Viral Video: ಭಜನೆ ಕಾರ್ಯಕ್ರಮದಲ್ಲಿ ನೋಟುಗಳ ಸುರಿಮಳೆ: ಖ್ಯಾತ ಗಾಯಕನ ಮೇಲೆ ಭಕ್ತರಿಂದ ಹಣದ ರಾಶಿ, ವಿಡಿಯೋ ವೈರಲ್‌

ಗುಜರಾತ್: ಜುನಾಗಢ್ ಜಿಲ್ಲೆಯಲ್ಲಿ ನಡೆದ ಸಾಂಪ್ರದಾಯಿಕ ಜಾನಪದ ಕಲಾ ಪ್ರಕಾರವಾದ 'ಡಾಯ್ರೋ' (Dayro) ಕಾರ್ಯಕ್ರಮವೊಂದರಲ್ಲಿ ಗಾಯಕರ ಮೇಲೆ ಅಭಿಮಾನಿಗಳು ಮತ್ತು ಭಕ್ತರು ಲಕ್ಷ ಲಕ್ಷಗಟ್ಟಲೆ ಹಣದ ನೋಟುಗಳನ್ನು ಸುರಿದಿದ್ದಾರೆ. ಖ್ಯಾತ ಭಜನಾ ಗಾಯಕ ಕವಿರಾಜ್ ಜಿಗ್ನೇಶ್ ಅವರ ಹಾಡಿಗೆ ಮಂತ್ರಮುಗ್ಧರಾದ ಭಕ್ತರು ಭರಪೂರ ಹಣದ ಮಳೆ ಸುರಿಸಿದ್ದು, ಇದರ ವಿಡಿಯೋಗಳು ಈಗ ಇಂಟರ್ನೆಟ್‌ನಲ್ಲಿ ಸಖತ್ ಸದ್ದು ಮಾಡುತ್ತಿವೆ.

ಚೀಲಗಳಲ್ಲಿ ಹಣ ತಂದ ಭಕ್ತರು

ವೇದಿಕೆಯ ಮೇಲೆ ಕವಿರಾಜ್ ಜಿಗ್ನೇಶ್ ಅವರು ಭಕ್ತಿಗೀತೆಗಳನ್ನು ಹಾಡಲು ಆರಂಭಿಸುತ್ತಿದ್ದಂತೆ, ನೆರೆದಿದ್ದ ಸಾರ್ವಜನಿಕರು ಚಪ್ಪಾಳೆ ತಟ್ಟುತ್ತಾ ಸಂಗೀತದ ತಾಳಕ್ಕೆ ತಕ್ಕಂತೆ ನೃತ್ಯ ಮಾಡಲು ಆರಂಭಿಸಿದರು. ಆದರೆ, ಎಲ್ಲರ ಗಮನ ಸೆಳೆದದ್ದು ಅಲ್ಲಿ ನಡೆದ ಅಪರೂಪದ ನೋಟುಗಳ ಮಳೆ. ಆರಂಭದಲ್ಲಿ ವೇದಿಕೆಯ ಬಳಿ ನಿಂತಿದ್ದ ಭಕ್ತರು ಬಿಡಿ ನೋಟುಗಳು ಮತ್ತು ನೋಟುಗಳ ಕಟ್ಟುಗಳನ್ನು ಗಾಯಕರ ಮೇಲೆ ಎಸೆಯುತ್ತಿದ್ದರು. ಕಾರ್ಯಕ್ರಮದ ಕಳೆ ಹೆಚ್ಚಾಗುತ್ತಿದ್ದಂತೆ, ಕೆಲವರು ಚೀಲ ಹಾಗೂ ಬ್ಯಾಗ್‌ಗಳಲ್ಲಿ ಕಂತೆ ಕಂತೆ ಹಣವನ್ನು ತುಂಬಿಕೊಂಡು ಬಂದು ನೇರವಾಗಿ ವೇದಿಕೆಯ ಮೇಲೆ ಸುರಿಯಲು ಆರಂಭಿಸಿದರು.

Viral Video

ಭಕ್ತರು ಸತತವಾಗಿ ಹಣವನ್ನು ತೂರುತ್ತಿದ್ದ ಕಾರಣ ವೇದಿಕೆಯ ಮೇಲೆ ನೋಟುಗಳ ದೊಡ್ಡ ರಾಶಿಯೇ ನಿರ್ಮಾಣವಾಗಿತ್ತು. ಗಾಯಕರು ಯಾವುದೇ ಅಡೆತಡೆಯಿಲ್ಲದೆ ತಮ್ಮ ಭಕ್ತಿಗೀತೆಗಳ ಗಾಯನವನ್ನು ಮುಂದುವರಿಸಿದ್ದರೆ, ಇತ್ತ ಕಾರ್ಯಕ್ರಮದ ಸಂಘಟಕರು ಮತ್ತು ಸ್ವಯಂಸೇವಕರು ವೇದಿಕೆಯ ಮೇಲೆ ಬೀಳುತ್ತಿದ್ದ ಹಣದ ರಾಶಿಯನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಈ ಅದ್ಭುತ ಕ್ಷಣಕ್ಕೆ ಸಾಕ್ಷಿಯಾಗಲು ಪ್ರಸಿದ್ಧ ಜಾನಪದ ಕಲಾವಿದ ಮಾಯಾಭಾಯಿ ಅಹಿರ್ ಅವರ ಪುತ್ರ ಜಯರಾಜ್ ಅಹಿರ್ ಕೂಡ ಉಪಸ್ಥಿತರಿದ್ದು, ಅವರು ಸಹ ವೇದಿಕೆಯ ಮೇಲೆ ಹಣವನ್ನು ಸುರಿದು ಸಂಭ್ರಮಿಸಿದರು.

