷಗಳ ಹಿಂದೆಯೇ ನಿರ್ಮಿಸಲಾದ ಈ ದೇವಾಲಯ ಆ ಕಾಲದ ತಾಂತ್ರಿಕ ನೈಪುಣ್ಯವನ್ನು ತೋರಿಸುತ್ತದೆ.
5. ರಾಮನಾಥಸ್ವಾಮಿ ದೇವಾಲಯ
ತಮಿಳುನಾಡಿನ ರಾಮೇಶ್ವರಂ ದ್ವೀಪದಲ್ಲಿರುವ ರಾಮನಾಥಸ್ವಾಮಿ ದೇವಾಲಯವು ಹಿಂದೂ ದೇವಾಲಯಗಳಲ್ಲಿ ಅತಿ ಉದ್ದವಾದ ಕಾರಿಡಾರ್ ಹೊಂದಿರುವುದಕ್ಕಾಗಿ ಪ್ರಸಿದ್ಧಿ ಪಡೆದಿದೆ. ಇದು ಒಂದು ಪ್ರಸಿದ್ಧ ಹಿಂದೂ ಯಾತ್ರಾ ಸ್ಥಳವಾಗಿದ್ದು, ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಅಲಂಕೃತ ಕಂಬಗಳು, ಸಮತೋಲನ ವಿನ್ಯಾಸ ಹಾಗೂ ವಿಶಾಲ ವಾಸ್ತುಶಿಲ್ಪ ಈ ದೇವಾಲಯದ ವಿಶೇಷತೆಗಳಾಗಿವೆ.

6. ವೆಂಕಟೇಶ್ವರ ದೇವಾಲಯ
ಆಂಧ್ರಪ್ರದೇಶದ ತಿರುಪತಿ ವೆಂಕಟೇಶ್ವರ ದೇವಾಲಯ (ತಿರುಮಲ ದೇವಸ್ಥಾನ) ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಮಲ ಬೆಟ್ಟಗಳ ಮೇಲಿರುವ ವಿಶ್ವಪ್ರಸಿದ್ಧ ಹಿಂದೂ ದೇವಾಲಯವಾಗಿದೆ. ತಿರುಮಲದಲ್ಲಿ ಇರುವ ವೆಂಕಟೇಶ್ವರ ದೇವಾಲಯವು ವಿಶ್ವದ ಅತ್ಯಂತ ಶ್ರೀಮಂತ ಮತ್ತು ಹೆಚ್ಚು ಭಕ್ತರು ಭೇಟಿ ನೀಡುವ ದೇವಾಲಯಗಳಲ್ಲಿ ಒಂದಾಗಿದೆ. ಚಿನ್ನದ ಲೇಪನ ಹೊಂದಿರುವ ವಿಮಾನ, ಕಲ್ಲಿನ ಶಿಲ್ಪಗಳು ಹಾಗೂ ವಿಶಾಲ ದೇವಾಲಯ ಸಂಕೀರ್ಣ ದ್ರಾವಿಡ ವಾಸ್ತುಶಿಲ್ಪದ ವೈಭವವನ್ನು ತೋರಿಸುತ್ತವೆ.

7. ಪದ್ಮನಾಭಸ್ವಾಮಿ ದೇವಾಲಯ
ಕೇರಳದ ತಿರುವನಂತಪುರದಲ್ಲಿರುವ ಪದ್ಮನಾಭಸ್ವಾಮಿ ದೇವಾಲಯವು ದ್ರಾವಿಡ ಮತ್ತು ಕೇರಳ ಶೈಲಿಯ ವಾಸ್ತುಶಿಲ್ಪದ ಸಂಯೋಜನೆಯಾಗಿದೆ. ಸುಂದರ ಗೋಪುರ, ಕಲ್ಲಿನ ಕೆತ್ತನೆಗಳು ಹಾಗೂ ಮರದ ಒಳಾಂಗಣ ವಿನ್ಯಾಸ ದೇವಾಲಯದ ಸೌಂದರ್ಯವನ್ನು ಹೆಚ್ಚಿಸುತ್ತವೆ.














Click it and Unblock the Notifications