ಕೆಜಿಎಫ್‌ ಬೆಡಗಿ ಮೌನಿ ರಾಯ್ ಡಿವೋರ್ಸ್‌ಗೆ ಆಪ್ತ ಗೆಳತಿಯೇ ಕಾರಣ ಎಂದ ನೆಟ್ಟಿಗರು; ದಿಶಾ ಪಟಾನಿ ಟ್ರೋಲ್ ಆಗುತ್ತಿರುವುದೇಕೆ?

ಕೆಜಿಎಫ್‌ ಸಿನಿಮಾದ ಗಲೀ ಗಲೀ ಹಾಡಿಗೆ ಸೊಂಟ ಬಳುಕಿಸಿದ್ದ ಬಾಲಿವುಡ್ ನಟಿ ಮೌನಿ ರಾಯ್ ಹಾಗೂ ಉದ್ಯಮಿ ಸೂರಜ್ ನಂಬಿಯಾರ್ ದಂಪತಿಯ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ. ಒಂದೆಡೆ ತಮ್ಮ ಡಿವೋರ್ಸ್‌ ಸುದ್ದಿಯನ್ನು ಮೌನಿ ಖಚಿತಪಡಿಸಿದ್ದರೆ, ಈ ಇಬ್ಬರ ಖಾಸಗಿ ಜೀವನದ ಬೆಳವಣಿಗೆಯ ನಡುವೆ ಮತ್ತೊಬ್ಬ ನಟಿ ದಿಶಾ ಪಟಾನಿ ಅವರು ಟ್ರೋಲರ್‌ಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮೌನಿ ಅವರ ಆಪ್ತ ಸ್ನೇಹಿತೆಯೂ ಆಗಿರುವ ದಿಶಾ ಪಟಾನಿ ಅವರ ಹೆಸರನ್ನು ನೆಟ್ಟಿಗರು ಈ ವಿಚ್ಛೇದನದ ವಿವಾದಕ್ಕೆ ಎಳೆದು ತಂದಿದ್ದಾರೆ. ಇದಕ್ಕೆ ಕಾರಣ ಇಲ್ಲಿದೆ.

ಸೂರಜ್ ಅಕೌಂಟ್ ಅನ್‌ಫಾಲೋ ಮಾಡಿದ ದಿಶಾ

ಮೌನಿ ರಾಯ್ ಮತ್ತು ಸೂರಜ್ ಅವರ ದಾಂಪತ್ಯದಲ್ಲಿ ಬಿರುಕು ಮೂಡಿ ಡಿವೋರ್ಸ್‌ ಘೋಷಿಸಿದ ಸುದ್ದಿ ಹೊರಬೀಳುತ್ತಿದ್ದಂತೆ, ನಟಿ ದಿಶಾ ಪಟಾನಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಸೂರಜ್ ನಂಬಿಯಾರ್ ಅವರ ಖಾತೆಯನ್ನು 'ಅನ್‌ಫಾಲೋ' ಮಾಡಿರುವುದು ನೆಟ್ಟಿಗರ ಕಣ್ಣಿಗೆ ಬಿದ್ದಿದೆ. ಸೋಶಿಯಲ್ ಮೀಡಿಯಾದಲ್ಲಿ ಸಣ್ಣ ಬದಲಾವಣೆಯನ್ನೂ ಸೂಕ್ಷ್ಮವಾಗಿ ಗಮನಿಸುವ ಇಂಟರ್ನೆಟ್ ಬಳಕೆದಾರರಿಗೆ ಈ ಒಂದು ನಡೆ ಭಾರಿ ಅನುಮಾನ ಮೂಡಿಸಿದೆ. ಮೌನಿ ರಾಯ್ ಪರವಾಗಿ ನಿಂತಿರುವ ದಿಶಾ, ಸೂರಜ್ ಅವರನ್ನು ಅನ್‌ಫಾಲೋ ಮಾಡಿದ್ದಾರೆ ಎಂದು ನೆಟ್ಟಿಗರು ಈ ವಿಚ್ಛೇದನದ ವಿಷಯದಲ್ಲಿ ದಿಶಾ ಪಾತ್ರದ ಬಗ್ಗೆಯೂ ಊಹಾಪೋಹಗಳನ್ನು ಹರಡಲು ಆರಂಭಿಸಿದ್ದಾರೆ.