ವಾಹನ ಸವಾರರಿಗೆ ಬಿಗ್ ಶಾಕ್: ಪೆಟ್ರೋಲ್, ಡೀಸೆಲ್ ದರದಲ್ಲಿ ಭಾರಿ ಏರಿಕೆ, ನಗರವಾರು ಹೊಸ ದರ ಪಟ್ಟಿ ಇಲ್ಲಿದೆ
ವಾಹನ ಸವಾರರಿಗೆ ಬಿಗ್ ಶಾಕ್: ಪೆಟ್ರೋಲ್, ಡೀಸೆಲ್ ದರದಲ್ಲಿ ಭಾರಿ ಏರಿಕೆ, ನಗರವಾರು ಹೊಸ ದರ ಪಟ್ಟಿ ಇಲ್ಲಿದೆ

ಖಂಭಾಲಿಯಾದ 'ಪ್ರಯಾಗ್‌ರಾಜ್ ಗ್ರೂಪ್' ಈ ಧಾರ್ಮಿಕ ಭಾಗವತ್ ಜ್ಞಾನ ಯಜ್ಞದ ಅಂಗವಾಗಿ ಜಾನಪದ ಸಂಗೀತ ಮತ್ತು ಭಕ್ತಿ ಭಜನೆಗಳನ್ನು ಆಯೋಜಿಸಿತ್ತು. ಜಾನಪದ ಆಧಾರಿತ ಭಕ್ತಿ ಪ್ರಧಾನ ಗಾಯನಕ್ಕೆ ಹೆಸರಾದ ಕವಿರಾಜ್ ಜಿಗ್ನೇಶ್ ಅವರು ಭಗವಾನ್ ಶ್ರೀಕೃಷ್ಣ, ಸ್ನೇಹ ಮತ್ತು ಆಧ್ಯಾತ್ಮದ ಕುರಿತಾದ ಭಜನೆಗಳನ್ನು ಪ್ರಸ್ತುತಪಡಿಸುವ ಮೂಲಕ ಇಡೀ ವಾತಾವರಣವನ್ನು ಭಕ್ತಿ ಸಾಗರದಲ್ಲಿ ಮುಳುಗಿಸಿದ್ದರು. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ 'ನೋಟುಗಳ ಮಳೆ'ಯ ದೃಶ್ಯಗಳು ಭಾರಿ ಚರ್ಚೆಗೆ ಕಾರಣವಾಗಿದ್ದು, ಸಾಂಪ್ರದಾಯಿಕ ಜಾನಪದ ಕಾರ್ಯಕ್ರಮಗಳಲ್ಲಿ ಭಕ್ತರು ತೋರುವ ಇಂತಹ ಆರಾಧನಾ ಶೈಲಿ ನೆಟ್ಟಿಗರನ್ನು ಆಕರ್ಷಿಸುತ್ತಿದೆ.

ಈ ಹಣ ಯಾವುದಕ್ಕೆ ಬಳಕೆಯಾಗುತ್ತದೆ?

ಗಾಯಕರ ಮೇಲೆ ಸುರಿಯಲಾದ ಈ ಬೃಹತ್ ಮೊತ್ತದ ಹಣದ ಬಗ್ಗೆ ಸಂಘಟಕರು ಸ್ಪಷ್ಟನೆ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಂಗ್ರಹವಾದ ಹಣವನ್ನು ಯಾವುದೇ ವೈಯಕ್ತಿಕ ಲಾಭಕ್ಕಾಗಿ ಬಳಸುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ. ಬದಲಿಗೆ, ಈ ಸಂಪೂರ್ಣ ಹಣವನ್ನು ಧಾರ್ಮಿಕ ಉದ್ದೇಶಗಳು, ಸಾಮಾಜಿಕ ಸೇವೆಗಳು, ಸಮುದಾಯದ ಕಲ್ಯಾಣ ಹಾಗೂ ಮುಂದಿನ ಧಾರ್ಮಿಕ ಕಾರ್ಯಕ್ರಮಗಳ ಸದ್ಬಳಕೆಗೆ ದೇಣಿಗೆಯಾಗಿ ನೀಡಲಾಗುವುದು ಎಂದೂ ಸ್ಪಷ್ಟಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+