Mouni Roy

ಮೌನಿ ರಾಯ್ ನಡುವಿನ ಆಪ್ತ ಗೆಳತನ

ದಿಶಾ ಪಟಾನಿ ಮತ್ತು ಮೌನಿ ರಾಯ್ ಕಳೆದ ಕೆಲವು ವರ್ಷಗಳಿಂದ ಚಿತ್ರರಂಗದಲ್ಲಿ ಅತ್ಯಂತ ಆಪ್ತ ಸ್ನೇಹಿತರಾಗಿದ್ದಾರೆ. ಇಬ್ಬರೂ ಜೊತೆಯಾಗಿ ರಜೆ ಕಳೆಯುವುದು, ಪಾರ್ಟಿ ಮಾಡುವುದು ಹಾಗೂ ಒಟ್ಟಿಗಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ಸಾಮಾನ್ಯವಾಗಿದೆ. ಇವರಿಬ್ಬರ ಅವಿನಾಭಾವ ಸಂಬಂಧವನ್ನು ಅನೇಕರು ಮೆಚ್ಚಿಕೊಂಡರೆ, ಟ್ರೋಲರ್‌ಗಳು ಮಾತ್ರ ಇದನ್ನೇ ಇಟ್ಟುಕೊಂಡು ಅಪಪ್ರಚಾರ ಮಾಡುತ್ತಿದ್ದಾರೆ. ವಿಚ್ಛೇದನದ ಸುದ್ದಿ ಹೊರಬಿದ್ದ ತಕ್ಷಣ ಎಕ್ಸ್, ಇನ್‌ಸ್ಟಾಗ್ರಾಮ್ ಮತ್ತು ರೆಡ್ಡಿಟ್‌ನಂತಹ ವೇದಿಕೆಗಳಲ್ಲಿ ದಿಶಾ ಅವರ ಹಳೆಯ ವಿಡಿಯೋಗಳು ಮತ್ತು ಮೀಮ್ಸ್‌ಗಳನ್ನು ಹಂಚಿಕೊಳ್ಳುವ ಮೂಲಕ ಟ್ರೋಲ್ ಮಾಡಲಾಗುತ್ತಿದೆ.

Bhagyashree: ಸಲ್ಮಾನ್ ಖಾನ್‌ಗಿಂತ ಹೆಚ್ಚು ಸಂಭಾವನೆ ಪಡೆದಿದ್ದ ನಟಿ ಭಾಗ್ಯಶ್ರೀ, ಸಿನಿಮಾ ಹಿಟ್ ಆದ್ರೂ ಚಿತ್ರರಂಗ ಬಿಟ್ಟಿದ್ದೇಕೆ?
Bhagyashree: ಸಲ್ಮಾನ್ ಖಾನ್‌ಗಿಂತ ಹೆಚ್ಚು ಸಂಭಾವನೆ ಪಡೆದಿದ್ದ ನಟಿ ಭಾಗ್ಯಶ್ರೀ, ಸಿನಿಮಾ ಹಿಟ್ ಆದ್ರೂ ಚಿತ್ರರಂಗ ಬಿಟ್ಟಿದ್ದೇಕೆ?

ಸತಿ-ಪತಿಗಿಂತ ಗೆಳತಿಯರ ಒಡನಾಟ ಹೆಚ್ಚು ಹೈಲೈಟ್

ಇಂಟರ್ನೆಟ್ ಬಳಕೆದಾರರ ಪ್ರಕಾರ, ಮೌನಿ ರಾಯ್ ಅವರು ತಮ್ಮ ಪತಿ ಸೂರಜ್ ಅವರೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಕ್ಕಿಂತ, ಗೆಳತಿ ದಿಶಾ ಪಟಾನಿ ಅವರೊಂದಿಗೆ ಹೊರಗಡೆ ಸುತ್ತಾಡುವ ಮತ್ತು ವೆಕೇಷನ್ ಎಂಜಾಯ್ ಮಾಡುವ ಫೋಟೋ-ವಿಡಿಯೋಗಳೇ ಸೋಷಿಯಲ್ ಮೀಡಿಯಾದಲ್ಲಿ ಸದಾ ಹೆಚ್ಚು ಸದ್ದು ಮಾಡುತ್ತಿದ್ದವು. ಇವರಿಬ್ಬರೂ ಸದಾ ಜೊತೆಯಾಗಿಯೇ ಇರುತ್ತಾರೆ ಎಂದು ಈ ಹಿಂದೆ ಹಲವು ಬಾರಿ ನೆಟ್ಟಿಗರು ಇವರ ಗೆಳತನವನ್ನು ತಮಾಷೆ ಮಾಡಿದ್ದರು. ಈಗ ಮೌನಿ ದಾಂಪತ್ಯ ಜೀವನ ಮುರಿದುಬೀಳಲು ಈ ಅತಿಯಾದ ಒಡನಾಟವೂ ಕಾರಣವಿರಬಹುದೇ ಎಂದು ನೆಟ್ಟಿಗರು ದಿಶಾರನ್ನು ಗುರಿಯಾಗಿಸಿಕೊಂಡು ಲೇವಡಿ ಮಾಡುತ್ತಿದ್ದಾರೆ. ಸದ್ಯ ಮೌನಿ ರಾಯ್ ಆಗಲಿ ಅಥವಾ ಸೂರಜ್ ಆಗಲಿ ತಮ್ಮ ವಿಚ್ಛೇದನದ ಸುದ್ದಿಗೆ ದಿಶಾ ಪಟಾನಿ ಅವರನ್ನು ಎಳೆದು ತರುತ್ತಿರುವುದಕ್ಕೆ ಅವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Mouni Roy

ಡಿವೋರ್ಸ್‌ ಘೋಷಿಸಿದ ಮೌನಿ ರಾಯ್

ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದ್ದ ದಾಂಪತ್ಯ ಮುರಿದುಬಿದ್ದ ಊಹಾಪೋಹಗಳಿಗೆ ಬಾಲಿವುಡ್ ನಟಿ ಮೌನಿ ರಾಯ್ ಗುರುವಾರ ಅಧಿಕೃತವಾಗಿ ತೆರೆ ಎಳೆದಿದ್ದಾರೆ. ಉದ್ಯಮಿ ಸೂರಜ್ ನಂಬಿಯಾರ್ ಅವರೊಂದಿಗೆ ತಾವೂ ವಿಚ್ಛೇದನ ಪಡೆಯುತ್ತಿರುವುದಾಗಿ ಅವರು ಪ್ರಕಟಿಸಿದ್ದಾರೆ. ಆದರೆ, ಈ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾದ ಅತಿಯಾದ ಟ್ರೋಲ್ ಹಾಗೂ ದ್ವೇಷದ ಕಮೆಂಟ್‌ಗಳಿಂದ ಬೇಸತ್ತ ನಟಿ, ತಮ್ಮ ಪೋಸ್ಟ್‌ನ ಕಮೆಂಟ್ ಬಾಕ್ಸ್ ಅನ್ನು ಆಫ್‌ ಮಾಡಿದ್ದಾರೆ.

ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ 'ಅನ್‌ಫಾಲೋ' ಮಾಡಿಕೊಂಡಿದ್ದನ್ನು ಗಮನಿಸಿದ ಅಭಿಮಾನಿಗಳು, ಇವರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂದು ಚರ್ಚಿಸಲು ಆರಂಭಿಸಿದ್ದರು. ಈ ಊಹಾಪೋಹಗಳು ಹೆಚ್ಚಾದ ಹಿನ್ನೆಲೆಯಲ್ಲಿ ಮೌನಿ ರಾಯ್ ಅವರೇ ಸ್ವತಃ ಜಾಲತಾಣಗಳ ಮುಂದೆ ಬಂದು ವಿಷಯವನ್ನು ಹಂಚಿಕೊಂಡರು. ತಾವಿಬ್ಬರೂ ಪರಸ್ಪರ ಒಪ್ಪಿಗೆಯಿಂದ ದೂರಾಗುತ್ತಿರುವುದನ್ನು ಖಚಿತಪಡಿಸಿದ್ದಾರೆ. ಅಲ್ಲದೆ, ಇದು ತಮ್ಮ ವೈಯಕ್ತಿಕ ವಿಷಯವಾಗಿದ್ದು, ಈ ಕಠಿಣ ಸಮಯದಲ್ಲಿ ತಮ್ಮ ಖಾಸಗಿತನವನ್ನು ಗೌರವಿಸಬೇಕು ಎಂದು ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+